Thursday, 30 March 2017

ಘಟ್ಟದಿಂದ ಬೆಟ್ಟದ ಕೆಳಗೆ ನೋಡಿದ ಕಾರ್ತಿಕ್ ................

ಧನಂಜಯ ಮಡಿಕೇರಿ

          ಹಸ್ತಕ್ಕೆ ಬರಿ ನಕ್ಕೆ ಓದುತ್ತಾ  ಓದುತ್ತಾ ಮಸ್ತಕಕ್ಕಿಟ್ಟು ಗಂಭೀರವಾದೆ, ವಿಸ್ತರದ ದರ್ಶನಕ್ಕೆ ತುತ್ತ ತುದಿಯಲ್ಲಿ ನಿನ್ನ ಪುಸ್ತಕಕ್ಕೆ ಕೈ ಮುಗಿದೆ. ಇದು ಕವಿ ಕುವೆಂಪು ಕಗ್ಗ ಓದಿದ ನಂತರ ಊದಿದ  ಕಹಳೆ " ಕಾಡು ಹಾದಿಯ ಜಾಡು ಹತ್ತಿ " ಕಾರ್ತಿಕ್ ಮಾಡಿದ ಪ್ರಯಾಣ ಓದುಗನಿಗೆ ಎಲ್ಲೂ  ಪ್ರಯಾಸವಾಗುವುದಿಲ್ಲ. ತಮ್ಮ ಮೊದಲ ಪ್ರಯತ್ನದಲ್ಲಿ ಮಲೆನಾಡು ಅದರ ಸೌಂದರ್ಯ ಮತ್ತು ಅನಿವಾರ್ಯತೆ , ದಿನ ನಿತ್ಯದ ಬದುಕಿನಲ್ಲಿ ಸಾಮನ್ಯ ಬದುಕಿನ  ದರ್ಶನ , ಅದನ್ನು ಸಾಹಿತ್ಯಕ್ಕೆ ಇಳಿಸಿದ ರೀತಿ ಸುಂದರವಾಗಿದೆ . ಪಶ್ಚಿಮ ಘಟ್ಟದ ತಪ್ಪಲಿನ ಮಂದಿಗೆ ತುಳು , ಬ್ಯಾರಿ , ಮಲಯಾಳಂ ಹವ್ಯಕ ಕನ್ನಡ ಸಮಸ್ಯೆಯೆಂದು ನನಗನಿಸುವುದಿಲ್ಲ. ಹಾಗಾಗಿ ಕೃತಿಯಲ್ಲಿ ಭಾಷೆ ಕಷ್ಟವಾಗದೆ ಇಷವಾಗಿ ಓದಿಸಿ ಕೊಂಡು ಹೋಗುತ್ತದೆ.
        “ಅವಳೊಂದು ಪುಟ್ಟ ಕೊಳ ನನ್ನ ಬಾಳಿನ ಜೀವ ಜಲ”  ಎನ್ನುವ ಹಾಗೆ ಮಲೆನಾಡು, ಸಹ್ಯಾದ್ರಿ, ಪಶ್ಚಿಮ ಘಟ್ಟ ಯಾವುದೇ ಹೆಸರಿನಿಂದ ಕರೆಯಿರಿ  ಜೀವ ಸಂಕುಲಕ್ಕೆ ಅದರ ಅನಿವಾರ್ಯತೆ ಏನು? ಆ ಪ್ರಕೃತಿ ಬದುಕಿನಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎನ್ನುವುದನ್ನು ದಂಗೆಯ ದಿನಗಳು ನೆನಪಿಸಿದರೆ. ಬನದ ಹರಕೆಯೊಂದಿಗೆ ಆನೆಯ ಆಗಮನವಾಗುತ್ತೆ, ಅದರೊಂದಿಗೆ ಆನೆಗೆ ನಾವು ಅರಣ್ಯದ ಮಧ್ಯೆ ಅಷ್ಟು ಕೆರೆ ತೆಗೆಸಿದ್ದೇವೆ, ಅದಕ್ಕೆ ಆಹಾರಕ್ಕೆ ಬೇಕಾಗಿರುವ ಮರಗಳನ್ನು ಬೆಳೆಸಿದ್ದೇವೆ, ಎನ್ನುವ ಶಾಸಕನೊಬ್ಬ ಏಕ ಕಾಲದಲ್ಲಿ ಆನೆ ಮತ್ತು ಪ್ರಜೆಗೆ ಮೋಸಮಾಡುತ್ತಾನೆ  ಕೃತಿಕಾರ ಆತನನ್ನು ಬೆತ್ತಲಾಗಿಸಿದ್ದಾರೆ. ಮಧ್ಯದಲ್ಲಿ ಚಿಕಿತ್ಸೆಗೆ ಇಟ್ಟಿದ್ದ ಹಣ ಕಳೆದು ಹೋಗುತ್ತೆ ಅಂತಹ ಸಂಧರ್ಭದಲ್ಲಿ ಧರ್ಮ ಮತ್ತು ಜಾತಿಗಿಂತ ಹೆಚ್ಚಾಗಿ ಮಾನವೀಯತೆ ರಾರಾಜಿಸುತ್ತದೆ, ಎಲ್ಲೋ ಒಂದು ಕಡೆ ಕೃತಿಯ ಜಾಡು ಹಿಡಿದು ಹೊರಟಾಗ ಕೃತಿಕಾರ ಹೇಳಿದಂತೆ ಮಹಾಗುರು ತೇಜಸ್ವಿಗೆ ಸಿಕ್ಕ ಮರ-ಗಿಡ, ಹಳ್ಳಿಯ ಭಾಷೆ-ಬೈಗುಳ ಸಾಹಿತ್ಯದ  ಎಲ್ಲವೂ ಮಹಾಗುರುವನ್ನು ನೆನೆಪಿಸಿವಂತೆ ಮಾತನಾಡುತ್ತೆ. ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಬಣ್ಣ ಬಣ್ಣದ ಮುಖವಾಡದ ಬೆಂಗಳೂರು  ಈ ಮೊದಲೆ ನಮ್ಮ ಮನಸಿನಲ್ಲಿ ಮೂಡಿದ ಚಿತ್ರ ಸ್ಪಷ್ಟವಾಗುವಂತೆ ಮಾಡುತ್ತೆ.

     ಕೆಲವೊಂದು ಹೊಡೆತಗಳು ನಮ್ಮ ಬಡತನಕ್ಕೆ ಸ್ವಾಭಿಮಾನಕ್ಕೆ ಮತ್ತು ಅಸಾಯಕತೆಗೆ ಬಿದ್ದ ಏಟುಗಳು ಎಂದು ಕೃತಿಕಾರರೇ ಹೇಳಿರುವ ಹಾಗೆ ಅದು ಹಾಗೆ ಆಗಿದ್ದರೆ ಮಾತ್ರ ನಮ್ಮ ಕಾರ್ಯವಾಗಲಿ ಕವನ ಕಾವ್ಯವಾಗಲಿ ಗಟ್ಟಿತನ ಪಡೆದುಕೊಳ್ಳುವುದಕ್ಕೆ ಸಾಧ್ಯ.. ನೀರಿನ ಮಹತ್ವದಿಂದ ಮೊದಲುಗೊಂಡು ನೀರೆಯ ನೋವಿನೊಂದಿಗೆ ಅಂತ್ಯವಾಗುವ ಕೃತಿ ತನ್ನ ಬಾಲ್ಯದೊಂದಿಗೆ ನಲಿಯುತ್ತಾ-ಕಲಿಯುತ್ತಾ ಒಂದು ಪ್ರೀತಿಯ  ಕಥೆಗೆ ಬಂದು ನಿಂತಿರುವುದು ಅಭಿನಂದನಾರ್ಹ. ಮುಂದಿನ ದಿನಗಳಲ್ಲಿ ಕೃತಿಕಾರನ ಲೇಖನಿಯಿಂದ ಮತ್ತಷ್ಟು ಬರಹ ಮೂಡಬಹುದು ಎಂದು ನಿರೀಕ್ಷೆ ನನ್ನದು. 

Friday, 27 November 2015

ಗಾಯದ ಹೂವುಗಳು ಮತ್ತು ನಲ್ಮೆಯ ಸತೀಶ್......

ಧನಂಜಯ ಮಡಿಕೇರಿ.

ಕಾಜೂರು ಶಾಲೆ ಹತ್ತಿರ ಇರುವ ಪಶುವೈದ್ಯ ಶಾಲೆ ಬಳಿ ಆಲದ ಮರವಿದೆ ಅದರ ಬೇರುಗಳನ್ನು ಹಿಡಿದು ಉಯ್ಯಾಲೆ ಆಡಿದ ನೆನಪು ಮಾತ್ರ ನನಗೆ ಇರುವುದು. ಆದರೆ ನೀವು ಮರವನ್ನೇರಿ ಅದರ ಶೃಂಗದಲ್ಲಿ ನಿಂತು ಹೊರ ಜಗತ್ತನ್ನು ನೋಡಿದ ರೀತಿ ಮಾತ್ರ ಅದ್ಭುತ. ಹಾಗಂತ ನಿಮ್ಮ ಗಾಯದ ಹೂವುಗಳು ನನ್ನಲ್ಲಿ ಪಿಸುಗುಟ್ಟಿದವು. ಗಾಯದ ಹೂವುಗಳು ಕವನ ಸಂಕಲನ ನಿಮ್ಮ ದೈನಂದಿನ ಗೆಳೆಯರು ಯಾರು ? ನಿಮ್ಮ ಆದ್ಯತೆ ಏನು  ಎನ್ನುವುದನ್ನು ನನಗೆ ಅರ್ಥೈಸಿದೆ.
        ಇರುವೆಯ ಮೂಲಕ ಪ್ರಾರಂಭವಾಗುವ ನಿಮ್ಮ ಕವಿತೆ ಎಲ್ಲಾ ಕಡೆ ಇರುವೆ ಎನ್ನುವ ಸಂದೇಶದೊಂದಿಗೆ ಅದು ಊದುಗೋಳವೆ, ಖಾಲಿ ಡಬ್ಬ, ಚಪ್ಪಲಿಗಳು ಏನೇ ಆಗಿರಲಿ ಅದನ್ನು ನಿಮ್ಮ ಬರವಣಿಗೆ ಮೂಲಕ ಸ್ಪರ್ಶಿಸಿದ ರೀತಿ ಅದ್ಭುತವಾಗಿದೆ. ಕವಿತೆಗಳು ಅಸ್ವಸ್ಥವಾಗಿದೆ ವೈದ್ಯನಿಗೆ ಕೊಡಲು ಕಾಸಿಲ್ಲದೆ ಹಾಸಿಗೆಯ ಮೇಲೆ ನರಳುತ್ತಲೇ ಇವೆ ಎನ್ನುವುದು ನಿಮ್ಮ ಹೃದಯ ವಿಶಾಲತೆ ಅಲ್ಲದೆ ಬೇರೇನು ? ಇರಬಹುದು ನಿನ್ನೆ ಹುಟ್ಟಿದನ್ನು ಬೀದಿಯಲ್ಲಿ ಮೊನ್ನೆ ಹುಟ್ಟಿದನ್ನು ಚರಂಡಿಯಲ್ಲಿ ಎಸೆದಿರಬಹುದು. ಅದಕ್ಕೂ ಹಿಂದಿನದನ್ನು ಪೆನ್ನು ಇಂಕುಗಳೊಂದಿಗೆ  ಬೆಂಕಿ ಹಚ್ಚಿ ಸುಟ್ಟಿರಬಹುದು ಅದು ಅತಿಯಾಗಿ ಗಾಯಗೊಂಡವೇ ? ಎನ್ನುವುದು ನನ್ನ ಸಾತ್ವಿಕ ಪ್ರಶ್ನೆ. ಹಾಗಾದರೆ  ಗಡಿನಾಡ ಸಂಚಾರಿ, ಶಕ್ತಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಉದಯವಾಣಿ, ಅವಧಿ, ಪಂಜು ಮುಂತಾದ ಕಡೆ ನುಸುಳಿದವು ಗಾಯದ ಹೂವುಗಳು ಅಲ್ಲವೇ.? ಹೌದು, ಅವೆಲ್ಲವೂ ಗಾಯದ ಹೂವುಗಳೇ ಅದನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಿರಿ ಮುಲಾಮು ಹಚ್ಚುವವರು ಹಚ್ಚಲಿ ? ಕೆರೆದು ಗಾಯ ಮಾಡುವವರು  ಮಾಡಲಿ  ತಪ್ಪೇನು.?
 ನಿಮ್ಮ ಕಾವ್ಯ ಕೃಷಿಯಲ್ಲಿ ನನಗೆ ಕಂಡಿದ್ದು ಸೂಕ್ಷ್ಮತೆ, ಬದುಕಿನ ಪದರುಗಳನ್ನು ನೀವು ಪ್ರವೇಶಿಸಿದ ರೀತಿ, ಅದರ ಒಳಹೊಕ್ಕು ನೋಡಿದ ರೀತಿ ಮತ್ತು ಅನಾವರಣಗೊಳಿಸಿದ ಶೈಲಿ, ಅನುಭವ, ಕೋಮಲತೆ, ತೀಕ್ಷಣತೆ ಮತ್ತು ಕಾವ್ಯ ಕೃಷಿಯಲ್ಲಿ ನಿಮಗಿರುವ ಪ್ರಭುದ್ದತೆ ಭಕ್ತಿ ಎಲ್ಲವನ್ನು ನಾನು ಕಂಡೆ.
        ಸಾಹಿತ್ಯ ಲೋಕದ ಜನಪ್ರಿಯ ಕವಿಗಳ ಸಾಲಿಗೆ ಸೇರುವ ಎಲ್ಲಾ ರೀತಿಯ ಅರ್ಹತೆ  ಮತ್ತು ಸಾಮರ್ಥ್ಯ ಗಾಯದ ಹೂವುಗಳಿಗೆ ಇದೆ. ಆ ಮೂಲಕ ಕವಿಯಾದ ನಿಮಗೂ ಇದೆ ಎಂದು ಸಾಕ್ಷಿಕರಿಸಿದ್ದಿರಿ. ಗಾಯದ ಹೂವುಗಳ ಬುಟ್ಟಿಯಲ್ಲಿ ಭಾಷೆ, ಮಣ್ಣಿನ ಸತ್ವ, ಪ್ರಕೃತಿಯ ವೈಭವ, ಹಕ್ಕಿಗಳ ಚಿಲಿಪಿಲಿ, ಪ್ರತಿಭಟನೆ, ಆಧುನಿಕ ಬದುಕು, ಅದರೊಳಗಿನ ಜಟಿಲತೆ, ಕುಟಿಲತೆ ಎಲ್ಲವೂ ಅನಾವರಣಗೊಳಿಸುವ ನಿಮ್ಮ ಶ್ರಮ ಇಷ್ಟವಾಯಿತು. ಪ್ರಕೃತಿ ಮತ್ತು ಮನುಷ್ಯನ ನಡುವೆ ನಿಂತು ಜಗತ್ತನ್ನು ನೋಡಿದ ದೃಷ್ಟಿಕೋನ ನನಗೆ ಒಟ್ಟಾರೆ ನಿಮ್ಮ ಕವನ ಸಂಕಲನ ಓದಿಕೊಂಡು ಹೋದಾಗ  ಇಷ್ಟವಾಗಿದ್ದು. ಕವಿತೆಯನ್ನು ಕ್ಲೀಷ್ಟತೆಯ ಗೂಡಾಗಿಸದೆ ಇಷ್ಟವಾಗಿ ಓದಿಕೊಂಡು ಹೋಗುವಂತೆ ಮಾಡಿದ ನಿಮ್ಮ ಶ್ರಮ ಸಾರ್ಥಕವಾಗಿದೆ . ನಿಮ್ಮ ಲೇಖನಿಯಿಂದ ಹೆಚ್ಹು ಹೆಚ್ಚು ಕವಿತೆಗಳು ಮೂಡಲಿ ಬದುಕು ಸುಂದರವಾಗಿರಲಿ.

Wednesday, 24 July 2013

ಬಿಗ್ ಬಾಸ್ ಮತ್ತು ಧೋನಿ ಮಧ್ಯೆ ನಗಣ್ಯವಾದ ಸೈನಿಕ ?

ಧನಂಜಯ ಮಡಿಕೇರಿ

ಸೈನ್ಯ ,ಚಾಂಪಿಯನ್ ಟ್ರೋಫಿ ಮತ್ತು ಬಿಗ್ ಬಾಸ್ ಈ ಮೂವರಲ್ಲಿ ಯಾರು ಹಿತವರು ಎಂಬ ಪ್ರಶ್ನೆ ಉದ್ಭವವಾದರೆ ನಿಮ್ಮ ಉತ್ತರ ಏನು? ಆದರೆ ನನ್ನ ಉತ್ತರ ಮಾತ್ರ ಸೈನ್ಯ. ಇತ್ತೀಚಿಗೆ ಮುಗಿದ ಚಾಂಪಿಯನ್ ಟ್ರೋಫಿ ಕ್ರಿಕೇಟ್, ಇತ್ತೀಚಿಗೆ ಮುಗಿದ ಈ ಟಿ.ವಿ ಕನ್ನಡ ವಾಹಿನಿಯ ಬಿಗ್ ಬಾಸ್ ಇವು ಮೂರು ವಿಷಯಗಳನ್ನು ಗಮನಿಸಿದಾಗ ನನಗೊಂದು ಪ್ರಶ್ನೆ ಉದ್ಭವವಾಯಿತು ಅದನ್ನು ನಿಮ್ಮ ಮುಂದೆ ಇಟ್ಟು ಬಿಡುವ ಎನ್ನುವ ಕಸರತ್ತು ಈ ಲೇಖನ.

    ನಮ್ಮ ಈ ಟಿ.ವಿ ಕನ್ನಡ ವಾಹಿನಿಯಲ್ಲಿ  ಮೂಡಿ ಬಂದ ಬಿಗ್ ಬಾಸ್ ಕಾರ್ಯಕ್ರಮ ಕನ್ನಡದ ಪ್ರಥಮ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆ ಈ ವಾಹಿನಿಗೆ ಇದ್ದರೂ, ಸಮಾಜಕ್ಕೆ ಈ ಕಾರ್ಯಕ್ರಮದ  ಮೂಲಕ ಸಂದೇಶ ಇಲ್ಲದೇ ಹೋದರು ಈ ಕಾರ್ಯಕ್ರಮದ ಮೂಲಕ ಅದರ ಟಿ.ಆರ್.ಪಿ ( ಟೆಲಿವಿಷನ್ ರೇಟಿಂಗ್ ಪಾಯಿಂಟ್) ಜಾಸ್ತಿಯಾಗಿದ್ದು ಮಾತ್ರ ಸುಳ್ಳಲ್ಲ. ಕೆಲವು ದೃಶ್ಯಗಳನ್ನು ನಾನು ಕೂಡ ವೀಕ್ಷಣೆ ಮಾಡಿದ್ದೇನೆ ನನ್ನಂತೆ ಹಲವರು ವೀಕ್ಷಿಸಿ ಇದೆಂತಾ ಕಾರ್ಯಕ್ರಮ ಎನ್ನುತ್ತಾ ಸಂಪೂರ್ಣ ಅಧ್ಯಾಯ ಮುಗಿಯುವವರೆಗೆ ನೋಡಿದವರು ಅದೇಷ್ಟೋ ಮಂದಿ ನಮ್ಮ  ಮಧ್ಯೆ ಇದ್ದಾರೆ. ಒಟ್ಟಿನಲ್ಲಿ ಸಮಾಜಕ್ಕೆ ಸಂದೇಶವಿಲ್ಲದೆ ಮುಕ್ತಾಯಗೊಂಡ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಎನ್ನುವುದು ಮಾತ್ರ ಸುಳ್ಳಲ್ಲ.
ಇನ್ನು ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್ ಟ್ರೋಫಿ ಕ್ರಿಕೇಟ್, ಭಾರತದ ಮಟ್ಟಿಗೆ ಕ್ರಿಕೇಟ್ ಒಂದು ಜನಪ್ರಿಯ ಕ್ರೀಡೆ  ಏನೋ  ಸರಿ, ಅದಕ್ಕಿರುವ  ಜನ ಬೆಂಬಲ  ಬೇಡವೆಂದರೂ ನಮ್ಮ  ದೇಶದಲ್ಲಿ  ಅದಕ್ಕಾಗಿ ತುಡಿಯುವ ಮಿಡಿಯುವ ಸಾಕಷ್ಟು ಮಸಸ್ಸುಗಳು ನಮ್ಮ ಮಧ್ಯೆ ಇವೇ. ಅದು ಪರೋಕ್ಷವಾಗಿ ಆ ಕ್ರೀಡೆಗೆ ಇರುವ ಜನಪ್ರಿಯತೆಯು  ಹೌದು. ಒಂದು ಕಾಲದಲ್ಲಿ ಜಂಟಲ್ ಮ್ಯಾನ್ ಗೇಮ್ ಎಂಬ ಹೆಗ್ಗಳಿಕೆ ಇದ್ದ ಕ್ರಿಕೇಟ್ ಕ್ರಮೇಣವಾಗಿ ಆ ಪಟ್ಟವನ್ನು ಕಳೆದುಕೊಂಡರು, ಅದರ ಜನಪ್ರಿಯತೆ ಮಾತ್ರ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿರುವುದು ಕೂಡ ಅಷ್ಟೇ ಸತ್ಯ. ಕೆಲವರಿಗೆ ಕ್ರಿಕೇಟ್ ಜೂಜು, ಮನೋರಂಜನೆ ಮತ್ತೆ ಕೆಲವರಿಗೆ ಅದೊಂದು ಸೋಮಾರಿಗಳನ್ನು ಸೃಷ್ಟಿಸುವ ಕ್ರೀಡೆ ಹಲವರಿಗೆ ಅದೊಂದು ಧರ್ಮ. ಒಟ್ಟಿನಲ್ಲಿ ಅವರವರ ಭಾವಕ್ಕೆ ಭಕುತಿಗೆ. ಇತ್ತೀಚೆಗೆ ಮುಕ್ತಾಯವಾದ ಚಾಂಪಿಯನ್ ಟ್ರೋಫಿ  ಕ್ರಿಕೇಟ್ ಮ್ಯಾಚ್ ಫಿಕ್ಸಿಂಗ್ ಮತ್ತು ಹಗರಣಗಳಿಂದ ಕುಸಿದ ಭಾರತೀಯ ಕ್ರಿಕೇಟ್ ಗೆ  ಚೇತರಿಕೆ ನೀಡುವುದರೊಂದಿಗೆ ಮತ್ತಷ್ಟು ಅದರ ಮಾರುಕಟ್ಟೆಯನ್ನು ಹೆಚ್ಚಿಸಿಕೊಂಡಿದೆ ಎನ್ನಬೇಕು.
      ಇವೆರಡನ್ನೂ ಅವಲೋಕಿಸಿದರೆ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಮನರಂಜನೆಗೆ ಸೀಮಿತವಾಗಿ ಸಮಾಜಕ್ಕೆ ಯಾವುದೇ ಸಂದೇಶವಿಲ್ಲದ ಕಾರ್ಯಕ್ರಮವಾದರೆ, ಚಾಂಪಿಯನ್ ಟ್ರೋಫಿ ಕ್ರಿಕೇಟ್ ಕೇವಲ ಮನರಂಜನೆಗೆ ಸೀಮಿತವಾಯಿತು. ಆದರೆ ಉತ್ತರಖಂಡ ರಾಜ್ಯದಲ್ಲಿ ನಡೆದ ರಾಷ್ಟ್ರೀಯ ದುರಂತ ಒಂದಷ್ಟು ನೋವು, ದೇಶದ ಸೈನಿಕರು ಮತ್ತು ಅದರ ಕಾರ್ಯದ ಬಗ್ಗೆ ದೇಶದ ಎಲ್ಲಾ ಜನರ ಅಂತರಂಗದ ದೃಷ್ಟಿಯನ್ನು ತೆರೆಸಿದ್ದು ಸುಳ್ಳಲ್ಲ. ದೇಶದ ಸೈನ್ಯದ ಅಂಗವಾಗಿರುವ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್(ITBP) ತಂಡ ಮತ್ತು ಅದರ ಜವಾನರು ಜೀವದ ಹಂಗು ತೊರೆದು ನಮ್ಮ ಜನರ ಕೆಲಸ ಮಾಡಿದ್ದು ಇದೆಯಲ್ಲ ಅದು ಇಂದಿನ ಯುವ ಪೀಳಿಗೆಗೆ ನಮ್ಮ ದೇಶ ಎಂದರೆ ಏನು ? ಅಲ್ಲಿಯ ಜನರು ಯಾರು ನಮಗೆ ಏನು ಸಂಭಂದ ಮತ್ತು ನಾವು ಅವರಿಗಾಗಿ ಏಕೆ ಕೆಲಸ ಮಾಡಬೇಕು? ಎನ್ನುವುದನ್ನು ಮಾಡಿ ತೋರಿಸಿದರಲ್ಲ ಅದು ನಿಜವಾದ ಸಂದೇಶ. (ಅದನ್ನು ಎಷ್ಟು ಮಂದಿ ಇಷ್ಟ ಪಟ್ಟಿದಾರೋ ನೋಡಿದ್ದಾರೋ ಅದು ಬೇರೆ ವಿಷಯ) ಅದು ದೇಶದ ಸಾಕಷ್ಟು ಮಂದಿಯ ಅಂತರಂಗದ ದೃಷ್ಟಿ ತೆರೆಸಿರುವುದು ಸುಳ್ಳಲ್ಲ. ದೇಶದ ಸೈನ್ಯವೆಂದರೇನು ಅದರ ಕೆಲಸವೇನು ಅದರ ಬದ್ದತೆಗಳು ಏನು? ಎಂದು ಅದನ್ನು ದೇಶದ ಜನರಿಗೆ ಮೂಲೆ ಮೂಲೆ ತಲುಪಿಸಿದ ಕೀರ್ತಿ ಮಾತ್ರ ನಮ್ಮ ದೃಶ್ಯ ಮಾಧ್ಯಮಗಳದ್ದು ಮತ್ತು ಸಾಮಾಜಿಕ ತಾಣಗಳದ್ದು. ಇದನ್ನೆಲ್ಲ ಯೋಚಿಸಿದರೆ ನಾವು ಎಲ್ಲೋ ಒಂದು ಕಡೆ ಮಾತಿಗೆ ಸೀಮಿತವಾಗುತ್ತಿದ್ದೇವೆ. ನಮ್ಮ ನುಡಿ ನಡೆಯಷ್ಟು ತೂಕವಿಲ್ಲ, ಇದರ ಮಧ್ಯೆ ನಾವು ಗಮನಿಸ ಬೇಕಾದ ವಿಷಯವೆಂದರೆ ಚಾಂಪಿಯನ್ ಟ್ರೋಫಿ ಗೆದ್ದ ಪ್ರತಿಯೊಬ್ಬ ಆಟಗಾರನಿಗೆ ಒಂದು ಕೋಟಿ ಬಹುಮಾನ , ಸಮಾಜಕ್ಕೆ  ಯಾವುದೇ ಸಂದೇಶವಿಲ್ಲದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗೆದ್ದವರಿಗೆ ೫೦ ಲಕ್ಷ, ದೇಶಕ್ಕಾಗಿ ತನ್ನ ಸಂಸಾರ ಮಕ್ಕಳನ್ನು ತೊರೆದು ಅದೆಷ್ಟೋ ಕಿ.ಮೀ ದೂರದಲ್ಲಿ ಈ ದೇಶ ನನ್ನ ತಾಯಿ , ಇಲ್ಲಿಯ ಜನರು ನನ್ನ ಸಂಸಾರ ಎಂದು ದುಡಿಯುತ್ತಿರುವ ಸೈನಿಕ ತನ್ನ ಮಕ್ಕಳನ್ನು ಅನಾಥವಾಗಿಸಿ ಮಡದಿಯನ್ನು ವಿಧವೆಯಾಗಿಸಿ ದೇಶಕ್ಕಾಗಿ ದುಡಿಯುತ್ತಾ ಮಡಿದರೆ ಕೇವಲ ೨೦ ಲಕ್ಷ.! ದುರಂತವೆಂದರೆ ಇದಲ್ಲವೇ ? 
ನಾವು ಈ ದೇಶದಲ್ಲಿ ಒಂದು ನೂರಾ ಇಪ್ಪತ್ತೆರಡು ಕೋಟಿ ಜನರಿದ್ದೇವೆ ಏನು ಪ್ರಯೋಜನ.? ತಲಾ ಒಂದು ರುಪಾಯಿ ನೀಡಲು ನಮಗೆ ಯೋಗ್ಯತೆ ಇಲ್ಲವೇ.? ದೇಶದ ಸಾರ್ವಜನಿಕ ವ್ಯವಸ್ಥೆ, ಸೈನಿಕನ ಬಗ್ಗೆ ಗಂಟೆಗಟಲೆ ಮಾತನಾಡುವ ನಾವು ನಮಗಿರುವ ಬದ್ದತೆ ಇದೇನಾ ಎನ್ನುವುದು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಒಬ್ಬ ಸೈನಿಕನಾಗಲಿ ಅಥವಾ ಒಬ್ಬ ಸಾಮಾನ್ಯ ವ್ಯಕ್ತಿಯಾಗಲಿ ಯೋಚಿಸ ಬೇಕಾಗಿರುವುದು ನಾವು ಹುಟ್ಟಿದ್ದು ಇಲ್ಲಿ, ನನ್ನನ್ನು ಕಾಪಾಡಿದ್ದು ಈ ದೇಶದ ಸಾರ್ವಜನಿಕ ವ್ಯವಸ್ಥೆ, ನನ್ನನ್ನು ಬೆಳೆಸಿ ಕಾಪಾಡಿ ನನಗೆ ಸಮಾಜದಲ್ಲಿ ಒಂದು ಗೊತ್ತಾದ ಸ್ಥಾನ ನೀಡಿದ್ದು ಈ ದೇಶದ ಕಾನೂನು ಕಟ್ಟುಪಾಡು. ಇಂತಹ ಸನ್ನಿವೇಶದಲ್ಲಿ ನಮ್ಮ ದೇಶಕ್ಕೆ ಸೈನಿಕರು ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಾಗೇ ನಾವು ಮಾಡಿಕೊಂಡಿದ್ದೆವೆಯೇ? ಚಾಂಪಿಯನ್ ಟ್ರೋಫಿ ಪಂದ್ಯಕ್ಕೆ ರಕ್ಷಣೆ ಕೊಟ್ಟಿದ್ದು ಆ ದೇಶದ ರಕ್ಷಣಾ ಪಡೆ, ಬಿಗ್ ಬಾಸ್ ಕಾರ್ಯಕ್ರಮಕ್ಕೆ ರಕ್ಷಣೆ ಕೊಟ್ಟಿದ್ದು ಆ ರಾಜ್ಯದ ಭದ್ರತಾ ಪಡೆ ಇವೆಲ್ಲವನ್ನೂ ನಿರ್ಭಯ ಮತ್ತು ನಿರ್ಭೀತಿಯಿಂದ ಸದಾ ನೋಡುತ್ತಿರಿ ಎಂದು ನಮ್ಮನ್ನು ಸದಾ ರಕ್ಷಣೆ ಮಾಡುತ್ತಿರುವುದು ನಮ್ಮ ದೇಶದ ಸೈನಿಕ ವ್ಯವಸ್ಥೆ. ಆದರೆ ಅಂತಹ ಒಬ್ಬ ಸೈನಿಕ ಮೃತಪಟ್ಟಾಗ ನಾವು ಒಂದು ನೂರಾ ಇಪ್ಪತ್ತೆರಡು ಕೋಟಿ ಜನರಿದ್ದರೂ ನಾವು ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲವಲ್ಲ ಇದನ್ನು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕಾಗಿದೆ. ಜೊತೆಗೆ ಈ ದೇಶದ ಸೈನಿಕನಾಗಲಿ ಒಬ್ಬ ಸಾಮನ್ಯ ಪ್ರಜೆಯಾಗಲಿ ಮೃತಪಟ್ಟಾಗ ಅವರ ಸಂಭಂದಿಕರಿಗೆ ಆಗುವ ನೋವು ನಮ್ಮ ನೋವು ಕೂಡ ಆಗಿರಲಿ ಎನ್ನುವುದೇ ನಮ್ಮ ಕಳಕಳಿ ಏನಂತಿರಾ..?

Sunday, 21 July 2013

ಕಟ್ಟ ಕಡಕಡ ಇಲ್ಲದೇ ಹೋದರೆ ಡಿಡಾ ಡಿಡ್ ಡಾ ಇದೆಯಲ್ಲ.....!

ಧನಂಜಯ ಮಡಿಕೇರಿ                     
ಅಮ್ಮ ನಾನು ನ್ಯುಯಾರ್ಕ್ ನಗರಕ್ಕೆ ವಿಧ್ಯಾಭ್ಯಾಸ ಮಾಡುವ ಸಲುವಾಗಿ ಹೋಗುತ್ತಿದ್ದೇನೆ, ನಿನ್ನ ಸಂಪರ್ಕವಿಲ್ಲದೇ,ನಿನ್ನ ಪ್ರೀತಿ ಇಲ್ಲದೆ ಹೇಗೆ ಇರಲಿ ಅಮ್ಮ?ನಿನ್ನನ್ನು ಸಂಪರ್ಕಿಸುವ ಒಂದು ಸಂಪರ್ಕ ಮಾಧ್ಯಮವನ್ನು ನಾನು ಕಂಡು ಹಿಡಿಯುತ್ತೇನೆ ಆ ಮೂಲಕ ನಿನ್ನನ್ನು ನಾನು ಸಂಪರ್ಕ ಮಾಡುತ್ತೇನೆ ಎಂಬುದನ್ನು ತಿಳಿಸಿದವನೇ ಸ್ಯಾಮುಯಲ್  ಎಪ್.ಬಿ.ಮೊರ್ಸ್. ಎಪ್ರಿಲ್ 27, 1791 ರಿಂದ 1872 ಎಪ್ರಿಲ್ 2 ರವರೆಗೆ ಬಾಳಿ ಬದುಕಿದ ಮೊರ್ಸ್ ಜಗತ್ತು ನಿನ್ನೆವರೆಗೆ ಕಳುಹಿಸುತ್ತಿದ್ದ ಟೆಲಿಗ್ರಾಂ ಸಂದೇಶದ ಜನಕ ಎನ್ನಲೇ ಬೇಕು.  
ಆತನ ಮೊರ್ಸ್ ಕೋಡ್ ಬಳಸಿ ನಿನ್ನೆಯವರೆಗೆ ಕಳುಹಿಸುತ್ತಿದ್ದ ಟೆಲಿಗ್ರಾಂ ಸಂದೇಶ  ಮುಕ್ತ ಸಾರ್ವಜನಿಕ ಸೇವೆಯಿಂದ ನಿಂತು ಹೋಗಿರಬಹುದು, ಆದರೆ ದೇಶದ ಸೇನೆ ಮತ್ತು ಪೊಲೀಸ್ ಇಲಾಖೆಯಲ್ಲಿ ಇದು ಇನ್ನು ಜೀವಂತವಾಗಿದೆ. ಇದು ಪೋಸ್ಟ್ ಆಫೀಸ್ ನಲ್ಲಿ ಕಟ್ಟ ಕಡಕಡ ಆದರೆ ಪೊಲೀಸ್ ಮತ್ತು ಸೇನೆಯಲ್ಲಿ ಡಿಡಾ ಡಿಡ್ ಡಾ ಆಗಿ ಇನ್ನು ಚಾಲ್ತಿಯಲ್ಲಿದೆ. ಅದನ್ನು ಕೇಳುತ್ತಾ ಹೋದಂತೆ ಒಂದು ಸುಂದರ ಸಂಗೀತ ಕೇಳಿದಾಗೆ ಅನುಭವವಾಗುತ್ತೆ. ಅದೇನೆ ಇರಲಿ ಒಬ್ಬ ತಾಯಿಯ ಸಂಪರ್ಕಕ್ಕೆ ಸಾಧನೆ ಮಾಡಿದ ಒಂದು ಕೆಲಸ ಆತನ ತಲೆಮಾರಿನಿಂದ ತಲೆಮಾರಿನವರೆಗೆ ಈ ಜಗತ್ತಿನಲ್ಲಿ ಚಾಲ್ತಿಯಲ್ಲಿತ್ತು ಎಂದರೆ ಆತನ ಸಾಧನೆಗೆ ಇದಕಿಂತ ದೊಡ್ಡ ಪುರಸ್ಕಾರ ಬೇಕಿಲ್ಲ ಅನಿಸುತ್ತೆ.
 ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯೂಯಾರ್ಕ್ ನಗರದಿಂದ ಇಂಗ್ಲೆಂಡ್ ತನಕ ಸಮುದ್ರದಲ್ಲಿ ಕೇಬಲ್ ಹಾಕಿ ಸಂದೇಶ ಕಳುಹಿಸುವುದರೊಂದಿಗೆ ಒಂದು ಬದಿಯಿಂದ ಶಬ್ದ ತರಂಗಗಳನ್ನು ವಿದ್ಯುತ್ ತರಂಗಕ್ಕೆ ಬದಲಾಯಿಸಿ ನಂತರ ಅದು ಸ್ವೀಕೃತಿವಾಗುವಾಗ, ಮತ್ತೆ ಶಬ್ದ ತರಂಗವಾಗಿ ಪರಿವರ್ತನೆಯಾಗಿ ಸಂದೇಶ ಸ್ವಿಕೃತವಾಗುವ ಒಂದು ಮಾಧ್ಯಮ. ಈ ಮೊರ್ಸ್ ವಿದ್ಯೆಯಲ್ಲಿ ಪರಿಣತಿ ಇಲ್ಲದೆ ಸಂದೇಶವನ್ನು ತಪ್ಪಾಗಿ ಸ್ವೀಕರಿಸಿ ಅದನ್ನು ತಪ್ಪಾಗಿ ಜನರಿಗೆ ಕೊಟ್ಟು ಆ ಮೂಲಕ ಸಾಕಷ್ಟು ತಪ್ಪುಗಳಿಗೆ ಮತ್ತು ಟೀಕೆಗಳಿಗೆ ಅಂಚೆ ಇಲಾಖೆ ಒಳಗಾಗಿದೆ.ಇಂದು ಬೆಳೆಯುತ್ತಿರುವ ತಂತ್ರಜ್ಞಾನದ ಮೂಲಕ  ಅದು ಕೂಡ ಇತಿಹಾಸದ ಪುಟ ಸೇರಿದೆ. ದೇಶದ ಕಟ್ಟ ಕಡೆಯ ಸಂದೇಶ ದೂರದರ್ಶನದ ನ್ಯೂಸ್ ವಿಭಾಗದ ಅಶ್ವಿನಿ ಮಿಶ್ರಾರವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ  ಕಳುಹಿಸಿದ “success and happiness in life’’ ಸಂದೇಶ ಕೊನೆಯ ಟೆಲಿಗ್ರಾಂ ಸಂದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದ ಮಟ್ಟಿಗೆ 1850 ರಲ್ಲಿ ಮೊದಲ ಬಾರಿಗೆ ಪ್ರಾಯೋಗಿಕ ಟೆಲಿಗ್ರಾಪ್ ಮಾರ್ಗ ಕೊಲ್ಕತಾ ಮತ್ತು ಡೈಮಂಡ್ ಹಾರ್ಬರ್ ಮಧ್ಯೆ ಪ್ರಾರಂಭವಾಯಿತು. 1851 ರಲ್ಲಿ ಬ್ರಿಟೀಶ್ ಈಸ್ಟ್ ಇಂಡಿಯ ಕಂಪನಿಯ ಬಳಕೆಗೆ ಈ ಸೇವೆಯನ್ನು ಬಳಸಲಾಯಿತು 1853 ರಲ್ಲಿ ಇದರ ಸೇವೆಗೆ ಪ್ರತ್ಯೇಕ ಇಲಾಖೆ,1854 ರಲ್ಲಿ ಭಾರತಾದ್ಯಂತ 4000 ಮೈಲು ಟೆಲಿಗ್ರಾಂ ಲೈನ್ ನಿರ್ಮಾಣ, 1885 ಭಾರತೀಯ ಟೆಲಿಗ್ರಾಪ್ ಖಾಯಿದೆ ಜಾರಿ,1902ರಲ್ಲಿ ವೈರ್ಲೆಸ್ ಸಂಪರ್ಕ ಬಳಸಿ ಬಳಕೆ, 1927 ರಲ್ಲಿ ಭಾರತ ಮತ್ತು ಬ್ರಿಟನ್ ಮಧ್ಯೆ  ರೇಡಿಯೋ ಟೆಲಿಗ್ರಾಪ್ ವ್ಯವಸ್ಥೆ. 1995 ರಲ್ಲಿ ಅಂತರ್ಜಾಲ ಭಾರತಕ್ಕೆ ಕಾಲಿಟ್ಟ ನಂತರ ಇದರ ಅಂತ್ಯದ ದಿನಕ್ಕೆ ಕ್ಷಣಗಣನೆ ಆರಂಭವಾಯಿತು. ಆದರೆ ಸೇನೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಇಂದಿಗೂ ಘೋರ ಅರಣ್ಯದ ಮಧ್ಯೆಯಿಂದ ತಂತಿ ರಹಿತ ಸಂದೇಶ ಕಳುಹಿಸುವಲ್ಲಿ ಈ ಮಾಧ್ಯಮ ಯಶಸ್ವಿಯಾಗಿದೆ. ಆ ಮೂಲಕ ಜಮ್ಮು ಕಾಶ್ಮೀರ ಮತ್ತು ಇತರ ಸಂಪರ್ಕವೇ ಇಲ್ಲದ ಗಡಿಗಳಲ್ಲಿ ಯಾವುದೇ ಒಂದು ಅನಾಹುತ ಮತ್ತು ಸಾವು ನೋವು ಸಂಭವಿಸಿದಾಗ ಅಲ್ಲಿಂದ sos (…---…save our souls) ಎಂಬ ಸಂದೇಶ ರವಾನೆಯಾಗುತ್ತದೆ. ಆ ಮೂಲಕ ಭದ್ರತಾ ವ್ಯವಸ್ಥೆಯಲ್ಲಿ ತಂತಿ ರಹಿತ ಸಂದೇಶವಾಗಿ ಇನ್ನು ಚಾಲ್ತಿಯಲ್ಲಿದೆ. ಇದರಲ್ಲಿ ಸಂಪೂರ್ಣ A ಯಿಂದ  Z,ವರೆಗೆ ಮತ್ತು  1 ರಿಂದ 9 ವರೆಗೆ ಜೊತೆಗೆ ಎಲ್ಲಾ ಸಂಕೇತಗಳಿಗೆ ಇದರಲ್ಲಿ ಒಂದು ಚುಕ್ಕಿ ಮತ್ತು ಒಂದು ಅಡ್ಡ ಗೆರೆಯ ಮೂಲಕ ಗುರುತಿಸಲಾಗಿದೆ ಅಂತಾರಾಷ್ಟ್ರೀಯ ಭಾಷೆಯಲ್ಲಿ ಇದಕ್ಕೆ ಕ್ರಮವಾಗಿ.di –daa ಎಂದು ಕರೆಯಲಾಗುತ್ತದೆ. ಇಂದು 160 ವರ್ಷಗಳ ಇತಿಹಾಸವಿರುವ ಸಂದೇಶ ಪ್ರಕಾರ ಸಾರ್ವಜನಿಕ ಸೇವೆಯಿಂದ ಮರೆಗೆ ಸರಿಯುತ್ತಿರಬಹುದು, ಆದರೆ ಸಾರ್ವಜನಿಕರಿಂದ ಅಲ್ಲ, ಇಂದು ಸ್ಯಾಮುಯಲ್ ಮೊರ್ಸ್ ನಮ್ಮಿಂದ ಮರೆಗೆ ಸರಿದಿರಬಹುದು ಆದರೆ ಆತನ ಮೋರ್ಸ್ ಕೋಡ್ ಅಲ್ಲಾ..
Tuesday, 4 June 2013

ಹೊದ್ದು ಮಲಗೋ ಸುಖ ಇರೋ ಮಡಿಕೇರಿ.....!

ಧನಂಜಯ ಮಡಿಕೇರಿ

ನನ್ನ ಜಿಲ್ಲೆ ಮತ್ತು ಮಡಿಕೇರಿ ರಾಜ್ಯದಲ್ಲಿ ಗಮನ ಸೆಳೆಯೋ ಪ್ರದೇಶ. ಕೊಡಗು ಎಂದ ಕ್ಷಣ  ಹೊರಗಿನ ಮಂದಿಗೆ ಅದೇಕೋ ಒಂದು ರೋಮಾಂಚನ. ನೂರಾರು ಊರು ಸುತ್ತಿ ಏನೇನೋ ಕಂಡ ಮೇಲು ಕಂಬಳಿ ಹೊದ್ದು ಮಲಗೋ ಸುಖ ಇರೋದು ಮಾತ್ರ ಮಡಿಕೇರಿಯಲ್ಲೇ..? ಪ್ರಕೃತಿಯ ಸೆರಗು ಯಾವ ಜೀವವನ್ನು ಸೆಳೆಯದೆ ಇರದು .

ಸೆರಗು, ತುದಿ, ಚುಂಗು ಮುಂತಾದ ಅದೇ ನಮೂನೆಯ ಇಲ್ಲದ ಏನೋ ವಿಶೇಷತೆ ಈ ಶಬ್ದಕ್ಕಿದೆ. ಸೆರಗು ಅಂದೊಡನೆ ಅದು ನಿಶ್ಚಯವಾಗಿ ಸೀರೆಯ ಸೇರಗೆ, ಇಲ್ಲಿ ಹಸಿರು ಸೀರೆ ಉಟ್ಟ ನನ್ನ ಕೊಡಗಿನ ಪ್ರಕೃತಿ ಮಾತೆ ತನ್ನ ಸೀರೆಯ ಸೆರಗನ್ನು ಜಿಲ್ಲೆಯಾದ್ಯಂತ ತೇಲಿ ಬಿಟ್ಟಿದ್ದಾಳೆ ( ಕೆಲವರಿಗೆ ಸೆರಗು ಅಂದರೆ ಮತ್ಯರಾರೋ ನೆನಪಾಗ ಬಹುದು) ಪ್ರಕೃತಿ ಎಂಬ ನನ್ನ ತಾಯಿ ಹುಟ್ಟಿರುವ ಸೀರೆ ಅಷ್ಟು ಗಟ್ಟಿಯಾಗಿರುವುದರಿಂದಲೇ ನನ್ನ ಜಿಲ್ಲೆಗೆ ಮಂಗನ ಖಾಯಿಲೆ,ಚಿಕನ್ ಗುನ್ಯ ಯಾವುದು ಸುಳಿಯಲಿಲ್ಲ. ನನ್ನ ತಾಯಿ ಉಟ್ಟಿರುವ ಹಸಿರು ಸೀರೆ, ಆಕೆಯ ಬಗಲಲ್ಲಿ ನಾವುಗಳು ಕೆಟ್ಟ ಕಣ್ಣುಗಳಿಂದಲೋ ಪಾರಾಗಲು ಮಗು ಆಶ್ರಯಿಸಿರುವಂತೆ ನಾನು ಆಶ್ರಯಿಸಿರುವುದು ಈ ತಾಯಿಯ ಸೀರೆಯ ಸೇರಗಿನಲ್ಲೇ..! ಆ ಸೆರಗಿನ ಮುಸುಕು, ಆ ಮುಸುಕು ಕೂಡ ಕಂಬಳಿ ಹೊದ್ದ ಆಗಲ್ಲ ಅದೊಂದು ತರಹ ಮಂಜು, ಆ ಮಂಜಿನ ತೆಳ್ಳನೆಯ ಪರದೆಯ ಮೂಲಕ ಮಬ್ಬು ಮಬ್ಬಾಗಿ ಕಾಣುವ ನನ್ನ ಜನ್ಮ ನೀಡಿದ ಮಾತೆಯ ಊರಾದ ದೂರದ ಕಾಸರಗೋಡುವಿನ ಉಪ್ಪಳವನ್ನು ನೆನೆಸುತ್ತಾ ರಾಜಶೀಟಿನ ಸೂರ್ಯಾಸ್ತಮ ನೋಡುತ್ತಾ ಕುಳಿತಿರುವಾಗ ದೂರದಿಂದ ಮತ್ತೆ ಅದೇ ನನ್ನ ಪ್ರಕೃತಿ ಮಾತೆ ತನ್ನ ಬಿಳಿಯ ಸೆರಗನ್ನ ತೇಲಿ ಬಿಡುತ್ತಿರುವುದನ್ನು ಕಂಡು ಕೊಡಗಿನ ಎಲ್ಲರಂತೆ ಸೆರಗಿನ ಮಗುವಾಗಿರುವ ನಾನು ಜನ್ಮ ನೀಡಿದ ಆಶ್ರಯ ನೀಡಿದ ಮಾತೆಯರ ನೆನೆದು ಧನ್ಯನಾದೆ.

Saturday, 23 March 2013

ಬದುಕಿನ ಹೋರಾಟದ ನಡುವೆ ಸಾವನ್ನ ಸ್ವಾಗತಿಸಿದವ ರಾಂಡಿ ಪಾಶ್‌...

ಧನಂಜಯ ಮಡಿಕೇರಿಒಬ್ಬ ಶಿಕ್ಷಕನನ್ನು ಎಲ್ಲಾ ವಿದ್ಯಾರ್ಥಿಗಳು ನೆನಪಿಸಿಕೊಳ್ಳುವುದಕ್ಕೆ ಸಾದ್ಯವಿಲ್ಲ, ಸಾಧ್ಯವಿದ್ದರೂ ಜೀವನ ಪರ್ಯ್ಯಂತ ನೆನಪು ಇಟ್ಟುಕೊಳ್ಳುವವರು ಕೆಲವೇ ಮಂದಿ. ಅಂತೆಯೇ ಸಮ್ಮೇಳನಗಳು ಕೂಡ ಒಂದಷ್ಟು ದಿವಸ ಕಳೆದ ನಂತರ ಸಾಕಷ್ಟು ಸಮ್ಮೇಳನಗಳು ನಡೆದಿತ್ತು ಅಂತ ನೆನೆಸಿಕೊಳ್ಳುವ ಜನ ಕೂಡ ಇದ್ದೇ ಇರುತ್ತಾರೆ. ಮಾತ್ರವಲ್ಲ ಇಂತಹ ಸಮಾರಂಭಗಳನ್ನು ಜನ ನೋಡುವ ದೃಷ್ಟಿಕೋನ ಮಾತ್ರ ಬೇರೆ ಬೇರೆಯಾಗಿರುತ್ತದೆ. ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಗಮನ ಸೆಳೆದದ್ದು ಪುಸ್ತಕ ಮಳಿಗೆಗಳು. ಸಾಹಿತ್ಯ ಪರ ಪುಸ್ತಕಗಳಿಗೆ ಬೆಂಗಳೂರು,ಮಂಗಳೂರು,ಮೈಸೂರು ಎಂದು  ಕೊಡಗಿನಲ್ಲಿ  ಅಲೆಯುವ ಜನರಿದ್ದಾರೆ ಜೊತಗೆ ಆನ್ ಲೈನ್ ಮೂಲಕ ಖರೀದಿಸುವ ಜನರು ಇದ್ದಾರೆ. ಆದರೆ ಅದು ಹಣವಿದ್ದ ಮಂದಿಗೆ ಮಾತ್ರ ಸಾಧ್ಯ. ಸಾಹಿತ್ಯ ಸಮ್ಮೇಳನಗಳು ಇಂತಹ ಹಸಿವನ್ನು ಕಡಿಮೆ ಮಾಡಿ ಓದಿನ ಹಸಿವು ಹೆಚ್ಚಿಸುವ ಕಡೆ ಗಮನ ನೀಡುತ್ತದೆ.
       ಅಂತೆಯೇ ಕೊಡಗು ಜಿಲ್ಲಾ ೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ನನಗೆ ಒಂದು ಒಳ್ಳೆಯ ಪುಸ್ತಕ ಖರೀದಿಗೆ ದಾರಿ ಮಾಡಿತು. ನನ್ನಂತೆಯ ಅದೆಷ್ಟು ಜನರು ಪುಸ್ತಕ ಪ್ರೀತಿಸುವ ಜನರು ಇರಲ್ಲ. ಅದೇನೇ ಇರಲಿ ಬಹಳ ಮುಖ್ಯವಾಗಿ ಮಕ್ಕಳಿಗೆ ಅದರ ಅವಶ್ಯಕತೆ ಇದೆ ಎಂದು ನಾನು ತಿಳಿದುಕೊಂಡಿದ್ದೇನೆ. ಅಂತೆಯೇ ಕೊಡಗು ಜಿಲ್ಲಾ ೯ನೆ ಸಾಹಿತ್ಯ ಸಮ್ಮೇಳನದಲ್ಲಿ ನಾನು ಖರೀದಿಸಿದ ಪುಸ್ತಕ “ ದಿ.ಲಾಸ್ಟ್ ಲೆಕ್ಚರ್” ಇದು ಅಮೇರಿಕದ ಕಂಪ್ಯೂಟರ್ ವಿಜ್ಞಾನಿ ರಾಂಡಿ ಪಾಶ್‌ ತನ್ನ ಹುಟ್ಟು, ಬಾಲ್ಯದ ಮತ್ತು ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ದಾಖಲಿಸಿದ ಪುಸ್ತಕ. ಇದನ್ನು ನಮ್ಮ ಮೈಸೂರಿನ ಹುಡುಗ ಉಮೇಶ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ ಜೊತೆಗೆ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ ಜಂಟಿಯಾಗಿ ನೀಡುವ ಅರಳು ಸಾಹಿತ್ಯ ಪ್ರಶಸ್ತಿ ಕೂಡ ಬಂದಿದೆ. ರಾಂಡಿ ಪಾಶ್‌   ಅಮೇರಿಕದ ದಂತ ಕಥೆ ಡಾ. ರಾಂಡಿ ಪಾಶ್‌ ಅಮೇರಿಕದ ಕಾರ್ನಿಗ್ ಮೆಲನ್ ವಿಶ್ವವಿದ್ಯಾಲಯದಲ್ಲಿ ೧೯೮೮ ರಿಂದ ೧೯೯೭ರವರೆಗೆ ಕಂಪ್ಯೂಟರ್ ಸೈನ್ಸಿನ ಪ್ರೊಫೆಸರ್, ವಿಜ್ಞಾನಿಯಾಗಿ, ಕೆಲಸ ಮಾಡಿದ್ದಾರೆ. ಅನಂತರ ಗೂಗಲ್, ಅಡೋಬ್ ಮುಂತಾದ ಕಡೆ ಕೆಲಸ ಮಾಡಿದ್ದಾರೆ ಜಗತ್ತಿನ ಮಹಾನ್ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಇವರು ಮಡದಿ ಜೈ,  ಮಕ್ಕಳಾದ ಡೈಲಾನ್,ಲೋಗನ್, ಮತ್ತು ಚೋಲೆ ಎಂಬ ಮೂವರು ಹೆಣ್ಣು ಮಕ್ಕಳ ತಂದೆ. ತನ್ನ ೩೭ನೆ ವಯಸ್ಸಿಗೆ ಮದುವೆಯಾಗಿ ತನ್ನ ೪೭ ವರ್ಷಕ್ಕೆ ಕ್ಯಾನ್ಸರ್ ಎಂಬ ಹೆಮ್ಮಾರಿಗೆ ಬಲಿಯಾಗಿ ತನ್ನ ಬದುಕನ್ನು ಕಳೆದುಕೊಂಡವ ರಾಂಡಿ ಪಾಶ್‌. ಸಾವು ತನ್ನ ಕಣ್ಣ ಮುಂದೆ ಸುತ್ತುತ್ತಿದ್ದರು ಬದುಕಿನಲ್ಲಿ ವಿಜ್ಞಾನಿ,ಗಗನ ಯಾತ್ರಿ, ಐ.ಪಿ.ಎಸ್ ಅಧಿಕಾರಿ ಆದವನ ಸಾಹಸದ ಚಿತ್ರಣ ದಿ. ಲಾಸ್ಟ್ ಲೆಕ್ಚರ್.
       ಹಣವಿದ್ದರೆ ಬೇರೆಯವರಿಗೆ ತೊಂದರೆ ಮಾಡಬಹುದು, ಬದುಕನ್ನು ಕೊಂಡು ಕೊಳ್ಳಬಹುದು, ಏನು ಬೇಕಾದರೂ ಸಾಧಿಸಬಹುದು ಎಂದು ಕೆಟ್ಟ ಯೋಚನೆ ಮಾಡುವವರು ಈ ಪುಸ್ತಕ ಓದುವ ಅವಶ್ಯಕತೆ ಇದೆ. ಏಕೆಂದರೆ ರಾಂಡಿ ಪಾಶ್‌ ಹುಟ್ಟು ಶ್ರೀಮಂತ ಮೂರು ತಲೆಮಾರಿಗೆ ಬೇಕಾಗುವಷ್ಟು ಬ್ಯಾಂಕ್ ಬ್ಯಾಲನ್ಸ್ ಇತ್ತು. ಆದರು ಅದನ್ನು ದುಂದುವೆಚ್ಚ ಮಾಡಲಿಲ್ಲ. ಸಣ್ಣದೊಂದು ಬಿ.ಪಿ.ಸುಗರ್ ಬಂದರೆ ತಲೆ ಮೇಲೆ ಕೈ ಇಟ್ಟು ಪ್ರಪಂಚವೇ ಮುಳುಗಿ ಹೋಯಿತು ಎಂದು ಕುಳಿತುಕೊಳ್ಳುವ ತನ್ನ ಬದುಕಿಗೆ ಇತಿಶ್ರೀ ಹಾಡಿಕೊಳ್ಳುವ ಜನರನ್ನು ನಾವು ನೋಡುತ್ತಿದ್ದೇವೆ.ಅಂತಹ ಎಲ್ಲಾ ನೋವುಂಡು ದಿನ ಕಳೆಯುತ್ತಿರುವ ಮಂದಿಗೆ ಈ ಪುಸ್ತಕ ಸಂಜೀವಿನಿ ಆಗಬಲ್ಲದು.
       ಇಲ್ಲಿ ಗಮನಿಸ ಬೇಕಾದ ಮುಖ್ಯ ವಿಷಯವೆಂದರೆ ರಾಂಡಿ ಪಾಶ್‌ಗೆ ಹಣಕ್ಕೆ ಏನು ಸಮಸ್ಯೆ ಇರಲಿಲ್ಲ. ಬಾಲ್ಟಿಮೋರ್ ನ ಜಾನ್ಸ್ ಹಾಪ್ ಕಿನ್ಸ್ ಆಸ್ಪತ್ರೆಯ ಹೆಸರಾಂತ ವೈದ್ಯ ಡಾ. ಆಲ್ ಫ್ರೆಡ್ ಕ್ವಿನಾನ್ಸ್ ತನ್ನನ ಉಳಿಸಿ ಬಿಡುತ್ತಾನೆ ಎಂಬ ನಂಬಿಕೆಯು ಇತ್ತು, ಆದರೆ  I am sorry dear, cancer is in final stage ಅಂದನಲ್ಲ ಆಗ ಒಂದು ಸರಳ ಸತ್ಯ ರಾಂಡಿ ಪಾಶ್‌ಗೆ ಅರ್ಥವಾಗಿ ಬಿಟ್ಟಿತ್ತು. ಬದುಕಿನಲ್ಲಿ ಅಧಿಕಾರ ಶಾಯಿಯ ವಿರುದ್ದ, ಗೆಳೆಯರ ವಿರುದ್ದ, ವ್ಯವಸ್ಥೆಯ ವಿರುದ್ದ ಹೋರಾಡಿ ಗೆಲ್ಲಬಹುದೇ ಹೊರತು ಸಾವಿನ ವಿರುದ್ದ ಅಲ್ಲ. ಪುಸ್ತಕಕ್ಕೆ ಮುನ್ನುಡಿ ಬರೆದ ವಿಶ್ವೇಶ್ವರ ಭಟ್ ರು ಹೀಗೆ ಹೇಳುತ್ತಾರೆ.
       ಸಾವಿನ ಬಗ್ಗೆ ಮಾತನಾಡುವುದು ಬರೆಯುವುದು ಸುಲಭ, ಸಾವು ಹೀಗೆಯೇ ಬರಲಿ ಎಂದು ಆಸೆ ಪಡುವುದು ಸುಲಭ, ಅಥವಾ ನನ್ನ ಸಾವು ಈಗೆಯೇ ಬರುತ್ತೆ ಎಂದು ಕಲ್ಪಿಸಿಕೊಳ್ಳುವುದು ಇನ್ನು ಸುಲಭ,ತನ್ನ ಪ್ರೀತಿಯ ಮಡದಿಗೆ ‘’ ನೋಡು ಇಂದು ನಿನ್ನ ಹುಟ್ಟು ಹಬ್ಬ ಅಲ್ಲವೇ? ನಿನ್ನ ಹುಟ್ಟು ಹಬ್ಬವನ್ನು ನನ್ನ ಜೊತೆ ನೀನು ಆಚರಿಸಿಕೊಳ್ಳುವುದು ಇದೆ ಕೊನೆ. ಮುಂದಿನ ನಿನ್ನ ಹುಟ್ಟಿದ ಹಬ್ಬಕ್ಕೆ ನಾನು ಇರಲ್ಲ ಎಂದು ಮಡದಿಯ ಹಣೆಗೆ ಹೂ ಮುತ್ತನಿಟ್ಟು Life is beautiful, be happy always ಎಂದು ಹೇಳುವುದು ಇದೆಯಲ್ಲ ಅದು ಕಷ್ಟದ ಕೆಲಸ.
ಮಾತ್ರವಲ್ಲ ಹಾಗೇ ಹೇಳಬೇಕಾದರೆ ಒಂದು ಗಟ್ಟಿ ಗುಂಡಿಗೆಯು ಬೇಕಾಗುತ್ತದೆ. ರಾಂಡಿ ಪಾಶ್‌ ಅಂತ ಆತ್ಮವಿಶ್ವಾಸವನ್ನು ಸಾಧಿಸಿದ ಸಾಧಕ. ಪುಸ್ತಕವನ್ನು ಓದಿದ ಮಂದಿಗೂ ಅದು ಬಂದರೆ ಪುಸ್ತಕದ ಅನುವಾದಕನ ಶ್ರಮ ಸಾರ್ಥಕ.

Friday, 8 February 2013

ವಿವೇಕಾನಂದ ಚಿಕಾಗೋ ಸಮ್ಮೇಳನಕಿಂತ ಮೊದಲು...........

ಧನಂಜಯ ಮಡಿಕೇರಿ


«ªÉÃPÁ£ÀAzÀgÀÄ zÉñÀ PÀAqÀ C¥ÀæwªÀÄ ¸À£Áå¹ CAvÀºÀ ¸À£Áå¹ ºÀÄnÖzÀ ªÀÄtÂÚ£À°è £ÁªÀÅ ºÀÄnÖzÉÝêÉ, CªÀgÀ ºÀÄnÖ¤AzÀ ¸ÀĪÀiÁgÀÄ 150 ªÀµÀðUÀ¼À£ÀÄß zÁn §A¢zÉÝêÉ. C£Àß, CPÀëgÀ,DgÉÆÃUÀåPÉÌ PÀµÀÖ¥ÀqÀÄwÛgÀĪÀ d£ÀgÀ£ÀÄß £ÁªÀÅ FUÀ®Æ PÁtÄwÛzÉÝêÉ, ºÁUÁzÀgÉ £ÁªÀÅ vÀ®Ä¦zÀÄÝ ¸Á¢ü¹zÀÄÝ ¸Àé®à ªÀiÁvÀæ. zÉñÀzÀ GzÀÝUÀ®PÀÆÌ ¸ÀAZÀj¹ zÉñÀzÀ d£ÀgÀ £Ár «ÄrvÀ CjvÀ «ªÉÃPÁ£ÀAzÀgÀÄ zÉñÀzÀ gÁd ªÀĺÁgÁdgÀÄ ¤ÃqÀÄwÛzÀÝ gÁeÉÆÃ¥ÀZÁgÀPÀÆÌ ¸ÉÊ, §qÀ d£ÀgÀÄ ªÀÄÄgÀÄPÀ®Ä eÉÆÃ¥ÀnÖAiÀÄ°è ªÁ¹¸ÀÄwÛzÀݪÀgÀÄ ¤ÃqÀÄwÛzÀÝ Mt gÉÆnÖAiÀÄ£ÀÄß wAzÀÄ zÉêÀ¸ÁÜ£ÀzÀ dUÀ°AiÀÄ ªÉÄÃ¯É ªÀÄ®UÀ®Ä ¸ÉÊ. EAvÀºÀ ¸À£Áå¹ £ÀªÀÄUÉ FUÀ AiÀiÁgÀÄ ¹PÀÌvÁÛgÉ ªÀÄÄnÖzÀgÉ ªÉÄÊ°UÉ §qÀªÀgÀ JAd®Ä JAzÀÄ wgÀ¸ÁÌgÀ ªÀiÁqÀĪÀªÀgÉ eÁ¹Û.
    zÉêÁ®AiÀÄzÀ°è ªÀÄ®VzÀgÉ ¥ÀPÀÌzÀ°è PÉƼÉvÀÄ £ÁgÀĪÀ PÀ¸ÀzÀ gÁ², ªÉÃzÀ ªÀÄAvÀæ PÉüÀĪÀ Q«UÉ ªÀÄvÉÆÛAzÀÄ PÀqÉ QjZÁqÀĪÀ £ÀgÀ¼ÁqÀĪÀ zsÀé¤ J®èªÀ£ÀÄß PÉýzÀgÀÄ C£ÀĨsÀ«¹zÀgÀÄ, PÀ£ÁåPÀĪÀiÁjAiÀÄ §AqÉAiÀÄ°è zsÁå£ÀzÀ°è PÀĽvÀÄ zÉñÀPÁÌV K£ÁzÀgÀÆ ªÀiÁqÀ¨ÉÃPÀÄ JAzÀÄ CjvÀgÀÄ, §qÀªÀgÀÄ ªÀÄvÀÄÛ zsÀ¤PÀgÀ ªÀÄzsÉå ¤PÀl ¸ÀA¥ÀPÀðªÀ¤ßlÄÖPÉÆAqÀgÀÄ. zÉñÀzÀ°è C£ÀPÀëgÀ¸ÀÜgÀÄ ºÉaÑUÉ EzÀÝgÀÆ CªÀgÁgÀÄ «ªÉÃPÀªÁtÂAiÀÄvÀÛ UÀªÀÄ£À ºÀj¸ÀÄwgÀ°®è JPÉAzÀgÉ CªÀjUÉ ªÉÆzÀ®Ä ¤ÃUÀ ¨ÉÃPÁVgÀĪÀÅzÀÄ ºÀ¹ªÀÅ. zÉñÀzÀ d£ÀgÀ°è «ZÁgÀ ªÀÄvÀÄÛ «zÁåªÀAvÀgɤ¹PÉÆAqÀªÀgÀÄ ¥Á±ÀÑvÀå ªÁåªÉÆúÀPÉÌ §°AiÀiÁVzÀÝgÀÄ. CzÀÄ JµÀÖgÀ ªÀÄnÖUÉ EvÀÄÛ JAzÀgÉ £ÀªÀÄä zÉñÀzÀ DZÀgÀuÉ,£ÀA©PÉ,zÉñÀzÀ ¥ÀgÀA¥ÀgÉ J¯Áè ¸ÀļÀÄî ¥Á±ÀÑvÀå¢AzÀ §A¢gÀĪÀÅzÉà ¸ÀvÀå, £ÀªÀÄä UÉÆqÀÄØ ¸ÀA¥ÀæzÁAiÀÄ £ÀA©PÉÆAqÀÄ PÀĽvÀgÉ C©üªÀÈ¢Ý ºÉÃUÉ? J£ÀÄߪÀ PÉlÖ AiÉÆÃZÀ£É d£ÀgÀ°è ªÀģɪÀiÁrgÀĪÁUÀ, AiÉÆÃZÀ£Á ªÀÄUÀßgÁzÀ «ªÉÃPÀgÀÄ dUÀwÛUÉ «±Àé UÀÄgÀÄ«£À ¸ÁÜ£ÀzÀ°èzÀÝ ¨sÁgÀvÀªÀÅ EAzÀÄ dUÀwÛ£À PÁ® §½ PÀĽvÀÄ eÁÕ£ÀPÁÌV CAUÀ¯ÁZÀĪÀ ¹Üw EzÀ£ÀÄß §zÀ¯Á¬Ä¸ÀĪÀ AiÀÄĪÀ±ÀQÛUÉ £ÀªÀÄä ¸ÀA¸ÀÌøw ¥ÀgÀA¥ÀgÉ ¥ÀjZÀ¬Ä¸ÀĪÀ, d£ÀgÀ ºÀÈzÀAiÀÄzÀ°è DvÀä «±Áé¸ÀªÀ£ÀÄß ¤«Äð¸ÀĪÀ, £ÀªÀÄä CAvÀgÁ¼ÀzÀ UÀÄgÀĪÀ£ÀÄß §rzÉ©â¸ÀĪÀ, CªÀ±ÀåPÀvÉ EzÉ JAzÀÄ CjvÀgÀÄ CzÀPÁÌV M§â ¨ÁºÀå UÀÄgÀÄ«£À ¸ÁÜ£ÀªÀ£ÀÄß «ªÉÃPÁ£ÀAzÀgÀÄ ¸ÀªÀÄxÀðªÁV vÀÄA§ÄvÁÛgÉ. ¥ÀæwAiÉƧâgÀÄ vÀªÀÄUÉ vÁªÉ PÀ°vÀÄPÉƼÀî §ºÀÄzÀÄ ¨ÁºÀå UÀÄgÀÄ PÉêÀ® ¸À®ºÉAiÀÄ£ÀÄß PÉÆqÀÄvÁÛ£É CzÀÄ CAvÀgÀAUÀzÀ UÀÄgÀĪÀ£ÀÄß eÁUÀÈvÀ£ÁßV ªÀiÁr «µÀAiÀĪÀ£ÀÄß w½zÀÄPÉƼÀÄîªÀAvÉ £ÀªÀÄä D¯ÉÆÃZÀ£É £ÀªÀÄä EA¢æAiÀÄUÀ½UÉ ¥ÉæÃgɦ¸ÀÄvÀÛzÉ. CAvÀºÀ ªÀĺÁ PÁAiÀÄðªÀ£ÀÄß D PÁ®zÀ°è ¸ÀªÀÄxÀðªÁV ªÀiÁrzÀ ºÉ¸ÀgÀÄ «ªÉÃPÁ£ÀAzÀjUÉ EzÉ.
       ªÉÆzÀ®Ä D¼ÁUÀĪÀÅzÀ£ÀÄß PÀ°¬Äj £ÀAvÀgÀ ¤ªÀÄUÉ £ÁAiÀÄPÀ£À CºÀðvÉ §gÀÄvÀÛzÉ JAzÀÄ AiÀÄĪÀPÀgÀ£ÀÄß ¥ÀæZÉÆâ¸ÀÄvÀÛ PÁAiÉÆð£ÀÄäRgÁzÁUÀ ªÀÄzÁæ¸ï ¥ÁæAvÀåzÀ PÉ®ªÀÅ «ÄvÀægÀÄ ¸À®ºÉ PÉÆlÖgÀÄ ¤ªÀÄä ¢üÃgÀ ±ÀQÛUÉ ¸ÀjAiÀiÁzÀ ¨É¯É ¹UÀĪÀÅzÀÄ ºÉÆgÀzÉñÀUÀ¼À°è. C°èAiÀÄ d£ÀgÀÄ «zÁåªÀAvÀgÀÄ C°è eÁÕ£ÀPÉÌ ¨É¯É EzÉ, C°èAiÀÄ d£ÀgÀ ºÀÈzÀAiÀÄ ¤ÃªÀÅ UÉzÁÝUÀ ¨sÁgÀvÀzÀ d£ÀgÀÄ ¤ªÀÄä ªÀiÁvÀ£ÀÄß ¹éÃPÀj¸ÀÄvÁÛgÉ JAzÀgÀÄ. CzÀÄ ¸Àj JAzÀÄ ¹éÃPÀj¹zÀ «ªÉÃPÁ£ÀAzÀgÀÄ vÀªÀÄä zÉñÀzÀ ¨sÀªÀå ¸ÀA¸ÀÌøw, fêÀ£À zsÀªÀÄð ±ÉæõÀÖ ªÀiË®åUÀ¼À ¥ÀjZÀAiÀĪÀ£ÀÄß ºÉÆgÀzÉñÀPÉÌ ¤ÃqÀĪÀ ¸ÀA¨sÀAzÀ «ªÉÃPÁ£ÀAzÀgÀ ²µÀågÀÄ ªÀÄ£É ªÀÄ£É ºÉÆÃV ©üPÉë ¨ÉÃr vÀAzÀ ºÀt¢AzÀ aPÁUÉÆà zsÀªÀÄð ¸ÀªÉÄäüÀ£ÀPÉÌ ºÉÆgÀqÀÄvÁÛgÉ, SÉÃwæ ªÀĺÁgÁdgÀÄ EªÀjUÉ «ªÉÃPÁ£ÀAzÀ JA§ ºÉ¸ÀgÀ¤lÄÖ nPÉmï §ÄPï ªÀiÁr PÀ¼ÀÄ»¸ÀÄvÁÛgÉ. C°èAzÀ «ªÉÃPÁ£ÀAzÀ ºÉ¸ÀgÀÄ  ±Á±ÀévÀªÁUÀÄvÀÛzÉ.
CªÉÄÃjPÀ vÀ®Ä¦zÀ «ªÉÃPÁ£ÀAzÀgÀ PÉÊAiÀÄ°è ºÀt«®è, ºÁQgÀĪÀÅzÀÄ PÁ« ºÉÆÃzÀ PÀqÉ J¯Áè you begger get out  CAvÀ ¨ÉÊUÀļÀ. ºÀqÀV£À°è ¥ÀjZÀAiÀĪÁzÀ ªÀÄ»¼É EªÀgÀ£ÀÄß £ÉÃgÀªÁV vÀ£Àß ªÀÄ£ÉUÉ PÀgÉzÀÄPÉÆAqÀÄ ºÉÆÃV, CªÀgÀ D¼ÀªÁzÀ eÁÕ£À ªÀÄvÀÄÛ vÉÃd¸ÀÄì CjvÀÄ CªÀgÀ ªÀÄ£ÉAiÀÄ°è D±ÀæAiÀÄ ¤ÃqÀÄvÁÛ¼É. «zÉò ºÉtÄÚ ªÀÄPÀ̽UÉ MAzÀÄ ªÁåªÉÆúÀ«zÉ ¨ÉÃgÉ AiÀiÁgÀ°è EgÀzÀ ªÀ¸ÀÄÛªÀ£ÀÄß ¥ÀqÉzÀÄ CzÀ£ÀÄß vÀªÀÄä ¸ÉßûvÀjUÉ ¥ÀjZÀ¬Ä¹ ºÉªÉÄä ¥ÀlÄÖPÉƼÀÄîªÀÅzÀÄ. »ÃUÉ «ªÉÃPÁ£ÀAzÀgÀªÀgÀ£ÀÄß ¨sÉÃnAiÀiÁUÀ®Ä §AzÀªÀjUÉ ¨sÁgÀvÀzÀ ¸ÀA¸ÀÌøw, ¥ÀgÀA¥ÀgÉ §UÉÎ G¥À£Áå¸À ¤ÃqÀÄvÁÛ J®ègÀ UÀªÀÄ£À ¸É¼ÉAiÀÄÄvÁÛgÉ ¢£À¢AzÀ ¢£ÀPÉÌ ¨sÉÃnAiÀÄ d£ÀgÀ ¸ÀASÉåAiÀÄ°è ºÉZÀѼÀªÁUÀÄvÀÛzÉ.§AzÀªÀjUÉ CªÀgÀ ªÀiÁvÀ£ÀÄß ªÀÄvÉÛ ªÀÄvÉÛ PÉüÀ¨ÉÃPÀÄ C¤¸ÀÄvÀÛzÉ CªÀgÀ°è M§âgÀÄ ºÁªÀðqï «±Àé«zÁå®AiÀÄzÀ ¥ÉÆæåɸÀgï eÉ.ºÉZï.gÉÊmï ¸Áé«ÄÃfAiÀÄ D¼ÀªÁzÀ «µÀAiÀÄ eÁÕ£ÀPÉÌ ªÀÄ£À¸ÉÆÃvÀÄ EªÀgÀ£ÀÄß «±ÀéPÉÌ ¥ÀjZÀ¬Ä¸À¨ÉÃPÀÄ EªÀgÀ ªÀiÁvÀÄUÀ¼ÀÄ «±ÀéPÉÌ vÀ®Ä¥À¨ÉÃPÀÄ JAzÀÄ ¤zsÀðj¹, aPÁUÉÆà zsÀªÀÄð ¸ÀªÉÄäüÀ£ÀPÉÌ §AzÀªÀgÀÄ jf¸ÁÖgï PÀÆqÀ ªÀiÁrgÀĪÀÅ¢®è. DUÀ ¥ÉÆåɸÀgï gÉÊmï ºÉüÀÄvÁÛgÉ, ¤vÀå ¨É¼ÀUÀĪÀ ¸ÀÆAiÀÄð¤UÉ AiÀiÁgÀ C¥ÀàuÉ ¨ÉÃPÀÄ? ¤ÃªÀÅ ¸ÀéAiÀÄA ¥ÀæPÁ²¸ÀĪÀ ¸ÀÆAiÀÄ𠤪ÀÄUÉ CªÀPÁ±À £Á£ÀÄ ªÀiÁqÀÄvÉÛÃ£É JAzÀÄ ºÉý MAzÀÄ ¥ÀvÀæ PÉÆqÀÄvÁÛgÉ CzÀgÀ°è MAzÀÄ ¸Á®Ä FVzÉ here is man who is more intelligent  then  all  intelligent  people of America put together.  E°è M§â ªÀåQÛ EzÁÝ£É CªÉÄÃjPÀ zÉñÀzÀ J¯Áè §Ä¢ÝªÀAvÀgÀ §Ä¢ÝAiÀÄ£ÀÄß MlÄÖ ¸ÉÃj¹zÀgÀÆ FvÀ£À §Ä¢Ý ±ÀQÛUÉ ¸Àj¸ÁnAiÀiÁUÀzÀÄ CAvÀºÀ ªÀåQÛAiÀÄ£ÀÄß PÀ¼ÀÄ»¹ PÉÆqÀÄwÛzÉÝÃ£É CªÀPÁ±À ¤Ãr.
    1893 ¸À¥ÉÖA§gï 11 «±Àé zsÀªÀÄð ¸ÀªÉÄäüÀ£ÀPÉÌ ºÉÆÃV C°èAiÀÄ ªÀåªÀ¸ÉÜ, 8 ¸Á«gÀ d£À ªÉÄÃzÁ«UÀ¼ÀÄ J®ègÀÄ vÀªÀÄä vÀªÀÄä zsÀªÀÄðzÀ §UÉÎ ªÀiÁvÀ£ÁqÀ®Ä ¹zÀÝvÉ ªÀiÁrPÉÆArzÀÝgÀÄ. «ªÉÃPÁ£ÀAzÀgÀÄ EAvÀºÀ ªÀĺÁ ¸À¨sÉ £ÉÆÃrgÀĪÀÅzÀÄ EzÉ ªÉÆzÀ®Ä. DgÀA¨sÀzÀ°è EªÀgÀ ¥ÀjZÀAiÀÄ N¢zÀ qÁ.¨ÁågÉÆÃ¸ï £Á¯ÉÌöÊzÀÄ ªÀÄA¢ ªÀiÁvÀ£ÁrzÀ PÀÆqÀ¯É CªÀPÁ±À ¤ÃqÀÄvÉÛÃ£É JAzÀgÀÄ, CªÀPÁ±À §AzÁUÀ¯É®è ¸Àé®à ¸ÀªÀÄAiÀĪÁUÀ° ªÀÄvÉÛ ªÀiÁvÀ£ÁqÀÄvÉÛÃ£É JAzÀÄ ªÀÄÄAzÀÆqÀÄwÛzÀÝgÀÄ EzÀ£ÀÄß  CjvÀ qÁ, ¨ÁågÉÆøï C£ÀĪÀiÁ£À ¥ÀlÖgÀÄ ¥ÉÆæÃ. gÉÊmï M¼ÉîAiÀÄ ¥ÀvÀæ ¨ÉÃgÉ ¤ÃrzÁÝgÉ »ÃUÉ PÉüÀÄvÁÛ ºÉÆÃzÀgÉ CªÀgÀÄ ªÀiÁvÀ£ÁqÀ¯ÁgÀgÀÄ JAzÀÄ ºÉ¸ÀgÀ£ÀÄß ¥ÀæPÀn¹AiÉÄà ©lÖgÀÄ. DUÀ CªÀjUÉ ªÀÄ£À¹£À°è ¨sÀAiÀÄ«vÀÄÛ PÉÊPÁ®Ä £ÀqÀÄUÀÄwÛvÀÄÛ JAzÀÄ CªÀgÀ ªÀiÁ£À¹PÀ ¹ÜwAiÀÄ£ÀÄß CªÀgÉ zÁR°¹zÁÝgÉ. vÁ¬Ä ±ÁgÀzÉAiÀÄ£ÀÄß ªÀÄ£ÀzÀ°è £É£ÉAiÀÄÄvÁÛgÉ ZÉÊvÀ£Àå §AzÀÄ MªÉÄä ¸À¨sÉAiÀÄ£ÀÄß £ÉÆÃrzÀgÀÄ vÉÃd¹ì£À £ÉÆÃl¢AzÀ¯Éà CªÉÄÃjPÉAiÀÄ d£ÀgÀ£ÀÄß vÀªÀÄävÀÛ ¸É¼ÉzÀÄPÉÆAqÀgÀÄ ¨Á¬ÄAzÀ ªÀÄÆgÀÄ ¥ÀzÀ ºÉÆgÀ ©vÀÄÛ Dear Sisters and brothers of America PÉêÀ® CPÀëgÀªÁV ¹éÃPÀj¹zÀgÉ EzÀÄ ¨sÁgÀwÃAiÀÄjUÉ PÉêÀ® ªÁPÀå, DzÀgÉ CªÉÄÃjPÀ£ÀßjUÉ EzÀÄ CvÀåAvÀ EµÀÖªÁUÀÄvÀÛzÉ J°èAzÀ¯ÉÆà §A¢gÀĪÀ ¸À£Áå¹ £ÀªÀÄä£ÀÄß CtÚ, vÀªÀÄä, CPÀÌ, vÀAV JAzÀÄ PÀgÉAiÀÄÄvÁÛgÀ®è ? dUÀwÛ£À ªÉâPÉAiÀÄ°è ªÉÆlÖ ªÉÆzÀ® ¨ÁjUÉ ºÉÆgÀ©zÀÝ ªÀiÁvÀÄUÀ¼ÀÄ CªÀÅ, MAzÀÄ zÉñÀ ªÀÄvÉÆÛÃAzÀÄ zÉñÀzÀ ¸ÉÆÃzÀgÀ PÀ®à£É E®èzÀ, ªÀiÁ£ÀªÀ PÀÄ®ªÉ £ÀªÀÄä ¸ÀºÉÆÃzÀgÀgÀÄ JA§ ¥ÀjPÀ®à£É E®èzÀ d£ÀgÀ°è ¸ÀºÉÆÃzÀgÀvÀézÀ ¨sÁªÀ£É ªÀÄÆr¹zÀ «ªÉÃPÁ£ÀAzÀgÀ ªÀiÁwUÉ PÉ®ªÀÅ ¤«ÄµÀUÀ¼ÀÄ ZÀ¥Áà¼ÉAiÀÄ ¸ÁéUÀvÀ. CªÀgÀ £ÀÄrUÀ¼ÀÄ ¹r°£ÀAvÉ d£ÀgÀ ºÀÈzÀAiÀÄPÉÌ C¥ÀཹvÀÄ. C°èAiÀÄ  vÀ£ÀPÀ ªÀiÁvÀ£ÁrzÀ zsÀªÀÄðUÀÄgÀÄUÀ¼ÀÄ CªÀgÀªÀgÀ ªÀÄvÀªÉà ±ÉæõÀÖ JAzÀÄ ªÁ¢¹zÀÝgÀÄ CzÀPÉÌ ¨sÁ«PÀ¥ÉàAiÀÄ PÀxÉ ºÉý E°èAiÀĪÀgÉUÉ ¨sÁµÀt ªÀiÁrzÀªÀgÉ®è ¨Á«AiÀÄ PÀ¥ÉàAiÀÄAvÉ JAzÀgÀÄ.  ©ænõÀgÀ UÀįÁªÀÄ VjAiÀÄ°èzÀÝ M§â ¸À£Áå¹UÉ F UÀA©üÃgÀ ºÉýPÉ ¤ÃqÀ¨ÉÃPÁzÀgÉ «ªÉÃPÁ£ÀAzÀgÀ UÀÄArUÉ J¶ÖvÀÄÛ JAzÀÄ £ÁªÀÅ CxÉÊð¸À¨ÉÃPÁUÀÄvÀÛzÉ. C£ÀAvÀªÁzÀ zÉêÀgÀ£ÀÄß KPÉ PÀnÖ ºÁPÀÄwÛÃj ? £ÁªÀÅ ¨sÁgÀwÃAiÀÄgÀÄ ºÉüÀÄvÉÛÃªÉ KPÀA ¸Àvï «¥Á槺ÀÄzÁ ªÀzÀAw ¸ÀvÀå MAzÉÃ, zÉêÀgÀÄ M§â£É w½zÀªÀgÀÄ CªÀ£À£ÀÄß £Á£À ºÉ¸Àj¤AzÀ PÀgÉAiÀÄÄvÁÛgÉ, £ÁªÉîè CtÚ vÀªÀÄäA¢gÀÄ, CPÀÌ vÀAVAiÀÄgÀÄ £ÁªÀÅ ¨sÀUÀªÀAvÀ£À ªÀÄPÀ̼ÀÄ JAzÀÄ ¸ÀĪÀiÁgÀÄ 20 ¤«ÄµÀ ªÀiÁrzÀ ¨sÁµÀt ªÀiÁgÀ£ÉAiÀÄ ¢£À ¥ÀwæPÉ ªÀÄÄR ¥ÀÄlzÀ°è ¥ÀæPÀlªÁUÀÄvÀÛzÉ. MAzÀÄ ¥ÀwæPÉ vÀ£Àß ¸ÀA¥ÁzÀQÃAiÀÄzÀ°è d£ÀgÀ ªÀÄ£ÀUÉzÀÝ »AzÀÆ ¸À£Áå¹ EAvºÀÀ ¨sÀªÀå ¥ÀgÀA¥ÀgÉ EwºÁ¸À«gÀĪÀ zÉñÀPÉÌ PÉæöʸÀÛ ªÀÄvÀ ¥ÀæZÁgÀPÉÌ PÀ¼ÀÄ»¸ÀĪÀzÀÄ £ÀªÀÄä ªÀÄÆSðvÀ£À. «ªÉÃPÁ£ÀAzÀgÀÄ ºÉüÀĪÀAvÉ £ÀªÀÄä°è JµÀÄÖ d£ÀjUÉ £ÁªÀÅ ¨sÀUÀªÀAvÀ£À ªÀÄPÀ̼ÀÄ J£ÀÄߪÀ ¤ªÀÄð® ¨sÁªÀ£É EzÉ ? ¸ÀĪÀiÁgÀÄ £Á®ÄÌ ªÀµÀð «zÉñÀzÀ°è EzÀÝ «ªÉÃPÁ£ÀAzÀgÀÄ C°è PÀÄrAiÀÄ®Ä ¤ÃgÀÄ PÉüÀ®Ä ºÉÆÃzÁUÀ you begger get out CAzÀªÀgÀÄ EªÀgÀ ¨sÁµÀt PÉýzÀ £ÀAvÀgÀ ªÀÄ£À ¥ÀjªÀvÀð£É ªÀiÁrPÉÆAqÀÄ gÁd ªÀÄAiÀiÁðzÉAiÀÄ£ÀÄß ¤ÃqÀÄvÁÛgÉ. EAvÀºÀ ¸ÀAvÉÆõÀzÉÆA¢UÉ 1897 d£ÀªÀj 15 PÉÌ  ¸ÀézÉñÀPÉÌ §gÀÄvÁÛgÉ, FUÀ ¤ªÀÄä zÉñÀzÀ §UÉÎ ¤ªÀÄä D©ü¥ÁæAiÀĪÉãÀÄ JAzÁUÀ £Á£ÀÄ ¨sÁgÀvÀªÀ£ÀÄß ©qÀĪÁUÀ £Á£ÀÄ ¨sÁgÀvÀªÀ£ÀÄß ¦æÃw¸ÀÄwÛzÉÝ, DzÀgÉ FUÀ CzÀgÀ MAzÉÆAzÀÄ zsÀƽ£À PÀtªÀÇ £À£ÀUÉ ¥À«vÀæªÁV PÁtÄwÛzÉ.! J£ÀÄßvÁÛgÉ EAvÀºÀ ±ÉæõÀÖvÉ M§â ¢üÃgÀ ¸À£Áå¹ £À«ÄäAzÀ zÀÆgÀªÁV 150 ªÀµÀð PÀ¼ÉzÀgÀÄ £ÀªÀÄä£ÀÄß ªÀÄvÉÛ ªÀÄvÉÛ PÁqÀÄwÛgÀĪÀÅzÀÄ. E£ÉßÃPÉ vÀqÀ K½j JzÉÞýj .