Thursday, 8 January 2026

 ಸಾಹಿತಿ, ಚಿಂತಕ , ಶ್ರೀ ಅರವಿಂದ ಚೊಕ್ಕಾಡಿಯವರ   

                         ಈ ದಿನ ಪುಸ್ತಕಕ್ಕೆ ಬರೆದ ಮುನ್ನುಡಿ

ಕೆ.ಎಸ್‌.ಧನಂಜಯ.

  
            
           ಮುಂಜಾನೆ ನನ್ನ ಹಾಗೆ ಎಲ್ಲಾರೂ ಮೊಬೈಲ್‌ ನೊಡುವುದು ಇಂದಿನ ದಿನಗಳಲ್ಲಿ ಸರ್ವೆ ಸಾಮನ್ಯ, ಒಂದು ಸಂದೇಶ ಬಹಳ ವಿಶೇಷವಾಗಿ ಕಾಣಿಸಿತ್ತು. ನಾನು ನಿಮ್ಮ ಬಳಿ ಪುಸ್ತಕಕ್ಕೆ ಒಂದು ಮುನ್ನುಡಿ ಕೇಳಿದ್ದೆ , ನಾನು ಆಷ್ಟೇ ನಯವಾಗಿ ನುಣುಚಿಕೊಳ್ಳುವ ಎಂದು ನೆನೆಸಿ “ ಸರ್‌ ನನಗೆ ಮುನ್ನುಡಿ ಎಲ್ಲಾ ಬರೆಯಲು ಆಗಲ್ಲಎಂದೆ , ಮತ್ತೊಂದು ಸಂದೇಶ ಬಂತು  ನಿಮ್ಮಿಂದ ಆಗುತ್ತದೆ ನೀವು ಬರೆಯಿರಿ. ಇದು ಪಕ್ಕಾ ಗುರುಗಳ ಆದೇಶದ ಶೈಲಿ ನಾನು ಮೌನವಾದೆ. ಹೌದು "ಈ ದಿನ" ಬಹಳಷ್ಟು ಜನರಿಗೆ ಹೇಗೆ ಬದುಕಬೇಕು ಎನ್ನುವ ರಾಮಾಯಣ ತಾಯಿಯಾದರೆ, ಹೇಗೆ ಬದುಕಬಾರದು ಎನ್ನುವ ಮಹಾಭಾರತ ತಂದೆಯಾಗಬೇಕು. ಆ ಮೂಲಕ ಒಳ್ಳೆಯ ಸಂಸ್ಕಾರ ಕಲಿಸುವ ಅಗತ್ಯ ಈ ದಿನದ ಪ್ರಸ್ತುತತೆ. 
        ಒಟ್ಟು 43 ಲೇಖನಗಳ ಕೃತಿಯಲ್ಲಿ ಶಿಕ್ಷಣ, ಕೃಷಿ, ರಾಜಕೀಯ, ಆರ್ಥಿಕತೆ, ಸಾಹಿತ್ಯದ ವಿಷಯಗಳ ಜೊತೆಗೆ ಗಾಂಧಿ ವಿಚಾರಧಾರೆಯನ್ನು ವಿಶ್ಲೇಸಿಸುವ ಮೂಲಕ ಬೆಳಕು ಚೆಲ್ಲುವ ಪ್ರಯತ್ನವನ್ನು ಅರವಿಂದ ಸರ್ ಮಾಡಿದ್ದಾರೆ ಮಾತ್ರವಲ್ಲ ಅವರ ಅನುಭವಕ್ಕೆ ಕೈಗನ್ನಡಿಯಂತೆ ಕೃತಿ ಹೊರಹೊಮ್ಮಿದೆ. ನಿಜ, ಮನುಷ್ಯ ಅಂತರಂಗದ  ಕೆಡುಕುಗಳ ವಿರುದ್ದ ಸಂಘರ್ಷಕ್ಕಿಳಿದು ಒಳಿತನ್ನು ಸಾಧಿಸಬೇಕು ಅದು ಧರ್ಮಕ್ಕೆ ಪೂರಕ, ಅದು ಹೊರಗಿನ ವಿಚಾರಕ್ಕೆ ಬಳಸಿದರೆ ಅದು ಮಾರಕ ಎನ್ನುವ ಮೂಲಕ ಜಿಹಾದ್‌ನ ಅರ್ಥ, ಸಮಾನ ನಾಗರಿಕ ಸಂಹಿತೆ ಎನ್ನುವುದು ಸಮಾನ ಧಾರ್ಮಿಕ ಸಂಹಿತೆಯಲ್ಲ, ಭಾಗ್ಯಗಳೊಂದಿಗೆ ಸಲ್ಲಾಪ, ಆದರ್ಶಗಳಿಲ್ಲದ ಸಮಾಜದಲ್ಲಿ ನಾಯಕತ್ವದ ಸವಾಲುಗಳು, ಮಕ್ಕಳಲ್ಲಿ ಉಳಿಸಿಕೊಳ್ಳಬೇಕಾದ ಶೈಕ್ಷಣಿಕ ಪ್ರಜ್ಞೆ ಎನ್ನುವುದುದರೊಂದಿಗೆ ಲೇಖಕರು ಹತ್ತು ಹಲವಾರು ಪ್ರಚಲಿತ ವಿದ್ಯಾಮಾನಳ ಬಗ್ಗೆ ಚರ್ಚೆ ನಡೆಸಿದ್ದಾರೆ.  ಜೊತೆಗೆ ಹೆಚ್ಚು ಶೈಕ್ಷಣಿಕ ಕ್ಷೇತ್ರದ  ವಿಷಯಗಳ ಬಗ್ಗೆ ಪ್ರಸ್ತಾಪಮಾಡಿರುವುದು ಒಳ್ಳೆಯ ಬೆಳವಣಿಗೆ. ಏಕೆಂದರೆ ಯಾವುದೇ ಒಂದು ಉತ್ತಮ ವಿಷಯಗಳನ್ನು ವಿಧ್ಯಾರ್ಥಿಗಳ ಮನಸಿನಲ್ಲಿ ಭಿತ್ತಿದರೆ ಅದಕ್ಕಿಂತ ಒಳ್ಳೇಯ ಕಾರ್ಯ ಮತ್ತೊಂದಿಲ್ಲ. ಸಂಗ್ರಹಿಸಿದ ನೀರು ಮಲೀನವಾಗಿದ್ದರೆ ಆ ನೀರನ್ನು ಶುದ್ದ ನೀರಿನೊಂದಿಗೆ ಬಿಟ್ಟರೆ ಅದು ಕೂಡ ಮಲೀನವಾಗುತ್ತದೆ. ಶಿಕ್ಷಣ ಸಂಸ್ಥೆಗಳು ಅಂತಹ ಶುದ್ದ ನೀರನ್ನು ಉತ್ಪಾದಿಸುವ ಘಟಕಗಳಾದರೆ ಮಾತ್ರ ಉತ್ತಮ ಸಮಾಜದ ನಿರೀಕ್ಷೆ ಸಾಧ್ಯ.  ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ತಳ ಮಟ್ಟದಲ್ಲಿ ವ್ಯವಸ್ಥೆಯನ್ನು ಸರಿಪಡಿಸುವ ಅನಿವಾರ್ಯತೆ ಪ್ರಸ್ತುತ ಸಮಾಜಕ್ಕೆ ಇದೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ ಇದು ಈ ದಿನದ ಅನಿವ್ಯಾರ್ಯತೆಯೂ ಹೌದು.  

        ನಿಜ, ಲೇಖಕರೇ ಹೇಳಿದಂತೆ ಸುಧಾರಣೆಯಾಗಬೇಕಾಗಿರುವುದು ಜನರು ಮತ್ತು ಸಮಾಜ. ಜನರು ಹೆಚ್ಚು ಹೆಚ್ಚು ಇತಿಹಾಸವನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ.  ಇತಿಹಾಸದ ಅರಿವಿಲ್ಲದೆ ಭವಿ಼ಷ್ಯವನ್ನು ಕಟ್ಟಲು ಸಾಧ್ಯವಿಲ್ಲ ಎನ್ನುವ  ಅಂಬೇಡ್ಕರ್‌ ವಾಣಿಯನ್ನು ಸಮರ್ಥವಾಗಿ ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ, ಆ ಮೂಲಕ ಯುವ ಸಮುದಾಯವನ್ನು ಚಿಂತನೆಗೆ ದೂಡುವ ಅವರ ಪ್ರಯತ್ನ ಹಲವಾರು ಲೇಖನಗಳಲ್ಲಿ ಎದ್ದು ಕಾಣುವ ಅಂಶವಾಗಿದೆ, ಸ್ವಾಭಾವಿಕವಾಗಿ ಅರವಿಂದ ಸರ್‌ ಅವರದು ಚರ್ಚೆಗೆ ಆಹ್ವಾನಿಸುವ ಸ್ವಭಾವ. ಅದಕ್ಕಾಗಿ ಅವರು ಪ್ರಚಲಿತ ವಿದ್ಯಾಮಾನಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ, ಆ ಮೂಲಕ ಈ ಜಡ್ಡು ಕಟ್ಟಿದ ಸಮಾಜಕ್ಕೆ ಅವರದೆ ಆದ ರೀತಿಯಲ್ಲಿ ಚಿಕಿತ್ಸೆಯನ್ನು ಕೊಡುವ ಕೆಲಸವನ್ನು ಯತ್ತೇಚ್ಚವಾಗಿ ಮಾಡುತ್ತಿರುವುದು ಅವರ ಮುಖ ಪುಸ್ತಕ ಗೆಳೆಯರಾದ ನನ್ನಂತೆ ಹಲವರಿಗೆ ಗೊತ್ತಿರುವ ವಿಷಯವೇ.
  ಚರಕ-ಬಟ್ಟೆ, ಬ್ರಿಟನ್‌ ಆರ್ಥಿಕತೆಗೆ ಪೆಟ್ಟು ಕೊಟ್ಟ ಪರಿಣಾಮ ಬ್ರಿಟೀಷರು ದೇಶ ಬಿಟ್ಟು ಹೋದರೇನೋ ಸರಿ, ಎಲ್ಲಾದಕ್ಕೂ ಮಿಗಿಲಾಗಿ ಒಂದು ಕಂದಕವನ್ನು ನಿರ್ಮಿಸಿ ಹೋದರು ಅದು ಇಂದಿಗೂ ಜೀವಂತವಾಗಿದೆ ವಾಸ್ತವವಾಗಿ ಅದು ಯಾರಿಗೂ ಬೇಡ, ಆ ಕಂದಕ ಜೀವಂತವಾಗಿದ್ದರೆ ಮಾತ್ರ ನಮ್ಮ ಕೆಲಸಗಳು ಸಲೀಸು ಎನ್ನುವ ಕಲ್ಪನೆ ಕೆಲವು ವ್ಯಕ್ತಿಗಳ ಮದ್ಯೆ  ಇನ್ನೂ ಗಾಢವಾಗಿದೆ. ಏಕೆಂದರೆ ಬೇಡದ ವಿಷಯಗಳು ಸುಲಭವಾಗಿ ಅರ್ಥವಾಗುವ ಹಾಗೆ ಮುದ್ರ ಯೋಜನೆ ಅರ್ಥವಾಗೋಲ್ಲ. ಲೇಖಕರಿಗೆ ಬ್ಯಾರಿಗಳೊಂದಿಗೆ ಸಾಕಷ್ಟು ಒಡನಾಟ ಇದೆ ಎನ್ನುವುದು ಅವರ ಬರಹದ ಮೂಲಕ ಅರ್ಥವಾದರೂ ಅವರ ಪರವಾಗಿ ಮಾತನಾಡಿ, ಅವರಿಗೆ ಇಷ್ಟವಾಗಿ ಮಾತನಾಡಿ  ಆಗಬೇಕಾದ ಲಾಭವೇನು ಇಲ್ಲ ಎನ್ನುವ ಲೇಖಕರ ನಿಲುವು ಪ್ರಶಂಸನೀಯ. ಎಲ್ಲಿದೆ ನಂದನ ? ಎಲ್ಲಿದೆ ಬಂಧನ ? ಎಲ್ಲಾವೂ ನಮ್ಮೊಳಗೆ ಇದೆ ಆದರೆ ಒಳಗಿನ ತಿಳಿಯನು ಕಲಕದೆ ಇದ್ದರೆ ಮಾತ್ರ ಅಮೃತದ ಸವಿಯಿರುವುದು  ಎನ್ನುವ ಕವಿವಾಣಿಯಂತೆ ಲೇಖಕನಾದವನು ಯಾರ ಮುಲಾಜಿಗೂ ಬರೆಯುವ ಪರಿಪಾಠವನ್ನು ಬೆಳೆಸಿಕೊಳ್ಳಬಾರದು ಅದರಿಂದ ಸಮಾಜಕ್ಕೆ ದಕ್ಕುವ ಲಾಭವಾದರೂ ಏನು ? ಅಡೆ ತಡೆಗಳು ಪ್ರತಿ ಕೆಲಸದಲ್ಲೂ ಬಂದೇ ಬರುತ್ತದೆ, ನಿಜ ಹೇಳಬೇಕೆಂದರೆ ಅಡೆತಡೆಗಳು ನಮ್ಮನ್ನು ಹೊರದಬ್ಬುವಂತೆ ಕಂಡರೂ ಅದು ವಾಸ್ತವವಾಗಿ ಹೊರದಬ್ಬಲು ಇರುವುದಿಲ್ಲ, ಬದಲಾಗಿ ಅವುಗಳನ್ನು ದಾಟಿ ಮುನ್ನುಗ್ಗಲು ನಮಗೆ ಅವಕಾಶ ನೀಡುವುದಕ್ಕಾಗಿರುತ್ತದೆ ಸೂಕ್ತ ಸಮಯಕ್ಕಾಗಿ ನಾವು ಸಂಯಮದಿಂದ ಕಾಯಬೇಕು ಅಷ್ಟೇ.
        ಲೇಖಕರು  ಸಾಮಾಜಿಕ , ಶಿಕ್ಷಣ ಗಾಂಧಿ ವಿಚಾರಧಾರೆ ಬಗ್ಗೆ  ಮಾತ್ರ ಮಾತನಾಡಿಲ್ಲ. ಐದನೆ ಆಧ್ಯಾಯದಲ್ಲಿ ಗುರು ನಮನ ಲೇಖನದಲ್ಲಿ ತನ್ನ ಸ್ವಂತ ಬದುಕು ಪಟ್ಟ ಪಾಡು ಕುರಿತು ಆತ್ಮಾವಲೋಕನದ ಒಳನೋಟ ನೀಡಿರುವುದು ವಿಶಿಷ್ಟವಾಗಿ ತೋರುತ್ತದೆ. ಲೇಖಕರು ತನ್ನ ಅಮ್ಮ, ಗುರುಗಳ ಬಗ್ಗೆ ಪ್ರಸ್ತಾಪಿಸುವಾಗ ನನಗೆ ಸಹಜವಾಗಿ ಕಣ್ಣಾಲಿಗಳು ಒದ್ದೆಯಾಯಿತು. ಆದರೆ ನಾನು ಸೋತೆ ನನ್ನಿಂದ ಏನು ಆಗಲ್ಲ ಎಂದು ಕುಳಿತ್ತಿದ್ದರೆ ಅವರೊಳಗಿನ ಒಬ್ಬ ಸಹೃದಯ ಹಾಗೂ ಒಬ್ಬ ಛಲವಂತ ಮನುಷ್ಯ, ಬರಹಗಾರ ಸತ್ತು ಹೋಗುತ್ತಿದ್ದನೋ ಎನೋ. ತಾವನುಭವಿಸಿದ ತಳಮಳ ನೋವು ಆತಂಕದ ಜೊತೆಗೆ ಅವರ ಜೀವನೋತ್ಸಾಹ ಮಾತ್ರ ಅದ್ಬುತ ಮಾತ್ರವಲ್ಲ ಅನುಕರಣೀಯ ಕೂಡ. ಎರಡು ತರಹದ ಅನುಭವಗಳು ಒಬ್ಬ ಓದುಗನಾಗಿ ನನಗೆ ಅನುಭವಕ್ಕೆ ಬಂದರೂ ಎಲ್ಲೋ ಒಂದು ಕಡೆ ಬೇಂದ್ರೆಯವರ ಸಾಲುಗಳು ನೆನಪಾಯಿತು "ಎನ್ನ ಪಾಡೆನಗಿರಲಿ,ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ .ಲೇಖಕರು ಕೂಡ ಈ ನಿಯಮವನ್ನು ಈ ಕೃತಿಯಲ್ಲಿ ಗಂಭೀರವಾಗಿ ಪಾಲಿಸಿದಂತೆ ಇದೆ. ಮನುಷ್ಯ ಜೀವನ ರಹಸ್ಯದ ಸತ್ವಕ್ಕೆ ಶರಣಾಗಬೇಕು ಜೀವನವನ್ನು ಸಮವೆನಿಸುವ ಯತ್ನಕ್ಕೆ ಶರಣಾಗಿಸಿ ಬದುಕಬೇಕು. ಕೇವಲ ಖಗ-ಮಿಗಗಳಂತೆ ಹೊಟ್ಟೆಪಾಡನ್ನು ಮಾತ್ರ ನಾವುಗಳು  ನೋಡಿಕೊಂಡರೆ ಸಮಾಜಕ್ಕೆ ನಮ್ಮ ಹೆಚ್ಚುಗಾರಿಕೆ ಏನೂ ಇಲ್ಲ.
    ಸಾಮಾಜಿಕ ಜಾಲತಾಣದಲ್ಲಿ ತಲೆ ಬಗ್ಗಿಸಿ ಮಗ್ನವಾಗಿರುವ ಇಂದಿನ ಯುವಜನತೆಗೆ ಈ ದಿನದಲ್ಲಿರುವ ಲೇಖನಗಳು ಈ ದಿನದ ದೈನಂದಿನ ಆಗು-ಹೋಗುಗಳು ತಲೆ ಎತ್ತಿ ನೋಡುವಂತೆ  ಓದುಗರ ಕಣ್ತೆರಸಲಿ, ಅರವಿಂದ ಸರ್‌ ನಿಮ್ಮಿಂದ ಇನ್ನು ಹೆಚ್ಚು ಕೃತಿಗಳು ಹೊರಹೊಮ್ಮುವ ಮೂಲಕ ಪ್ರಸ್ತುತ ಸಮಾಜಕ್ಕೆ ಮುಂದಿನ ದಾರಿ ದೀಪವಾಗಿ ಕಂಗೊಳಿಸಲಿ ಎಂದು ಹಾರೈಸುವೆ.

17.10.2023                      

No comments:

Post a Comment