ಧನಂಜಯ ಮಡಿಕೇರಿ
ನಿನ್ನೆ ಗೆಳೆಯ ಕಳುಹಿಸಿದ ಪೋಟೋ ನೋಡುತಿದ್ದೆ, ದಿನಾಂಕ ೨೪/೪/೨೦೧೨ ರಂದು ಒಂದು ಜೊತೆ ಪೋಟೋ
ಗಮನ ಸೆಳೆಯಿತು. ಒಂದು ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಪೋಟೋ ಮತ್ತೊಂದು ಕನ್ನಡ ಕಣ್ಮಣಿ ಡಾ.
ರಾಜ್ ಕುಮಾರ್. ಇಲ್ಲಿ ಗಮನಿಸ ಬೇಕಾದ ಮುಖ್ಯ ಅಂಶವೆಂದರೆ ಇವರಿಬ್ಬರ ಹುಟ್ಟು ಹಬ್ಬ ಒಂದೇ ದಿವಸ.
ಒಬ್ಬ ಬಂಗಾರದ ಮನುಷ್ಯನಾದರೆ ಮತ್ತೊಬ್ಬ ಸ-ಚಿನ್ನ.
ಈ ಲೇಖನದ ಚರ್ಚಾಸ್ಪದ ವಿಷಯ ಮಾತ್ರ ಸಚಿನ್
ತೆಂಡೂಲ್ಕರ್, ಮೊನ್ನೆ ಮೊನ್ನೆ ಸಚಿನ್ನರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿದ ಸುದ್ದಿ ನೋಡಿ ನನಗೆ
ಮತ್ತು ನನ್ನಂತೆ ಅನೇಕ ಜನರಿಗೆ ನೂರಾರು ಪ್ರಶ್ನೆಗಳು ಮೂಡಿರಬಹುದು. ಯಾಕೆ ಸಚಿನ್ ರಾಜ್ಯ ಸಭೆಗೆ
ಪ್ರವೇಶ ಪಡೆಯಲು ಒಪ್ಪಿದರು? ರಾಜ್ಯ ಸಭೆಯ ಸಂಭಾವನಿಯರ ಪಟ್ಟಿ ಪ್ರಕಟವಾಗುವ ಮೊದಲೇ ಯಾಕೆ ೩೦
ನಿಮಿಷ ಸೋನಿಯಾ ಗಾಂಧಿಯನ್ನು ಭೇಟಿಮಾಡಿದರು.? ಸಚಿನ್ ಆಯ್ಕೆಯಲ್ಲಿ ಸ್ವಲ್ಪ ಮಟ್ಟಿಗಾದರೂ
ಕೇಂದ್ರದ ಭ್ರಷ್ಟಚಾರ ಮುಚ್ಚಿ ಹಾಕುವ ದುರುದ್ದೇಶ
ಅಡಗಿದೆಯಾ ? ಸಚಿನ ಕೇವಲ ಕಾಂಗ್ರೆಸ್ ಪಕ್ಷದ ಆಸ್ತಿಯೇ ? ಇಂತಹ ಹಲವಾರು ಪ್ರಶ್ನೆಗಳು ನಿಮ್ಮಲ್ಲೂ ಹುಟ್ಟಿದರೆ
ಅದಕ್ಕೆ ಆಶ್ಚರ್ಯ ಪಡಬೇಕಿಲ್ಲ.
ನನ್ನ ಅಭಿಪ್ರಾಯದ ಪ್ರಕಾರ ಸಚಿನ್ ನಿರ್ಧಾರ
ತಪ್ಪು ಮತ್ತು ಅವರು ಬೆಳೆದ ಎತ್ತರಕ್ಕೆ, ಅವರು ಕ್ರಿಕೆಟ್ ಲ್ಲಿ ಗಳಿಸಿದ ಗೌರವ, ಯಶಸ್ವಿಗೆ
ರಾಜ್ಯ ಸಭೆ ಪದವಿ ಸರಿ ಸಮಾನವೇ ? ಅವರು ಇಲ್ಲಿಯ ತನಕ ಕ್ರೀಡೆಯಲ್ಲಿ ಗಳಿಸಿರುವುದು ಹೆಚ್ಚು.
ರಾಜಕೀಯ ಏನಿದ್ದರು ಅವರ ಇಮೇಜಿಗೆ ಹೇಳಿದ ರಂಗ ಅಲ್ಲ. ಎಲ್ಲೋ ಒಂದು ಕಡೆ ಸಚಿನ್ ಗೆ ಇದ್ದ ಘನತೆ
ಗೌರವಕ್ಕೆ ಹೊಲಸು ರಾಜಕೀಯದ ಲೇಪ ಬೇರೆ ಆಗುತ್ತಿದೆ ಎನ್ನುವ ಅಸಂಖ್ಯಾತ ಅಭಿಮಾನಿಗಳನ್ನು ಕಾಡುವ
ಪ್ರಶ್ನೆ. ಮಿಗಿಲಾಗಿ ರಾಜ ಸಭೆಗೆ ಆಯ್ಕೆಯಾಗಿ ಹೋದರೆ
ಕ್ರಿಕೆಟ್ ಮತ್ತು ಜಾಹಿರಾತುಗಳ ಮಧ್ಯೆ ಬಿಡುವಾದರು ಎಲ್ಲಿದೆ.?
ರಾಜಕೀಯದಿಂದ ಕಳಂಕ ಸಚಿನ್ ಕ್ರಿಕೆಟ್ ಬದುಕಿಗೆ
ಮಾತ್ರವಲ್ಲ ಅವರ ವೈಯುಕ್ತಿಕ ಬದುಕಿಗೂ ಅಂಟುವ
ದಿನ ದೂರವಿಲ್ಲ. ಏಕೆಂದರೆ ಸಚಿನ್ ಸೋನಿಯಾ ಗಾಂಧಿಯವರನ್ನು ೩೦ ನಿಮಿಷ ಭೇಟಿ ಮಾಡಿದ ನಂತರ ನೂರು
ಅನುಮಾನಗಳ ಹುತ್ತ ಅವರ ಸುತ್ತ ಬೆಳೆದು ನಿಂತಿದೆ
ಅದಕೆಲ್ಲ ಸಚಿನ್ ಮಾತ್ರ ಉತ್ತರ ನೀಡ ಬೇಕಾಗಿದೆ. ಭೇಟಿಯ ನಂತರ ರಾಜ್ಯ ಸಭೆ ಪಟ್ಟಿಯಲ್ಲಿ ಅವರ
ಹೆಸರು ಕಾಣಿಸಿಕೊಂಡಿದೆ. ಅಷ್ಟಕ್ಕೂ ಸಚಿನ್ ಅಂತಹ
ಲಾಭಗಾರಿಕೆ ಬಯಸುವ ವ್ಯಕ್ತಿ ಅಲ್ಲ ಅದರ ಅವಶ್ಯಕತೆಯು ಅವರಿಗೆ ಇಲ್ಲ. ಪರಿಸ್ಥಿತಿ ಈಗಿರುವಾಗ
ಸಚಿನ್ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ತಪ್ಪು ಸಂದೇಶ ಅವರ ಅಸಂಖ್ಯಾತ ಅಭಿಮಾನಿಗಳಿಗೆ
ರವಾನಿಸಿ ಗೊಂದಲಗೊಳಿಸಿದ್ದಾರೆ.
ಮೊದಲನೆಯದಾಗಿ ಸಚಿನ್ ಸೋನಿಯಾರನ್ನು ಭೇಟಿಯಾಗ ಬಾರದಿತ್ತು. ರಾಷ್ಟ್ರಪತಿಯವರು ಅವರನ್ನು ನಾಮ
ನಿರ್ಧೇಶನ ಮಾಡ ಬೇಕಿತ್ತು. ಇದರ ಮಧ್ಯೆ ಯಾಕೆ ಕೇಂದ್ರ ಕಾಂಗ್ರೆಸ್ ಸರ್ಕಾರಕ್ಕೆ ಸುನಿಲ್
ಗಾವಸ್ಕರ್, ಕಪಿಲ್ ದೇವ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ ಆಯ್ಕೆಮಾಡುವ ಮನಸ್ಸ್ಸು
ಮಾಡಲಿಲ್ಲ.? ಸಚಿನ್ ಅಭಿಮಾನಿಗಳು ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ.
ಈ ಲೇಖನದ ಮೊದಲಿಗೆ ನಾನು ಕನ್ನಡದ ವರನಟ ಮೇರುನಟ
ರಾಜ್ ಕುಮಾರ್ ಹೆಸರು ಪ್ರಸ್ತಾಪಿಸಿದೆ ಆದರೆ
ಒಂದಂತು ಸಚಿನ್ ವಿಷಯದಲ್ಲಿ ರಾಜ್ ನೆನೆಪಾಗುತ್ತಾರೆ. ಅವರು ರಾಜಕೀಯ ಸೇರಲು ಸಾಕಸ್ಟು ಒತ್ತಾಯ
ಅವರಿಗೆ ಬಂತು. ಅವರು ಆಗ ಹೇಳಿದ ಮಾತು ಒಂದೇ ನನ್ನ ಅಭಿಮಾನಿ ದೇವರುಗಳು ಕೇವಲ ಒಂದು ಜಾತಿ,
ಪಕ್ಷ, ಒಂದು ಧರ್ಮದಲ್ಲಿ ಮಾತ್ರ ಇಲ್ಲ ಮತ್ತು ರಾಜ್ ಕುಮಾರ್ ಕೇವಲ ಒಂದು ಪಕ್ಷ, ಧರ್ಮ ಜಾತಿಗೆ
ಸೀಮಿತವಾಗಿಲ್ಲ ಆಗಾಗಿ ನಾನು ಯಾವುದೇ ಪಕ್ಷದ ಪರವಾಗಿ ನಿಲ್ಲೋದಿಲ್ಲ ನಾನು ಕನ್ನಡಿಗ,
ಕನ್ನಡಾಂಬೆಯ ಪುತ್ರ. ಬದುಕಿನ ಕೊನೆಯವರೆಗೂ ಕನ್ನಡಕ್ಕಾಗಿ ದುಡಿಯುತ್ತೇನೆ, ಇದನ್ನು ಪಾಲಿಸಿ ಅದರಂತೆಯೇ
ಬಾಳಿದರು ಎನ್ನುವದು ವಿಶೇಷ.
ಮಾತ್ರವಲ್ಲ ಸಚಿನ್ ಹೆಸರು ಭಾರತ ರತ್ನಕ್ಕೆ ಶಿಫಾರಸು
ಮಾಡಲಾಗಿದೆ ಅಂತಲೂ ಒಂದು ಸುದ್ದಿ ಇದೆ ಈ ಕಾಲ ಘಟ್ಟದಲ್ಲಿ ಮುಂದೊಂದು ದಿವಸ ಪ್ರಶಸ್ತಿಗೆ
ಕಾಂಗ್ರೇಶ್ ಪ್ರೇರಣೆ ಅಂತ ಕಳಂಕ ಅಂಟಿದರು ಆಶ್ಚರ್ಯ ಪಡಬೇಕಿಲ್ಲ. ಸಚಿನ್ ರಾಜ್ಯ ಸಭೆಯ ಸದಸ್ಯ
ನಿರ್ಧರವನ್ನು ನನ್ನಂತೆ ಅವರ ಬಹುಪಾಲು ಅಭಿಮಾನಿಗಳು ವಿರೋಧಿಸುತ್ತಾರೆ, ಒಂದಂತು ಸತ್ಯ ಒಬ್ಬ
ಒಳ್ಳೆಯ ಕ್ರಿಕೆಟಿಗ ಒಳ್ಳೆಯ ರಾಜಕೀಯ ನಾಯಕ ಆಗಲಾರ ಅಂತೆಯೇ ಒಬ್ಬ ಒಳ್ಳೆಯ ಕೋಚ್ ಒಳ್ಳೆಯ
ಕ್ರಿಕೆಟಿಗ ಆಗಲಾರ
ಇದು ಸಚಿನ್ ವಿಷಯದಲ್ಲೂ ಕೂಡ..?