ಧನಂಜಯ ಮಡಿಕೇರಿ
ದೇವರು ಒಬ್ಬನೇ ನಾಮ ಹಲವು ಹಾಗೆ ಮನುಷ್ಯ ಒಬ್ಬನೇ. ಆದರು ಅವನನ್ನು ಅಭ್ಯಾಸಿಸಿದಾಗ ಅವನ ಸುಳ್ಳು, ಕಳ್ಳತನ, ಮೋಸ,ವಂಚನೆ ಎಲ್ಲವು ಒಂದರ ಹಿಂದೆ ಒಂದರಂತೆ ತೆರೆದು ಕೊಳ್ಳುತ್ತದೆ. ಇಂತಹ ಸಮಾಜ ವಿರೋಧಿಯ ಲಕ್ಷಣಗಳನ್ನು ತೊಡೆದು ಹಾಕಿ ಅವನನ್ನು ಪ್ರಗತಿಯ ಕಡೆಗೆ ಕೊಂಡುಯ್ಯುವುದೇ ಸಾಹಿತ್ಯ.
ಇದನ್ನು ಮನುಷ್ಯನ ನೆಲೆಗೆ ಪರಿಚಯಿಸುವ ಕೆಲಸ ಪ್ರಾರಂಭದಿಂದಲೇ ಆಗಬೇಕಿದೆ. ಅದು ಮಕ್ಕಳ ಬಾಲ್ಯ ಅವಸ್ಥೆಯಿಂದಲೇ ಅದಕ್ಕಾಗಿ ಅವರಿಗೂ ಒಂದು ಅಕಾಡೆಮಿಯ ಅವಶ್ಯಕತೆ ಇದೆ. ಸ್ವಾತಂತ್ರವಾಗಿ ಸರಿ ಸುಮಾರು ಅರ್ಧ ಶತಮಾನ ಕಳೆದು ನಿಂತರು ಈ ರಾಜ್ಯದಲ್ಲಿಯಾಗಲಿ ದೇಶದಲ್ಲಿಯಾಗಲಿ ಮಕ್ಕಳಿಗಾಗಿ ಅವರ ಸಾಮಾಜಿಕ ಬೆಳವಣಿಗೆಗಾಗಿ ಯಾವುದೇ ಅಧಿಕೃತ ಸಂಸ್ಥೆಗಳು ಇಲ್ಲ . ಮಕ್ಕಳಿಗಾಗಿ ಚಿಂತನೆ ಮಾಡುವವರು ಪರೋಕ್ಷವಾಗಿ ಈ ದೇಶದ ಅಭಿವೃದ್ದಿಯ ಬಗ್ಗೆ ಚಿಂತಿಸುತ್ತಿದ್ದಾರೆ ಎಂಧರ್ಥ. ಬೀದರ್ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದರ ಬಗ್ಗೆ ದೊಡ್ಡ ಕೂಗು ಎದ್ದರು ಅದರ ಬೆನ್ನತ್ತಿ ಕೆಲಸ ಮಾಡುವವರು ಇಲ್ಲದೆ ಅದು ಸಹ ಮರೆಗೆ ಸರಿದು ಹೋಗಿದೆ ಎನ್ನದೆ ಬೇರೆ ದಾರಿ ಇಲ್ಲ. ಮಕ್ಕಳ ಸಮಸ್ಯೆಯನ್ನು ಆಲಿಸಲು ಈ ದೇಶದಲ್ಲಿ ಯಾವುದೇ ಅಧಿಕೃತ ಸಂಸ್ಥೆ ಇಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲ ಭವನ ಇದ್ದರು ಅದು ಸೀಮಿತಿ ಮಿತಿಯೊಳಗೆ ಕೆಲಸ ನಿರ್ವಹಿಸಿದರು ಅದು ಒಂದು ಪ್ರದೇಶದ ಒಟ್ಟು ವ್ಯವಸ್ಥೆ ಬಗ್ಗೆ ಕೆಲಸ ಮಾಡುತ್ತಿಲ್ಲ ಎನ್ನುವುದು ಪ್ರಮುಖವಾದ ವಿಷಯ.
ಕೇಂದ್ರ ಮಂತ್ರಿಯಾಗಿದ್ದ ಶ್ರೀಮತಿ ರೇಣುಕಾ ಚೌದರಿಯವರು ಮಕ್ಕಳ ಆಯೋಗ ರಚಿಸುವ ಬಗ್ಗೆ ಒಮ್ಮೆ ಮಾತನಾಡಿದರು ಮತ್ತೆ ಆ ಬಗ್ಗೆ ಚಕಾರವಿಲ್ಲ. ನಮಗಾಗಿ ಕೊಡವ, ಗೌಡ, ತುಳು,ಬ್ಯಾರಿ,ಕೊಂಕಣಿ ಎಲ್ಲ ಮಾಡಿ ಕೊಂಡೆವು ಆ ಮಕ್ಕಳಿಗಾಗಿ ಕೇಳುವ ರಾಜಕಾರಿಣಿಗಳೇ ಇಲ್ಲದಂತಾಗಿದೆ ಎಂದರೆ ಅದು ನಮ್ಮ ದುರಂತ ಅನ್ನದೆ ಬೇರೆ ಏನಿದೆ.
ಮಕ್ಕಳ ಸಾಹಿತ್ಯದ ವಿಷಯಕ್ಕೆ ಬಂದಾಗ ಅಲ್ಲಿ ಎರಡು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು ಮಕ್ಕಳಿಗಾಗಿ ರಚಿತವಾದ ಸಾಹಿತ್ಯ ಮತ್ತೊಂದು ಮಕ್ಕಳಿಂದ ರಚಿತವಾದ ಸಾಹಿತ್ಯ ಇಲ್ಲಿ ಎರಡನೇ ವಿಷಯಕ್ಕೆ ಸಂಭಂದಿಸಿದಂತೆ ಕರ್ನಾಟಕ ಮಕ್ಕಳ ಸಾಹಿತ್ಯ ವೇದಿಕೆ ಅಂತ ಇತ್ತು ಅದು ಕೂಡ ಇಂದು ತನ್ನ ಕಾರ್ಯವನ್ನೂ ಸ್ಥಗಿತಗೊಳಿಸಿದೆ. ಸಾಹಿತ್ಯದ ಕೆಲಸ ಮನುಷ್ಯನನ್ನು ಉದ್ದೀಪನಗೊಳಿಸಿ, ಉದ್ದಾತನ ಮಾಡಿ ಉನ್ನತಿಗೆ ಏರಿಸುವದು. ಸಾಹಿತ್ಯವೆಂದರೆ ಬರಿ ಮಾತಲ್ಲ ಅಲ್ಲಿ ಭಾಷೆಯು ತನ್ನ ಪ್ರಬುದ್ದತೆಯನ್ನು ಪಡೆದು ಮಂತ್ರ ಶಕ್ತಿಯನ್ನೂ ತಂದು ಕೊಂಡಿರುತ್ತದೆ ಅಲ್ಲಮಪ್ರಭುವಿನ ಮಾತಿನಲ್ಲಿ ಹೇಳುವುದಾದರೆ ಮಾತು ಅಲ್ಲಿ ಜೋತಿರ್ಲಿಂಗವಾಗಿರುತ್ತದೆ ಅಲ್ಲದೆ ಒಂದು ನಾಡಿನ ಶ್ರೇಷ್ಟತೆಯನ್ನು ಸಾಹಿತ್ಯ ಬಿಂಬಿಸುತ್ತದೆ.
ಮಕ್ಕಳ ವಿಷಯಕ್ಕೆ ಬಂದಾಗ ಹಣವಂತ ಮಕ್ಕಳು ಪ್ರತಿಭೆಯನ್ನು ಹರಸಿ ಮುಂದೆ ಹೋಗಬಹುದು. ಆದರೆ ಎಲೆಮರೆಯ ಕಾಯಿಯಂತಿರುವ ಬಡ ಮಕ್ಕಳು ಪ್ರತಿಭೆ ಇದ್ದರು ಅವರಿಗೆ ಆರ್ಥಿಕ ಸಮಸ್ಯೆಯಿಂದ ಮುಂದೆ ಹೋಗುವದು ಕಷ್ಟ ಪ್ರತಿಭಾವಂತರನ್ನು ಸಿನಿಮಾದಲ್ಲಿ ಚಿತ್ರದಲ್ಲಿ ನೋಡುವುದಸ್ಟೇ ಅವರಿಂದ ಸಾಧ್ಯ. ಮಕ್ಕಳ ಮನಸು ಮುಗ್ದವಾಗಿದ್ದು ಗ್ರಹಿಸುವ ಶಕ್ತಿ ಅಧಿಕವಾಗಿರುತ್ತದೆ ಬುದ್ದಿಯ ಅತಿ ಶೀಘ್ರ ಬೆಳವಣಿಗೆ ಬಾಲ್ಯದಲ್ಲಿ ಮಾತ್ರ ಆಗುತ್ತದೆ. ಬೌದಿಕ ವಯಸ್ಸು ಸದಾ ಹೆಚ್ಚುತ್ತಾ ಹೋಗುವುದಿಲ್ಲಾ ಎಲ್ಲೋ ೧೪-೧೮ ವಯಸ್ಸಿನ ಮಧ್ಯೆ ಅದು ಸಮ ಮಟ್ಟಕ್ಕೆ ಬರುತ್ತದೆ ಆ ಮಧ್ಯೆ ಹಿರಿಯರಾದ ನಾವು ಮಕ್ಕಳಲ್ಲಿ ಒಳ್ಳೆಯ ವಿಷಯ ಬಿತ್ತನೆ ಮಾಡಬೇಕು ಅದು ಸಾಹಿತ್ಯ,ವಾಗಿರಬಹುದು ಇನ್ಯಾವುದೇ ಇರಬಹುದು. ಇಲ್ಲಿ ಬೌದಿಕ ವಯಸ್ಸು ಮುಖ್ಯವಾಗುತ್ತದೆ. ಪ್ರತಿಭೆಗೂ ಹರೆಯ ಮತ್ತು ಮುದಿತನವಿದೆ ಮಗುವಿನ ಮೆದುಳಿನಲ್ಲಿ ಆರು ಬಗೆಯ ಪ್ರತಿಭಾ ವಲಯಗಳಿವೆ ಎಂದು ಹಾರ್ವರ್ಡ್ ವಿಶ್ವ ವಿದ್ಯಾಲಯದ ಗಾರ್ಡನರ್ ಎಂಬ ಮನೋ ವಿಜ್ಞಾನಿ ಗುರುತಿಸಿದ್ದಾರೆ ಅವುಗಳೆಂದರೆ ಸಂಗೀತ, ಕವಿತ್ವ, ಗಣಿತ, ತನ್ನ ಹಾಗು ಇತರನ್ನು ಅರ್ಥ ಮಾಡಿಕೊಳ್ಳುವ ಶಕ್ತಿ, ಆಳ ಆಕಾರಗಳನ್ನೂ ಅರ್ಥಮಾಡಿ ವಿಶ್ಲೇಷಿಸುವ ಶಕ್ತಿ, ಕಲಾ ಪ್ರೌಡಿಮೆ, ನಟನೆ ನರ್ತನೆಯಂಥಹ ಶಾರೀರಿಕ ಪ್ರತಿಭೆ. ಈ ಆರು ವಿಷಯದ ಪೈಕಿ ಇಂದೊಂದು ವಿಷಯವು ಒಂದೊಂದು ವಯೋಮಾನದಲ್ಲಿ ಬೆಳವಣಿಗೆ ಹೊಂದುತ್ತದೆ. ಅದರಲ್ಲಿ ಮೊಟ್ಟ ಮೊದಲನೆಯದು ಸಂಗೀತ ಮತ್ತು ಅದಕ್ಕೆ ತಾಳ ಹಾಕುವ ಪ್ರತಿಭೆ ಇದು ಎಂದು ಹುಟ್ಟುತ್ತದೆ ಮತ್ತು ಎಂದು ಸಾಯುತ್ತದೆ ಎಂಬುವದು ಅವರ ಅನುವಂಶಿಕ ಮತ್ತು ಸಾಮಾಜಿಕ ಪರಿಸರವನ್ನು ಅವಲಂಬಿಸಿರುತ್ತದೆ. ಶರೀರ ನಡುವಯಸ್ಸಿಗೆ ಬರುವ ಹೊತ್ತಿಗೆ ಪ್ರತಿಭೆಗೆ ಮುದಿತನ ಬರುತ್ತದೆ. ಇದಕ್ಕೆ ಉತ್ತಮ ಹೆಸರು ಐನ್ ಸ್ಟೀನ್ ಇವರು ತನ್ನ ಮಹತ್ವದ ಸಂಶೋದನೆಯನ್ನೆಲ್ಲಾ ೨೦ ರ ಹರೆಯದಲ್ಲಿ ಮಾಡಿ ಮುಗಿಸಿದ್ದರು ಹಾಗೆಯೇ ನಮ್ಮ ಡಾ. ಸುಬ್ರಮಣ್ಯಂ ಚಂದ್ರಶೇಖರ್ ಅವರಿಗೆ ೨೪ ನೆ ವಯಸ್ಸಿಗೆ ನೊಬೆಲ್ ಪ್ರಶಸ್ತಿ ಬಂದಿದೆ.
ಭವಿಷ್ಯದ ದಿನಗಳಲ್ಲಿ ನಮ್ಮ ನಾಡಿನ ಸಂಸ್ಕೃತಿ ಮತ್ತು ಇತಿಹಾಸವನ್ನೂ ಭದ್ರವಾಗಿರಿಸಲು ನಾವು ಎಷ್ಟರ ಮಟ್ಟಿಗೆ ಪ್ರಯತ್ನಿಸುತಿದ್ದೇವೆ.? ಕುವೆಂಪು,ಬೇಂದ್ರೆ,ಕಾರಂತ,ಗೋಕಾಕ್,ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿಯವರು ಈ ನಾಡಿನಲ್ಲಿ ಮುಂದೊಂದು ದಿವಸ ಹುಟ್ಟಿಯಾರೆ ? ಇಷ್ಟಕ್ಕೂ ಅವರು ತಮ್ಮ ಬಾಲ್ಯ ಕಳೆದು ಬಂದವರಲ್ಲವೇ ?ಟಿ.ವಿಯಲ್ಲಿ ಎರಡು ಹಾಡು ಕಾರ್ಟೂನ್, ಪತ್ರಿಕೆಯಲ್ಲಿ ಎರಡು ಮಕ್ಕಳ ಚಿತ್ರ ಬಿಡಿಸಿ ಪ್ರಕಟಗೊಂಡ ಮಾತ್ರಕ್ಕೆ ನಮ್ಮ ಕರ್ತವ್ಯ ಮುಗಿಯಿತೇ ? ಮಕ್ಕಳನ್ನು ಗುರುತಿಸಿ ಅವರ ಪ್ರತಿಭೆಯನ್ನು ಗುರುತಿಸಿ,ಬೆಳೆಸಿ,ಉಳಿಸುವ ಕೆಲಸ ನಮ್ಮಿಂದ ಆಗಬೇಕು,
ಈ ನಿಟ್ಟಿನಲ್ಲಿ ನಮ್ಮ ನಾಡಿಗೆ ಸಾಹಿತ್ಯ ಪರವಾಗಲಿ ಅಥವಾ ಮಕ್ಕಳ ಪ್ರತಿಯೊಂದು ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಮಕ್ಕಳ ಸಾಹಿತ್ಯ ಅಕಾಡೆಮಿ ಬೇಕಾಗಿದೆ ಎಲ್ಲಿ ನಾವು ಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತೇವೆಯೋ ಅಲ್ಲಿ ನಮ್ಮ ಅವನತಿಯ ದಿವಸಗಳನ್ನು ನಾವು ಸೃಷ್ಟಿಸುತ್ತಿದ್ದೇವೆ ಎಂದರ್ಥ. ಅದು ನಮ್ಮ ವೈಯುಕ್ತಿಕ ಬದುಕಲ್ಲೂ ಕೂಡ ಅಸ್ಟೆ ನಮ್ಮ ಮಕ್ಕಳಿಗೆ ಭದ್ರ ಬುನಾದಿ ಹಾಕದೆ ಹೋದರೆ ನಮ್ಮ ಬದುಕಿನ ಅಂತ್ಯದದಿವಸವನ್ನು ಕಷ್ಟದಿಂದ ನೋಡಬೇಕಾದಿತು ಅದಕ್ಕೆ ಮಕ್ಕಳಿಗೆ ಒಂದು ಸಾಹಿತ್ಯ ಅಕಾಡೆಮಿ ಬೇಕಾಗಿದೆ ಎಂದು ನನ್ನ ಒತ್ತಾಯ ನಿಮ್ಮದು..?
ಧನಂಜಯ್ ತುಂಬಾ ಚೆಂದ ಆಲೋಚನೆ ಮಾಡಿದ್ದೀರಿ.ಪ್ರಬುದ್ಧ ಸಮಾಜಮುಖಿ ಮತ್ತು ಮನೆ ಮನೆ ಮಕ್ಕಳ ಭವಿಷ್ಯದ ಚಿಂತನೆ.ಆ ರೀತಿ ನಡೆಯುತ್ತಿಲ್ಲವಲ್ಲ ಅನ್ನೋ ಬೇಸರ. ತುಂಬಾ ಚೆನ್ನಾಗಿ ಬರೆದಿದ್ದೀರಿ. ಶುಭವಾಗಲಿ.
ReplyDeleteಧನ್ಯವಾದಗಳು ರವಿ ನಿಮ್ಮ ಪ್ರತಿಕ್ರಿಯೆಗೆ
DeleteMohan Thimmaiah
ReplyDeleteShubhodaya geleleyaa..:-):-)
Sundara maathugalu, eegina paristhithiya bimba,
Yochane shusuvaagide nanage..
Shubhavaagali nimage..
Vijayuthaiah Eramanda
ReplyDeleteಮನುಜ ಮತ ವಿಶ್ವ ಪಥ ಎನ್ನುವಮಾತು ನೂರಕ್ಕೆ ನೂರು ಸತ್ಯ ಆದರೆ ಇದು ಇದುವರೆಗೆ ಪುಸ್ತಕದಲ್ಲಿ ಮಾತ್ರ ಬರವಣಿಗೆ ಆಗಿ ಇದೆ ಅಸ್ಟೇ... ಇದನ್ನು ಪಾಲಿಸಿದರೆ ನಮ್ಮ ದೇಶ ರಾಮರಾಜ್ಯ ಆಗಬಹುದು ಅಲ್ಲವೆ ?