Wednesday, 29 June 2011

ಅವರೆ ನಿಜವಾದ ರಾಷ್ಟ್ರೀಕರು...!


ಅದು ಕೇವಲ ಒಂದು ವರ್ಗದ ಜನರ ಬದುಕಲ್ಲ, ಅದು ಪ್ರತಿಯೊಬ್ಬರ ಬದುಕು,ಪೂಜೆ,ದಾನ,ತಪಸ್ಸು ಜೊತೆಗೆ ಆತ್ಮವನ್ನು ಸೀಮಿತದಲ್ಲಿಟ್ಟುಕೊಂಡು ನಿತ್ಯದ ಬದುಕು ಸಾಗಿಸಿದರೆ ಅದು ದೇವ ಋಣ ತೀರಿಸಿದಂತೆ. ಹಾಗೇಯೆ ಋಷಿಗಳು ಕೇವಲ ಒಂದು ದೇಶಕ್ಕೆ ಸಂಭದಿಸಿದವರಲ್ಲ, ಹೊಸ ಚಿಂತನೆಯನ್ನು ಲೋಕಕ್ಕೆ ನೀಡಿದವರು ಋಷಿಗಳು ಮತ್ತೊಂದು ಅರ್ಥದಲ್ಲಿ ಅವರು ನಿತ್ಯ ಶೋಧನ ವ್ಯಕ್ತಿಗಳು.ಅವರು ಮೊದಲು ತಿಳಿದು ಇತರರಿಗೆ ಧಾರೆ ಎರೆದರೆ ಅದು ಋಷಿ ಋಣದ ಸಂದಾಯ ಮತ್ತು ವಂಶದ ಬೆಳವಣಿಗೆಯ ಜೊತೆಗೆ ಪ್ರಗತಿಯತ್ತ ಮುಖ ಮಾಡಿದರೆ ಅದು ಪಿತೃ ಋಣ ತೀರಿಸಿದಂತೆ, ಈಗೆ ದೇವ,ಋಷಿ,ಮತ್ತು ಪಿತೃ ಋಣ ನಮ್ಮ ಧರ್ಮದಲ್ಲಿ ಮನುಷ್ಯನಿಗೆ ಪ್ರಮುಖವಾದ ಋಣಗಳು. ಇದರೊಂದಿಗೆ ಮತ್ತೊಂದು ಸೇರುತ್ತದೆ ಅದು ದೇಶ ಋಣ ಕೊಡಗಿನಂತಹ ಮಣ್ಣಿನಲ್ಲಿ ಇದು ಹೆಚ್ಚಾಗಿ ಕಾಣುತ್ತದೆ.ಅದು ಬರಿ ಸೇವೆಯಲ್ಲ ಧರ್ಮದ ಒಂದು ಮುಖ್ಯ ರೂಪವೇ (ದೇಶ ಸೇವೆ).
ಹಾಗಾಗಿ ಗೆಳೆಯರೆ ಸಾಕಷ್ಟು ಬಾರಿ ಇಂತಹ ಸೈನಿಕರ ಮೃತ ದೇಹಗಳು ನಮ್ಮ ಜಿಲ್ಲೆಗಾಗಲಿ ಇತರೆ ಜಿಲ್ಲೆಗಾಗಲಿ ಬರುವಾಗ ಇಂಥಹ ಆರೋಪಗಳು ಬಂದೆ ಬರುತ್ತದೆ ಅದಕ್ಕೆ ಕಾರಣ ನಮ್ಮನ್ನಾಳುವ ವ್ಯವಸ್ಥೆ ನಮ್ಮ ಸೈನಿಕರ ಮೇಲಿರುವ ಒಂದು ತರಹದ ದುರಾಭಿಮಾನ. ಈ ಭೂಮಿ ತಾಯಿ, ನಾನು ಹುಟ್ಟಿದ್ದು ಇಲ್ಲಿ ಈ ಮಣ್ಣಿನ ಸಾರ್ವಜನಿಕ ವ್ಯವ್ಯಸ್ಥೆ ನನ್ನನ್ನು ಕಾಪಾಡಿದೆ. ನನಗೆ ವಿದ್ಯೆನೀಡಿದ ಸಂಸ್ಥೆ ಈ ದೇಶದ್ದು,ನನ್ನನ್ನು ಬೆಳೆಸಿ ಕಾಪಾಡಿ ನನಗೆ ಈ ರಾಜ್ಯದಲ್ಲಿ ಒಂದು ಗೊತ್ತಾದ ಸ್ಥಾನವನ್ನು ಒದಗಿಸಿದ್ದು ಈ ದೇಶದ ಕಾನೂನು ಕಟ್ಟು ಪಾಡುಗಳು, ಈ ಮಣ್ಣಿನ ಪ್ರಯೋಜನ ಪಡೆದು ಅದು ನನಗೆ ಸುಖಕರವಾಗುವವರೆಗೆ ಪ್ರಯೋಜನ ಪಡೆದು ಒಬ್ಬ ಸೈನಿಕನ ಮೃತ ದೇಹ ಬಂದಾಗ ನನಗೆ ಸಮಯವಿಲ್ಲ ಎಂದು ನುಣುಚಿ ಕೊಳ್ಳುವ ಅಧಿಕಾರವಂತರು ಬಹಳ ಮಂದಿ ನಮ್ಮ ಮಧ್ಯೆ ಇದ್ದಾರೆ. ಬದಲಾಗಿ ಅಂತಹ ದೇಹ ಬಂದಾಗ ಎಲ್ಲರು ನಿಂತು ಸ್ವೀಕಾರ ಮಾಡುವ ಗುಣವಿದೆಯಲ್ಲ ಅದು ಈ ದೇಶದ ಋಣ ಅಂಗೀಕಾರ ಮಾಡುವ ರೀತಿ.? ಅವರು ನಿಜಾವಾದ ರಾಷ್ಟ್ರೀಕರು that means citizens.
ಮನುಷ್ಯನ ನಿತ್ಯ ಕರ್ತವ್ಯಗಳಲ್ಲಿ ದೇಶದ ಋಣ ಪರಿಪಾಲನೆ ಕೂಡ ಮುಖ್ಯ, ಅದು ರಾಷ್ಟ್ರ ಧರ್ಮದ ಮೂಲ ಸ್ಥಾನ. ನಾವು ನಮ್ಮ ನೆರೆಹೊರೆಯಿಂದ, ನಮ್ಮ ಸಮಾಜದವರಿಂದ, ನಮ್ಮ ಜನಾಂಗ ಸಂಪ್ರದಾಯಗಳಿಂದ ಎಷ್ಟೇ ಪ್ರಯೋಜನಗಳನ್ನು ತೆಗೆದುಕೊಂಡು ಬೆಳೆದವರು, ನಮ್ಮ ಸಮಾಜದ ವ್ಯವ್ಯಸ್ಥೆ ಇಂತಹ ಅಚ್ಚುಕಟ್ಟುತನದಿಂದ ಕೂಡಿರದೆ ಹೋಗಿದ್ದರೆ ಗೌರವಿಸಲ್ಪಡುವ ಅವರುಗಳು ಇಂದು ಆ ಸ್ಥಾನದಲ್ಲಿ ಇರುತ್ತಿದ್ದರೇ ? ಆದುದ್ದರಿಂದ ಒಬ್ಬ ಯೋಧನಿಗೆ ಅಲ್ಲಿ ನಿಂತು ಗೌರವ ಸೂಚಿಸುದಕ್ಕೆ ನಾವು ದೇಶ ಸೇವೆ ಎನ್ನುತ್ತೇವೆ. ಯಾವುದನ್ನು ನಾವು ದೇಶ ಸೇವೆ ಎನ್ನುತ್ತೇವೆಯೋ ಅದು ವಾಸ್ತವವಾಗಿ ಸೇವೆಯಲ್ಲ, ಬಿಟ್ಟಿಯಾಗಿ ಮಾಡುವ ಕೆಲಸವಲ್ಲ, ಅದು ಕಣಿಕರವಲ್ಲ ಅದು ಈ ದೇಶದ ಋಣವನ್ನು ತೀರಿಸುವ ರೀತಿ. ಈ ದೇಶದಿಂದ ಸಾಕಷ್ಟು ತೆಗೆದುಕೊಮಡಿದ್ದೇವೆ ಸ್ವಲ್ಪವಾದರು ಹಿಂತಿರುಗಿಸೋಣ ಎಂಬ ಕಾಯಕ.
ನಮ್ಮ ದೇಶಕ್ಕೆ ಇಂತಹ ಜನರ ಅವಶ್ಯಕತೆ ಇದೆಯೆ ಹೊರತು, ಉದಾಸೀನ, ನಿರ್ಲಕ್ಷ್ಯ ತೋರುವ ಜನರಲ್ಲ ಸೇವೆಗೆ ನಿಂತಹ ವ್ಯಕ್ತಿಗಳಿಗೆ ನಾವು ಈ ರಾಜ್ಯಕ್ಕೆ ಬೇಕಾದಷ್ಟು ಮಾಡಿದ್ದೇವೆ ಎಂಬ ಆಹಂ ಇರಬಾರದು,ನಾವು ಈ ರಾಜ್ಯದ ಮೇಲೆ ಕೃಪೆ ತೋರುವವರು ಅನುಗ್ರಹಿಸುವವರು ಎಂದು ಭಾವಿಸಿಕೊಳ್ಳ ಬಾರದು. ಪ್ರತಿಯಾಗಿ ನಾವು ಈ ರಾಜ್ಯದಿಂದ ಈ ಮಣ್ಣಿನಿಂದ ಉಪಕಾರವನ್ನು ಪಡೆದುಕೊಂಡವರು ಎಂಬ ಭಾವನೆ ಬರಬೇಕು. ಅದು ನಾವು ಇಂತಹ ಸೈನಿಕರಿಗೆ ನೀಡುವ ಗೌರವ.