Tuesday, 2 August 2011

ಪೋಷಕರೆ, ಮಾನಗೇಡಿ ಲಜ್ಜೇಗೇಡಿ ಶಿಕ್ಷಕರು ನಿಮ್ಮೂರಿನ ಶಾಲೆಗಳಲ್ಲೂ ಇರಬಹುದು ಜೋಪಾನ....!

ಕೆ.ಎಸ್.ಧನಂಜಯ,ಮಡಿಕೇರಿ.



     ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ವಾಣಿ ಅರ್ಥ ಕಳೆದುಕೊಳ್ಳುತ್ತಿದೆ ಎಂದು ಈಗ ಅನಿಸಿದರೆ ಅದಕ್ಕೆ ಸಂಶಯ ಬೇಡ. ನೆನ್ನೆ ದಟ್ಸ್ ಕನ್ನಡ ಆನ್ ಲೈನ್ ಪತ್ರಿಕೆಯಲ್ಲಿ ಸಹ ಒಬ್ಬ ಶಿಕ್ಷಕ ವಿಧ್ಯಾರ್ಥಿಯ ಮೇಲೆ ಆತ್ಯಾಚಾರ ಎಸಗಿದನ್ನು ಓದಿದೆ, ಮಾತ್ರವಲ್ಲ ಇತ್ತೀಚೀನ ಕೆಲವು ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಗುರುವೆ ಸಹಕಾರ ನೀಡುವುದು ಈಗೆ ಹಲವಾರು ವಿಷಯಗಳನ್ನು ಗಮನಿಸಿದಾಗ ಎಂತಹ ಸಮಾಜಕ್ಕೆ ನಾವು ಮುನ್ನುಡಿ ಬರೆಯುತ್ತಿದ್ದೇವೆ, ವೈಜ್ಞಾನಿಕವಾಗಿ ಮುಂದುವರಿದಂತೆಲ್ಲ ಇಂತಹ ಪ್ರಕರಣಗಳು ವಿಪರೀತವಾಗುತ್ತಿವೆಯಾ? ಅದನ್ನು ಕೆಲವು ಮಾದ್ಯಮಗಳು ಮೇಲಿಂದ ಮೇಲೆ ಭಿತ್ತರಿಸುವ ಔಚಿತ್ಯವಾದರು ಏನು? ಇಂತಹ ನೀತಿಗೆಟ್ಟ ವೃತ್ತಿಯಲ್ಲಿ ತೊಡಗಿರುವ ಶಿಕ್ಷಕರಿಗೆ ಒಂದು ಅಮಾನತ್ತಿನ ಶಿಕ್ಷೆ ವಿಧಿಸಿ ಅವರು ರಿಪೇರಿಯಾಗಿದ್ದಾರೆ ಎಂದು ತಿಳಿದು ಅವರನ್ನು ಮತ್ತೆ ಅದೇ ಪವಿತ್ರವಾದ ಗುರುವಿನ ಸ್ಥಾನದಲ್ಲಿ  ನಿಲ್ಲಿಸಿದರೆ ಅವರ ಮೇಲೆ ಅಭಿಮಾನವಾಗಲಿ, ಗೌರವವಾಗಲಿ ಮೂಡುವುದಾದರು ಹೇಗೆ? ಅಂತವರು ಗುರು ಎನ್ನಲು ಯೋಗ್ಯವಾಗ್ತರಾ? 
     ರಾಷ್ಟ್ರಕವಿ ಕುವೆಂಪುರವರು ಹೇಳುತ್ತಾರೆ " ಅನ್ನ ಬಟ್ಟೆಯನ್ನು ಸಂಪಾದಿಸುವುದು ಮಾತ್ರ ವಿಧ್ಯೆಯ ಗುರಿಯಲ್ಲ, ಓರ್ವ ವ್ಯಕ್ತಿಯನ್ನು ಎಲ್ಲಾ ವಿಧದಲ್ಲಿಯು ಉಪಯುಕ್ತ ವ್ಯಕ್ತಿಯನ್ನಾಗಿ ಪರಿವರ್ತಿಸುವ ಹೊಣೆ ಕೂಡ ಶಿಕ್ಷಣದಾಗಿದೆ. ಇಂತಹ ಮಾತುಗಳಿಗೆ ಇಂತಹ ಗುರುಗಳು ಅರ್ಹವಾಗುತ್ತಾರ? ಇಂತಹ ಶಿಕ್ಷಕರಿಂದ ರಾಷ್ಟ್ರದ ಅಭ್ಯುದಯ ಸಾಧಿಸಬಲ್ಲ ಚೈತನ್ಯ ಹೊಂದಿರುವ ಪ್ರಜೆಗಳನ್ನು ತಯಾರು ಮಾಡುತ್ತಾರೆಯೆ? ಇಂತಹವರು ನೀಡುತ್ತರುವ ವಿದ್ಯೆಯಿಂದ ಉಡಾಪೆ,ಬೇಜವಾಬ್ದಾರಿ, ಅಹಂಕಾರ,ದುಷ್ಟ, ಸಂಕುಚಿತ ಪವೃತ್ತಿ ತುಂಬಿದ ವಿಧ್ಯಾರ್ಥಿ ಸಮೂಹ ನಿರ್ಮಾಣವಾಗುತ್ತದೆಯೆ ಹೊರತು ಉತ್ತಮ ಸಮಾಜವಲ್ಲ. ಇಂತಹ ಸಮೂಹ ನಿರ್ಮಿಸುವ ಶಿಕ್ಷಕರು ಗುರುವು ಅಲ್ಲ, ಅವರಿಂದ ಕಲಿತ ವಿಧ್ಯಾರ್ಥಿಗಳಿಗೆ ಗುರಿಯು ಇರುವುದಿಲ್ಲ.
     ಗೆಳೆಯರೆ ಎಂತಹ ನೀಚ ಶಿಕ್ಷಕರನ್ನು ಇಂತಹ ಶ್ರೇಷ್ಟ ಜಾಗದಲ್ಲಿ ಕಾಣುತ್ತಿದ್ದೇವೆ ಆಧುನಿಕ ಜಗತ್ತಿನಲ್ಲಿ ಸಮಾಜದ ಸರ್ವತೋಮುಖ ಪ್ರಗತಿಗೆ ಅನಿವಾರ್ಯವಾದ ಹಲವಾರು ಪರಿಕರಗಳಲ್ಲಿ ವಿಧ್ಯೆ ಅತ್ಯಂತ  ಪ್ರಮುಖವಾದದ್ದು. ಸಾರ್ವತ್ರಿಕವಾದ ಮೌಲ್ಯಾದರಿತವಾದ ಶಿಕ್ಷಣ ಅಂದಾಗ ಅಂತಹ ಶಿಕ್ಷಣವನ್ನು ನೀಡುವ ಹೊಣೆ ಹೊತ್ತಿರುವ ವ್ಯಕ್ತಿಗೆ ಮಾತ್ರ ಗುರು ಎನ್ನಲು ಸಾಧ್ಯ ಹೊರತು, ವಿದ್ಯಾರ್ಥಿಗಳ ಮೇಲೆ ಕಾಮ ದೃಷ್ಠಿ ಹಾಯಿಸುವ ಮಾನಗೇಡಿ ಮೇಷ್ಟ್ರುಗಳಿಗಲ್ಲ, ಬೋಧನೆ ಜೊತೆ ಯುವಕ ಯುವತಿಯರಲ್ಲಿ ವಿಚಾರ ಪರತೆ, ವೈಜ್ಞಾನಿಕ ಮನೋಭಾವ, ರಾಷ್ಟ್ರ ನಿಷ್ಟೆ ಮೂಡಿಸುವ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ವಿಧ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕರು ಬೇಕಾಗಿದ್ದಾರೆಯೇ ಹೊರತು ಮಾನಗೆಟ್ಟ ಮಯಾðದೆ ಬಿಟ್ಟ ಶಿಕ್ಷಕರಲ್ಲ. ಇವರುಗಳು ಗುರು ಎಂದು ಸಂಭೋದಿಸಲು ಯಾವ ಕೋನದಲ್ಲೂ ಅರ್ಹರಲ್ಲ.
     ಗುರುವಿನ ಕಾರ್ಯ ಒಂದು ವೃತ್ತಿಯಲ್ಲ ಅದೊಂದು ಧಾರ್ಮಿಕ ಕ್ರೀಯೆ " ಗುರು " ಎಂಬ ಶಬ್ದವು ಆತನಲ್ಲಿನ ಆಶಕ್ತಿ ಮತ್ತು ಆದರ್ಶವಾದಕ್ಕೆ ಹಿಡಿದ ಕನ್ನಡಿ, ಎಂದರೆ ಪ್ರಮಾಣಿಕತೆ, ಉತ್ಸಾಹ, ಸೇವಾ ಮನೋಭಾವದ ಪ್ರತೀಕ. ಖಚಿತವಾದ ಗುರಿಯೆಡೆ ದುಡಿಯಲು ಸ್ಫೂರ್ತಿದಾಯಕ ಕಣಜ. ಗುರುವಿನ ವೃತ್ತಿಗೆ ಬರಲು ನೂರೆಂಟು ಕಾರಣವಿರಲಿ, ತನ್ನ ವೃತ್ತಿಯಲ್ಲಿ ನಿರತವಾಗಿ ವಿಧ್ಯಾರ್ಥಿಗಳ ಪೋಷಕರ ಸಾರ್ವಜನಿಕರ ಪ್ರೀತಿಗೆ ಪಾತ್ರವಾಗುವಂತಹ ವಾತವರಣ ನಿಮಿðಸಿಕೊಂಡರೆ ಮಾತ್ರ ಆತ ಗುರು ಎನ್ನಲು ಸಾಧ್ಯ ದುರಂತ ಎಂದರೆ ಇಂತಹ ನೀಚ ಪ್ರವೃತ್ತಿಗೆ ಸಿಕ್ಕಿ ನಲುಗುತ್ತಿರುವವರು ನಮ್ಮ ಹಳ್ಳಿಯ ಬಡತನದಲ್ಲಿ ಬೆಳೆದು ಬಂದ ಮಕ್ಕಳು ಎಂಬುವುದು ಕೂಡ ನೋವಿನ ವಿಚಾರ. ಕೇವಲ ಸಂಬಳಕ್ಕಾಗಿ  ದುಡಿಯುವ ಶಿಕ್ಷಕರಿಗೇನು ಗೊತ್ತು ಕಸ್ತೂರಿಯ ಪರಿಮಳ. ಇಂತಹ ಮಾನಗೇಡಿ ಶಿಕ್ಷಕರು ಮಚ್ಚು ನೀಡಿ ಮರ ಮತ್ತು ನರ ಎರಡನ್ನು ಕಡಿ ಎಂದು ಬೋದಿಸುವವರೆ ಹೊರತು ಇಂತಹವರಿಂದ ಹೆಚ್ಚಿನದನ್ನು ಏನು ನಿರಿಕ್ಷೀಸ ಬಹುದು?
     ಇಂತಹ ಶಿಕ್ಷಕರ ಕೈಗೆ ಯುವ ಸಮುದಾಯವನ್ನು ಮಳೆ ನೀರೆಂದು ನೀಡಿದರೆ ಅದನ್ನು ಚರಂಡಿಗೆ ಹರಿಯ ಬಿಡುತ್ತಾರೆ, ಪರಿಣಾಮ ಸೊಳ್ಳೆಯ ಕಾರ್ಖಾನೆಯಾಗಿ ಮಲೇರಿಯದಿಂದ ಕೂಡಿದ ಸಮಾಜದ ಜನಕರಾಗುತ್ತಾರೆ ಹೊರತು ಅದನ್ನು ಪರಿಷ್ಕರಿಸಿ ಸಮಾಜಕ್ಕೆ ಕುಡಿಯುವ ನೀರನ್ನಾಗಿ ನಿರ್ಮಿಸಿ ಕೊಡುತ್ತಾರೆ ಎನ್ನುವುದು ಕೇವಲ ಕನಸು ಮಾತ್ರ. ಒಂದೆಡೆ ಒಳ್ಳೆಯ ಶಿಕ್ಷಕರಿಂದ ಉತ್ತಮ ಸಮಾಜದವು ನಿಮಾರ್ಣವಾಗುತ್ತಿದೆ ಮತ್ತೊಂದೆಡೆ ಲಜ್ಜೆಗೇಡಿ ಮಾನಗೇಡಿ ಶಿಕ್ಷಕರಿಂದ ರೋಗಗ್ರಸ್ತ ಸಮಾಜವು ಬೆಳೆಯುತ್ತಿರುವುದು ವಿಪರ್‍ಯಾಸ. ಇಂತಹದಕ್ಕೆ ಕಾನೂನಿನಲ್ಲಿ ಅಮಾನತ್ತು, ವೇತನ ತಡೆ ಹಿಡಿಯುವುದು ಹೆಚ್ಚೆಂದರೆ ಅಂತಹ ಗಂಭೀರ ಸಮಯದಲ್ಲಿ ವಜಾ. ಆದರೆ ಒಂದು ಶಾಲೆ ಎಂದ ಮೇಲೆ ಅದನ್ನು ಕೇಳುವ ಪೋಷಕರ ಪರಿಷತ್ತಿದೆ, ಸಾರ್ವಜನಿಕರಿದ್ದೇವೆ ನಾವೆಲ್ಲ ಒಂದಾಗದೆ ಹೋದರೆ ಪರೋಕ್ಷವಾಗಿ ಇಂತಹ ಕೆಟ್ಟ ಸಮಾಜಕ್ಕೆ ನಾವೇ ಕಾರಣರಾದರು ಆಶ್ಚರ್ಯವಿಲ್ಲ. ಶಾಲಾಭಿವೃದ್ದಿ ಸಮಿತಿಗೆ, ರಕ್ಷಣ ಇಲಾಖೆಯವರು,ನಿವೃತ್ತ ಸರ್ಕಾರಿ ನೌಕರರು, ಸಮಾಜದ ಗಣ್ಯ ವ್ಯಕ್ತಿಗಳು, ಮುಂತಾದ ಸಮಾಜ ಪರ ಕಾಳಜಿಯಿರುವ ಸಂಘಟನೆಗಳ ನೇತೃತ್ವ ಬೇಕಾಗಿದೆ. ಹಾಗಾಗಿ ತೀರ್ಮಾನ ನಮ್ಮ ಕೈಯಲ್ಲಿದೆ ನಮ್ಮ ಶಾಲೆ ನಮ್ಮೂರಿನ ಶಾಲೆಯಾಗ ಬೇಕಾಗಿದೆ ಎನಂತೀರಾ ?

No comments:

Post a Comment