ಶ್ರದ್ದಾಂಜಲಿ...ಶ್ರೀನಿವಾಸನ್
ಸಿನಿಮಾಗಳಲ್ಲಿ ನಟಿಸಿದ್ದರೂ ಬದುಕು ಸಾಗಿಸಲು ಹಣವಿಲ್ಲದ ಒಬ್ಬ ಯುವಕ. ಆತನಿಗೆ ಒಬ್ಬಳು ಪ್ರೇಯಸಿ ಆದರೆ ಪ್ರೀತಿಯನ್ನು ಪೋಷಿಸಲು ಆರ್ಥಿಕ ಶಕ್ತಿ ಇರಲಿಲ್ಲ.ಅಂತಹ ಸಂಕಷ್ಟದ ಹೊತ್ತಲ್ಲಿಒಬ್ಬ ಕ್ರೈಸ್ತ ( ಇತ್ತೀಚೆಗೆ ಕ್ಯಾನ್ಸರ್‌ನಿಂದ ನಿಧನ ಹೊಂದಿದ ಇನೋಸಿಯಂಟ್ )ತನ್ನ ಹೆಂಡತಿಯ ಕೈ ಬಳೆಯನ್ನು ಗಿರವಿ ಅಂಗಡಿಯಲ್ಲಿಟ್ಟು ಅದರಲ್ಲಿ ಬಂದ ಹಣ 400 ರೂಪಾಯಿ ನೀಡಿದ, ಮತ್ತೊಬ್ಬ ಮುಸ್ಲಿಂ (ಮೇರು ನಟ ಮಮ್ಮೂಟ್ಟಿ) “ನಾಳೆ ನನ್ನ ಮದುವೆ ನನಗೆ 2000 ಹಣದ ಅವಶ್ಯಕತೆ ಇದೆ ಎಂದಾಗ 2000 ಕೊಟ್ಟು, ನಾನು ಮದುವೆಗೆ ಬರುತ್ತೇನೆ ಎಂದಾಗ ನೀವ್ಯಾರು ಬರುವುದು ಬೇಡ ಎಂದು ಸಂಭಂದಿಕರ ಮನೆಗೆಲ್ಲ ಆಟೋ ಮಾಡಿಕೊಂಡು ನಾಳೆ ನನ್ನ ಮದುವೆ ಆದರೆ ನೀವ್ಯಾರು ಬರುವುದು ಬೇಡ ಅಂತ ಹೇಳೊಕೆ ಬಂದೆ ಎಂದು ಹೇಳಿದ, ಆ ಮೇರು ನಟ ಬೇರೆ ಯಾರು ಅಲ್ಲ ಮಲಯಾಳಂ ಚಿತ್ರರಂಗ ಕಂಡ ನಟ,ನಿರ್ದೇಶಕ, ನಿರ್ಮಾಪಕ, ಕಥೆಗಾರ ಶ್ರೀನಿವಾಸನ್. ಆ ಹಣದಲ್ಲಿ ಒಬ್ಬ ಹಿಂದು ಹುಡುಗಿಗೆ ತಾಳಿ ಕಟ್ಟಲಾಯಿತು. ರಿಜಿಸ್ಟರ್ ಆಫೀಸ್ ಆವರಣದಲ್ಲಿ, ಸದ್ದಿಲ್ಲದೆ, ಸಂಭ್ರಮವಿಲ್ಲದೆ ಆದರೆ ಮಾನವೀಯತೆಯಿಂದ ತುಂಬಿದ ಮದುವೆ ನಡೆಯಿತು.
ಇಲ್ಲಿ ಪ್ರಶ್ನೆ ಏನು ಗೊತ್ತಾ?
ಯಾವ ಧರ್ಮ? ಯಾರ ಧರ್ಮ? ಯಾವ ಜಾತಿ? ಯಾವ ಮತ? ಅಲ್ಲಿ ಇದ್ದದ್ದು ಒಂದೇ ಒಂದು ಧರ್ಮ ಅದು ಮಾನವ ಧರ್ಮ, ಧರ್ಮಗಳು ಗೋಡೆಯಲ್ಲ ಸೇತುವೆಗಳಾಗಬೇಕು. ಜಾತಿ ಗುರುತಾಗಬಾರದು, ಗುಣ ಗುರುತಾಗಬೇಕು ಮತಗಳು ಮತಾಂತರಕ್ಕೆ ಅಲ್ಲ, ಹೊಸ ಮನ್ವಂತರಕ್ಕೆ ಕಾರಣವಾಗಬೇಕು. ಹಸಿದವನಿಗೆ ಊಟ ಕೊಟ್ಟ ಕೈ ಅದು ಯಾವ ಧರ್ಮದು ಎನ್ನುವುದಕ್ಕಿಂತ, ಅದು ಮನುಷ್ಯನ ಕೈ ಎನ್ನುವುದೇ ಮುಖ್ಯ. ಕಣ್ಣೀರು ಒರೆಸುವ ಹೃದಯ ಅದು ಯಾವ ದೇವರನ್ನು ಪೂಜಿಸುತ್ತದೆ ಎನ್ನುವುದಕ್ಕಿಂತ, ಅದು ಮನುಷ್ಯತ್ವವನ್ನು ನಂಬುತ್ತದೆ ಎನ್ನುವುದೇ ಸಾಕು.
ಕಡೆಯದಾಗಿ ಜಾತಿ, ಮತ, ಧರ್ಮದ ಹೆಸರಿನಲ್ಲಿ ಕಚ್ಚಾಡುವವರಿಗೆ ಒಂದು ಪ್ರಶ್ನೆ:
“ನಿಮ್ಮ ಧರ್ಮ ಮನುಷ್ಯನಾಗಿ ನಡೆದುಕೊಳ್ಳಲು ಕಲಿಸದಿದ್ದರೆ ,ಅದನ್ನು ನೀವು ನಿಜವಾಗಿಯೂ ಪಾಲಿಸುತ್ತಿದ್ದೀರಾ?”ಎಲ್ಲ ಧರ್ಮಗಳಿಗೂ ಗೌರವ ಇರಲಿ,ಆದರೆ ಮಾನವೀಯತೆಗೆ ಮೊದಲ ಸ್ಥಾನ ಇರಲಿ.ಯಾಕೆಂದರೆ ಧರ್ಮ ಮನುಷ್ಯನಿಗಾಗಿ,ಮನುಷ್ಯ ಧರ್ಮಕ್ಕಾಗಿ ಅಲ್ಲ.
No comments:
Post a Comment