ಕೆ.ಎಸ್. ಧನಂಜಯ
ವಾಟ್ಸಾಪ್ ಕಂಡು ಹಿಡಿದವನ ಯಶೋಗಾಥೆ ಬಗ್ಗೆ ಹೇಳಿದರೆ ಅದೋಂದು ಬೇರೆಯೆ ಲೇಖನ ಆಗುತ್ತದೆ ಆದರೂ ಜಾನ್ ಕೂಮ್ ಮತ್ತು ಬ್ರಿಯನ್ ಆಕ್ಟನ್ ಹೋರಾಟದ ಮೂಲಕ ಬದುಕು ಕಟ್ಟಿಕೊಂಡವರು. ಉಕ್ರೇನ್ ದೇಶದ ಒಂದು ಸಣ್ಣ ಗ್ರಾಮದಲ್ಲಿ ಆರ್ಥಿಕವಾಗಿ ತುಂಬಾ ಕಷ್ಟಕರ ಪರಿಸ್ಥಿತಿಯಲ್ಲಿ , ಬಾಲ್ಯದಲ್ಲಿ ವಿದ್ಯುತ್, ಶುದ್ಧ ನೀರು, ದೂರವಾಣಿ ಮೊದಲಾದ ಮೂಲ ಸೌಲಭ್ಯಗಳೇ ಸರಿಯಾಗಿ ಲಭ್ಯವಿಲ್ಲದ ಊರಿನಲ್ಲಿ ಜನಿಸಿದ ಜಾನ್ ಕೂಮ್ 1992ರಲ್ಲಿ, ಉತ್ತಮ ಬದುಕಿನ ಕನಸಿನೊಂದಿಗೆ ತನ್ನ ತಾಯಿಯೊಂದಿಗೆ ಅಮೆರಿಕಕ್ಕೆ ವಲಸೆ ಹೋಗಿ ರೇಷನ್ ಅಂಗಿಡಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಆಹಾರ ಮುಂತಾದನ್ನು ಪಡೆಯುತ್ತಿದ್ದವ. ಕಷ್ಟಪಟ್ಟು ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿತು ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಜಾನ್ ಕೂಮ್ ಮತ್ತು ಬ್ರಿಯನ್ ಆಕ್ಟನ್ ಯಾಹೂನಲ್ಲಿ ಕೆಲಸ ಮಾಡಿದರು. ನಂತರ ಕೆಲಸದಿಂದ ಹೊರಬಂದು, ಹೊಸದೇನಾದರೂ ಮಾಡುವ ಕನಸನ್ನು ಕಟ್ಟಿಕೊಂಡರು. ದುರಂತವೆಂದರೆ ಆ ಕಾಲಕ್ಕೆ ಫೇಸ್‌ಬುಕ್ ಹಾಗೂ ಟ್ವಿಟರ್ ಕಂಪನಿಗಳಿಗೆ ಉದ್ಯೋಗಕ್ಕೆ ಅರ್ಜಿ ಹಾಕಿದರೂ ಇವರಿಬ್ಬರಿಗೂ ಆ ಸಮಯದಲ್ಲಿ ಅವಕಾಶ ಸಿಕ್ಕಿರಲಿಲ್ಲ ಎನ್ನುವುದು ಆಶ್ಚರ್ಯವೇ ಸರಿ . ಬಡತನ, ನಿರಾಕರಣೆ, ವಿಫಲತೆಗಳು ಎಂದಿಗೂ ಅಂತಿಮವಲ್ಲ. ಕನಸು ಮತ್ತು ಶ್ರಮ ಇದ್ದರೆ, ಅವುಗಳೇ ಯಶಸ್ಸಿನ ಮೆಟ್ಟಿಲುಗಳು ಅದರ ಫಲವೇ 2009 ರಲ್ಲಿ ವಾಟ್ಸ್ ಪ್ ಹುಟ್ಟಿಕೊಂಡಿತ್ತು.
ಡಿಜಿಟಲ್ ಯುಗದಲ್ಲಿ ವಾಟ್ಸಾಪ್ ನಮ್ಮ ಬದುಕಿನ
ಅವಿಭಾಜ್ಯ ಅಂಗವಾಗಿದೆ. ಸಂದೇಶ, ಧ್ವನಿ ಕರೆ, ವಿಡಿಯೋ ಕರೆ, ಚಿತ್ರ-ವೀಡಿಯೋ ಹಂಚಿಕೆ all-in-one
ವೇದಿಕೆಯಾಗಿ ವಾಟ್ಸಾಪ್ ಜನಪ್ರಿಯವಾಗಿದೆ. ಆದರೆ ಇದರ ಒಳಗಿರುವ ಅನೇಕ ಉಪಯುಕ್ತ ಸೆಟ್ಟಿಂಗ್‌ಗಳ ಬಗ್ಗೆ
ಬಹುತೇಕ ಬಳಕೆದಾರರಿಗೆ ಪೂರ್ಣ ಅರಿವು ಇಲ್ಲ. ಈ ಸೆಟ್ಟಿಂಗ್‌ಗಳನ್ನು ಸರಿಯಾಗಿ ಬಳಸಿದರೆ, ವಾಟ್ಸಾಪ್
ಬಳಕೆ ಇನ್ನಷ್ಟು ಸುರಕ್ಷಿತ ಮತ್ತು ಸುಲಭವಾಗುತ್ತದೆ.
ವಾಟ್ಸಾಪ್‌ನ ಪ್ರಮುಖ
ಸೆಟ್ಟಿಂಗ್‌ಗಳಲ್ಲಿ ಗೌಪ್ಯತಾ ನಿಯಂತ್ರಣ ಅತ್ಯಂತ ಮುಖ್ಯವಾಗಿದೆ. ( Settings → Privacy) ನಿಮ್ಮ ಕೊನೆಯ ಬಾರಿ ಆನ್ಲೈನ್ ಆಗಿದ್ದ ಸಮಯವನ್ನು ಯಾರಿಗೆ ಕಾಣಬೇಕು ಎಂದು ಆಯ್ಕೆಮಾಡಬಹುದು.( Last Seen), ನಿಮ್ಮ ಫೋಟೋ ಸಂಪರ್ಕದಲ್ಲಿರುವ ಎಲ್ಲಾರಿಗೆ ಅಥವಾ ಕೆಲವೇ ಮಂದಿಗೆ, ಅಥವಾ ಯಾರಿಗೂ
ಕಾಣದಂತೆ ಮಾಡಬಹುದು. ( Profile Photo), ನಿಮ್ಮ
ಸ್ಟೇಟಸ್ ಅನ್ನು ನಿಯಂತ್ರಿಸಬಹುದು. (About) ಹಾಗೂ ನೀಲಿ ಟಿಕ್ (Blue Tick) ಆನ್/ಆಫ್ ಮಾಡಬಹುದು ( Read Receipts ) ಆಯ್ಕೆಗಳ ಮೂಲಕ ಯಾರು ಯಾವ ಮಾಹಿತಿಯನ್ನು
ನೋಡಬೇಕು ಎಂಬುದನ್ನು ಬಳಕೆದಾರರು ತಾವೇ ನಿರ್ಧರಿಸಬಹುದು. ಇದರಿಂದ ವೈಯಕ್ತಿಕತೆ ಕಾಪಾಡಿಕೊಳ್ಳಲು
ಸಾಧ್ಯ.
ಇಂದಿನ ಹಣ ಕಬಳಿಸುವಿಕೆ ಹ್ಯಾಕಿಂಗ್ ಮುಂತಾದ ತೊಂದರೆಗಳನ್ನು ತಪ್ಪಿಸಲು ಖಾತೆಯ ಭದ್ರತೆ ಬಹಳ ಮುಖ್ಯ Two-Step
Verification ( Settings
→ Account → Two-Step Verification) ಸೆಟ್ಟಿಂಗ್
ಬಹಳ ಉಪಯುಕ್ತ. ಇದರಲ್ಲಿ ಪಿನ್ ಸಂಖ್ಯೆಯನ್ನು ಸೆಟ್ ಮಾಡಿದರೆ, ಯಾರಾದರೂ ನಿಮ್ಮ ನಂಬರ್ ಬಳಸಿ ಲಾಗಿನ್ ಮಾಡಲು ಪ್ರಯತ್ನಿಸಿದರೆ
ಈ ಪಿನ್ ಅಗತ್ಯವಾಗುತ್ತದೆ. ಈ ಪಿನ್ ಬಳಸದೆ ಇರುವ ವಾಟ್ಸ್‌ಪ್‌ಗಳನ್ನು ಖದೀಮರು ಬಹಳ ಬೇಗನೆ ಹ್ಯಾಕ್
ಮಾಡಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ನೀವು ಪಿನ್ ಸಂಖ್ಯೆ ನೀಡಿದ್ದೇ ಆದಲ್ಲಿ ಅನ್ಯ
ವ್ಯಕ್ತಿಗಳು ಪ್ರಯತ್ನಿಸಿಸ ಕೂಡಲೇ ನಿಮ್ಮ ವಾಟ್ಸ್ ಪ್ ಲಾಕ್ ಆಗುತ್ತದೆ ನೀವು ನಿಮ್ಮ ಪಿನ್ ಸಂಖ್ಯೆ
ನೀಡಿ ಅದನ್ನು ಮತ್ತೆ ಯಥಾ ಸ್ಥಿತಿಗೆ ತರಬಹುದು.
ಫಿಂಗರ್‌ಪ್ರಿಂಟ್ / ಫೇಸ್ ಲಾಕ್ : ( Settings → Privacy →
Fingerprint Lock / App Lock ) ವಾಟ್ಸಾಪ್ ತೆರೆಯಲು ಫಿಂಗರ್‌ಪ್ರಿಂಟ್ ಅಥವಾ ಮುಖ ಗುರುತು
ಬೇಕಾಗುತ್ತದೆ ಇದರಿಂದ ಅನಧಿಕೃತವಾಗಿ ನಿಮ್ಮ ವಾಟ್ಸ್ ಪ್ ಗೆ ಅನ್ಯರು ಪ್ರವೇಶಿಸದಂತೆ ತಡೆಯಬಹುದು.
ಮ್ಯೂಟ್
ಮತ್ತು ಕಸ್ಟಮ್ ನೋಟಿಫಿಕೇಶನ್ ( Chat → Contact/Group Info → Mute / Custom Notifications ) ನಮಗೆ ಬರುವ ಅನಗತ್ಯ ಗುಂಪುಗಳ
ಸಂದೇಶಗಳಿಂದ ಮುಕ್ತಿ. ಮುಖ್ಯ ವ್ಯಕ್ತಿಗಳಿಗೆ ವಿಭಿನ್ನ
ಟೋನ್ ಸೆಟ್ ಮಾಡುವ ಅವಕಾಶ ಇದೆ.
ಬಹಳಷ್ಟು
ಮಂದಿ ಯಾರಿಗೋ ಚಾಟ್ ಮಾಡಿ ಅಥವಾ ಬೇಡದ ಸಂದೇಶ ಕಳುಹಿಸಿ ಡಿಲೀಟ್ ಮಾಡಿದರೆ ಮುಗಿಯಿತು ಎಂದು ತಿಳಿದುಕೊಂಡಿದ್ದಾರೆ
ಆದರೆ ವಾಟ್ಸ್ ಪ್ ನಲ್ಲಿರುವ ಚಾಟ್ ಬ್ಯಾಕಪ್ (Chat Backup) Settings → Chats → Chat
Backup ) ಎಷ್ಟು ದಿನದ ಮಾಹಿತಿ ಬೇಕು ಎಂದು ಗೂಗಲ್ ಡ್ರೈವ್‌ಗೆ ಬ್ಯಾಕಪ್ ತೆಗೆದುಕೊಳ್ಳಬಹುದು.
ಫೋನ್ ಬದಲಿಸಿದರೂ ಚಾಟ್‌ಗಳು ಸುರಕ್ಷಿತವಾಗಿರುತ್ತದೆ.
ಸ್ಟೋರೇಜ್ ಮ್ಯಾನೇಜ್‌ಮೆಂಟ್ (Settings → Storage
and Data → Manage Storage ) ಇದು ನಮಗೆ ಹೆಚ್ಚು ಜಾಗ ತೆಗೆದುಕೊಳ್ಳುವ ಫೈಲ್‌ಗಳನ್ನು ಕಂಡು ಅಳಿಸಬಹುದು.
ಇದರಿಂದ ನಮ್ಮ ಫೋನ್ ಮೆಮೊರಿ ಉಳಿಸಿಕೋಳ್ಳಲು ಸಹಾಯವಾಗುತ್ತದೆ. .
ಡಿಸಪಿಯರಿಂಗ್ ಮೆಸೇಜ್ (Disappearing Messages) Chat
Info →
Disappearing Messages ) ನಿರ್ದಿಷ್ಟ ಸಮಯದ ಇದರಲ್ಲಿ ಗೊತ್ತು ಮಾಡಿದರೆ ನಮಗೆ ಬಂದಂತಹ ಸಂದೇಶ
ಮತ್ತು ಕಳುಹಿಸಿದ ಸಂದೇಶಗಳು ಸ್ವಯಂ ಅಳಿಸಿ ಹೊಗುತ್ತದೆ.
ಮೀಡಿಯಾ ಆಟೋ ಡೌನ್‌ಲೋಡ್ ನಿಯಂತ್ರಣ (Settings → Storage
and Data → Media Auto-Download ) ಕೆಲವು ದೊಡ್ಡ ಗಾತ್ರದ ಫೈಲ್ ಗಳನ್ನು ವೈಫೈ ಇದ್ದಾಗ ಅಂದರೆ ನಿಮ್ಮ ಪೋನ್ ಯಾವುದೇ ವೈಫೈ
ಸಂಪರ್ಕ ಹೊಂದಿದ್ದ ಸಮಯದಲ್ಲಿ ಮಾತ್ರ ಪೋಟೋ , ಆಡಿಯೋ,ವಿಡಿಯೋ,ಯಾವುದೇ ತರಹದ ದಾಖಲೆ ಫೈಲ್ ಗಳು ಡೌನ್‌ಲೋಡ್ ಆಗುವಂತೆ ಸೆಟ್ ಮಾಡಬಹುದು. ಇದರಿಂದ ನಿಮಗೆ
ಬೇಡದ ಮಾಹಿತಿ ಡೌನ್ ಲೋಡ್ ಆಗಿ ಅನಗತ್ಯ ಡೇಟಾ ವ್ಯಯವಾಗುವುದು
ಉಳಿಯುತ್ತದೆ.
ಗ್ರೂಪ್ ಪ್ರೈವಸಿ ಸೆಟ್ಟಿಂಗ್ ( Settings → Privacy → Groups ) ನ್ನು
ನೀವು ಸೆಟ್ ಮಾಡಿಕೊಂಡಿದ್ದೆ ಆದಲ್ಲಿ ಯಾರಾದರೂ ನಿಮ್ಮನ್ನು ಗುಂಪಿಗೆ ಸೇರಿಸುವ ಮೊದಲು ಅನುಮತಿ ಕೇಳಬೇಕಾಗುತ್ತದೆ.ಇದರಿಂದ
ನಿಮ್ಮನ್ನು ಅನಗತ್ಯ ಗುಂಪಿಗೆ ಸೇರಿಸಿಕೊಳ್ಳುವುದನ್ನು ತಪ್ಪಿಸಬಹುದು.
ಡಾರ್ಕ್
ಮೋಡ್ (Settings → Chats → Theme → Dark ) ಕಣ್ಣುಗಳ ಒತ್ತಡ ಕಡಿಮೆ ಮಾಡುವುದಲ್ಲದೆ .ಬ್ಯಾಟರಿ ಬಳಕೆಯನ್ನು
ಹೆಚ್ಚು ಸಮಯ ಉಪಯೋಗಿಸಿಕೊಳ್ಳ ಬಹುದು.

No comments:
Post a Comment