ಧನಂಜಯ ಮಡಿಕೇರಿ
ನನ್ನ
ಜಿಲ್ಲೆ ಮತ್ತು ಮಡಿಕೇರಿ ರಾಜ್ಯದಲ್ಲಿ ಗಮನ ಸೆಳೆಯೋ ಪ್ರದೇಶ. ಕೊಡಗು ಎಂದ ಕ್ಷಣ ಹೊರಗಿನ ಮಂದಿಗೆ ಅದೇಕೋ ಒಂದು ರೋಮಾಂಚನ. ನೂರಾರು ಊರು
ಸುತ್ತಿ ಏನೇನೋ ಕಂಡ ಮೇಲು ಕಂಬಳಿ ಹೊದ್ದು ಮಲಗೋ ಸುಖ ಇರೋದು ಮಾತ್ರ ಮಡಿಕೇರಿಯಲ್ಲೇ..?
ಪ್ರಕೃತಿಯ ಸೆರಗು ಯಾವ ಜೀವವನ್ನು ಸೆಳೆಯದೆ ಇರದು .
ಸೆರಗು,
ತುದಿ, ಚುಂಗು ಮುಂತಾದ ಅದೇ ನಮೂನೆಯ ಇಲ್ಲದ ಏನೋ ವಿಶೇಷತೆ ಈ ಶಬ್ದಕ್ಕಿದೆ. ಸೆರಗು ಅಂದೊಡನೆ ಅದು
ನಿಶ್ಚಯವಾಗಿ ಸೀರೆಯ ಸೇರಗೆ, ಇಲ್ಲಿ ಹಸಿರು ಸೀರೆ ಉಟ್ಟ ನನ್ನ ಕೊಡಗಿನ ಪ್ರಕೃತಿ ಮಾತೆ ತನ್ನ
ಸೀರೆಯ ಸೆರಗನ್ನು ಜಿಲ್ಲೆಯಾದ್ಯಂತ ತೇಲಿ ಬಿಟ್ಟಿದ್ದಾಳೆ ( ಕೆಲವರಿಗೆ ಸೆರಗು ಅಂದರೆ ಮತ್ಯರಾರೋ
ನೆನಪಾಗ ಬಹುದು) ಪ್ರಕೃತಿ ಎಂಬ ನನ್ನ ತಾಯಿ ಹುಟ್ಟಿರುವ ಸೀರೆ ಅಷ್ಟು ಗಟ್ಟಿಯಾಗಿರುವುದರಿಂದಲೇ
ನನ್ನ ಜಿಲ್ಲೆಗೆ ಮಂಗನ ಖಾಯಿಲೆ,ಚಿಕನ್ ಗುನ್ಯ ಯಾವುದು ಸುಳಿಯಲಿಲ್ಲ. ನನ್ನ ತಾಯಿ ಉಟ್ಟಿರುವ
ಹಸಿರು ಸೀರೆ, ಆಕೆಯ ಬಗಲಲ್ಲಿ ನಾವುಗಳು ಕೆಟ್ಟ ಕಣ್ಣುಗಳಿಂದಲೋ ಪಾರಾಗಲು ಮಗು ಆಶ್ರಯಿಸಿರುವಂತೆ
ನಾನು ಆಶ್ರಯಿಸಿರುವುದು ಈ ತಾಯಿಯ ಸೀರೆಯ ಸೇರಗಿನಲ್ಲೇ..! ಆ ಸೆರಗಿನ ಮುಸುಕು, ಆ ಮುಸುಕು ಕೂಡ
ಕಂಬಳಿ ಹೊದ್ದ ಆಗಲ್ಲ ಅದೊಂದು ತರಹ ಮಂಜು, ಆ ಮಂಜಿನ ತೆಳ್ಳನೆಯ ಪರದೆಯ ಮೂಲಕ ಮಬ್ಬು ಮಬ್ಬಾಗಿ
ಕಾಣುವ ನನ್ನ ಜನ್ಮ ನೀಡಿದ ಮಾತೆಯ ಊರಾದ ದೂರದ ಕಾಸರಗೋಡುವಿನ ಉಪ್ಪಳವನ್ನು ನೆನೆಸುತ್ತಾ
ರಾಜಶೀಟಿನ ಸೂರ್ಯಾಸ್ತಮ ನೋಡುತ್ತಾ ಕುಳಿತಿರುವಾಗ ದೂರದಿಂದ ಮತ್ತೆ ಅದೇ ನನ್ನ ಪ್ರಕೃತಿ ಮಾತೆ ತನ್ನ
ಬಿಳಿಯ ಸೆರಗನ್ನ ತೇಲಿ ಬಿಡುತ್ತಿರುವುದನ್ನು ಕಂಡು ಕೊಡಗಿನ ಎಲ್ಲರಂತೆ ಸೆರಗಿನ ಮಗುವಾಗಿರುವ
ನಾನು ಜನ್ಮ ನೀಡಿದ ಆಶ್ರಯ ನೀಡಿದ ಮಾತೆಯರ ನೆನೆದು ಧನ್ಯನಾದೆ.
ಇನ್ನೂ ತಡಕೊಳ್ಳೋಕೆ ಆಗ್ತಿಲ್ಲ ಸಾರ್, ಮುಂದಿನ ವಾರಾಂತ್ಯ ಮಾಡಕೇರಿಯತ್ತ ನನ್ನ ಪಯಣ... :)
ReplyDelete