Saturday, 28 April 2012

ಸ-ಚಿನ್ನ-ಬಂಗಾರ................!

ಧನಂಜಯ ಮಡಿಕೇರಿ



ನಿನ್ನೆ ಗೆಳೆಯ ಕಳುಹಿಸಿದ ಪೋಟೋ ನೋಡುತಿದ್ದೆ, ದಿನಾಂಕ ೨೪/೪/೨೦೧೨ ರಂದು ಒಂದು ಜೊತೆ ಪೋಟೋ ಗಮನ ಸೆಳೆಯಿತು. ಒಂದು ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಪೋಟೋ ಮತ್ತೊಂದು ಕನ್ನಡ ಕಣ್ಮಣಿ ಡಾ. ರಾಜ್ ಕುಮಾರ್. ಇಲ್ಲಿ ಗಮನಿಸ ಬೇಕಾದ ಮುಖ್ಯ ಅಂಶವೆಂದರೆ ಇವರಿಬ್ಬರ ಹುಟ್ಟು ಹಬ್ಬ ಒಂದೇ ದಿವಸ. ಒಬ್ಬ ಬಂಗಾರದ ಮನುಷ್ಯನಾದರೆ ಮತ್ತೊಬ್ಬ ಸ-ಚಿನ್ನ.
        ಈ ಲೇಖನದ ಚರ್ಚಾಸ್ಪದ ವಿಷಯ ಮಾತ್ರ ಸಚಿನ್ ತೆಂಡೂಲ್ಕರ್, ಮೊನ್ನೆ ಮೊನ್ನೆ ಸಚಿನ್ನರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿದ ಸುದ್ದಿ ನೋಡಿ ನನಗೆ ಮತ್ತು ನನ್ನಂತೆ ಅನೇಕ ಜನರಿಗೆ ನೂರಾರು ಪ್ರಶ್ನೆಗಳು ಮೂಡಿರಬಹುದು. ಯಾಕೆ ಸಚಿನ್ ರಾಜ್ಯ ಸಭೆಗೆ ಪ್ರವೇಶ ಪಡೆಯಲು ಒಪ್ಪಿದರು? ರಾಜ್ಯ ಸಭೆಯ ಸಂಭಾವನಿಯರ ಪಟ್ಟಿ ಪ್ರಕಟವಾಗುವ ಮೊದಲೇ ಯಾಕೆ ೩೦ ನಿಮಿಷ ಸೋನಿಯಾ ಗಾಂಧಿಯನ್ನು ಭೇಟಿಮಾಡಿದರು.? ಸಚಿನ್ ಆಯ್ಕೆಯಲ್ಲಿ ಸ್ವಲ್ಪ ಮಟ್ಟಿಗಾದರೂ ಕೇಂದ್ರದ ಭ್ರಷ್ಟಚಾರ ಮುಚ್ಚಿ ಹಾಕುವ ದುರುದ್ದೇಶ  ಅಡಗಿದೆಯಾ ? ಸಚಿನ ಕೇವಲ ಕಾಂಗ್ರೆಸ್ ಪಕ್ಷದ ಆಸ್ತಿಯೇ ?  ಇಂತಹ ಹಲವಾರು ಪ್ರಶ್ನೆಗಳು ನಿಮ್ಮಲ್ಲೂ ಹುಟ್ಟಿದರೆ ಅದಕ್ಕೆ ಆಶ್ಚರ್ಯ ಪಡಬೇಕಿಲ್ಲ.
        ನನ್ನ ಅಭಿಪ್ರಾಯದ ಪ್ರಕಾರ ಸಚಿನ್ ನಿರ್ಧಾರ ತಪ್ಪು ಮತ್ತು ಅವರು ಬೆಳೆದ ಎತ್ತರಕ್ಕೆ, ಅವರು ಕ್ರಿಕೆಟ್ ಲ್ಲಿ ಗಳಿಸಿದ ಗೌರವ, ಯಶಸ್ವಿಗೆ ರಾಜ್ಯ ಸಭೆ ಪದವಿ ಸರಿ ಸಮಾನವೇ ? ಅವರು ಇಲ್ಲಿಯ ತನಕ ಕ್ರೀಡೆಯಲ್ಲಿ ಗಳಿಸಿರುವುದು ಹೆಚ್ಚು. ರಾಜಕೀಯ ಏನಿದ್ದರು ಅವರ ಇಮೇಜಿಗೆ ಹೇಳಿದ ರಂಗ ಅಲ್ಲ. ಎಲ್ಲೋ ಒಂದು ಕಡೆ ಸಚಿನ್ ಗೆ ಇದ್ದ ಘನತೆ ಗೌರವಕ್ಕೆ ಹೊಲಸು ರಾಜಕೀಯದ ಲೇಪ ಬೇರೆ ಆಗುತ್ತಿದೆ ಎನ್ನುವ ಅಸಂಖ್ಯಾತ ಅಭಿಮಾನಿಗಳನ್ನು ಕಾಡುವ ಪ್ರಶ್ನೆ. ಮಿಗಿಲಾಗಿ ರಾಜ ಸಭೆಗೆ ಆಯ್ಕೆಯಾಗಿ ಹೋದರೆ  ಕ್ರಿಕೆಟ್ ಮತ್ತು ಜಾಹಿರಾತುಗಳ ಮಧ್ಯೆ ಬಿಡುವಾದರು ಎಲ್ಲಿದೆ.?
        ರಾಜಕೀಯದಿಂದ ಕಳಂಕ ಸಚಿನ್ ಕ್ರಿಕೆಟ್ ಬದುಕಿಗೆ ಮಾತ್ರವಲ್ಲ ಅವರ  ವೈಯುಕ್ತಿಕ ಬದುಕಿಗೂ ಅಂಟುವ ದಿನ ದೂರವಿಲ್ಲ. ಏಕೆಂದರೆ ಸಚಿನ್ ಸೋನಿಯಾ ಗಾಂಧಿಯವರನ್ನು ೩೦ ನಿಮಿಷ ಭೇಟಿ ಮಾಡಿದ ನಂತರ ನೂರು ಅನುಮಾನಗಳ  ಹುತ್ತ ಅವರ ಸುತ್ತ ಬೆಳೆದು ನಿಂತಿದೆ ಅದಕೆಲ್ಲ ಸಚಿನ್ ಮಾತ್ರ ಉತ್ತರ ನೀಡ ಬೇಕಾಗಿದೆ. ಭೇಟಿಯ ನಂತರ ರಾಜ್ಯ ಸಭೆ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ. ಅಷ್ಟಕ್ಕೂ  ಸಚಿನ್ ಅಂತಹ ಲಾಭಗಾರಿಕೆ ಬಯಸುವ ವ್ಯಕ್ತಿ ಅಲ್ಲ ಅದರ ಅವಶ್ಯಕತೆಯು ಅವರಿಗೆ ಇಲ್ಲ. ಪರಿಸ್ಥಿತಿ ಈಗಿರುವಾಗ ಸಚಿನ್ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ತಪ್ಪು ಸಂದೇಶ ಅವರ ಅಸಂಖ್ಯಾತ ಅಭಿಮಾನಿಗಳಿಗೆ ರವಾನಿಸಿ ಗೊಂದಲಗೊಳಿಸಿದ್ದಾರೆ.
ಮೊದಲನೆಯದಾಗಿ ಸಚಿನ್ ಸೋನಿಯಾರನ್ನು ಭೇಟಿಯಾಗ ಬಾರದಿತ್ತು. ರಾಷ್ಟ್ರಪತಿಯವರು ಅವರನ್ನು ನಾಮ ನಿರ್ಧೇಶನ ಮಾಡ ಬೇಕಿತ್ತು. ಇದರ ಮಧ್ಯೆ ಯಾಕೆ ಕೇಂದ್ರ ಕಾಂಗ್ರೆಸ್ ಸರ್ಕಾರಕ್ಕೆ ಸುನಿಲ್ ಗಾವಸ್ಕರ್, ಕಪಿಲ್ ದೇವ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ ಆಯ್ಕೆಮಾಡುವ ಮನಸ್ಸ್ಸು ಮಾಡಲಿಲ್ಲ.? ಸಚಿನ್ ಅಭಿಮಾನಿಗಳು ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ.
        ಈ ಲೇಖನದ ಮೊದಲಿಗೆ ನಾನು ಕನ್ನಡದ ವರನಟ ಮೇರುನಟ ರಾಜ್ ಕುಮಾರ್ ಹೆಸರು ಪ್ರಸ್ತಾಪಿಸಿದೆ  ಆದರೆ ಒಂದಂತು ಸಚಿನ್ ವಿಷಯದಲ್ಲಿ ರಾಜ್ ನೆನೆಪಾಗುತ್ತಾರೆ. ಅವರು ರಾಜಕೀಯ ಸೇರಲು ಸಾಕಸ್ಟು ಒತ್ತಾಯ ಅವರಿಗೆ ಬಂತು. ಅವರು ಆಗ ಹೇಳಿದ ಮಾತು ಒಂದೇ ನನ್ನ ಅಭಿಮಾನಿ ದೇವರುಗಳು ಕೇವಲ ಒಂದು ಜಾತಿ, ಪಕ್ಷ, ಒಂದು ಧರ್ಮದಲ್ಲಿ ಮಾತ್ರ ಇಲ್ಲ ಮತ್ತು ರಾಜ್ ಕುಮಾರ್ ಕೇವಲ ಒಂದು ಪಕ್ಷ, ಧರ್ಮ ಜಾತಿಗೆ ಸೀಮಿತವಾಗಿಲ್ಲ ಆಗಾಗಿ ನಾನು ಯಾವುದೇ ಪಕ್ಷದ ಪರವಾಗಿ ನಿಲ್ಲೋದಿಲ್ಲ ನಾನು ಕನ್ನಡಿಗ, ಕನ್ನಡಾಂಬೆಯ ಪುತ್ರ. ಬದುಕಿನ ಕೊನೆಯವರೆಗೂ ಕನ್ನಡಕ್ಕಾಗಿ ದುಡಿಯುತ್ತೇನೆ, ಇದನ್ನು ಪಾಲಿಸಿ ಅದರಂತೆಯೇ ಬಾಳಿದರು ಎನ್ನುವದು ವಿಶೇಷ.
        ಮಾತ್ರವಲ್ಲ ಸಚಿನ್ ಹೆಸರು ಭಾರತ ರತ್ನಕ್ಕೆ ಶಿಫಾರಸು ಮಾಡಲಾಗಿದೆ ಅಂತಲೂ ಒಂದು ಸುದ್ದಿ ಇದೆ ಈ ಕಾಲ ಘಟ್ಟದಲ್ಲಿ ಮುಂದೊಂದು ದಿವಸ ಪ್ರಶಸ್ತಿಗೆ ಕಾಂಗ್ರೇಶ್ ಪ್ರೇರಣೆ ಅಂತ ಕಳಂಕ ಅಂಟಿದರು ಆಶ್ಚರ್ಯ ಪಡಬೇಕಿಲ್ಲ. ಸಚಿನ್ ರಾಜ್ಯ ಸಭೆಯ ಸದಸ್ಯ ನಿರ್ಧರವನ್ನು ನನ್ನಂತೆ ಅವರ ಬಹುಪಾಲು ಅಭಿಮಾನಿಗಳು ವಿರೋಧಿಸುತ್ತಾರೆ, ಒಂದಂತು ಸತ್ಯ ಒಬ್ಬ ಒಳ್ಳೆಯ ಕ್ರಿಕೆಟಿಗ ಒಳ್ಳೆಯ ರಾಜಕೀಯ ನಾಯಕ ಆಗಲಾರ ಅಂತೆಯೇ ಒಬ್ಬ ಒಳ್ಳೆಯ ಕೋಚ್ ಒಳ್ಳೆಯ ಕ್ರಿಕೆಟಿಗ ಆಗಲಾರ
 ಇದು ಸಚಿನ್ ವಿಷಯದಲ್ಲೂ ಕೂಡ..?

Friday, 20 April 2012

ಸಾಧನೆಯಲ್ಲಿ ನಮ್ಮದು ಮತ್ತೊಂದು ಮೈಲಿಗಲ್ಲು......!

ಕೆ.ಎಸ್.ಧನಂಜಯ,ಮಡಿಕೇರಿ.



















ಹೌದು ಮಿತ್ರ ಹೇಳಿದ್ದು ಸರಿ “ ಸೋಲು ಅನ್ನುವುದು ನಮಗೆ ಜಗತನ್ನು ಪರಿಚಯಿಸುತ್ತದೆ, ಗೆಲುವು ಅನ್ನೋದು ನಮ್ಮನ್ನು ಜಗತ್ತಿದೆ ಪರಿಚಯಿಸುತ್ತದೆ ”. ನನ್ನ ದೇಶ ಅಂತಹ ಒಂದು ಮೈಲಿಗಲ್ಲು ಸ್ಥಾಪಿಸಿದೆ ಅದು ಭಾರತಿಯನಾದ ನನಗೂ ಹೆಮ್ಮೆ ಜೊತೆಗೆ ನಿಮಗೂ ಕೂಡ ಮಾತ್ರವಲ್ಲ ಬ್ಲಡಿ ಇಂಡಿಯನ್ಸ್ ಅನ್ನುವವರು ಕೂಡ ಅಂತಹ ಪದ ಬಳಕೆ ಮಾಡುವಾಗ ಇಂಡಿಯಾದ ಬಗ್ಗೆ ಯೋಚಿಸಿ ಮಾತನಾಡು ಅನ್ನುವ ಸಂದೇಶ ರವಾನಿಸಿದೆ.
ಅಂತಹ ಒಂದು ಗೆಲುವಿದೆ ನಾಂದಿಯಾಗಿದ್ದು ನಮ್ಮ ಇಸ್ರೋ ಸಂಸ್ಥೆ ಮತ್ತು ಆ ಸಂಸ್ಥೆಯ ಎಲ್ಲಾ ವಿಜ್ಞಾನಿಗಳು ಅದರ ಪಾಲುದಾರರು ನಾವು ಭಾರತೀಯರು. ಅಗ್ನಿ ೫  ರಾಕೆಟನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ದೇಶದ ಕೀರ್ತಿಯನ್ನು ಪ್ರಪಂಚದಾದ್ಯಂತ ಪಸರಿಸಿದ ಕೀರ್ತಿಯು ಸಂಸ್ಥೆಗೆ ಇದೆ. ಇದು ಭಾರತೀಯರ ಶ್ರಮದ ಫಲ ಇದು ಈ ದೇಶದ ನಾಗರಿಕರ ಹಿರಿಮೆ ಅರ್ಥಾತ್ ನಾವು ಏನನ್ನು ಪ್ರೆಸ್ಟೀಜ್ ಅಂತ ಹೇಳುತ್ತೆವಲ್ಲ ಅದು. ವಿಶ್ವದ ಪ್ರಭಲ ಮತ್ತು ಅತ್ಯಂತ ಶ್ರಮಿಕ ದೇಶ ಎಂದು ಹೆಸರು ಮಾಡಿರುವ ಚೈನಾ ಕೂಡ ಇಂತಹ ವಿಷದಲ್ಲಿ ಎಚ್ಚರಿಕೆಯ ಮಾತನಾಡಿರುವದು ಗಮನಾರ್ಹ.
ರಾಕೆಟ್ ಗಳನ್ನು ೧೩ ನೇ ಶತಮಾನದಿಂದಲೂ ಮಿಲಿಟರಿ ಮತ್ತು ಮನೋರಂಜನಾ ವಲಯಗಳಲ್ಲಿ  ಬಳಕೆ ಮಾಡುವದು ಸಾಮಾನ್ಯವಾಗಿತ್ತು. ಆದರೂ ಮಹತ್ವದ ವೈಜ್ಞಾನಿಕ, ಗ್ರಹಗಳ ತಲುಪಲುಬಳಸಿದ್ದು ೨೦ನೇ ಶತಮಾನದಲ್ಲೇ ಎಂದು ಹೇಳಬಹುದು. ಅಂತರಿಕ್ಷ ಯುಗಕ್ಕೆ ಕಾಲಿಟ್ಟ ರಾಕೆಟ್ ನಂತರ ಚಂದ್ರನ ಮೇಲೆ ಕಾಲಿಟ್ಟ ಸಂಧರ್ಭದಲ್ಲೇ ಇದರ ಉಪಯೋಗ ಹೆಚ್ಚು ಪರಿಚಿತವಾಯಿತು  ಸುಮಾರು ೧೭೯೨ ರಲ್ಲಿ ಮೊದಲ ಬಾರಿಗೆ ಕಬ್ಬಿಣ ಕವಚದ ರಾಕೆಟ್ ಗಳನ್ನು ಆಗಿನ ಭಾರತದಲ್ಲಿನ ಮೈಸೂರು ಸಂಸ್ಥಾನಿಕರಾದ ಹೈದರಾಲಿ ಮತ್ತು ಆತನ ಪುತ್ರ ಟಿಪ್ಪು ಸುಲ್ತಾನ್ ಅವರುಗಳು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ದ ಆಂಗ್ಲೋ ಮೈಸೂರು ಯುದ್ದದಲ್ಲಿ ಬಳಸಿದ ಉಲ್ಲೇಖವಿದೆ. ಆಗ ಬ್ರಿಟಿಷರು ಇದರ ಬಗ್ಗೆ ಸಕ್ರಿಯ ಆಶಕ್ತಿ ಬಳಸಿಕೊಂಡು ಅದರ ತಂತ್ರಜ್ಞಾನವನ್ನು ೧೯ನೇ ಶತಮಾನದಲ್ಲಿ ಅಭಿವೃಧ್ಧಿಪಡಿಸಿದರು. ಆ ಕಾಲದ ಮೈಸೂರು ರಾಕೆಟ್ ಗಳು ಬ್ರಿಟಿಷರು ನೋಡಿದ್ದಗಿಂತ ಹೆಚ್ಚು ಅಭಿವೃದ್ದಿ ಪಡೆದವವಾಗಿದ್ದವು. ಬಹು ಮುಖ್ಯವಾಗಿ ಕಬ್ಬಿಣದ ಕವಚದ ಇದು ತಿರುಗಣಿ ಮೂಲಕ ತನ್ನ ಕಬ್ಬಿಣದ  ನಳಿಕೆಯಿಂದ ಹಚ್ಚು ಬಲಯುತವಾಗಿತ್ತು. ನಾಲ್ಕನೆಯ ಆಂಗ್ಲೋ ಮೈಸೂರು ಯುದ್ದದಲ್ಲಿನ ಟಿಪ್ಪುವಿನ ಸೋಲಿನ ನಂತರ ಮೈಸೂರಿನ ಕಬ್ಬಿಣದ ರಾಕೆಟ್ಗಳನ್ನು ಬ್ರಿಟಿಷರು ವಶಪಡಿಸಿಕೊಂಡು ತಮ್ಮದೇ ಆದ ಹೊತ್ತಿಸಿ ಚಾಲಿಸಿಗೊಲಿಸುವ ರಾಕೆಟ್ಗಳನ್ನು ಅಭಿವೃದ್ದಿ ಮಾಡಿದರು. ಇದರ ಪ್ರಭಾವದಿಂದ ಅವರು ಮುಂದಿನ ನೆಪೋಲಿಯನ್ ಯುದ್ದದಲ್ಲಿ ಇದನ್ನು ಉಪಯೋಗಕ್ಕೆ ತಂದರು.
 ಭಾರತ  ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಷನ್ ( ICBM ) ಅಗ್ನಿ ೫  ರಾಕೆಟನ್ನು ಒರಿಸ್ಸಾದ ವೀಲರ್ ದ್ವೀಪದಿಂದ ೧೯/೪/೨೦೧೨ ರಂದು  ಉಡಾಯಿಸಿತು.ಅಷ್ಟಕ್ಕೂ ಇದು ಹೆಸರೇ ಹೇಳುವಂತೆ ಖಂಡಾಂತರ ಕ್ಷಿಪಣಿ ಆದರೆ ನಮ್ಮ ದೇಶ ಬಿಟ್ಟು ಇತರ ದೇಶಕ್ಕೂ ಲಗ್ಗೆ ಇಡಬಲ್ಲ ಕ್ಷಿಪಣಿ, ಏಕಕಾಲಕ್ಕೆ ಸುಮ್ಮರು ೫೫೦೦ ಕಿ,ಮಿ. ದೂರವನ್ನು ಕ್ರಮಿಸಬಲ್ಲ ಕ್ಷಿಪಣಿ  ೫೦.೦೦೦ ಕೆ,ಜಿ. ತೂಕವಿದ್ದು ೧೭ ಮೀಟರ್ ಉದ್ದ ಮತ್ತು ಎರಡು ಮೀಟರ್ ಸುತ್ತಳತೆ ಹೊಂದಿದ್ದು ೧೫೦೦ ಕೆ.ಜಿ.ತೂಕವನ್ನು ಹೊತ್ತೊಯ್ಯುವ ಶಕ್ತಿಹೊಂದಿದೆ ನೆರೆಯ ರಾಷ್ಟ್ರದಲ್ಲಿ ಒಂದಾದ ಚೀನಾ ಈ ಯಶಸ್ವಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ `ಉಭಯ ರಾಷ್ಟ್ರ ಗಳು ಪರಸ್ಪರ ಶತ್ರುಗಳಲ್ಲ. ಉತ್ತಮ ಬಾಂಧವ್ಯ ಹೊಂದಿರುವ ನೆರೆಯ ದೇಶಗಳು` ಎಂದಿದೆ ಎಂದರೆ ನಮ್ಮ ತೂಕ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಜಾಸ್ತಿಯಾಗಿದೆ ಮತ್ತು ಜಾಸ್ತಿಯಾಗುತ್ತಿದೆ ಎಂದರ್ಥ. `ಇತ್ತೀಚೆಗೆ ದೆಹಲಿಯಲ್ಲಿ ನಡೆದ `ಬ್ರಿಕ್ಸ್` ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಚೀನಾ ಮುಖಂಡರು ಎರಡೂ ರಾಷ್ಟ್ರಗಳ ಬಾಂಧವ್ಯವನ್ನು ಮತ್ತಷ್ಟು ಉತ್ತಮಪಡಿಸಲು ಹಾಗೂ ದ್ವಿಪಕ್ಷೀಯ ಕಾರ್ಯತಂತ್ರದಲ್ಲಿ ಪರಸ್ಪರ ಸಹಕಾರ ನೀಡುವ ಬಗ್ಗೆ ಒಲವು ತೋರಿದ್ದರು` ಏಕೆ ಈ ತರಹದ ಪ್ರತಿಕ್ರಿಯೆ ಬರುತ್ತದೆ ಎಂಬುವದನ್ನು ನಾವು ವಿಚಾರ ಮಾಡ ಬೇಕಾಗಿದೆ ಅಭಿವೃದ್ದಿ ಅನ್ನುವ ಮಂತ್ರವನ್ನು ನಾನು ದೈನಂದಿನ ಮಂತ್ರವಾಗಿಸಿದೆ ಆದಲ್ಲಿ ವೈಯುಕ್ತಿಕವಾಗಿಯೂ ಕೂಡ ನಮ್ಮ ಗೌರವ ಹೆಚ್ಚಾಗುತ್ತದೆ. ಎನ್ನುವುದು ಇದರ ಅರ್ಥ, ಮಾತ್ರವಲ್ಲ ಭಾರತ ಇಂತಹ ಬೆಳವಣಿಗೆ ಸಾಧಿಸಿದ ಕೆಲವೇ ರಾಷ್ಟ್ರಗಳಾದ ಅಮೇರಿಕ, ಯು.ಕೆ,, ರಷ್ಯಾ ಫ್ರಾನ್ಸ್ ಮತ್ತು ಚೀನಾ ಸಾಲಿಗೆ ನಾವು ಕೂಡ ಪ್ರವೇಶ ಮಾಡಿದ್ದೇವೆ ಎಂದರೆ ಮುಂದುವರಿಯುತ್ತಿರುವ ರಾಷ್ಟ್ರಗಳಿಗೆ ನಾವು ನಡುಕ ಹುಟ್ಟಿಸಿರುವದು ಸುಳ್ಳಲ್ಲ..? ದೇಶದ ಶಸ್ತ್ರಾಗಾರದಲ್ಲಿ ಪ್ರಸ್ತುತ `ಅಗ್ನಿ-1` (700 ಕಿ.ಮೀ ದೂರ), `ಅಗ್ನಿ-2` (2,000 ಕಿ.ಮೀ ದೂರ), `ಅಗ್ನಿ-3` (2,500 ಕಿ.ಮೀ ದೂರ) ಹಾಗೂ `ಅಗ್ನಿ- 4` (3,500 ಕಿ.ಮೀ ದೂರ ಕ್ರಮಿಸಬಲ್ಲ) ಕ್ಷಿಪಣಿಗಳು ಇವೆ.  ಸ್ವದೇಶಿ ನಿರ್ಮಿತ `ಅಗ್ನಿ-5` ಕ್ಷಿಪಣಿ ಪ್ರಯೋಗದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್, `ದೇಶದ ರಕ್ಷಣಾ ಸಿದ್ಧತೆಯಲ್ಲಿ ಇದು ಮತ್ತೊಂದು ಮೈಲಿಗಲ್ಲು` ಎಂದು ಬಣ್ಣಿಸಿದ್ದಾರೆ.ಈ ಕ್ಷಿಪಣಿಗಾಗಿ ಹಗಲು ರಾತ್ರಿ ದುಡಿದ ವಿಜ್ಞಾನಿಗಳು, ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಖ್ಯಸ್ಥ ವಿ.ಕೆ.ಸಾರಸ್ವತ್ ಅವರನ್ನು ಪ್ರಧಾನಿ ಮಾತ್ರವಲ್ಲ ನಿಜಕ್ಕೂ ಇದೊಂದು ಅಭೂತಪೂರ್ವ ಯಶಸ್ಸು. ಕ್ಷಿಪಣಿ ತಂತ್ರಜ್ಞಾನದಲ್ಲಿ ನಾವು ಇಂದು ಎತ್ತರದಲ್ಲಿ ನಿಂತಿದ್ದೇವೆ. ಕ್ಷಿಪಣಿ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಇದು ಮಹತ್ವದ ಸಾಧನೆಯಾಗಿದೆ` ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಬಣ್ಣಿಸಿದ್ದಾರೆ. ಭಾರತವು ಅಗ್ನಿ-5 ಶ್ರೇಣಿಯ ಕ್ಷಿಪಣಿಗಳನ್ನು ವಿನ್ಯಾಸಗೊಳಿಸುವ, ಅಭಿವೃದ್ಧಿಪಡಿಸುವ ಹಾಗೂ ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನುವ ಮಹತ್ವದ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದೆ. ಇಂದು ಭಾರತವು ಕ್ಷಿಪಣಿ ಶಕ್ತಿ ರಾಷ್ಟ್ರವಾಗಿ ಹೊರಮೊಮ್ಮಿದೆ` ಎಂದು ಸಾರಸ್ವತ್ ಬಣ್ಣಿಸಿದ್ದಾರೆ. ಕೆಲವೊಂದು ಎಲೆಕ್ಟ್ರಾನಿಕ್ ಬಿಡಿ ಭಾಗಗಳನ್ನು ಬಿಟ್ಟರೆ, ಅಗ್ನಿ-5 ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಕ್ಷಿಪಣಿ` ಸಾಧಿಸಿದ್ದು ಸಾಕಷ್ಟು ಸಾಧಿಸಬೇಕಾಗಿರುವದು ಮತ್ತಷ್ಟು ಎಂದರೆ ಭಾರತ ಪ್ರಕಾಶಿಸುತ್ತಿದೆ ಭಾರತ ಪ್ರಕಾಶಿಸುತ್ತಿದೆ ಎಂದರೆ ಭಾರತೀಯರಾದ ನಾವು...?

Saturday, 25 February 2012

ನನ್ನ ಹಾಡು ನನ್ನ ಪಾಡು...: ಮಾತಿನಿಂದಲೇ ನಗೆ, ಮಾತಿನಿಂದಲೇ ಹೊಗೆ.....

ನನ್ನ ಹಾಡು ನನ್ನ ಪಾಡು...: ಮಾತಿನಿಂದಲೇ ನಗೆ, ಮಾತಿನಿಂದಲೇ ಹೊಗೆ.....: ಧನಂಜಯ ಮಡಿಕೇರಿ ಹನ್ನೆರಡನೇ ಶತಮಾನದಲ್ಲಿ ಬಾಳಿ ಬದುಕಿದ ಒಬ್ಬ ಆದರ್ಶ ಪುರುಷ ನಮಗೆ ಇನ್ನು ನೆನಪಾಗಿ ಕಾಡುತ್ತಾರೆಂದರೆ ಆ ವ್ಯಕ್ತಿಯ ಬದುಕು ಆದರ್ಶ ನಡತೆ ಹೇಗಿ...

Wednesday, 22 February 2012

ಮಾತಿನಿಂದಲೇ ನಗೆ, ಮಾತಿನಿಂದಲೇ ಹೊಗೆ.....

  ಧನಂಜಯ ಮಡಿಕೇರಿ

     ಹನ್ನೆರಡನೇ ಶತಮಾನದಲ್ಲಿ ಬಾಳಿ ಬದುಕಿದ ಒಬ್ಬ ಆದರ್ಶ ಪುರುಷ ನಮಗೆ ಇನ್ನು ನೆನಪಾಗಿ ಕಾಡುತ್ತಾರೆಂದರೆ  ಆ ವ್ಯಕ್ತಿಯ ಬದುಕು ಆದರ್ಶ ನಡತೆ ಹೇಗಿರಬೇಕು, ಮಿಗಿಲಾಗಿ, ಅವರ ಬದುಕಿನ ತತ್ವಗಳು ಇಂದು ಅಲ್ಲಿಯೂ ಇಲ್ಲಿಯೂ ಚರ್ಚೆಯಾಗುತಿವೆ, ಅವರ ಮೂಲದ ಪ್ರಶ್ನೆಯಾಗುತ್ತಿದೆ. ಋಷಿ  ಮೂಲವನ್ನೂ  ನದಿ ಮೂಲವನ್ನೂ, ಹೆಣ್ಣಿನ ಮೂಲವನ್ನೂ ಕೇಳಬಾರದು ಎಂಬ ವೇದವಾಕ್ಯ ಮೂಲೆ ಗುಂಪಾಗಿ ಪರಸ್ಪರ ಬಡಿದಾಟ ಸ್ವ-ಪ್ರತಿಷ್ಠೆ ಪ್ರಧಾನವಾಗುತ್ತಿರುವಾಗ ಇವೆಲ್ಲವನ್ನೂ ಯಾವುದೋ ಒಂದು ದೃಷ್ಟಿಯಿಂದ ದೂರದಿಂದ ನೋಡುತ್ತಿರುವ ಬಸವಣ್ಣ ಮಾತ್ರ ತಾನು ಪ್ರೀತಿಸಿದವರನ್ನು ಪ್ರೀತಿಸುವುದು ಮಾನವ ಧರ್ಮ, ತನ್ನ ಪ್ರೀತಿಸಿದವರನ್ನು ಪ್ರೀತಿಸುವದು ಪರಧರ್ಮ, ತನ್ನ ಬೈದು ನಿಂದಿಸುವವರನ್ನು ಪ್ರೀತಿಸುವದು ಮಹೋಧರ್ಮ, ಎಂದು ನಕ್ಕು ಸುಮ್ಮನಾಗಿರಬಹುದು ಬಸವಣ್ಣ ಸಾಧಿಸಿದ್ದು ಇಂತಹ ಮಹೋಧರ್ಮವನ್ನೇ. ಬೈದು ನಿಂದಿಸುವವರಿಗೆ ಮಹಾತ್ಮರು ಯಾವಾಗಲು ತಮ್ಮ ಹೃದಯದಲ್ಲಿ ಸ್ಥಾನ ಮೀಸಲಿಟ್ಟಿರುತ್ತಾರೆ.
ಅಂತಹ ದಾರ್ಶನಿಕರು ಈ ದೇಶದಲ್ಲಿ ಬಾಳಿ ಹೋಗಿದ್ದಾರೆಂದು ನಂಬಿರುವ ಜನ ನಾವು ಹಾಗೂ ಅದಕ್ಕಾಗಿ ಕೆಲವು ಇತಿಹಾಸ ಪುರಾವೆಗಳು ಸಿಕ್ಕುತ್ತವೆ. ಮನುಷ್ಯ ಇನ್ನೊಬ್ಬರ ಮೇಲೆ ದ್ವೇಷ ಸಾಧಿಸಿದರೆ ತನಗಾಗುವ  ಹಾನಿಯೇ ಹೆಚ್ಚು ಆದರೆ ಇಂದಿನ ಆಧುನಿಕ ಸಮಾಜದಲ್ಲಿ “ಹಾನಿ” ಎಂಬುವದು ಪ್ರಚಾರತೆಯ ಪಾಲಾಗುತ್ತಿದೆ. ಹನ್ನೆರಡನೆಯ ಶತಮಾನದಲ್ಲಿ ನಡೆದ ಈ ವಿಚಾರ ಕ್ರಾಂತಿ ಇಪ್ಪತೊಂದನೆಯ ಶತಮಾನದ ಈ ಸಮಾಜಕ್ಕೂ ಆದರ್ಶವಾದದ್ದು ಎಂದಾದರೆ ಅದು ಬಸವಣ್ಣನವರ ವ್ಯಕ್ತಿತ್ವವನ್ನೂ ಎತ್ತಿ ತೋರಿಸುತ್ತದೆ. ಮಹಾತ್ಮರು ಸಮಾಜದಲ್ಲಿ ಮನುಷ್ಯ ಹೇಗಿರಬೇಕೆಂಬುದನ್ನು ಕಲಿಸುತ್ತಾರೆ, ಹಾಗೆ ಬಾಳುತ್ತಾರೆ, ಮದ್ಯಮರು ಆಡುತ್ತಾರೆ,ಅಧಮರು ಮಾತನಾಡುತ್ತಾರೆ  ಮಾಡುವದಿಲ್ಲ. ಬಸವಣ್ಣನವರು ಈ ಉತ್ತಮರಲ್ಲಿ ಒಬ್ಬರು  ಅವರ ವಚನಗಳು ಅವರಂತೆಯೇ ಸತ್ವವನ್ನು ಬಿಂಬಿಸುವ ಕೈಗನ್ನಡಿಗಳು.
ಸಮಾಜದಲ್ಲಿಯ ಏರು ಪೇರು ಅವರಿಗೆ ಅಸಹನೀಯ ಅವುಗಳನ್ನು ಹೋಗಲಾಡಿಸುವ ಸಲುವಾಗಿ ಹಗಲಿರುಳು ಪರಿಶ್ರಮಿಸಿದ್ದಾರೆ. ಇದಕ್ಕಾಗಿ ವೇದಶಾಸ್ತ್ರಗಳಲ್ಲಿರುವ ಲೋಪ ದೋಷಗಳನ್ನೂ ಎತ್ತಿ ಹೇಳುವುದಕ್ಕೂ ಸಿದ್ದರಿದ್ದಾರೆ. ಇದು ಅವರ ಧೀರತನ ಅಂತಹ ಒಬ್ಬ ಧೀಮಂತ ವ್ಯಕ್ತಿಯನ್ನು ವಿಶ್ವದ ಅತಿದೊಡ್ಡ ಜಾತ್ಯತೀತ ರಾಷ್ಟ್ರದಲ್ಲಿ ಒಂದು ಜಾತಿಗೆ ಸಭಂದಪಟ್ಟವನೆಂದು ಚಿತ್ರಿಸಲು ಹೊರಟಿರುವದು ಮಾತ್ರ ತೀರಾ ಖಂಡನೀಯ. ನಿರಂಕಾರವೇ ಬಸವಣ್ಣನವರ ವ್ಯಕ್ತಿತ್ವ ವಿಕಾಸನದ ಮೂಲ ದ್ರವ್ಯ. ಇದು ಅವರ ಅನೇಕ ವಚನಗಳಲ್ಲಿ ಕಂಡು ಬರುತ್ತದೆ. ಅಹಂಕಾರಿಯಾದವನು ಎಂದು ದೊಡ್ಡವ ಎನಿಸಲಾರ. ಬಸವಣ್ಣನವರು ತಮ್ಮ ನಡೆ ನುಡಿ, ಆಚಾರ ವಿಚಾರಗಳಲ್ಲಿ ಇದನ್ನು ಎತ್ತಿ ತೋರ್ಪಸಿದ್ದಾರೆ. ಬಸವಣ್ಣನವರು ಅಂದಿನ ವ್ಯವಸ್ಥೆ ಬಗ್ಗೆ ಸಿಡಿಮಿಡಿಗೊಂಡ ವಿಷಯ ನಿರೂಪಣೆ ತೇಪ ಜೋಡಿಸಿದಂತಾಗಿದೆ ಬಸವಣ್ಣನವರನ್ನು ಮಹಾತ್ಮರ ಸಾಲಿನಲ್ಲಿ ನಿಲ್ಲಿಸಲು ಇರುವ ಅನೇಕ ಕಾರಣಗಳಲ್ಲಿ ದಲಿತರನ್ನು ಎತ್ತಿ ಹಿಡಿದಿರುವುದು ಪ್ರಮುಖವಾಗಿದೆ. ವರ್ಣಾಶ್ರಮವನ್ನೇ ನಂಬಿಕೊಂಡು ಅದನ್ನೇ ಬೋದಿಸುತ್ತಾ ಆಚರಿಸುತ್ತಾ ಬಂದವರಿಗೆ ಇದು ಒಂದು ಕೊಡಲಿಯ ಪೆಟ್ಟು.
          ಬಸವಣ್ಣನವರು ದಾರ್ಶನಿಕರಾಗಿ, ತತ್ವಜ್ಞಾನಿಗಳಾಗಿ, ಯುಗಪುರುಷರಾಗಿ, ಭಕ್ತಿ ಭಂಡಾರಿಯಾಗಿ, ಮಾನವತಾವಾದಿಯಾಗಿ, ಅಹಿಂಸಾವಾದಿಯಾಗಿ ಸಾವಿರಾರು ಸಂಘ ಸಂಸ್ಥೆಗಳು ಸಹಸ್ರಾರು ತಲೆಮಾರುಗಳಲ್ಲಿ ಮಾಡಲು ಅಸಾಧ್ಯವಾದ ಮಹಾನ್ ಸಾಧನೆಗಳನ್ನು ಬಸವಣ್ಣನವರು ತಮ್ಮ ಜೀವಿತ ಅವಧಿಯಲ್ಲಿ ಮಾಡಿ ತೋರಿಸಿದ್ದಾರೆ. ಇಂತಹ ಒಬ್ಬ ಮಹಾನ್ ವ್ಯಕ್ತಿಯನ್ನು ಜಾತಿಯ ಮೂಲದೊಂದಿಗೆ ಜೋತು ಹಾಕಿ ವಿಷಯವನ್ನೂ ಬೀದಿಯಲ್ಲಿ ಬಿಟ್ಟಿರುವುದು ಮಾತ್ರ ತೀರ ಖೇದಕರ. ಬಸವಣ್ಣ ನವರು ಅಂಥವರಿದರು ಇಂಥವರಿದ್ದರು ಅನ್ನು ಬಗ್ಗೆ ಒಂದು ಕೃತಿಗಳನ್ನೂ ತರುವುದು ಕೂಡ  ಉಚಿತವಲ್ಲ. ಸಮಾಜದ ಒಂದು ವರ್ಗವನ್ನು ಒಂದು ವ್ಯವಸ್ಥೆಯನ್ನೂ ತಿದ್ದಿ ಇಂದಿಗೂ ಜನರ ಮನಸಿನಲ್ಲಿ ಒಬ್ಬ ಧೀರ ವ್ಯಕ್ತಿ ಎನ್ನುವುದು ಮಾತ್ರ ಇಲ್ಲಿ ಪ್ರಸ್ತುತ. ತನ್ನದೆಲ್ಲವನ್ನೂ ಕಳೆದುಕೊಂಡು ತನ್ನ ಆಚಾರ ವಿಚಾರಗಳಿಗೆ ಶರಣು ಹೊಡೆದು ಇನ್ನೊಬ್ಬರ ಗುಲಾಮನಾಗಿ ಬದುಕುವುದರಲ್ಲಿ ಯಾವ ಪುರುಷಾರ್ಥವಿದೆ. ಸ್ವಾತಂತ್ರವಿಲ್ಲದ ವ್ಯಕ್ತಿ ಸಾಯುವ ಮುಂಚೆಯೇ ಸಾವಿರ ಸಾರಿ ಸತ್ತಂತೆ ಎನ್ನುವ ಬಸವಣ್ಣನವರು ಸದಾ ಗುಲಾಮಗಿರಿಯನ್ನು ತಿರಸ್ಕರಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹೀಗೆ ಎಲ್ಲಾ ಅರ್ಥಗಳಲ್ಲಿಯೂ ವ್ಯಕ್ತಿಯ ಸ್ವಾತಂತ್ರಕ್ಕೆ ಮೊದಲ ಪ್ರಾಶಸ್ತ್ಯ ನೀಡಿದ್ದಾರೆ.
ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ
ಆಡಿಹರಯ್ಯ, ಹಾಡಿಹರಯ್ಯ ಮನಬಂದ ಪರಿಯಲ್ಲಿ
ಲೋಕ ದಿಚ್ಚೆಯ ನಡೆವನಲ್ಲ, ಲೋಕದಿಚ್ಚೆಯ ನುಡಿದವನಲ್ಲ
          ಎಂಬ ಬಸವಣ್ಣನವರ ಮಾತು ಅಂದಿನ ಕಾಲದಲ್ಲಿ ಹೊಸ ಪರಿಸರಕ್ಕೆ ನಾಂದಿಯಾಯಿತು. ಒಟ್ಟಿನಲ್ಲಿ ನೂರು ಜನರಲ್ಲಿ ಒಬ್ಬ ಶೂರ, ಸಾವಿರ ಜನರಲ್ಲಿ ಒಬ್ಬ ಪಂಡಿತ, ಹತ್ತು ಸಾವಿರಕೊಬ್ಬ ವಾಗ್ಮಿ, ಹುಟ್ಟುತ್ತಾನೆ. ಆದರೆ ತ್ಯಾಗಿಗಳು ಹುಟ್ಟುವುದು ತುಂಬಾ ದುರ್ಲಭ ಎಂಬುವದರಲ್ಲಿ ಬಸವಣ್ಣನವರು ಬಾಳಿ ಹೋದ ಸಮಾಜದಲ್ಲಿ ನಾವಿದ್ದೇವೆ ಎಂದರೆ  ಅದಕಿಂತ ಸಂತೋಷ ಮತ್ತೇನಿದೆ. ವಸ್ತುಸ್ಥಿತಿಯೇ ಹೀಗಿರುವಾಗ ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ ಎಂದು ಸಾವನ್ನು ಸಹ ನಗು ಮುಖದಿಂದಲೇ ಆಹ್ವಾನಿಸುವ ಶೂರತನ, ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ಈ ಹಿನ್ನಲೆಯಲ್ಲಿ ಪ್ರಸ್ತುತ ಚರ್ಚೆ, ವಾದ ವಿವಾದಗಳಿಂದ ಬಸವಣ್ಣನವರಿಗೆ ಏನೂ ಹಾನಿ ಇಲ್ಲ. ಬಸವಣ್ಣನವರನ್ನು ಹೊಗಳುವುದು ತೆಗಳುವುದು ಕೇಳುವುದಕ್ಕೆ ಇಂದು ಬಸವಣ್ಣನವರು ಇಲ್ಲದಿರಬಹುದು ಆದರೆ ಅವರ ವಚನ ಸಾಹಿತ್ಯ ಇನ್ನು ಜೀವಂತವಾಗಿದೆ.. ಅದರ ಬಗ್ಗೆ ಚರ್ಚೆ ಅನಾವಶ್ಯಕ ಚರ್ಚೆ ಮಾಡಿದರೆ ಮಾತಿನಿಂದಲೇ ನಗೆ ಮಾತಿನಿಂದಲೇ ಹೊಗೆ ಅನ್ನದೆ ಬೇರೆ ದಾರಿ ಯಾವುದಯ್ಯ?


Friday, 17 February 2012

ಮಕ್ಕಳಿಗೊಂದು ಅಕಾಡೆಮಿಯ ಅವಶ್ಯಕತೆ ಇದೆ.....?

ಧನಂಜಯ ಮಡಿಕೇರಿ
ದೇವರು ಒಬ್ಬನೇ ನಾಮ ಹಲವು ಹಾಗೆ ಮನುಷ್ಯ ಒಬ್ಬನೇ. ಆದರು ಅವನನ್ನು ಅಭ್ಯಾಸಿಸಿದಾಗ ಅವನ ಸುಳ್ಳು, ಕಳ್ಳತನ, ಮೋಸ,ವಂಚನೆ ಎಲ್ಲವು ಒಂದರ ಹಿಂದೆ ಒಂದರಂತೆ ತೆರೆದು ಕೊಳ್ಳುತ್ತದೆ. ಇಂತಹ ಸಮಾಜ ವಿರೋಧಿಯ ಲಕ್ಷಣಗಳನ್ನು ತೊಡೆದು ಹಾಕಿ ಅವನನ್ನು ಪ್ರಗತಿಯ ಕಡೆಗೆ ಕೊಂಡುಯ್ಯುವುದೇ ಸಾಹಿತ್ಯ.
ಇದನ್ನು ಮನುಷ್ಯನ ನೆಲೆಗೆ ಪರಿಚಯಿಸುವ ಕೆಲಸ ಪ್ರಾರಂಭದಿಂದಲೇ ಆಗಬೇಕಿದೆ. ಅದು ಮಕ್ಕಳ ಬಾಲ್ಯ ಅವಸ್ಥೆಯಿಂದಲೇ ಅದಕ್ಕಾಗಿ ಅವರಿಗೂ ಒಂದು ಅಕಾಡೆಮಿಯ ಅವಶ್ಯಕತೆ ಇದೆ. ಸ್ವಾತಂತ್ರವಾಗಿ ಸರಿ ಸುಮಾರು ಅರ್ಧ ಶತಮಾನ ಕಳೆದು ನಿಂತರು ಈ ರಾಜ್ಯದಲ್ಲಿಯಾಗಲಿ ದೇಶದಲ್ಲಿಯಾಗಲಿ ಮಕ್ಕಳಿಗಾಗಿ ಅವರ ಸಾಮಾಜಿಕ ಬೆಳವಣಿಗೆಗಾಗಿ ಯಾವುದೇ ಅಧಿಕೃತ ಸಂಸ್ಥೆಗಳು ಇಲ್ಲ . ಮಕ್ಕಳಿಗಾಗಿ ಚಿಂತನೆ ಮಾಡುವವರು ಪರೋಕ್ಷವಾಗಿ ಈ ದೇಶದ ಅಭಿವೃದ್ದಿಯ ಬಗ್ಗೆ ಚಿಂತಿಸುತ್ತಿದ್ದಾರೆ ಎಂಧರ್ಥ. ಬೀದರ್ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದರ ಬಗ್ಗೆ ದೊಡ್ಡ ಕೂಗು ಎದ್ದರು ಅದರ ಬೆನ್ನತ್ತಿ ಕೆಲಸ ಮಾಡುವವರು ಇಲ್ಲದೆ ಅದು ಸಹ  ಮರೆಗೆ ಸರಿದು ಹೋಗಿದೆ ಎನ್ನದೆ ಬೇರೆ ದಾರಿ ಇಲ್ಲ. ಮಕ್ಕಳ ಸಮಸ್ಯೆಯನ್ನು ಆಲಿಸಲು ಈ ದೇಶದಲ್ಲಿ ಯಾವುದೇ ಅಧಿಕೃತ ಸಂಸ್ಥೆ ಇಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲ ಭವನ ಇದ್ದರು ಅದು ಸೀಮಿತಿ ಮಿತಿಯೊಳಗೆ ಕೆಲಸ ನಿರ್ವಹಿಸಿದರು ಅದು ಒಂದು ಪ್ರದೇಶದ ಒಟ್ಟು ವ್ಯವಸ್ಥೆ ಬಗ್ಗೆ ಕೆಲಸ ಮಾಡುತ್ತಿಲ್ಲ ಎನ್ನುವುದು ಪ್ರಮುಖವಾದ ವಿಷಯ.
       ಕೇಂದ್ರ ಮಂತ್ರಿಯಾಗಿದ್ದ ಶ್ರೀಮತಿ  ರೇಣುಕಾ ಚೌದರಿಯವರು ಮಕ್ಕಳ ಆಯೋಗ ರಚಿಸುವ ಬಗ್ಗೆ ಒಮ್ಮೆ ಮಾತನಾಡಿದರು ಮತ್ತೆ ಆ ಬಗ್ಗೆ ಚಕಾರವಿಲ್ಲ. ನಮಗಾಗಿ ಕೊಡವ, ಗೌಡ, ತುಳು,ಬ್ಯಾರಿ,ಕೊಂಕಣಿ ಎಲ್ಲ ಮಾಡಿ ಕೊಂಡೆವು ಆ ಮಕ್ಕಳಿಗಾಗಿ ಕೇಳುವ ರಾಜಕಾರಿಣಿಗಳೇ ಇಲ್ಲದಂತಾಗಿದೆ ಎಂದರೆ ಅದು ನಮ್ಮ ದುರಂತ ಅನ್ನದೆ ಬೇರೆ  ಏನಿದೆ.
ಮಕ್ಕಳ ಸಾಹಿತ್ಯದ ವಿಷಯಕ್ಕೆ ಬಂದಾಗ ಅಲ್ಲಿ ಎರಡು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು ಮಕ್ಕಳಿಗಾಗಿ ರಚಿತವಾದ ಸಾಹಿತ್ಯ ಮತ್ತೊಂದು ಮಕ್ಕಳಿಂದ ರಚಿತವಾದ ಸಾಹಿತ್ಯ ಇಲ್ಲಿ ಎರಡನೇ ವಿಷಯಕ್ಕೆ ಸಂಭಂದಿಸಿದಂತೆ ಕರ್ನಾಟಕ ಮಕ್ಕಳ ಸಾಹಿತ್ಯ ವೇದಿಕೆ ಅಂತ ಇತ್ತು ಅದು ಕೂಡ ಇಂದು ತನ್ನ ಕಾರ್ಯವನ್ನೂ ಸ್ಥಗಿತಗೊಳಿಸಿದೆ. ಸಾಹಿತ್ಯದ ಕೆಲಸ ಮನುಷ್ಯನನ್ನು ಉದ್ದೀಪನಗೊಳಿಸಿ, ಉದ್ದಾತನ ಮಾಡಿ ಉನ್ನತಿಗೆ ಏರಿಸುವದು. ಸಾಹಿತ್ಯವೆಂದರೆ ಬರಿ ಮಾತಲ್ಲ ಅಲ್ಲಿ ಭಾಷೆಯು ತನ್ನ ಪ್ರಬುದ್ದತೆಯನ್ನು ಪಡೆದು ಮಂತ್ರ ಶಕ್ತಿಯನ್ನೂ ತಂದು ಕೊಂಡಿರುತ್ತದೆ ಅಲ್ಲಮಪ್ರಭುವಿನ ಮಾತಿನಲ್ಲಿ ಹೇಳುವುದಾದರೆ ಮಾತು ಅಲ್ಲಿ ಜೋತಿರ್ಲಿಂಗವಾಗಿರುತ್ತದೆ ಅಲ್ಲದೆ ಒಂದು ನಾಡಿನ ಶ್ರೇಷ್ಟತೆಯನ್ನು ಸಾಹಿತ್ಯ ಬಿಂಬಿಸುತ್ತದೆ.
ಮಕ್ಕಳ ವಿಷಯಕ್ಕೆ ಬಂದಾಗ ಹಣವಂತ ಮಕ್ಕಳು ಪ್ರತಿಭೆಯನ್ನು ಹರಸಿ ಮುಂದೆ ಹೋಗಬಹುದು. ಆದರೆ ಎಲೆಮರೆಯ ಕಾಯಿಯಂತಿರುವ ಬಡ ಮಕ್ಕಳು ಪ್ರತಿಭೆ ಇದ್ದರು ಅವರಿಗೆ ಆರ್ಥಿಕ ಸಮಸ್ಯೆಯಿಂದ ಮುಂದೆ ಹೋಗುವದು ಕಷ್ಟ ಪ್ರತಿಭಾವಂತರನ್ನು ಸಿನಿಮಾದಲ್ಲಿ ಚಿತ್ರದಲ್ಲಿ ನೋಡುವುದಸ್ಟೇ ಅವರಿಂದ ಸಾಧ್ಯ.  ಮಕ್ಕಳ ಮನಸು ಮುಗ್ದವಾಗಿದ್ದು ಗ್ರಹಿಸುವ ಶಕ್ತಿ ಅಧಿಕವಾಗಿರುತ್ತದೆ ಬುದ್ದಿಯ ಅತಿ ಶೀಘ್ರ ಬೆಳವಣಿಗೆ ಬಾಲ್ಯದಲ್ಲಿ ಮಾತ್ರ ಆಗುತ್ತದೆ. ಬೌದಿಕ ವಯಸ್ಸು ಸದಾ ಹೆಚ್ಚುತ್ತಾ  ಹೋಗುವುದಿಲ್ಲಾ ಎಲ್ಲೋ ೧೪-೧೮ ವಯಸ್ಸಿನ ಮಧ್ಯೆ ಅದು ಸಮ ಮಟ್ಟಕ್ಕೆ ಬರುತ್ತದೆ ಆ ಮಧ್ಯೆ ಹಿರಿಯರಾದ ನಾವು ಮಕ್ಕಳಲ್ಲಿ  ಒಳ್ಳೆಯ ವಿಷಯ ಬಿತ್ತನೆ ಮಾಡಬೇಕು ಅದು ಸಾಹಿತ್ಯ,ವಾಗಿರಬಹುದು ಇನ್ಯಾವುದೇ ಇರಬಹುದು. ಇಲ್ಲಿ ಬೌದಿಕ ವಯಸ್ಸು ಮುಖ್ಯವಾಗುತ್ತದೆ. ಪ್ರತಿಭೆಗೂ ಹರೆಯ ಮತ್ತು ಮುದಿತನವಿದೆ ಮಗುವಿನ ಮೆದುಳಿನಲ್ಲಿ ಆರು ಬಗೆಯ ಪ್ರತಿಭಾ ವಲಯಗಳಿವೆ ಎಂದು ಹಾರ್ವರ್ಡ್ ವಿಶ್ವ ವಿದ್ಯಾಲಯದ ಗಾರ್ಡನರ್ ಎಂಬ ಮನೋ ವಿಜ್ಞಾನಿ ಗುರುತಿಸಿದ್ದಾರೆ ಅವುಗಳೆಂದರೆ ಸಂಗೀತ, ಕವಿತ್ವ, ಗಣಿತ, ತನ್ನ ಹಾಗು ಇತರನ್ನು ಅರ್ಥ ಮಾಡಿಕೊಳ್ಳುವ ಶಕ್ತಿ, ಆಳ ಆಕಾರಗಳನ್ನೂ ಅರ್ಥಮಾಡಿ ವಿಶ್ಲೇಷಿಸುವ ಶಕ್ತಿ, ಕಲಾ ಪ್ರೌಡಿಮೆ, ನಟನೆ ನರ್ತನೆಯಂಥಹ ಶಾರೀರಿಕ ಪ್ರತಿಭೆ. ಈ  ಆರು ವಿಷಯದ ಪೈಕಿ ಇಂದೊಂದು ವಿಷಯವು ಒಂದೊಂದು ವಯೋಮಾನದಲ್ಲಿ ಬೆಳವಣಿಗೆ ಹೊಂದುತ್ತದೆ. ಅದರಲ್ಲಿ ಮೊಟ್ಟ ಮೊದಲನೆಯದು ಸಂಗೀತ ಮತ್ತು ಅದಕ್ಕೆ ತಾಳ ಹಾಕುವ ಪ್ರತಿಭೆ ಇದು ಎಂದು ಹುಟ್ಟುತ್ತದೆ ಮತ್ತು ಎಂದು ಸಾಯುತ್ತದೆ ಎಂಬುವದು ಅವರ ಅನುವಂಶಿಕ ಮತ್ತು ಸಾಮಾಜಿಕ ಪರಿಸರವನ್ನು ಅವಲಂಬಿಸಿರುತ್ತದೆ. ಶರೀರ ನಡುವಯಸ್ಸಿಗೆ ಬರುವ ಹೊತ್ತಿಗೆ ಪ್ರತಿಭೆಗೆ ಮುದಿತನ ಬರುತ್ತದೆ. ಇದಕ್ಕೆ ಉತ್ತಮ ಹೆಸರು ಐನ್ ಸ್ಟೀನ್ ಇವರು ತನ್ನ ಮಹತ್ವದ ಸಂಶೋದನೆಯನ್ನೆಲ್ಲಾ ೨೦ ರ ಹರೆಯದಲ್ಲಿ ಮಾಡಿ ಮುಗಿಸಿದ್ದರು ಹಾಗೆಯೇ ನಮ್ಮ ಡಾ. ಸುಬ್ರಮಣ್ಯಂ ಚಂದ್ರಶೇಖರ್  ಅವರಿಗೆ ೨೪ ನೆ ವಯಸ್ಸಿಗೆ ನೊಬೆಲ್ ಪ್ರಶಸ್ತಿ ಬಂದಿದೆ.
ಭವಿಷ್ಯದ ದಿನಗಳಲ್ಲಿ ನಮ್ಮ ನಾಡಿನ ಸಂಸ್ಕೃತಿ ಮತ್ತು ಇತಿಹಾಸವನ್ನೂ ಭದ್ರವಾಗಿರಿಸಲು ನಾವು ಎಷ್ಟರ ಮಟ್ಟಿಗೆ ಪ್ರಯತ್ನಿಸುತಿದ್ದೇವೆ.? ಕುವೆಂಪು,ಬೇಂದ್ರೆ,ಕಾರಂತ,ಗೋಕಾಕ್,ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿಯವರು ಈ ನಾಡಿನಲ್ಲಿ ಮುಂದೊಂದು ದಿವಸ ಹುಟ್ಟಿಯಾರೆ ? ಇಷ್ಟಕ್ಕೂ ಅವರು ತಮ್ಮ ಬಾಲ್ಯ ಕಳೆದು ಬಂದವರಲ್ಲವೇ ?ಟಿ.ವಿಯಲ್ಲಿ ಎರಡು ಹಾಡು ಕಾರ್ಟೂನ್, ಪತ್ರಿಕೆಯಲ್ಲಿ  ಎರಡು ಮಕ್ಕಳ ಚಿತ್ರ ಬಿಡಿಸಿ ಪ್ರಕಟಗೊಂಡ ಮಾತ್ರಕ್ಕೆ  ನಮ್ಮ ಕರ್ತವ್ಯ ಮುಗಿಯಿತೇ ? ಮಕ್ಕಳನ್ನು ಗುರುತಿಸಿ ಅವರ ಪ್ರತಿಭೆಯನ್ನು ಗುರುತಿಸಿ,ಬೆಳೆಸಿ,ಉಳಿಸುವ ಕೆಲಸ ನಮ್ಮಿಂದ ಆಗಬೇಕು,
ಈ ನಿಟ್ಟಿನಲ್ಲಿ ನಮ್ಮ ನಾಡಿಗೆ ಸಾಹಿತ್ಯ ಪರವಾಗಲಿ ಅಥವಾ ಮಕ್ಕಳ ಪ್ರತಿಯೊಂದು ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ  ಮಕ್ಕಳ ಸಾಹಿತ್ಯ ಅಕಾಡೆಮಿ ಬೇಕಾಗಿದೆ ಎಲ್ಲಿ ನಾವು ಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತೇವೆಯೋ ಅಲ್ಲಿ ನಮ್ಮ  ಅವನತಿಯ ದಿವಸಗಳನ್ನು ನಾವು ಸೃಷ್ಟಿಸುತ್ತಿದ್ದೇವೆ ಎಂದರ್ಥ. ಅದು ನಮ್ಮ ವೈಯುಕ್ತಿಕ ಬದುಕಲ್ಲೂ ಕೂಡ ಅಸ್ಟೆ ನಮ್ಮ ಮಕ್ಕಳಿಗೆ ಭದ್ರ ಬುನಾದಿ ಹಾಕದೆ ಹೋದರೆ ನಮ್ಮ ಬದುಕಿನ ಅಂತ್ಯದದಿವಸವನ್ನು ಕಷ್ಟದಿಂದ ನೋಡಬೇಕಾದಿತು ಅದಕ್ಕೆ ಮಕ್ಕಳಿಗೆ ಒಂದು ಸಾಹಿತ್ಯ ಅಕಾಡೆಮಿ ಬೇಕಾಗಿದೆ ಎಂದು ನನ್ನ ಒತ್ತಾಯ ನಿಮ್ಮದು..? 

Sunday, 12 February 2012

ಒಂದು ಗಂಡಿಗೊಂದು ಹೆಣ್ಣು ಹೇಗೋ ಸೇರಿ ಕೊಂಡಿಕೊಂಡು...!


ಧನಂಜಯ ಮಡಿಕೇರಿ.
ಶತಮಾನಗಳಿಂದ ಕೋಟ್ಯಾಂತರ  ತುಟಿಗಳು ಉಸುರಿದರು ಹಗುರವಾಗದ,ಕೋಟ್ಯಾಂತರ ಕಿವಿಗಳು ಕೇಳಿದರು ಬೇಜಾರಾಗದ ಕನ್ನಡದ ತ್ರಿಪದಿ ನಾನು ನಿನ್ನ ಪ್ರಿತಿಸುತೇನೆ ಇದಕೊಂದು ದಿನ ಬೇಕಾ? ಆದರೆ ಒಂದು ವರ್ಗದ ಜನರಿಗೆ ಬೇಕು. ದೈನಂದಿನ ಜಂಜಾಟದಲ್ಲಿ ಬೇಜಾರಾಗಿರುವವರಿಗೆ ಬೇಕೇ ಬೇಕು. ಪ್ರೀತಿ ( Love ) ಎಂಬ ಪದವನ್ನೂ ಎರಡು ರೀತಿಯಲ್ಲಿ ಅರ್ಥೈಸಬಹುದು ಮತ್ತು ಎರಡು ವರ್ಗದ ಜನರು ಇದರಲ್ಲಿ ಕಾಣಸಿಗುತ್ತಾರೆ.
ನೋಡಿ,ನಿರೀಕ್ಷಿಸಿ,ಪರೀಕ್ಷಿಸಿ ಚುನಾಯಿಸುವವರು(  Look,Observe,Verifine,Elect ) ಇದರಲ್ಲಿ ಸಮಾಜದ ಸುಮಾರು ಮುಕ್ಕಾಲು ಪಾಲು ಜನರು ಸಿಗುತ್ತಾರೆ ಈ ವರ್ಗದ ಜನರಲ್ಲಿ ಪ್ರೀತಿ ಭೋರ್ಗರೆವ ಜಲಪಾತವಾಗಿ ಪರಸ್ಪರ ಪ್ರಿತಿಯಿಂದ ಇರುವುದರೊಂದಿಗೆ ಇವರ ಪ್ರೀತಿ ನಿತ್ಯೋತ್ಸವ ಎಂದು ಹೇಳುವವರಿಗೆ ಫೆಬ್ರವರಿ ೧೪ ರಂತಹ ವ್ಯಾಲಂಟೈನ್ ಡೇ ಬೇಕಾಗಿಲ್ಲ.    ಮತ್ತು ಆಚರಿಸುವುದಾದರೆ ಮುಕ್ತವಾಗಿ ಸಂತೋಷದಿಂದ ಆಚರಿಸಲುಬಹುದು. ಏಕೆಂದರೆ ಇದು ಎಲ್ಲರಿಂದ ಒಪ್ಪಿಗೆ ಮತ್ತು ಅಪ್ಪಣೆ ಪಡೆದ ಪ್ರೀತಿ,  ಆದರೆ ಇವರು ಈ ದಿನವನ್ನೂ ಆಚರಿಸುವರೇ ಎಂಬುದು ಸಂಶಯಾಸ್ಪದ ಏಕೆಂದರೆನಿರಂತರ ಪ್ರೀತಿಗೆ ಒಂದು ನಿಗದಿತ ದಿವಸ ಬೇಡ . ಇನ್ನೊಂದು ವರ್ಗದ ಪ್ರೇಮಿಗಳು ಜೀವನವನ್ನೂ ನಷ್ಟದ ಹಾದಿಯಲ್ಲಿ ನಡೆಸುತ್ತಾ, ದಿನಾಲು ಕಣ್ಣೀರು ಹಾಕುತ್ತಾ ಹೆಚ್ಚು ದುಃಖಭಾರಿತರಾಗಿ ಕೊನೆಯಿಲ್ಲದ ನೋವಿನಲ್ಲಿ ಕೊರಗುವರು.( Loss of life,Occen of tears, Volume of sarrow,Endless Pain )
ಇವರಲ್ಲಿರುವ ಬರುವ ಪ್ರೇಮಿಗಳು ಹೆಚ್ಚಿನವರು ಸುನಾಮಿಗಳೇ ಸರಿ ಇದರಲ್ಲಿ ಯುವ ಸಮುದಾಯವೇ ಹೆಚ್ಚು, ಸುನಾಮಿ ಎನ್ನುವ ಪದ ಇವರಿಗೆ ಹೆಚ್ಚು ಸೂಕ್ತ ಏಕೆಂದರೆ ಬದುಕಿನ ಗೊತ್ತುಗುರಿ ಇಲ್ಲದ ಜನರು ಇಂತವರು ನಾನು ಏನು ಮಾಡಬೇಕು? ನನ್ನ ಗುರಿ ಏನು ? ನಾನು ಎಲ್ಲಿ ತಲುಪಬೇಕು ? ಎಂದು ಹುಟ್ಟಿ ೧೬ ವರ್ಷಕ್ಕೆ ಪ್ರೀತಿಸುವ ಹಕ್ಕು ಪಡೆದುಕೊಲ್ಲುವುದಿಲ್ಲಾ. ನಮ್ಮನ್ನು ಸಾಕಿ ಸಲುಹಿದ ತಂದೆ-ತಾಯಿ, ನಮ್ಮನ್ನು ಏತಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಾರೆ. ಅವರ ಮನದ ಇಂಗಿತವೇನು ? ನಾನು ಶಾಲೆಗಾಗಲಿ ಕಾಲೇಜಿಗಾಗಲಿ ಬರುವ ಉದ್ದೇಶವೇನು ? ನಾನು ಏನಾಗಬೇಕು ?  ಎಂದು ಯೋಚಿಸಿ ನಡೆದರೆ ಯಾರ ಬಾಳಲ್ಲೂ ಸುನಾಮಿ ಆಗುವುದಿಲ್ಲ ಇಂತ ಸುನಾಮಿಗೆ ಯಾವ ಕುಟುಂಬವು ಬೀಳುವುದಿಲ್ಲಾ. ಇಲ್ಲಿ ನಾನು ಯಾವುದೇ ಜಾತಿಯ ತಾರತಮ್ಯದ ಬಗ್ಗೆ ಹೇಳುತ್ತಿಲ್ಲ. ನನ್ನದು ಮನುಜ ಮತ ವಿಶ್ವ ಪಥ ನಾವು ಕೂಡ ಆ ಹಾದಿಯಲ್ಲಿ ಮುನ್ನುಗ್ಗ ಬೇಕು.
ಒಂದು ಗಂಡಿಗೊಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು ಕಾಣದಂಥ ಕನಸುಕಂಡು ಮಾತಿಗೊಲಿಯದಮೃತ ಉಂಡು ದುಃಖ ಹಗುರ ಎನುತಿರೆ ಪ್ರೇಮ ಎನಲು ಹಾಸ್ಯವೇ..? ಇದು ಕವಿ ಕೆ.ಎಸ್.ನ “ಮೈಸೂರು ಮಲ್ಲಿಗೆ” ಕವನ ಸಂಕಲನದಲ್ಲಿರುವ ಒಂದು ಕವಿತೆಯ ಸಾಲು. ಸುಮಾರು ೬ ದಶಕಗಳ ಹಿಂದಿನ ಗೀತೆ ಈಗಲೂ ಜನಪ್ರಿಯ, ಚಿರನೂತನ ಇ ಕವಿತೆಯಲ್ಲಿ ಶತ ಶತಮಾನಗಳ ಇತಿಹಾಸವಿರುವ ಅಥವಾ ಮಾನವನ ಇತಿಹಾಸದೊಂದಿಗೆ ತಳುಕು ಹಾಕಿಕೊಂಡಿರುವ ಗಂಡು-ಹೆಣ್ಣಿನ ನಡುವಿನ ಸೆಳೆತ, ಆಕರ್ಷಣೆ, ಪ್ರೀತಿ,ಪ್ರೇಮ,ಕಾಮ.. ಹೀಗೆ ಅನಂತ ರೂಪಾವಾದದ್ದು  ಈ ಪ್ರೇಮ. ಕವಿಗಳಿಗೆ ,ಕವಿತೆಗೆ, ಕಥೆಗಾರರಿಗೆ, ಕಥಾವಸ್ತುವಾಗಿ, ವಿಶ್ಲೇಷಕರಿಗೆ ವಿಶ್ಲೇಷಣೆಯ ವಸ್ತುವಾಗಿ ಅವರವರ ಭಾವಕ್ಕೆ ತಕ್ಕಂತೆ ಆಯಾ ವ್ಯಾಪ್ತಿಗೆ ಒಳಪಡುವ ಪ್ರೇಮ ಸರೋವರ, ಪ್ರೇಮ ಸಾಮ್ರಾಜ್ಯಕ್ಕೆ ಗಡಿಯಿಲ್ಲ, ಎಲ್ಲೆಗಳಿಲ್ಲ, ಅದು ಸೀಮಾತೀತ, ಜಾತ್ಯಾತೀತ ಈ ವಿಷಯದಲ್ಲಿ ಮಾತ್ರ ಸಮಾಜ ವಿಶ್ವ ಮಾನವತೆಯನ್ನು ಹೊಂದಿದೆ.  !
ವಿದ್ಯೆ ಪಡೆದು ಬದುಕಿನಲ್ಲಿ ನಿಗದಿತ ಅಡಿಪಾಯ ಹಾಕಿಕೊಂಡ ಮೇಲೆ  ನಿಮಗಿಸ್ಟ ಬಂದವರನ್ನು ಪ್ರೀತಿಸಿ ಆದರೆ ಈ ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ, ಮತ, ಪಂಥ, ಸೇರಿದಂತೆ   ಎಲ್ಲವನ್ನೂ ದಾಟಿ ನಿಂತ ದೊಡ್ಡ ಮನಸಿನ ವ್ಯಕ್ತಿ ಎಂದು ತಿಳಿದರೆ ಮಾತ್ರ ಆ ಸ್ಥಾನಕ್ಕೆ ಅವನಾಗಲಿ ಅವಳಾಗಲೀ ಯೋಗ್ಯ. ನಮ್ಮಲ್ಲಿ  ಇಂತಹ ಪ್ರೇಮಕ್ಕೆ ಸಾಕಸ್ಟು ಹೆಸರುಗಳು ಸಿಗುತ್ತವೆ ಪ್ರೊ. ಬರಗೂರು ರಾಮಚಂದ್ರಪ್ಪ-ರಾಜಲಕ್ಷ್ಮಿ, ಡಾ. ಕಮಲಾ-ಹಂಪನಾ, ಡಾ. ಸಿದ್ದಲಿಂಗಯ್ಯ-ರಮಾಕುಮಾರಿ, ಕಲಾವಿದರ ಪೈಕಿ ಗಿರೀಶ್-ವೈಶಾಲಿ ಕಾಸರವಳ್ಳಿ, ನಾಗಭರಣ ದಂಪತಿಗಳು ಈಗೆ ಸಾಕಷ್ಟು ಹೆಸರು ಸಿಗಿತ್ತವೆ. ದೊಡ್ಡ ಮನುಸ್ಯರು ಹೇಳುವಂತೆ “ ನೀನು ನನ್ನ ಪ್ರೀತಿಸಿದರಸ್ಟೇ ಸಾಲದು ನಾನು ಪ್ರಿತಿಸುತೇನೆಂದು “ ಬಾಯಿ ಬಿಟ್ಟು ಹೇಳಬೇಕು ಅಲ್ಲಿಗೆ ಆ ಪ್ರೀತಿಗೆ ಪ್ರಿತಿಸುವಿಕೆಗೆ ಅರ್ಥ ಮತ್ತು ದಿಕ್ಕು.
ಕ್ರಿ.ಶ. ೩ ನೇ ಶತಮಾನದಲ್ಲಿ ರೋಮ್ ಸಾಮ್ರಾಜ್ಯದಲ್ಲಿ ಸಂತ ವ್ಯಾಲೆಂಟೇನ್ ನೆಲೆಸಿದ್ದನು. ಇದೆ ಕಾಲದಲ್ಲಿ ಆ ಸಾಮ್ರಾಜ್ಯದ ಚಕ್ರವರ್ತಿ ಕ್ಲಾಡಿಯಸ್ ನಿರಂತರ ನಡೆಯುವ ಸಮರಕ್ಕಾಗಿ ತನ್ನ ಸಾಮ್ರಾಜ್ಯ ಮತ್ತು ಅಧಿಕಾರದ ಉಳಿವಿಗಾಗಿ  ಒಂದು ವಿಶೇಷ ಪಡೆಯನ್ನು ನಿರ್ಮಿಸಲು ಯೋಚಿಸಿದನು ಇದಕ್ಕಾಗಿ ತರುಣರನ್ನು ಆಯ್ಕೆ ಮಾಡಬೇಕೆಂದು ನಿರ್ಧಾರ ಮಾಡಿದನು ಅದರಂತೆ ಯುದ್ದ ಮುಗಿಯುವವರೆಗೂ ಯಾವ ತರುಣರು ತಮ್ಮ ಪ್ರೇಯಸಿಯನ್ನು ಭೇಟಿಯಾಗುವುದಾಗಲಿ, ನಿಶ್ಚಿತಾರ್ಥ,ಮದುವೆ, ಎಲ್ಲದಕ್ಕೂ ನಿರ್ಭಂದ ಹೇರಿದನು ಆದರೆ ಅಲ್ಲಿದ್ದ ಸಂತ ವ್ಯಾಲೆಂಟೇನ್ ಬಳಿ ಈ ಯುವಕರು ತಮ್ಮ ನೋವನ್ನು ತೋಡಿಕೊಂಡ ಮೇರೆಗೆ ಅನೇಕ ಯುವ ಪ್ರೇಮಿಗಳು ಕದ್ದು ಮುಚ್ಚಿ ಈತನ ಬಳಿ ಹೋಗಿ  ಶಾಸ್ತ್ರೋಕ್ತವಾಗಿ ವಿವಾಹವಾಗುತಿದ್ದರು ಅದು ಹೇಗೋ ಮಹರಾಜನ ಕಿವಿ ತಲುಪಿತು ಆತ ಸಂತನನ್ನು ಬಂಧಿಸಿ ಜೈಲಿನಲ್ಲಿಟ್ಟನು ಜೈಲು ಅಧಿಕಾರಿಯ ಮಗಳು ಈತನ ಕೆಲಸವನ್ನು ಶ್ಲಾಗಿಸುತ್ತಾಳೆ ಕೊನೆಗೆ ಸಂತನಿಗೆ ಫೆಬ್ರವರಿ ೧೪ ರಂದು ಮರಣದಂಡನೆ ವಿಧಿಸಲಾಯಿತು. ಮರಣಕ್ಕೂ ಮೊದಲು ಜೈಲ್ ಅಧಿಕಾರಿ ಮಗಳಿಗೆ ( Love from your Valentine ) ಎಂಬ ವಾಕ್ಯವನ್ನು ಬರೆದಿದ್ದ ಸಂದೇಶ ತಲುಪಿಸುವಂತೆ ವ್ಯಾಲೆಂಟೇನ್ ಹೇಳಿದರಂತೆ ನಂಬಿಕೆ ಕೂಡ ಇದೆ ಈ ವಾಕ್ಯವನ್ನು ಎಲ್ಲಾ ಉಡುಗೊರೆ ಮೇಲೆ ಆ ದಿನ ಕಾಣಬಹುದು.
       ಆದರೆ ಇತಿಹಾಸ ದಿನ ಕಳೆದಂತೆ ಅದರ ಸ್ವರೂಪ ಕಳೆದುಕೊಳ್ಳುತ್ತದೆ ಅಂತ ಕೇಳಿದ್ದೇನೆ, ಇಂದಿನ ಯುವ ಜನಾಂಗ ಪ್ರೀತಿ ಎಂಬ ಹಾಯ್ ದೋಣಿಯಲ್ಲಿ ತೇಲಿ, ಟಿ.ವಿ. ಮಾದ್ಯಮಕ್ಕೆ ಒಳಗಾಗಿ ಅದರಲ್ಲಿ ಬರುವ ಪ್ರೇಮಿಗಳಂತೆ ತಾವು ಆಗಲು ಹೋಗಿ ಸುಂದರ ಬದುಕಿಗೆ ಅಂತ್ಯವಾಡುತಿರುವುದು ವಿಷಾದನೀಯ. ಯಾವುದೇ ಕೆಲಸಕ್ಕೆ ನಿಷ್ಟೆ, ಭಕ್ತಿ ಅದಕೊಂದು ನಿರ್ದಿಷ್ಟ ಗುರಿ ಇರಬೇಕು. ಅದರಂತೆ ಹಿರಿಯರ ಶ್ರಮದಲ್ಲಿ ನಾವು ಮಾಡುವ ಕರ್ತವ್ಯ ಒಂದು ನಿರ್ದಿಷ್ಟ ಗುರಿ ಸೇರಿದ ಬಳಿಕ ದುಶ್ಯಂತನಿಗೆ ಉಂಗುರದಲ್ಲಿ ಕಂಡ ಸಿದ್ದಿಯಂತೆ, ಹಾದಿ ಹೋಕನಿಗೆ ಡಂಗುರದಲ್ಲಿ ಸಿಕ್ಕ ಸುದ್ದಿಯಂತೆ ಭಕ್ತನಿಗೆ ಸತ್ಸಂಗದಲ್ಲಿ ಮೊಳೆತ ಬುದ್ದಿಯಂತೆ ನಿಮಗೂ ಒಬ್ಬ ಸಂಗಾತಿ ಸಿಗಲಿ. ಗೊತ್ತು ಗುರಿ ಇಲ್ಲದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿ ಜೀವನದಲ್ಲಿ ಸುನಾಮಿ ಸೃಷ್ಟಿಸಲು ಮುಂದಾಗುವ ಕಾಯಕ ಬೇಡ, ತಾಳ್ಮೆ ಮತ್ತು ಕರುಣೆಯಿಂದ ಕುಡಿದ ಪ್ರೀತಿಯತ್ತ ಬದುಕು ಮುನ್ನುಗ್ಗಬೇಕು ಆಗಲೇ ಸೃಷ್ಟಿಕರ್ತನು ಕನಿಸ್ಟ ಜೀವನದಲ್ಲಿ ಗರಿಸ್ಟ ಸವಿಯನ್ನು ಸವಿಯಲು ಸಾಧ್ಯ.. ನಾನು ಹೇಳುತ್ತೇನೆ Happy valentine.ಅಂತ.