Sunday, 12 February 2012

ಒಂದು ಗಂಡಿಗೊಂದು ಹೆಣ್ಣು ಹೇಗೋ ಸೇರಿ ಕೊಂಡಿಕೊಂಡು...!


ಧನಂಜಯ ಮಡಿಕೇರಿ.
ಶತಮಾನಗಳಿಂದ ಕೋಟ್ಯಾಂತರ  ತುಟಿಗಳು ಉಸುರಿದರು ಹಗುರವಾಗದ,ಕೋಟ್ಯಾಂತರ ಕಿವಿಗಳು ಕೇಳಿದರು ಬೇಜಾರಾಗದ ಕನ್ನಡದ ತ್ರಿಪದಿ ನಾನು ನಿನ್ನ ಪ್ರಿತಿಸುತೇನೆ ಇದಕೊಂದು ದಿನ ಬೇಕಾ? ಆದರೆ ಒಂದು ವರ್ಗದ ಜನರಿಗೆ ಬೇಕು. ದೈನಂದಿನ ಜಂಜಾಟದಲ್ಲಿ ಬೇಜಾರಾಗಿರುವವರಿಗೆ ಬೇಕೇ ಬೇಕು. ಪ್ರೀತಿ ( Love ) ಎಂಬ ಪದವನ್ನೂ ಎರಡು ರೀತಿಯಲ್ಲಿ ಅರ್ಥೈಸಬಹುದು ಮತ್ತು ಎರಡು ವರ್ಗದ ಜನರು ಇದರಲ್ಲಿ ಕಾಣಸಿಗುತ್ತಾರೆ.
ನೋಡಿ,ನಿರೀಕ್ಷಿಸಿ,ಪರೀಕ್ಷಿಸಿ ಚುನಾಯಿಸುವವರು(  Look,Observe,Verifine,Elect ) ಇದರಲ್ಲಿ ಸಮಾಜದ ಸುಮಾರು ಮುಕ್ಕಾಲು ಪಾಲು ಜನರು ಸಿಗುತ್ತಾರೆ ಈ ವರ್ಗದ ಜನರಲ್ಲಿ ಪ್ರೀತಿ ಭೋರ್ಗರೆವ ಜಲಪಾತವಾಗಿ ಪರಸ್ಪರ ಪ್ರಿತಿಯಿಂದ ಇರುವುದರೊಂದಿಗೆ ಇವರ ಪ್ರೀತಿ ನಿತ್ಯೋತ್ಸವ ಎಂದು ಹೇಳುವವರಿಗೆ ಫೆಬ್ರವರಿ ೧೪ ರಂತಹ ವ್ಯಾಲಂಟೈನ್ ಡೇ ಬೇಕಾಗಿಲ್ಲ.    ಮತ್ತು ಆಚರಿಸುವುದಾದರೆ ಮುಕ್ತವಾಗಿ ಸಂತೋಷದಿಂದ ಆಚರಿಸಲುಬಹುದು. ಏಕೆಂದರೆ ಇದು ಎಲ್ಲರಿಂದ ಒಪ್ಪಿಗೆ ಮತ್ತು ಅಪ್ಪಣೆ ಪಡೆದ ಪ್ರೀತಿ,  ಆದರೆ ಇವರು ಈ ದಿನವನ್ನೂ ಆಚರಿಸುವರೇ ಎಂಬುದು ಸಂಶಯಾಸ್ಪದ ಏಕೆಂದರೆನಿರಂತರ ಪ್ರೀತಿಗೆ ಒಂದು ನಿಗದಿತ ದಿವಸ ಬೇಡ . ಇನ್ನೊಂದು ವರ್ಗದ ಪ್ರೇಮಿಗಳು ಜೀವನವನ್ನೂ ನಷ್ಟದ ಹಾದಿಯಲ್ಲಿ ನಡೆಸುತ್ತಾ, ದಿನಾಲು ಕಣ್ಣೀರು ಹಾಕುತ್ತಾ ಹೆಚ್ಚು ದುಃಖಭಾರಿತರಾಗಿ ಕೊನೆಯಿಲ್ಲದ ನೋವಿನಲ್ಲಿ ಕೊರಗುವರು.( Loss of life,Occen of tears, Volume of sarrow,Endless Pain )
ಇವರಲ್ಲಿರುವ ಬರುವ ಪ್ರೇಮಿಗಳು ಹೆಚ್ಚಿನವರು ಸುನಾಮಿಗಳೇ ಸರಿ ಇದರಲ್ಲಿ ಯುವ ಸಮುದಾಯವೇ ಹೆಚ್ಚು, ಸುನಾಮಿ ಎನ್ನುವ ಪದ ಇವರಿಗೆ ಹೆಚ್ಚು ಸೂಕ್ತ ಏಕೆಂದರೆ ಬದುಕಿನ ಗೊತ್ತುಗುರಿ ಇಲ್ಲದ ಜನರು ಇಂತವರು ನಾನು ಏನು ಮಾಡಬೇಕು? ನನ್ನ ಗುರಿ ಏನು ? ನಾನು ಎಲ್ಲಿ ತಲುಪಬೇಕು ? ಎಂದು ಹುಟ್ಟಿ ೧೬ ವರ್ಷಕ್ಕೆ ಪ್ರೀತಿಸುವ ಹಕ್ಕು ಪಡೆದುಕೊಲ್ಲುವುದಿಲ್ಲಾ. ನಮ್ಮನ್ನು ಸಾಕಿ ಸಲುಹಿದ ತಂದೆ-ತಾಯಿ, ನಮ್ಮನ್ನು ಏತಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಾರೆ. ಅವರ ಮನದ ಇಂಗಿತವೇನು ? ನಾನು ಶಾಲೆಗಾಗಲಿ ಕಾಲೇಜಿಗಾಗಲಿ ಬರುವ ಉದ್ದೇಶವೇನು ? ನಾನು ಏನಾಗಬೇಕು ?  ಎಂದು ಯೋಚಿಸಿ ನಡೆದರೆ ಯಾರ ಬಾಳಲ್ಲೂ ಸುನಾಮಿ ಆಗುವುದಿಲ್ಲ ಇಂತ ಸುನಾಮಿಗೆ ಯಾವ ಕುಟುಂಬವು ಬೀಳುವುದಿಲ್ಲಾ. ಇಲ್ಲಿ ನಾನು ಯಾವುದೇ ಜಾತಿಯ ತಾರತಮ್ಯದ ಬಗ್ಗೆ ಹೇಳುತ್ತಿಲ್ಲ. ನನ್ನದು ಮನುಜ ಮತ ವಿಶ್ವ ಪಥ ನಾವು ಕೂಡ ಆ ಹಾದಿಯಲ್ಲಿ ಮುನ್ನುಗ್ಗ ಬೇಕು.
ಒಂದು ಗಂಡಿಗೊಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು ಕಾಣದಂಥ ಕನಸುಕಂಡು ಮಾತಿಗೊಲಿಯದಮೃತ ಉಂಡು ದುಃಖ ಹಗುರ ಎನುತಿರೆ ಪ್ರೇಮ ಎನಲು ಹಾಸ್ಯವೇ..? ಇದು ಕವಿ ಕೆ.ಎಸ್.ನ “ಮೈಸೂರು ಮಲ್ಲಿಗೆ” ಕವನ ಸಂಕಲನದಲ್ಲಿರುವ ಒಂದು ಕವಿತೆಯ ಸಾಲು. ಸುಮಾರು ೬ ದಶಕಗಳ ಹಿಂದಿನ ಗೀತೆ ಈಗಲೂ ಜನಪ್ರಿಯ, ಚಿರನೂತನ ಇ ಕವಿತೆಯಲ್ಲಿ ಶತ ಶತಮಾನಗಳ ಇತಿಹಾಸವಿರುವ ಅಥವಾ ಮಾನವನ ಇತಿಹಾಸದೊಂದಿಗೆ ತಳುಕು ಹಾಕಿಕೊಂಡಿರುವ ಗಂಡು-ಹೆಣ್ಣಿನ ನಡುವಿನ ಸೆಳೆತ, ಆಕರ್ಷಣೆ, ಪ್ರೀತಿ,ಪ್ರೇಮ,ಕಾಮ.. ಹೀಗೆ ಅನಂತ ರೂಪಾವಾದದ್ದು  ಈ ಪ್ರೇಮ. ಕವಿಗಳಿಗೆ ,ಕವಿತೆಗೆ, ಕಥೆಗಾರರಿಗೆ, ಕಥಾವಸ್ತುವಾಗಿ, ವಿಶ್ಲೇಷಕರಿಗೆ ವಿಶ್ಲೇಷಣೆಯ ವಸ್ತುವಾಗಿ ಅವರವರ ಭಾವಕ್ಕೆ ತಕ್ಕಂತೆ ಆಯಾ ವ್ಯಾಪ್ತಿಗೆ ಒಳಪಡುವ ಪ್ರೇಮ ಸರೋವರ, ಪ್ರೇಮ ಸಾಮ್ರಾಜ್ಯಕ್ಕೆ ಗಡಿಯಿಲ್ಲ, ಎಲ್ಲೆಗಳಿಲ್ಲ, ಅದು ಸೀಮಾತೀತ, ಜಾತ್ಯಾತೀತ ಈ ವಿಷಯದಲ್ಲಿ ಮಾತ್ರ ಸಮಾಜ ವಿಶ್ವ ಮಾನವತೆಯನ್ನು ಹೊಂದಿದೆ.  !
ವಿದ್ಯೆ ಪಡೆದು ಬದುಕಿನಲ್ಲಿ ನಿಗದಿತ ಅಡಿಪಾಯ ಹಾಕಿಕೊಂಡ ಮೇಲೆ  ನಿಮಗಿಸ್ಟ ಬಂದವರನ್ನು ಪ್ರೀತಿಸಿ ಆದರೆ ಈ ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ, ಮತ, ಪಂಥ, ಸೇರಿದಂತೆ   ಎಲ್ಲವನ್ನೂ ದಾಟಿ ನಿಂತ ದೊಡ್ಡ ಮನಸಿನ ವ್ಯಕ್ತಿ ಎಂದು ತಿಳಿದರೆ ಮಾತ್ರ ಆ ಸ್ಥಾನಕ್ಕೆ ಅವನಾಗಲಿ ಅವಳಾಗಲೀ ಯೋಗ್ಯ. ನಮ್ಮಲ್ಲಿ  ಇಂತಹ ಪ್ರೇಮಕ್ಕೆ ಸಾಕಸ್ಟು ಹೆಸರುಗಳು ಸಿಗುತ್ತವೆ ಪ್ರೊ. ಬರಗೂರು ರಾಮಚಂದ್ರಪ್ಪ-ರಾಜಲಕ್ಷ್ಮಿ, ಡಾ. ಕಮಲಾ-ಹಂಪನಾ, ಡಾ. ಸಿದ್ದಲಿಂಗಯ್ಯ-ರಮಾಕುಮಾರಿ, ಕಲಾವಿದರ ಪೈಕಿ ಗಿರೀಶ್-ವೈಶಾಲಿ ಕಾಸರವಳ್ಳಿ, ನಾಗಭರಣ ದಂಪತಿಗಳು ಈಗೆ ಸಾಕಷ್ಟು ಹೆಸರು ಸಿಗಿತ್ತವೆ. ದೊಡ್ಡ ಮನುಸ್ಯರು ಹೇಳುವಂತೆ “ ನೀನು ನನ್ನ ಪ್ರೀತಿಸಿದರಸ್ಟೇ ಸಾಲದು ನಾನು ಪ್ರಿತಿಸುತೇನೆಂದು “ ಬಾಯಿ ಬಿಟ್ಟು ಹೇಳಬೇಕು ಅಲ್ಲಿಗೆ ಆ ಪ್ರೀತಿಗೆ ಪ್ರಿತಿಸುವಿಕೆಗೆ ಅರ್ಥ ಮತ್ತು ದಿಕ್ಕು.
ಕ್ರಿ.ಶ. ೩ ನೇ ಶತಮಾನದಲ್ಲಿ ರೋಮ್ ಸಾಮ್ರಾಜ್ಯದಲ್ಲಿ ಸಂತ ವ್ಯಾಲೆಂಟೇನ್ ನೆಲೆಸಿದ್ದನು. ಇದೆ ಕಾಲದಲ್ಲಿ ಆ ಸಾಮ್ರಾಜ್ಯದ ಚಕ್ರವರ್ತಿ ಕ್ಲಾಡಿಯಸ್ ನಿರಂತರ ನಡೆಯುವ ಸಮರಕ್ಕಾಗಿ ತನ್ನ ಸಾಮ್ರಾಜ್ಯ ಮತ್ತು ಅಧಿಕಾರದ ಉಳಿವಿಗಾಗಿ  ಒಂದು ವಿಶೇಷ ಪಡೆಯನ್ನು ನಿರ್ಮಿಸಲು ಯೋಚಿಸಿದನು ಇದಕ್ಕಾಗಿ ತರುಣರನ್ನು ಆಯ್ಕೆ ಮಾಡಬೇಕೆಂದು ನಿರ್ಧಾರ ಮಾಡಿದನು ಅದರಂತೆ ಯುದ್ದ ಮುಗಿಯುವವರೆಗೂ ಯಾವ ತರುಣರು ತಮ್ಮ ಪ್ರೇಯಸಿಯನ್ನು ಭೇಟಿಯಾಗುವುದಾಗಲಿ, ನಿಶ್ಚಿತಾರ್ಥ,ಮದುವೆ, ಎಲ್ಲದಕ್ಕೂ ನಿರ್ಭಂದ ಹೇರಿದನು ಆದರೆ ಅಲ್ಲಿದ್ದ ಸಂತ ವ್ಯಾಲೆಂಟೇನ್ ಬಳಿ ಈ ಯುವಕರು ತಮ್ಮ ನೋವನ್ನು ತೋಡಿಕೊಂಡ ಮೇರೆಗೆ ಅನೇಕ ಯುವ ಪ್ರೇಮಿಗಳು ಕದ್ದು ಮುಚ್ಚಿ ಈತನ ಬಳಿ ಹೋಗಿ  ಶಾಸ್ತ್ರೋಕ್ತವಾಗಿ ವಿವಾಹವಾಗುತಿದ್ದರು ಅದು ಹೇಗೋ ಮಹರಾಜನ ಕಿವಿ ತಲುಪಿತು ಆತ ಸಂತನನ್ನು ಬಂಧಿಸಿ ಜೈಲಿನಲ್ಲಿಟ್ಟನು ಜೈಲು ಅಧಿಕಾರಿಯ ಮಗಳು ಈತನ ಕೆಲಸವನ್ನು ಶ್ಲಾಗಿಸುತ್ತಾಳೆ ಕೊನೆಗೆ ಸಂತನಿಗೆ ಫೆಬ್ರವರಿ ೧೪ ರಂದು ಮರಣದಂಡನೆ ವಿಧಿಸಲಾಯಿತು. ಮರಣಕ್ಕೂ ಮೊದಲು ಜೈಲ್ ಅಧಿಕಾರಿ ಮಗಳಿಗೆ ( Love from your Valentine ) ಎಂಬ ವಾಕ್ಯವನ್ನು ಬರೆದಿದ್ದ ಸಂದೇಶ ತಲುಪಿಸುವಂತೆ ವ್ಯಾಲೆಂಟೇನ್ ಹೇಳಿದರಂತೆ ನಂಬಿಕೆ ಕೂಡ ಇದೆ ಈ ವಾಕ್ಯವನ್ನು ಎಲ್ಲಾ ಉಡುಗೊರೆ ಮೇಲೆ ಆ ದಿನ ಕಾಣಬಹುದು.
       ಆದರೆ ಇತಿಹಾಸ ದಿನ ಕಳೆದಂತೆ ಅದರ ಸ್ವರೂಪ ಕಳೆದುಕೊಳ್ಳುತ್ತದೆ ಅಂತ ಕೇಳಿದ್ದೇನೆ, ಇಂದಿನ ಯುವ ಜನಾಂಗ ಪ್ರೀತಿ ಎಂಬ ಹಾಯ್ ದೋಣಿಯಲ್ಲಿ ತೇಲಿ, ಟಿ.ವಿ. ಮಾದ್ಯಮಕ್ಕೆ ಒಳಗಾಗಿ ಅದರಲ್ಲಿ ಬರುವ ಪ್ರೇಮಿಗಳಂತೆ ತಾವು ಆಗಲು ಹೋಗಿ ಸುಂದರ ಬದುಕಿಗೆ ಅಂತ್ಯವಾಡುತಿರುವುದು ವಿಷಾದನೀಯ. ಯಾವುದೇ ಕೆಲಸಕ್ಕೆ ನಿಷ್ಟೆ, ಭಕ್ತಿ ಅದಕೊಂದು ನಿರ್ದಿಷ್ಟ ಗುರಿ ಇರಬೇಕು. ಅದರಂತೆ ಹಿರಿಯರ ಶ್ರಮದಲ್ಲಿ ನಾವು ಮಾಡುವ ಕರ್ತವ್ಯ ಒಂದು ನಿರ್ದಿಷ್ಟ ಗುರಿ ಸೇರಿದ ಬಳಿಕ ದುಶ್ಯಂತನಿಗೆ ಉಂಗುರದಲ್ಲಿ ಕಂಡ ಸಿದ್ದಿಯಂತೆ, ಹಾದಿ ಹೋಕನಿಗೆ ಡಂಗುರದಲ್ಲಿ ಸಿಕ್ಕ ಸುದ್ದಿಯಂತೆ ಭಕ್ತನಿಗೆ ಸತ್ಸಂಗದಲ್ಲಿ ಮೊಳೆತ ಬುದ್ದಿಯಂತೆ ನಿಮಗೂ ಒಬ್ಬ ಸಂಗಾತಿ ಸಿಗಲಿ. ಗೊತ್ತು ಗುರಿ ಇಲ್ಲದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿ ಜೀವನದಲ್ಲಿ ಸುನಾಮಿ ಸೃಷ್ಟಿಸಲು ಮುಂದಾಗುವ ಕಾಯಕ ಬೇಡ, ತಾಳ್ಮೆ ಮತ್ತು ಕರುಣೆಯಿಂದ ಕುಡಿದ ಪ್ರೀತಿಯತ್ತ ಬದುಕು ಮುನ್ನುಗ್ಗಬೇಕು ಆಗಲೇ ಸೃಷ್ಟಿಕರ್ತನು ಕನಿಸ್ಟ ಜೀವನದಲ್ಲಿ ಗರಿಸ್ಟ ಸವಿಯನ್ನು ಸವಿಯಲು ಸಾಧ್ಯ.. ನಾನು ಹೇಳುತ್ತೇನೆ Happy valentine.ಅಂತ.

13 comments:

  1. Sujatha Lokesh
    ಚೆನ್ನಾಗಿದೆ ಬರಹ . ಹಿಡಿಸಿತು

    ReplyDelete
  2. ಚೆನ್ನಾಗಿದೆ ಬರಹ :)

    ReplyDelete
  3. Jeevan Shetty
    ಚೆನ್ನಾಗಿದೆ....ಹೃದಯದ ಹಾಡು ಪಾಡು

    ReplyDelete
  4. Usha Kattemane
    ನಿಮ್ಮ ಪ್ರೀತಿಯ ಅನುಭವವನ್ನು ಹಂಚಿಕೊಂಡಿದ್ದರೆ ಒಳ್ಳೆಯದಿತ್ತು. ಯಾಕೆಂದರೆ ಪ್ರತಿ ಗಂಡು ಹೆಣ್ಣಿನ ನಡುವಿನ ಪ್ರೇಮವೂ ವಿಶಿಷ್ಟ ಮತ್ತು ವಿಭಿನ್ನ....

    ReplyDelete