ಕೆ.ಎಸ್ .ಧನಂಜಯ
ಜಲಜಾ ಶೇಖರ್ ರವರು ರಚಿಸಿರುವ ಕನ್ನಡಿಯ ಬಿಂಬ ಕೃತಿಯು ತನ್ನ ಅಂತರಂಗದ ಭಾವನೆಗಳನ್ನು ಮತ್ತು ಜೀವನೋತ್ಸವದ ಅತ್ಯುತ್ತಮ ಕ್ಷಣಗಳನ್ನು ಸೆರೆ ಹಿಡಿದಿದೆ. ಏಕೆಂದರೆ ಇಲ್ಲಿರುವ ಕವನಗಳನ್ನು ಗಮನಿಸಿದಾಗ ಒಬ್ಬ ಬರಹಗಾರ್ತಿಗೆ ಜೀವನ ಪ್ರೀತಿಯ ಜೊತೆಗೆ ಏಕಕಾಲದಲ್ಲಿ ಅಂತರಂಗದ ಅನಿಸಿಕೆ ಮತ್ತು ಓದುಗನಿಗೆ
ಕೊಡಬೇಕಾದ ಸತ್ಯ, ಸಂತೋಷವನ್ನು ಒಟ್ಟಾಗಿ ಹಿಡಿದಿಡುವುದು
ಸುಲಭದ ಮಾತಲ್ಲ ಅಂತಹ ಕವಿತೆಗಳು ಇಲ್ಲಿ ಅಪೂರ್ವವೆನಿಸುತ್ತದೆ.
ಬಾಲ್ಯ ಯವ್ವನ ಮತ್ತು ಮುಪ್ಪಿನ ನಡುವೆ ಇರುವ ದಿನಗಳು ಯಾವತ್ತೂ ಸ್ಮರಣೀಯ ಮತ್ತು ಅವು ನೆನಪುಗಳ ಮೂಲಕ ಸಂಜೀವಿನಿಗಳು ಇದ್ದಂತೆ. ಅಂತಹ ದಿನಗಳು ದಕ್ಕಿದಷ್ಟು ದಕ್ಕಿಸಿಕೊಂಡಷ್ಟು ಈ ಸಂಕಲನದಲ್ಲಿ ಇದೆ. ವಾಸ್ತವವಾಗಿ ಲೇಖಕಿ ನೇರ ನುಡಿಯ ವ್ಯಕ್ತಿತ್ವ ಬೆಳೆಸಿಕೊಂಡವರು, ವೃತ್ತಿಯಲ್ಲಿ ಶಿಕ್ಷಕಿಯಾಗಿ ಮಕ್ಳಳ ಒಡನಾಟ ಸಹಜವಾಗಿ ಒಡಲು ತುಂಬಿಸುವಷ್ಟು ಅನುಭವ ನೀಡಿದೆ ಎಂದು ಇಲ್ಲಿಯ ಕವನಗಳನ್ನು ಓದಿಕೊಂಡು ಹೋದಾಗ ಸಿಗುವ ಅನುಭವ. ಮಾತ್ರವಲ್ಲ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದ ರೀತಿಯೂ ಎದ್ದು ಕಾಣುತ್ತಿದೆ. ಲೇಖಕಿ ಪುಸ್ತಕವಾಗುತ್ತಿದೆ ಎನ್ನುವ ಡಂಬಾಚಾರಕ್ಕೆ ಕಟ್ಟು ಬಿದ್ದು ಯಾವುದನ್ನು ಮುಚ್ಚಿಡುವ ಪ್ರಯತ್ನ ಮಾಡಿದಂತೆ ಕಾಣುವುದಿಲ್ಲ ಅದಕ್ಕೆ ಇಲ್ಲಿ ಆಯ್ದುಕೊಂಡ ವಿಷಯಗಳನ್ನು ಗಮನಿಸಿದಾಗ ತಿಳಿದು ಬರುವ ಅಂಶ. ಬಿಡಿ
ಬಿಡಿಯ
ಮೂಲಕ ಇಡಿಯಾಗಿ ಕಟ್ಟಿ
ಕೊಡುವ
ಕೆಲಸ ಸೊಗಸಾಗಿ ಪೂರೈಸಿದ್ದಾರೆ.
ಅನುಭವ ಯಾವತ್ತೂ ತಮ್ಮೊಬ್ಬರ ಸ್ವತ್ತಾಗಬಾರದು ಅದು ಸಮಾಜಕ್ಕೆ ರವಾನೆಯಾಗುವುದರ ಮೂಲಕ ಜನರನ್ನು ಚಿಂತನೆಗೆ ಒಳಪಡಿಸಬೇಕು ಎನ್ನುವ ಸಂದೇಶ ಈ ಕವನ ಸಂಕಲನ ಮೂಲಕ ಎದ್ದು ಕಾಣುವ ಅಂಶ. ಸಮಗ್ರವಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರದ ಹಿಂದಿನ ಪೀಳಿಗೆಗೆ ಒಪ್ಪಿಗೆ ಆಗುವಂತೆ ಇಲ್ಲಿಯ ಬರಹಗಳು ಮೂಡಿಬಂದಿದೆ. ಹಲವು ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿರುವ ಜೊತೆಗೆ ಕೆಲವು ಕವಿತೆಗಳು ಅಂತರಂಗ ಮತ್ತು ಬಹಿರಂಗ ಕೆಡುಕುಗಳ ವಿರುದ್ಧ ಸಮಾಜದಲ್ಲಿನ ಅಂಕುಡೊಂಕುಗಳು ಪ್ರಚಲಿತ ವಿದ್ಯಮಾನ ಹೀಗೆ ಹಲವಾರು ವಿಷಯಗಳ ಬಗ್ಗೆ ಕನ್ನಡಿ ಹಿಡಿದಂತಿದೆ.
No comments:
Post a Comment