Sunday, 7 August 2011

ಕಾಣದ ಗೆಳೆತನಕ್ಕೆ ಹಂಬಲಿಸಿದೇ ಮನ.............

ಕೆ.ಎಸ್.ಧನಂಜಯ,ಮಡಿಕೇರಿ


    ಗೆಳೆಯರೆ ಏಕಲವ್ಯ ಮಹಾಭಾರತ  ಕಥೆಯಲ್ಲಿ ಬರುವ ಒಬ್ಬ ಬಿಲ್ಲು ವಿದ್ಯೆ ಪ್ರವೀಣ. ವ್ಯಕ್ತಿ ಕಾಡಿದರು ಬೇಡಿದರು ಅಂಗಲಾಚಿ ಬೇಡಿದರು ದ್ರೋಣಚಾರ್ಯರು ಗುರುವಾಗಿ ಏಕಲವ್ಯನಿಗೆ ಸಿಗಲಿಲ್ಲ. ಆದರೆ ಗುರುವಾಗಿ ಅವರನ್ನೆ ಸ್ವೀಕರಿಸುವ ನಿರ್ಧಾರದಿಂದ ಸ್ವತಃ ಏಕಲವ್ಯ ಹೊರ ಬರಲಿಲ್ಲ.  ಏಕಾಗ್ರತೆಯಲ್ಲಿ ಅವನಿಗೆ ತೆರೆಯಾಗಿ ಕೆಲಸ ಮಾಡಿದು  ಆ ಗುರುವಿನ ಮೂರ್ತಿ.( ಹೇಗೆ ಪ್ರಕೃತಿ ಮತ್ತು ಮನುಷ್ಯನ ಮಧ್ಯೆ ಒಂದು ಸೂಕ್ಷ್ಮವಾದ ತೆರೆ ಎಂಬುವುದು  ದೇವರೆಂದು ಪಂಡಿತರು ಕರೆಯುತ್ತಾರೆಯೋ ಹಾಗೇ) ಮನುಷ್ಯನ ಆಂತರಿಕ ಮತ್ತು ಬಾಹ್ಯ ಸಂಭಂದದ ಕೊಂಡಿಯೆ ಗೆಳೆತನ. ಮನುಷ್ಯನ ಜೀವನದ ಅಮೂಲ್ಯ ವಸ್ತು. ಸ್ನೇಹ ಸ್ನೇಹಿತನಿಲ್ಲದ ವ್ಯಕ್ತಿ ಸಂತೆಯಲ್ಲಿಯೂ ಏಕಾಂಗಿ ಎನ್ನುವುದು ಪಾಟೀಲ್ ಪುಟ್ಟಪ್ಪನವರ ನುಡಿ.
     ಗೆಳೆತನಕ್ಕೆ ನಂಬಿಕೆ ಎನ್ನುವುದು ಬಲು ಮುಖ್ಯ ತನ್ನ ತನವನ್ನು, ತನ್ನ ಬದುಕಿನ ಅಮೂಲ್ಯ ಚಿಂತನೆಗಳನ್ನು , ಆಚಾರ ವಿಚಾರಗಳನ್ನು ಇನ್ನೊಬ್ಬ ವ್ಯಕ್ತಿಯ ಆಚಾರ ವಿಚಾರದೊಂದಿಗೆ ಬೆರೆಸಿ ಪರಸ್ಪರ  ಸರಿ ಮತ್ತು ತಪ್ಪುಗಳನ್ನು ವಿಮರ್ಶಿಸಿ ಸರಿಯಾದದ್ದನ್ನು ಅಳವಡಿಸಿ ಕೋಳ್ಳುವುದು ಗೆಳೆತನ. ಇದು ಪರಸ್ಪರ ವ್ಯಕ್ತಿ ಮತ್ತು ವ್ಯಕ್ತಿತ್ವದ ಮಧ್ಯೆ ಇರುವ ಸಂಭಂದದ ಸೇತುವೆ.  ಈ ಸೇತುವೆ ಮೇಲೆ ಮನುಸ್ಸು ಮತ್ತು ಮನುಷ್ಯರ ಆಭಿಯಾನ. ಈ ಆಭಿಯಾನ ಅಗೋಚರ ವಿಶ್ಮಯ ಮತ್ತು ಆಹ್ಲಾದಕ, ಮನುಷ್ಯ ಸಂಘಜೀವಿಯಾಗಿ ಬೆಳವಣಿಗೆ ಕಾಣಲು ಇರುವ ಏಕಮಾತ್ರ ದಾರಿ.  ಗೆಳೆಯ FRIEND ಈ ಪದದ ಮೊದಲ ಮೂರು ಅಕ್ಷರ ಬಾಹ್ಯ ಸಂಭಂದದೊಂದಿಗೆ ಹೆಚ್ಚು ಪ್ರಚಲಿತವಾದರೆ, ಎಂದರೆ ಗುರು,ಗುರುಗಳು ಸಮಾಜದಲ್ಲಿ ನಾವು ಪ್ರತೀಸುವ ಹಿರಿಯ ವ್ಯಕ್ತಿಗಳು. ಒಟ್ಟಿನಲ್ಲಿ ರಕ್ತ ಸಂಭಂದವನ್ನು ಹೊರತುಪಡಿಸಿ ಎನ್ನಬಹುದು, END ಇದು ಬದುಕಿನಲ್ಲಿ ತಂದೆ ತಾಯಿ ಸಂಭಂದ ಹೆಂಡತಿ ಮಕ್ಕಳ ಸಂಭಂದದೊಂದಿಗೆ END ಆಗುತ್ತದೆ. FAITH(ನಂಬಿಕೆ), REAL ನೈಜತೆ, INTIMATE ಪರಸ್ಪರ ವಿಷಯಗಳನ್ನು ಅರಿತುಕೊಳ್ಳುವುದು ಬದುಕಿನ ದೈನಂದಿನ ಆಗು-ಹೋಗುಗಳ ಬಗ್ಗೆ ಚರ್ಚಿಸುವುದು,ಇದು ಬಾಹ್ಯ ಸಂಭಂದದೊಂದಿಗೆ ಬೆರೆತುಕೊಂಡಿರುವ ಸಂಭಂದ. ಆದರೆ EARNEST ಮಾತು ಕೇಳುವುದು ,NEAREST ಹತ್ತಿರವಾಗುವುದು, DEAREST ಪ್ರೀತೀಯವನಾಗಿರುವುದು. ( ಕೆಲವರು ಹತ್ತಿರವಿದ್ದರು ದೂರವೇ ನಿಲ್ಲುತ್ತಾರೆ ಅದು ತಮ್ಮ ಹಮ್ಮವಿನ ಪ್ರದರ್ಶನವಲ್ಲದೆ ಬೇರೆ ಏನು ಅಲ್ಲ.)
     ತಂದೆ-ತಾಯಿ, ಅಣ್ಣ-ಅಕ್ಕಂದಿರ ಮಧ್ಯೆ ಇರುವ ಗೆಳೆತನ. ಬದುಕಿನಲ್ಲಿ ಕೆಟ್ಟ ಸಹವಾಸಗಳು ಮುತ್ತಿಕೋಳ್ಳುವಂತೆ ಒಳ್ಳೆಯ ಸಹವಾಸ ದೊರೆಯುವುದು ವಿರಳ. ಗೆಳೆತನಕ್ಕೆ ತನ್ನದೆ ಆದ ದೊಡ್ಡತನವಿದೆ ಎಂದರೆ ದೊಡ್ಡ ಮನಸ್ಸಿನ ವ್ಯಕ್ತಿಯೊಂದಿಗೆ ಮಾಡಬೇಕು ಬದುಕಿನ ವಿವಿಧ ಮಜಲುಗಳಲ್ಲಿ ಸಿಗುವ ವ್ಯಕ್ತಿಗಳ ಸಹವಾಸ ಮಾಡಬೇಕು. ಸಮಾಜದ ವಿವಿಧ ಕ್ಷೇತ್ರಗಳಲ್ಲಿರು ವ್ಯಕ್ತಿಗಳನ್ನು ಗೆಳೆಯರಾದರೆ ಪರಸ್ಪರ ವಿಷಯಗಳ ವಿನಿಮಯ ಆಗುತ್ತದೆ. ಜ್ಞಾನ ವಿಸ್ತಾರತೆ ಬೆಳೆಯುತ್ತದೆ. ಹೊಸ ವಿಷಯಗಳತ್ತ ಮನಸ್ಸು ಮುಖ ಮಾಡುತ್ತದೆ. ಅದರಿಂದ ವ್ಯಕ್ಯಿಗತವಾಗಿ ಲಾಭವೇ. ಇದರ ಬಗ್ಗೆ ಅಭಿನವ ಬೀಚಿ ಎಂದೆ ಖ್ಯಾತರಾದ ಗಂಗಾವತಿಯ ಪ್ರಾಣೇಶ್ ಒಂದು ಹಾಸ್ಯ ಪ್ರಸಂಗದಲ್ಲಿ ಹೀಗೆ ಹೇಳುತ್ತಾರೆ ಒಬ್ಬ ಪೊಲೀಸ್,ವಕೀಲ,ಮತ್ತು ಡಾಕ್ಟರ್‍ ಒಂದು ಕಟ್ಟೆಯ ಮೇಲೆ ಕುಳಿತು ವಾದ ಮಂಡಿಸುತ್ತಿರುತ್ತಾರೆ ನಾನು ನಿನಗಿಂತ ಮೇಲು ಎಂದು ಒಬ್ಬ, ಮತ್ತೊಬ್ಬ ನಾನು ನಿನಗಿಂತ ಮೇಲು ಎಂದು , ಹೇಗೆ ಎಂದಾಗ ಪೊಲೀಸ್ ಮೊದಲು ಆಭಿಪ್ರಾಯ ಮಂಡಿಸುತ್ತಾನೆ ನಾನು ಸುಮ್ಮ ಸುಮ್ಮನೆ ಒದ್ದು ಒಳಗೆ ಹಾಕುತ್ತೇನೆ, ಆಗ ವಕೀಲ ನೀನು ಒದ್ದು ಒಳಗೆ ಹಾಕಿದರೆ ನಾನು ಬಿಡಿಸಿಕೊಂಡು ಬರುತ್ತೇನೆ. ಆಗ ಡಾಕ್ಟರ್‍ ಹೌದೋ ಮಗನೇ ನೀನು ಸುಮ್ಮ ಸಮ್ಮನೆ ಒದ್ದು ಒಳಗೆ ಹಾಕುತ್ತೀಯ, ಅವ ಸುಮ್ಮ ಸುಮ್ಮನೆ ಬಿಡಿಸಿಕೊಂಡು ಬರುತ್ತಾನೆ. ನಿಮ್ಮಿಬ್ಬರಿಗೂ ತಲೆ ಕೆಟ್ಟಿದೆ ಎಂದು  ನಾನು ಪ್ರಮಾಣ ಪತ್ರ ಕೊಟ್ಟರೆ ? ಇದು ಪರಸ್ಪರ ಯಾರು ಹೆಚ್ಚು ಯಾರು ಕಡಿಮೆ ಎಂಬ ವಾದ ಮಾತ್ರವಲ್ಲ ಪರಸ್ಪರ ವ್ಯಕ್ತಿಯ ಅನಿವಾರ್ಯತೆ ಕೂಡ ಹೌದು. ತನಗಿಂತ ದೊಡ್ಡವರೊಂದಿಗೆ ದೊಡ್ಡ ಮನಸ್ಸಿನವರೊಂದಿಗೆ ಗೆಳೆತನ ಮಾಡಬೇಕೆನ್ನುವುದೇನೋ ಸರಿ ಆದರೆ ದೊಡ್ಡವರೆಲ್ಲ ಜಾಣರಲ್ಲವಲ್ಲ ? ಸ್ನೇಹ ಮಾಡಿದ ಮೇಲೆ ಅವನ್ನು ಕೆಟ್ಟ ವಿಷಯಗಳಿಗಾಗಿ ದೂರ ಮಾಡುವುದು ಕಷ್ಟವೇನೋ ನಿಜ, ದೊಡ್ಡ ಮನಸಿನವರೊಂದಿಗೆ ಗೆಳೆತನ ಮಾಡುವುದರಿಂದ ಒಳ್ಳೆಯ ವಿಷಯಗಳನ್ನು ಮೈಗೂಡಿಸಿಕೊಳ್ಳ ಬಹುದು ಇಲ್ಲಾ ನಮ್ಮಲ್ಲಿರುವ ಅಷ್ಟು ಕೆಟ್ಟತನವನ್ನು ಕಡಿಮೆ ಮಾಡಿ ಕೊಳ್ಳಲುಬಹುದು ? ಒಳ್ಳೆಯ ವ್ಯಕ್ತಿಗಳು ಗೆಳೆಯರಾಗದಿದ್ದರೆ ಏಕಲವ್ಯ ದೋಣಚಾರ್ಯರನ್ನು ಒಲಿಸಿಕೊಂಡ ರೀತಿಯಲ್ಲಾದರೂ ??? Any way happy friendship day……. 

2 comments:

 1. Uday Nanjappa ಹಲೋ ಧನಂಜಯ ! ಕನ್ನಡ ಬ್ಲಾಗ್ನಲ್ಲಿ ಬಹಳ ತಲ್ಲೀನರಾಗಿದ್ದೀರ! ಬಹಳ ದಿನಗಳ ನಂತರ ನಿಮ್ಮ ಕನ್ನಡ ಶಬ್ದಗಳನ್ನ ನೋಡ್ತಾ ಇದ್ದೇನೆ! ಏನಾದರಾಗಲಿ! ಕನ್ನಡ ಉಳಿಯಲಿ! ಸಿರಿಗನ್ನಡಂಗೆಲ್ಗೆ! ಗೂಗಲ್ ಕನ್ನಡ ಅನುವಾದಕ ನಿಜಕ್ಕೂ ಅದ್ಭುತವಾಗಿದೆ! ಕನ್ನಡದ ಹುಡುಗನಿಗೆ ಜೈ!
  August 7 at 12:45am · Like

  ReplyDelete
 2. Pramod Shetty, Ravi Murnad and Akhil Kumar Gupta like this.

  Ravi Murnad ಗೆಳತನ ದಿನದ ಉತ್ತಮ ಲೇಖನ ಅನ್ನಿಸಿತು. ಗೆಳತನದ ಬಗೆಗಿನ ನಿಮ್ಮ ಅದ್ಭುತ ಮಾತುಗಳು ತುಂಬಾ ಖರೆ. ಈ ಕೆಳಗಿನ ಸಾಲುಗಳಂತೂ ಪಕ್ಕನೆ ಬಚ್ಚಿಟ್ಟುಕೊಳ್ಳುವಂತಹದ್ದು.
  "ಗೆಳೆತನಕ್ಕೆ ನಂಬಿಕೆ ಎನ್ನುವುದು ಬಲು ಮುಖ್ಯ ತನ್ನ ತನವನ್ನು, ತನ್ನ ಬದುಕಿನ ಅಮೂಲ್ಯ ಚಿಂತನೆಗಳನ್ನು , ಆಚಾರ ವಿಚಾರಗಳನ್ನು ಇನ್ನೊಬ್...
  See More
  August 8 at 2:10am · Like · 1 person

  ReplyDelete