ಕೆ.ಎಸ್.ಧನಂಜಯ,ಮಡಿಕೇರಿ.
ಹೊರಗೆ ಕಣ್ಣಾಡಿಸಿ ನೋಡುತ್ತೇನೆ ಧೋ...ಧೋ ಎಂದು ಸುರಿಯುವ ಮಳೆ ಎಲ್ಲಿಯು ಹೊರಗೆ ತಿರುಗಾಡಲು ಬಿಡುವು ನೀಡುತ್ತಿಲ್ಲ. ಒಂದು ತರಹದ ಉದಾಸಿನ. ಮನೆಯೊಳಗೆ ಕುಳಿತು ಏನಾದರು ಮಾಡಿ ತಿನ್ನಬಾರದೆ ಎಂದಾಗ ನೆನಪಿಗೆ ಬಂದದ್ದು ಪತ್ರೊಡೆ. ಹೊರಗೆ ಬಂದು ನನ್ನ ಹಳೆಯ ಕಾರು ತೆಗೆದುಕೊಂಡು ನೇರವಾಗಿ ಮಡಿಕೇರಿಯ ಸಂತೆಗೆ ಹೋದೆ ಅಂದು ಶುಕ್ರವಾರ ಆದರಿಂದ ನನಗೆ ಪತ್ರೊಡೆ ಸೊಪ್ಪಿನ ಸಮಸ್ಯೆ ಬರಲಿಲ್ಲಿ ಹಾಗೆ ತೆಗೆದುಕೊಂಡು ಬಂದು ಮಡದಿಯ ಕೈಗೆ ನೀಡಿ ನಾಳಿನ ಬೆಳಿಗಿನ ತಿಂಡಿ ಪತ್ರೊಡೆ ಆಗಬೇಕು ಎಂದು ಆದೇಶಿಸಿದೆ.
ನಮ್ಮೂರಿನ ಆಲದ ಮರ, ಹತ್ತಿ ಮರದಲ್ಲಿ ಹೇರಳವಾಗಿ ಸಿಗುವ ಪತ್ರೊಡೆ ಎಲೆಗಳಿಗೆ ಮಡಿಕೇರಿಯ ಸಂತೆಯಲ್ಲಿ ಬಾರಿ ಬೇಡಿಕೆ ಎಕೆಂದರೆ ಈ ಆಟಿ (ಕರ್ಕಾಟಕ ಮಾಸ)ಯಲ್ಲಿ ಮಾತ್ರ ಪತ್ರೊಡೆ ಕನಿಲೆ ಮತ್ತು ಆಟಿ ಸೊಪ್ಪು ( ಇದು ಆಟಿ ತಿಂಗಳ 18 ನೇ ದಿವಸ ಇದರಲ್ಲಿ ಹದಿನೆಂಟು ಬಗೆಯ ಔಷಧ ಲಭ್ಯ ಎಂಬ ನಂಬಿಕೆ)ಇದನ್ನು ನಾವು ಹೇರಳವಾಗಿ ಉಪಯೋಗಿಸುವುದು. ಕಣ್ಣಿಗೆ ಮುದ ನೀಡುವ ಹಸಿರು ಕ್ರಾಂತಿಯಂತೆ ಕಂಗೊಳಿಸುವ ಈ ಎಲೆಗೆ ಮಲೆನಾಡಿನಲ್ಲಿ ಈ ಸಮಯದಲ್ಲಿ ಬೇಡಿಕೆ ಇರುವುದು ಸಹಜ.
ಕವಿ ಬಿ. ಆರ್.ಲಕ್ಷ್ಮಣರಾಯರು ಮದುವೆಯ ಹೊಸತನದಲ್ಲಿ ಹೆಂಡತಿಯ ತವರು ಮನೆಗೆ ಹೋಗಿ ಪತ್ರೊಡೆ ತಿಂದ ಅನುಭವ ತುಂಬಾ ಸೊಗಸಾಗಿದೆ ಹೆಂಡತಿಯ ಮನೆಗೆ ಹೊರಟು ತಿಪಟೂರಿನಲ್ಲಿ ಬಸ್ಸು ಕಾಫಿಗೆ ನಿಲ್ಲುತ್ತದೆ. ಆ ಹೊಟೇಲ್ ನಲ್ಲಿ ಒಂದು ನವ ಜೋಡಿ ಇವರ ಎದುರಿಗೆ ಕುಳಿತುಕೊಳ್ಳುತ್ತಾರಂತೆ. ಆ ಹೊಸ ವಧು ಇವರನ್ನು ಕಂಡು ನಮಸ್ಕಾರ ಸಾರ್ ನಾನು ನಿಮ್ಮ ವಿಧ್ಯಾರ್ಥಿ ಎಂದು ಗೌರವದಿಂದ ನಮಸ್ಕರಿಸುತ್ತಾರೆ.ನಂತರ ಬಸ್ಸಿಗ್ಗೆ ಬಂದು ಕುಳಿತ್ತಾಗ ರಾಯರ ಹೆಂಡತಿಯ ಮುಖ ಊದಿ ಯಾರ್ರಿ ಆ ಶಕುಂತಲೆ "ಶಕೂ ನನಗೆ ನೀನೆ ಬೇಕು" ಎಂದು ಪದ್ಯ ಬರೆದಿದ್ದೆರಲ್ಲ ಅವಳೆನಾ ಇವಳು ಎನ್ನುತ್ತಾರೆ ಅದಕ್ಕೆ ರಾಯರು ಅದು ಕಲ್ಪನೆ ಮರಾಯ್ತಿ ಎಂದು ಸುಮ್ಮನಾಗುತ್ತಾರೆ ಸುಮ್ಮನಾದರೆ ಪರವಾಗಿಲ್ಲ ಒಂದೊಂದು ಮನೆಯಲ್ಲಿ ಇಲ್ಲದ ವಿಷಯಕ್ಕೆ ರಾಮಾಯಣವೆ ನಡೆದು ಬಿಡುತ್ತೆ. ಅದೇನೆ ಇರಲಿ ಶಿವಮೊಗ್ಗೆ ತಲುಪಿದ ರಾಯರಿಗೆ ಅಲ್ಲಿ ಬೆಳಗಿನ ತಿಂಡಿ ಪತ್ರೊಡೆ. ಹೆಸರು ಕೇಳಿದರೆನೆ ನನಗಂತು ಬಾಯಲ್ಲಿ ಜೊಲ್ಲು ಸುರಿಯುತ್ತೆ ಅಷ್ಟಲ್ಲದೆ ನಮ್ಮ ಜಯಂತ ಕಾಯ್ಕಿಣಿಯವರು "ಓದಿನ ರುಚಿ ಪತ್ರೊಡೆ ಸವಿದಂತೆ" ಎಂದಿದ್ದಾರೆಯೆ. ಹೀಗೆ ರುಚಿ ರುಚಿಯಾಗಿದೆ ಎಂದು ಸ್ವಲ್ಪ ಜಾಸ್ತಿ ತಿಂದ ಲಕ್ಷ್ಮಣರಾಯರು ನಂತರ ಮಡದಿಗೆ ನಾಲಿಗೆ ಮಂದವಾಗ್ತಿದೆ ತುರಿಕೆ ಆಗುತ್ತಿದೆ. ಎಂದು ಹೇಳಿದಕ್ಕೆ ಸುಮ್ಮನ್ನಿದ್ದ ಅವರ ಶ್ರೀಮತಿ ರಾತ್ರಿ ಮಲಗುವ ಕೋಣೆಯಲ್ಲಿ ಸುಳ್ಳು ಹೇಳುವವರು ಪತ್ರೊಡೆ ತಿಂದರೆ ನಾಲಿಗೆ ತುರಿಸುತ್ತದೆ ಎಂದು ಹೇಳಿಯೆ ಬಿಟ್ಟರು. ಈಗಲಾದರೂ ಒಪ್ಪಿಕೊಳ್ಳಿ ತಿಪಟೂರಿನ ಹೊಟೇಲ್ ನಲ್ಲಿ ಸಿಕ್ಕಿದ ಶಕುಂತಲ ನಿಮ್ಮ ಕಾವ್ಯದ ಶಕುಂತಲೆನಾ? ಹೀಗೆ ಪತ್ರೊಡೆ ಸವಿಗೆ ಕನ್ನಡದ ಸಾರಸತ್ವ ಲೋಕ ಮಾರುಹೋಗಿದೆ.
ಪಂಜೆ,ಅಡಿಗರು,ದುಂಡಿರಾಜ್, ವೈದೇಹಿ, ಭುವನೇಶ್ವರಿ ಹೆಗಡೆಯವರೆಗೆ ಎಲ್ಲರು ಪತ್ರೊಡೆ ಸವಿಯನ್ನು ಸವಿದವರೆ. ಮಾತ್ರವೇಕೆ ಪತ್ರೊಡೆ ಸವಿದ ನಾಲ್ಕು ಕನ್ನಡ ಕವಿವರ್ಯರಿಗೆ ಜ್ಙಾನಪೀಠ ಪ್ರಶಸ್ತಿಯು ಬಂದಿದೆ ಎಂದು ಎಲ್ಲೋ ಓದಿದ ನೆನಪು ಅದು ಕುವೆಂಪು, ಕಾರಂತ,ಕಾರ್ನಾಡ್ ಮತ್ತು ಅನಂತಮೂರ್ತಿ ಇರಬಹುದೇನೋ. ಅದೇನೆ ಇರಲಿ ಕೃಷ್ಣ ಹುಟ್ಟಿದ ಕೂಡಲೆ ವಾಸುದೇವ ಅವನನ್ನು ರಾತ್ರೋ ರಾತ್ರಿ ಸೆರೆಮೆನೆಯಿಂದ ಹೊತ್ತೊಯ್ದು ಹೋಗುವಾಗ ಆ ನಟ್ಟಿರುಳಿನಲ್ಲಿ ಪ್ರಳಯ ಸದೃಶ್ಯ ಮಳೆ ಸುರಿಯುತ್ತದೆ ಆಗ ವಾಸುದೇವೆ ಮಗುವನ್ನು ಮಳೆಯಿಂದ ರಕ್ಷಿಸಲು , ಒಂದು ಮಗುವಿನ ಮೇಲೆ ಮತ್ತೊಂದು ಕೆಳಗೆ ಇಟ್ಟು ಮಗುವನ್ನು ರಕ್ಷಿಸಿದರು ಎಂಬ ನಂಬಿಕೆ ಆಗಗಿ ಗೋಕುಲಾಷ್ಟಮಿಯ ಮೂರು ದಿವಸ ಅದಕ್ಕೆ ಜಾತ ಶೌಚ ಹಾಗಾಗಿ ಆ ಸಮಯದಲ್ಲಿ ಅದನ್ನು ಪತ್ರೊಡೆಯೊಂದಿಗೆ ಸವಿಯುವುದಿಲ್ಲ ಆ ಸಮಯದಲ್ಲಿ ತಿಂದರೆ ತುರಿಕೆ ಇರುತ್ತದೆ,ಮತ್ತು ಕೃಷ್ಣನನ್ನು ಸುತ್ತಿದ ಎಲೆಯಾದರಿಂದ ಮಗುವಿನ ಮೈ ಎಣ್ಣೆ ಅದಕ್ಕೆ ತಾಕಿದರಿಂದ ಅದಕ್ಕೆ ನೀರು ತಾಗುವುದಿಲ್ಲ ಎಂಬ ಗಾಡವಾದ ನಂಬಿಕೆ ಮಲೆನಾಡಿನ ಜನರಲ್ಲಿ ಇದೆ. ಹಾಗಾಗಿ ಪತ್ರೊಡೆ ಮಾಡುವಾಗ ಆ ಎಲೆಯ ಬೆನ್ನಿನ ಭಾಗಕ್ಕೆ ಮಸಾಲೆ ಹಚ್ಚುವುದು ಸಮೇತ ಆ ಭಗವಾನ ಮೇಲಿನ ಗೌರವದಿಂದಲೇ ಇರಬೇಕು.
ನೀವು ಒಮ್ಮೆ ಈಗೆ ಮಾಡಿ ನೋಡಿ ಒಂದು ಪಾವು ಅಕ್ಕಿಗೆ ಅರ್ಧ ಹಿಡಿಯಷ್ಟು ಉದ್ದಿನ ಬೇಳೆ ಸೇರಿಸಿ ಬಾಣಲೆಯಲ್ಲಿ ಹುರಿದು ಅದನ್ನು ತಣ್ಣಗಾದ ಮೇಲೆ ನೀರಿನಲ್ಲಿ ನನೆಸಿಡಬೇಕು ಮೂರು ನಾಲ್ಕು ಗಂಟೆಯ ನಂತರ ಅದಕ್ಕೆ ಎರಡು ಚಮಚ ಜೀರಿಗೆ,ನಾಲ್ಕು ಚಮಚ ಕೊತ್ತಂಬರಿ ಬೀಜ,ಒಂದು ಚಮಚ ಅರಸಿನ ಪುಡಿ. ಸ್ವಲ್ಪ ಪುದಿನಾ, ಕೆಂಪು ಒಣ ಮೆನಸಿನಕಾಯಿ, ಲಿಂಬೆ ಗಾತ್ರದ ಹುಣುಸೆ ಹಣ್ಣು ಮತ್ತು ರುಚಿಗೆ ತಕ್ಕ ಉಪ್ಪು. ಇವಿಷ್ಟನ್ನು ನಮ್ಮ ಮನೆಯಲ್ಲಿರುವ ಅಡಿಮನೆ ಯಂತ್ರದಿಂದ ರುಬ್ಬಿ ತೀರಾ ನುಣ್ಣಗೆ ಬೇಡ, ನಂತರ ಪತ್ರೊಡೆ ಎಲೆಯನ್ನು ತೆಗೆದುಕೊಂಡು ಅದರ ಬೆನ್ನಿನ ಭಾಗಕ್ಕೆ ದೋಸೆಯಂತೆ ಹಚ್ಚಿ ನಂತರ ಇನ್ನೊಂದು ಎಲೆಯನ್ನು ಬೆನ್ನಿನ ಭಾಗದಿಂದ ಮುಚ್ಚಿ ಚಾಪೆ ಸುತ್ತಿದ ಹಾಗೆ ಸುತ್ತಿ ಇಂಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿ ಬೇಕು ಸ್ವಲ್ಪ ಹೊತ್ತಿನ ನಂತರ ಪತ್ರೊಡೆ ರೆಡಿ. ಸಿಹಿಯನ್ನು ಬಯಸುವವರು ಮಸಾಲೆ ಬದಲು ಸಿಹಿ ಬೆರೆಸ ಬಹುದು ಒಟ್ಟಿನಲ್ಲಿ ಮಳೆಗೆ ಖಾರವೆ ಚೆನ್ನಾಗಿರುವುದು ನೀವು ಮಾಡಿ ನೋಡಿ.
No comments:
Post a Comment