Friday 20 April 2012

ಸಾಧನೆಯಲ್ಲಿ ನಮ್ಮದು ಮತ್ತೊಂದು ಮೈಲಿಗಲ್ಲು......!

ಕೆ.ಎಸ್.ಧನಂಜಯ,ಮಡಿಕೇರಿ.



















ಹೌದು ಮಿತ್ರ ಹೇಳಿದ್ದು ಸರಿ “ ಸೋಲು ಅನ್ನುವುದು ನಮಗೆ ಜಗತನ್ನು ಪರಿಚಯಿಸುತ್ತದೆ, ಗೆಲುವು ಅನ್ನೋದು ನಮ್ಮನ್ನು ಜಗತ್ತಿದೆ ಪರಿಚಯಿಸುತ್ತದೆ ”. ನನ್ನ ದೇಶ ಅಂತಹ ಒಂದು ಮೈಲಿಗಲ್ಲು ಸ್ಥಾಪಿಸಿದೆ ಅದು ಭಾರತಿಯನಾದ ನನಗೂ ಹೆಮ್ಮೆ ಜೊತೆಗೆ ನಿಮಗೂ ಕೂಡ ಮಾತ್ರವಲ್ಲ ಬ್ಲಡಿ ಇಂಡಿಯನ್ಸ್ ಅನ್ನುವವರು ಕೂಡ ಅಂತಹ ಪದ ಬಳಕೆ ಮಾಡುವಾಗ ಇಂಡಿಯಾದ ಬಗ್ಗೆ ಯೋಚಿಸಿ ಮಾತನಾಡು ಅನ್ನುವ ಸಂದೇಶ ರವಾನಿಸಿದೆ.
ಅಂತಹ ಒಂದು ಗೆಲುವಿದೆ ನಾಂದಿಯಾಗಿದ್ದು ನಮ್ಮ ಇಸ್ರೋ ಸಂಸ್ಥೆ ಮತ್ತು ಆ ಸಂಸ್ಥೆಯ ಎಲ್ಲಾ ವಿಜ್ಞಾನಿಗಳು ಅದರ ಪಾಲುದಾರರು ನಾವು ಭಾರತೀಯರು. ಅಗ್ನಿ ೫  ರಾಕೆಟನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ದೇಶದ ಕೀರ್ತಿಯನ್ನು ಪ್ರಪಂಚದಾದ್ಯಂತ ಪಸರಿಸಿದ ಕೀರ್ತಿಯು ಸಂಸ್ಥೆಗೆ ಇದೆ. ಇದು ಭಾರತೀಯರ ಶ್ರಮದ ಫಲ ಇದು ಈ ದೇಶದ ನಾಗರಿಕರ ಹಿರಿಮೆ ಅರ್ಥಾತ್ ನಾವು ಏನನ್ನು ಪ್ರೆಸ್ಟೀಜ್ ಅಂತ ಹೇಳುತ್ತೆವಲ್ಲ ಅದು. ವಿಶ್ವದ ಪ್ರಭಲ ಮತ್ತು ಅತ್ಯಂತ ಶ್ರಮಿಕ ದೇಶ ಎಂದು ಹೆಸರು ಮಾಡಿರುವ ಚೈನಾ ಕೂಡ ಇಂತಹ ವಿಷದಲ್ಲಿ ಎಚ್ಚರಿಕೆಯ ಮಾತನಾಡಿರುವದು ಗಮನಾರ್ಹ.
ರಾಕೆಟ್ ಗಳನ್ನು ೧೩ ನೇ ಶತಮಾನದಿಂದಲೂ ಮಿಲಿಟರಿ ಮತ್ತು ಮನೋರಂಜನಾ ವಲಯಗಳಲ್ಲಿ  ಬಳಕೆ ಮಾಡುವದು ಸಾಮಾನ್ಯವಾಗಿತ್ತು. ಆದರೂ ಮಹತ್ವದ ವೈಜ್ಞಾನಿಕ, ಗ್ರಹಗಳ ತಲುಪಲುಬಳಸಿದ್ದು ೨೦ನೇ ಶತಮಾನದಲ್ಲೇ ಎಂದು ಹೇಳಬಹುದು. ಅಂತರಿಕ್ಷ ಯುಗಕ್ಕೆ ಕಾಲಿಟ್ಟ ರಾಕೆಟ್ ನಂತರ ಚಂದ್ರನ ಮೇಲೆ ಕಾಲಿಟ್ಟ ಸಂಧರ್ಭದಲ್ಲೇ ಇದರ ಉಪಯೋಗ ಹೆಚ್ಚು ಪರಿಚಿತವಾಯಿತು  ಸುಮಾರು ೧೭೯೨ ರಲ್ಲಿ ಮೊದಲ ಬಾರಿಗೆ ಕಬ್ಬಿಣ ಕವಚದ ರಾಕೆಟ್ ಗಳನ್ನು ಆಗಿನ ಭಾರತದಲ್ಲಿನ ಮೈಸೂರು ಸಂಸ್ಥಾನಿಕರಾದ ಹೈದರಾಲಿ ಮತ್ತು ಆತನ ಪುತ್ರ ಟಿಪ್ಪು ಸುಲ್ತಾನ್ ಅವರುಗಳು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ದ ಆಂಗ್ಲೋ ಮೈಸೂರು ಯುದ್ದದಲ್ಲಿ ಬಳಸಿದ ಉಲ್ಲೇಖವಿದೆ. ಆಗ ಬ್ರಿಟಿಷರು ಇದರ ಬಗ್ಗೆ ಸಕ್ರಿಯ ಆಶಕ್ತಿ ಬಳಸಿಕೊಂಡು ಅದರ ತಂತ್ರಜ್ಞಾನವನ್ನು ೧೯ನೇ ಶತಮಾನದಲ್ಲಿ ಅಭಿವೃಧ್ಧಿಪಡಿಸಿದರು. ಆ ಕಾಲದ ಮೈಸೂರು ರಾಕೆಟ್ ಗಳು ಬ್ರಿಟಿಷರು ನೋಡಿದ್ದಗಿಂತ ಹೆಚ್ಚು ಅಭಿವೃದ್ದಿ ಪಡೆದವವಾಗಿದ್ದವು. ಬಹು ಮುಖ್ಯವಾಗಿ ಕಬ್ಬಿಣದ ಕವಚದ ಇದು ತಿರುಗಣಿ ಮೂಲಕ ತನ್ನ ಕಬ್ಬಿಣದ  ನಳಿಕೆಯಿಂದ ಹಚ್ಚು ಬಲಯುತವಾಗಿತ್ತು. ನಾಲ್ಕನೆಯ ಆಂಗ್ಲೋ ಮೈಸೂರು ಯುದ್ದದಲ್ಲಿನ ಟಿಪ್ಪುವಿನ ಸೋಲಿನ ನಂತರ ಮೈಸೂರಿನ ಕಬ್ಬಿಣದ ರಾಕೆಟ್ಗಳನ್ನು ಬ್ರಿಟಿಷರು ವಶಪಡಿಸಿಕೊಂಡು ತಮ್ಮದೇ ಆದ ಹೊತ್ತಿಸಿ ಚಾಲಿಸಿಗೊಲಿಸುವ ರಾಕೆಟ್ಗಳನ್ನು ಅಭಿವೃದ್ದಿ ಮಾಡಿದರು. ಇದರ ಪ್ರಭಾವದಿಂದ ಅವರು ಮುಂದಿನ ನೆಪೋಲಿಯನ್ ಯುದ್ದದಲ್ಲಿ ಇದನ್ನು ಉಪಯೋಗಕ್ಕೆ ತಂದರು.
 ಭಾರತ  ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಷನ್ ( ICBM ) ಅಗ್ನಿ ೫  ರಾಕೆಟನ್ನು ಒರಿಸ್ಸಾದ ವೀಲರ್ ದ್ವೀಪದಿಂದ ೧೯/೪/೨೦೧೨ ರಂದು  ಉಡಾಯಿಸಿತು.ಅಷ್ಟಕ್ಕೂ ಇದು ಹೆಸರೇ ಹೇಳುವಂತೆ ಖಂಡಾಂತರ ಕ್ಷಿಪಣಿ ಆದರೆ ನಮ್ಮ ದೇಶ ಬಿಟ್ಟು ಇತರ ದೇಶಕ್ಕೂ ಲಗ್ಗೆ ಇಡಬಲ್ಲ ಕ್ಷಿಪಣಿ, ಏಕಕಾಲಕ್ಕೆ ಸುಮ್ಮರು ೫೫೦೦ ಕಿ,ಮಿ. ದೂರವನ್ನು ಕ್ರಮಿಸಬಲ್ಲ ಕ್ಷಿಪಣಿ  ೫೦.೦೦೦ ಕೆ,ಜಿ. ತೂಕವಿದ್ದು ೧೭ ಮೀಟರ್ ಉದ್ದ ಮತ್ತು ಎರಡು ಮೀಟರ್ ಸುತ್ತಳತೆ ಹೊಂದಿದ್ದು ೧೫೦೦ ಕೆ.ಜಿ.ತೂಕವನ್ನು ಹೊತ್ತೊಯ್ಯುವ ಶಕ್ತಿಹೊಂದಿದೆ ನೆರೆಯ ರಾಷ್ಟ್ರದಲ್ಲಿ ಒಂದಾದ ಚೀನಾ ಈ ಯಶಸ್ವಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ `ಉಭಯ ರಾಷ್ಟ್ರ ಗಳು ಪರಸ್ಪರ ಶತ್ರುಗಳಲ್ಲ. ಉತ್ತಮ ಬಾಂಧವ್ಯ ಹೊಂದಿರುವ ನೆರೆಯ ದೇಶಗಳು` ಎಂದಿದೆ ಎಂದರೆ ನಮ್ಮ ತೂಕ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಜಾಸ್ತಿಯಾಗಿದೆ ಮತ್ತು ಜಾಸ್ತಿಯಾಗುತ್ತಿದೆ ಎಂದರ್ಥ. `ಇತ್ತೀಚೆಗೆ ದೆಹಲಿಯಲ್ಲಿ ನಡೆದ `ಬ್ರಿಕ್ಸ್` ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಚೀನಾ ಮುಖಂಡರು ಎರಡೂ ರಾಷ್ಟ್ರಗಳ ಬಾಂಧವ್ಯವನ್ನು ಮತ್ತಷ್ಟು ಉತ್ತಮಪಡಿಸಲು ಹಾಗೂ ದ್ವಿಪಕ್ಷೀಯ ಕಾರ್ಯತಂತ್ರದಲ್ಲಿ ಪರಸ್ಪರ ಸಹಕಾರ ನೀಡುವ ಬಗ್ಗೆ ಒಲವು ತೋರಿದ್ದರು` ಏಕೆ ಈ ತರಹದ ಪ್ರತಿಕ್ರಿಯೆ ಬರುತ್ತದೆ ಎಂಬುವದನ್ನು ನಾವು ವಿಚಾರ ಮಾಡ ಬೇಕಾಗಿದೆ ಅಭಿವೃದ್ದಿ ಅನ್ನುವ ಮಂತ್ರವನ್ನು ನಾನು ದೈನಂದಿನ ಮಂತ್ರವಾಗಿಸಿದೆ ಆದಲ್ಲಿ ವೈಯುಕ್ತಿಕವಾಗಿಯೂ ಕೂಡ ನಮ್ಮ ಗೌರವ ಹೆಚ್ಚಾಗುತ್ತದೆ. ಎನ್ನುವುದು ಇದರ ಅರ್ಥ, ಮಾತ್ರವಲ್ಲ ಭಾರತ ಇಂತಹ ಬೆಳವಣಿಗೆ ಸಾಧಿಸಿದ ಕೆಲವೇ ರಾಷ್ಟ್ರಗಳಾದ ಅಮೇರಿಕ, ಯು.ಕೆ,, ರಷ್ಯಾ ಫ್ರಾನ್ಸ್ ಮತ್ತು ಚೀನಾ ಸಾಲಿಗೆ ನಾವು ಕೂಡ ಪ್ರವೇಶ ಮಾಡಿದ್ದೇವೆ ಎಂದರೆ ಮುಂದುವರಿಯುತ್ತಿರುವ ರಾಷ್ಟ್ರಗಳಿಗೆ ನಾವು ನಡುಕ ಹುಟ್ಟಿಸಿರುವದು ಸುಳ್ಳಲ್ಲ..? ದೇಶದ ಶಸ್ತ್ರಾಗಾರದಲ್ಲಿ ಪ್ರಸ್ತುತ `ಅಗ್ನಿ-1` (700 ಕಿ.ಮೀ ದೂರ), `ಅಗ್ನಿ-2` (2,000 ಕಿ.ಮೀ ದೂರ), `ಅಗ್ನಿ-3` (2,500 ಕಿ.ಮೀ ದೂರ) ಹಾಗೂ `ಅಗ್ನಿ- 4` (3,500 ಕಿ.ಮೀ ದೂರ ಕ್ರಮಿಸಬಲ್ಲ) ಕ್ಷಿಪಣಿಗಳು ಇವೆ.  ಸ್ವದೇಶಿ ನಿರ್ಮಿತ `ಅಗ್ನಿ-5` ಕ್ಷಿಪಣಿ ಪ್ರಯೋಗದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್, `ದೇಶದ ರಕ್ಷಣಾ ಸಿದ್ಧತೆಯಲ್ಲಿ ಇದು ಮತ್ತೊಂದು ಮೈಲಿಗಲ್ಲು` ಎಂದು ಬಣ್ಣಿಸಿದ್ದಾರೆ.ಈ ಕ್ಷಿಪಣಿಗಾಗಿ ಹಗಲು ರಾತ್ರಿ ದುಡಿದ ವಿಜ್ಞಾನಿಗಳು, ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಖ್ಯಸ್ಥ ವಿ.ಕೆ.ಸಾರಸ್ವತ್ ಅವರನ್ನು ಪ್ರಧಾನಿ ಮಾತ್ರವಲ್ಲ ನಿಜಕ್ಕೂ ಇದೊಂದು ಅಭೂತಪೂರ್ವ ಯಶಸ್ಸು. ಕ್ಷಿಪಣಿ ತಂತ್ರಜ್ಞಾನದಲ್ಲಿ ನಾವು ಇಂದು ಎತ್ತರದಲ್ಲಿ ನಿಂತಿದ್ದೇವೆ. ಕ್ಷಿಪಣಿ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಇದು ಮಹತ್ವದ ಸಾಧನೆಯಾಗಿದೆ` ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಬಣ್ಣಿಸಿದ್ದಾರೆ. ಭಾರತವು ಅಗ್ನಿ-5 ಶ್ರೇಣಿಯ ಕ್ಷಿಪಣಿಗಳನ್ನು ವಿನ್ಯಾಸಗೊಳಿಸುವ, ಅಭಿವೃದ್ಧಿಪಡಿಸುವ ಹಾಗೂ ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನುವ ಮಹತ್ವದ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದೆ. ಇಂದು ಭಾರತವು ಕ್ಷಿಪಣಿ ಶಕ್ತಿ ರಾಷ್ಟ್ರವಾಗಿ ಹೊರಮೊಮ್ಮಿದೆ` ಎಂದು ಸಾರಸ್ವತ್ ಬಣ್ಣಿಸಿದ್ದಾರೆ. ಕೆಲವೊಂದು ಎಲೆಕ್ಟ್ರಾನಿಕ್ ಬಿಡಿ ಭಾಗಗಳನ್ನು ಬಿಟ್ಟರೆ, ಅಗ್ನಿ-5 ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಕ್ಷಿಪಣಿ` ಸಾಧಿಸಿದ್ದು ಸಾಕಷ್ಟು ಸಾಧಿಸಬೇಕಾಗಿರುವದು ಮತ್ತಷ್ಟು ಎಂದರೆ ಭಾರತ ಪ್ರಕಾಶಿಸುತ್ತಿದೆ ಭಾರತ ಪ್ರಕಾಶಿಸುತ್ತಿದೆ ಎಂದರೆ ಭಾರತೀಯರಾದ ನಾವು...?

No comments:

Post a Comment