ಕೆ.ಎಸ್.ಧನಂಜಯ
ಕುವೆಂಪುರವರ ಮಲೆಗಳಲ್ಲಿ ಮದು ಮಗಳು ಕಾದಂಬರಿಯ ಮುನ್ನುಡಿ ಸಾಲೋಂದು ನೆನಪಿಗೆ ಬರುತ್ತಿದೆ
ಇಲ್ಲಿ ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ
ಯಾವುದೂ ಯ:ಕಶ್ಚಿತವಲ್ಲ!
ಇಲ್ಲಿ ಯಾವುದಕ್ಕೂ ಮೊದಲಿಲ್ಲ
ಯಾವುದಕ್ಕೂ ತುದಿಯಿಲ್ಲ
ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ
ಕೊನೆ ಮುಟ್ಟುವುದು ಇಲ್ಲ
ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!
ಇಲ್ಲಿಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲವೂ ತೀರ್ಥ!”
ಮಾಡುವ
ಕೆಲಸ ಮತ್ತು ಪರಿಶ್ರಮದ ಮೇಲೆ ಶ್ರದ್ದೆ ಇಟ್ಟು ದುಡಿದರೆ ಮಾತ್ರ ಇಂತಹ ಒಂದು ಸಾರ್ಥಕತೆಯನ್ನು ಪಡೆದುಕೊಳ್ಳಲು
ಸಾಧ್ಯ. ಅದಕ್ಕೆ ಒಂದು ಉತ್ತಮ ಉದಾಹರಣೆ ಕ್ರಿಕೆಟಿಗ ಮೊಹಮ್ಮದ್ ಸಿರಾಜ್, ಅದು ಕೇವಲ ಹೆಸರಲ್ಲ ಅದು ಕನಸು, ಹೋರಾಟ ಮತ್ತು ಆತ್ಮವಿಶ್ವಾಸದ ತುಂಬಿದ ಪ್ರತೀಕ. ಬಡತನದ ಬೀದಿಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದವರೆಗೆ ಸಿರಾಜ್ ನಡೆದು ಬಂದ ದಾರಿ ಸುಲಭವಾಗಿರಲಿಲ್ಲ. ತಂದೆ ಕೊಡುತ್ತಿದ್ದ 70 ರೂಪಾಯಿಯಲ್ಲೇ ₹70 ಕೋಟಿಯ ಸಾಮ್ರಾಜ್ಯ ಕಟ್ಟಿದ ಈತನ ಶ್ರಮ ಕೇವಲ ಅಲ್ಲ, ಆಟೋ ಚಾಲಕರ ಮಗನಾಗಿ ಜನಿಸಿದ ಅವನು, ಜೀವನದ ಅನೇಕ ಕಷ್ಟಗಳನ್ನು ಎದುರಿಸಿದರೂ ತನ್ನ ಕನಸನ್ನು ಕೈಬಿಡಲಿಲ್ಲ. ಹೈದರಾಬಾದ್’ನ ಬಂಜಾರ ಹಿಲ್ಸ್’ನ ಪಕ್ಕದಲ್ಲೇ ಇದ್ದ ಆ ಸಣ್ಣದೊಂದು ಮನೆ ಅಲ್ಲೊಂದು ಕುಟುಂಬ, ಕುಟುಂಬದ ಯಜಮಾನ ಆಟೋ ಡ್ರೈವರ್
ಅವರಿಗೆ ಇಬ್ಬರು ಗಂಡು ಮಕ್ಕಳು. ಹೈದರಾಬಾದ್’ನಲ್ಲಿ ಆಟೋ ಓಡಿಸಿ ಮನೆ ಮಡದಿ ಮಕ್ಕಳನ್ನು ಸಾಕುತ್ತಿದ್ದರು ಆ ತಂದೆ. ಮಕ್ಕಳಲ್ಲಿ ಸಣ್ಣವನಿಗೆ ಕ್ರಿಕೆಟ್ ಹುಚ್ಚು
ಸುತ್ತಮುತ್ತ ಎಲ್ಲೇ ಟೆನಿಸ್ ಬಾಲ್ ಕ್ರಿಕೆಟ್ ಇದ್ದರೂ ಓಡಿ ಬಿಡುತ್ತಿದ್ದ. ಸಾಮನ್ಯವಾಗಿ ಎಲ್ಲಾ ಮಕ್ಕಳಿಗೂ
ಒಂದೋಂದು ಹವ್ಯಾಸ ಇರುತ್ತೆ ಅದಕ್ಕೆ ನೀರೆರೆದು ಪೋಷಿಸುವವರು ಬೇಕಾಗಿದ್ದಾರೆ ಅಷ್ಠೇ. ಕ್ರಿಕೆಟ್ ಅನ್ನ ಕೊಡುವುದಿಲ್ಲ
ನೆಟ್ಟಗೆ ಓದಿ ಒಂದು ಕೆಲಸ ಹಿಡಿದು ನಾಲ್ಕು ಕಾಸು ಸಂಪಾದನೆ ಮಾಡಿ ಬದುಕು ಕಟ್ಟಿಕೋ ಇದು ಸಾಮನ್ಯವಾಗಿ ಎಲ್ಲಾ ಬಡ ಕುಟುಂಬಗಳ ಮನೆಗಳಲ್ಲಿ ಮಕ್ಕಳು ಹವ್ಯಾಸಕ್ಕೆ ಬಿದ್ದರೆ ಟೀಕಿಸಲು ಬಳಸುವ ಸಾಮನ್ಯ ಸಾಲುಗಳು. ಆದರೆ ಮೊಹಮ್ಮದ್ ಸಿರಾಜ್ ತಂದೆ ಇದ್ಯಾವ ಟೀಕೆಗಳಿಗೂ ತಲೆಯೆ
ಕೆಡಿಸಿಕೊಳ್ಳಲೇ ಇಲ್ಲ. ದಿನಕ್ಕೆ 500 ರಿಂದ 800 ರೂಪಾಯಿ ಸಂಪಾದನೆ ಮಾಡುತ್ತಿದ್ದ ಮಿರ್ಜಾ ಮೊಹಮ್ಮದ್
ಗೌಸ್ ಮಗನ ಕ್ರಿಕೆಟ್ ಕನಸಿಗೆ ಬೆಂಗಾವಲಾಗಿ ನಿಂತು
ಬಿಟ್ಟರು ! ದಿನದ ದುಡಿಮೆಯಲ್ಲಿ 70 ರೂಪಾಯಿಗಳನ್ನು
ಮಗನ ಕೈಗಿಡುತ್ತಿದ್ದರು . ಆಗ ಸಿರಾಜ್ ಬಳಿ ಇದ್ದದ್ದೂ ಓಬಿರಾಯನ ಕಾಲದ ಪ್ಲಾಟಿನಾ ಬೈಕ್ ಅದು ಆತನ ಪಾಲಿಗೆ ಎಲ್ಲವೂ , ತಂದೆ ನೀಡುತ್ತಿದ್ದ 70 ರೂಪಾಯಿಗಳನ್ನು
40 ಬೈಕಿನ ಪೆಟ್ರೋಲ್ ಗೆ , 20 ಊಟಕ್ಕೆ
, ಉಳಿಕೆ 10 , ಇದು ಮೊಹಮ್ಮದ್ ಸಿರಾಜ್ ದಿನಚರಿ.
ಯಾಕೆ ಇದನ್ನು ನೆನಪಿಸುತ್ತಿದ್ದೇನೆ ಎಂದರೆ ನಮ್ಮಲ್ಲಿ ಬಹಳಷ್ಟು ಯುವ ಮನಸ್ಸುಗಳಿಗೆ ಆರಂಭ ಶೂರತನ
ಇದೆ ಅದೇ ಶೂರತನವನ್ನು ಕೊನೆಯ ತನಕ ಉಳಿಸಿಕೊಂಡು ಹೋಗುವಲ್ಲಿ ವಿಫಲವಾಗುವುದೆ ಬದುಕಿನ ಇಂದಿನ ಸೋಲಿಗೆ ಪ್ರಮುಖ
ಕಾರಣ. ಆದರೆ ಸಿರಾಜ್ ತನ್ನ ನಿಷ್ಠೇ , ತಾನಿಟ್ಟ
ಗುರಿಯಿಂದ ಯಾವತ್ತೂ ವಿಚಲಿತ ಆಗಲೇ ಇಲ್ಲ . ಅಭ್ಯಾಸಕ್ಕೆಂದು ಬರುತ್ತಿದ್ದವನ ಕಾಲಲ್ಲಿ ಶೂಸ್ ಕೂಡ
ಇರಲಿಲ್ಲ.. ಆರಂಭದಲ್ಲಿ ಬರಿಗಾಲಲ್ಲೇ ಆಡುತ್ತಿದ್ದ.. ಕೊನೆಗೆ ತಂದೆ ನೀಡುತ್ತಿದ್ದ ಹಣದಲ್ಲಿ ಉಳಿಸಿದ
10 ರೂಪಾಯಿ , ತಂದೆ ತಾಯಿ ಕೊಟ್ಟ ದುಡ್ಡಿನಲ್ಲಿ ಒಂದು
ಜೊತೆ ಕ್ರಿಕೆಟ್ ಶೂಸ್ ಖರೀದಿಸಿದ. ಮುಂದೆ ನಡೆದ್ದದ್ದೂ ಎಲ್ಲವೂ ಪವಾಡ ಗುರಿ ತಲುಪುವವರೆಗೆ ಆತ ತಿರುಗಿ ನೋಡಿದ್ದೇ ಇಲ್ಲ . ಯಾರೆ ಆಗಲಿ ಬದುಕಿನಲ್ಲಿ
ಬೆಳೆದು ನಿಂತಾಗ ನಮ್ಮ ಬಾಲ್ಯದ ಕಷ್ಟದ ದಿನಗಳು ಕಣ್ಣ ಮುಂದೆ ಬರಬೇಕು. ಅದು ಕೆಟ್ಟ ಕನಸು ಎಂದು ನಾನು
ಯಾವತ್ತೂ ನಿರ್ಧರಿಸುವುದಿಲ್ಲ ಅದು ಬದುಕಿನ ಉತ್ಸಾಹಕ್ಕೆ ಸಂಜೀವಿನಿ ಎನ್ನುವುದೇ ನನ್ನ ನಂಬಿಕೆ ಮಾತ್ರವಲ್ಲ
ಅಂತಹ ಕಷ್ಟದ ದಿನಗಳು ಬೆಳಗಿನ ಪ್ರಾರ್ಥನೆಯ ಕೈಗಳ ಮದ್ಯೆ ನಮಗೆ ಕಾಣಿಸಬೇಕು. ಸಿರಾಜ್ ಕೂಡ ಅಂತಹ ತಪ್ಪಸ್ಸು ಮಾಡುತ್ತಿದ್ದ ಚೆಂಡನ್ನು ಕೈಯಲ್ಲಿ ಹಿಡಿದಾಗ ಅವನ ಕಣ್ಣಲ್ಲಿ ಕಾಣುತ್ತಿದ್ದದ್ದು ಕೇವಲ ವಿಕೆಟ್ಗಳಲ್ಲ, ಆ ಕ್ಷಣಕ್ಕೆ ಆತನ ಕಷ್ಟ ಕಾರ್ಪಣ್ಯಗಳು
ಬಡತನದ ದಿನಗಳು ಎಲ್ಲಾವೂ ಆತನ ಮನದಲ್ಲಿ ಮೂಡಿ ಬರುತ್ತಿತ್ತು ಆತ ಎಸೆಯುತ್ತಿದ್ದ ಚೆಂಡಿನಲ್ಲಿ ತನ್ನ ಕುಟುಂಬದ ಕನಸುಗಳಿದ್ದವು ಅದಕ್ಕಾಗಿ ಆತನ ಚೆಂಡಿನ ವೇಗ ಅಷ್ಟೋಂದು
ವೇಗವಾಗಿತ್ತು.
ನಿನ್ನ
ಮಗನಿಗೆ ಕ್ರಿಕೆಟ್ ಅನ್ನ ಕೊಡುತ್ತದೆಯೇ ? ಅವನಿಗೇನೋ ಹುಚ್ಚು, ನಿನಗಾದರೂ ಬುದ್ಧಿ ಬೇಡವೇ ? ಎಂದು ಜೊತೆಯಲ್ಲಿ ಆಟೋ ಓಡಿಸುತ್ತಿದ್ದ ಸ್ನೇಹಿತರು ಮಿರ್ಜಾ ಮೊಹಮ್ಮದ್ ಗೌಸ್’ರನ್ನು ಪದೇ ಪದೇ ಪ್ರಶ್ನಿಸುತ್ತಿದ್ದರಂತೆ, ಇದ್ಯಾವುದಕ್ಕೂ
ತಲೆ ಕೆಡಿಸಿಕೊಳ್ಳದೆ ಶಾಂತವಾಗಿದ್ದ ಅದೇ ಮೊಹಮ್ಮದ್
ಗೌಸ್’ರ ಮಗನೇ ಹೈದರಾಬಾದ್’ನಲ್ಲಿ ಕ್ರಿಕೆಟ್ ಆಡುವ ಹುಡುಗರ ಪಾಲಿಗೆ ಅನ್ನದಾತನಾಗಿ ನಿಂತಿದ್ದಾನೆ.
ಅದೇ ಹುಡುಗ ₹70 ಕೋಟಿಗಳ ಸರದಾರ. ಹೈದರಾಬಾದ್ ನಲ್ಲಿ
ಒಂದು ಐಷಾರಾಮಿ ಬಂಗಲೆ, ನಾಲ್ಕು ಐಷಾರಾಮಿ ಕಾರುಗಳಲ್ಲಿಎರಡೂ ಕಾಲು ಕೋಟಿಯ ರೇಂಜ್ ರೋವರ್ ವೋಗ್
, ಎರಡು ಕೋಟಿಯ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ , 75 ಲಕ್ಷದ ಬಿಎಂಡಬ್ಲ್ಯೂ 5 ಸೀರಿಸ್, ಉಡುಗೊರೆಯಾಗಿ
ಬಂದ ಮತ್ತೊಂದು ಮಹೇಂದ್ರ ಥಾರ್ ಇದೆ . ಅವತ್ತು ಬಂಜಾರ ಹಿಲ್ಸ್ ಬಳಿಯಿದ್ದ ಆ ಸಣ್ಣ ಬಾಡಿಗೆ
ಮನೆಯ ಮುಂದೆ ತಂದೆಯ ಆಟೋ, ಪ್ಲಾಟಿನಾ ಬೈಕ್ ಮತ್ತು ಒಂದು ಸೈಕಲ್ ನಿಲ್ಲುತ್ತಿತ್ತು. ಈಗ ಜುಬ್ಲೀ ಹಿಲ್ಸ್’ನಲ್ಲಿರುವ
13 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಮುಂದೆ ಈ ನಾಲ್ಕು ಕಾರುಗಳು ನಿಂತಿರುತ್ತವೆ. ತಂದೆ ಕೊಡುತ್ತಿದ್ದ
70 ರೂಪಾಯಿಯಲ್ಲಿ ದಿನಕ್ಕೆ 10 ರೂಪಾಯಿಗಳನ್ನು ಕೂಡಿಡುತ್ತಿದ್ದ ಹುಡುಗ 10 ವರ್ಷಗಳಲ್ಲಿ ಐಪಿಎಲ್’ನಿಂದ
ಸಂಪಾದಿಸಿರುವ ಹಣ ₹58.50 ಕೋಟಿ.
ಕ್ರಿಕೆಟ್ ಮೇಲಿನ ಆತನ ಬದ್ಧತೆಯನ್ನು ಹೊಗಳಲು ಪದಗಳಿಲ್ಲ, 2021 ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್
ಸರಣಿಯಾಡುತ್ತಿದ್ದಾಗ ಹೈದರಾಬಾದ್’ನಲ್ಲಿದ್ದ ತಂದೆ ಕೋವಿಡ್’ಗೆ ಬಲಿಯಾಗಿದ್ದರು. ತಂದೆಯ ಅಗಲಿಕೆಯ ನೋವನ್ನು ಹೃದಯದಲ್ಲಿ ಇಟ್ಟುಕೊಂಡು ದೇಶಕ್ಕಾಗಿ ಆಡಬೇಕೆಂಬ ಸಂಕಲ್ಪ ಅವನನ್ನು ಇನ್ನಷ್ಟು ಗಟ್ಟಿಗೊಳಿಸಿತು. ಕಾಂಗರೂ ನಾಡಿನಲ್ಲಿ ಕೋವಿಡ್ ಕ್ವಾರಂಟೈನ್’ನಲ್ಲಿದ್ದ, ಭಾರತಕ್ಕೆ ಮರಳಿ ಬಂದರೆ ಮತ್ತೆ ಟೆಸ್ಟ್ ಸರಣಿ ಆಡಲು ಸಾಧ್ಯವಿಲ್ಲ. ಇತ್ತ ಸತ್ತು ಮಲಗಿದ್ದ ತಂದೆ ಮತ್ತು ಕ್ರಿಕೆಟ್ ಅವನ ಕಣ್ಣ ಮುಂದೆ ಬಂದ ಚಿತ್ರಗಳು, ಸಿರಾಜ್ ಆಸ್ಟ್ರೇಲಿಯಾದಲ್ಲೇ ಉಳಿದು ಬಿಟ್ಟ. ಮಗನನ್ನು ಟೆಸ್ಟ್ ಕ್ರಿಕೆಟರ್ ಆಗಿ ನೋಡಬೇಕೆಂಬುದು ತಂದೆಯ ಕನಸಾಗಿತ್ತು. ಟೆಸ್ಟ್ ಸರಣಿಯನ್ನಾಡಿ ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವು ತಂದು ಕೊಟ್ಟ ಕಣ್ಣೀರನ್ನು ಒಳಗೇ ಮರೆಮಾಚಿಕೊಂಡು, ಭಾರತದ ಜೆರ್ಸಿಗೆ ಗೌರವ ತಂದುಕೊಟ್ಟ ಆ ಕ್ಷಣಗಳು ಪ್ರತಿಯೊಬ್ಬ ಯುವಕನಿಗೂ ಪ್ರೇರಣೆ. ಕ್ರಿಕೆಟ್ ಮೇಲಿನ ಪ್ರೀತಿಯೇ ಆತನ ಬದುಕಿನ ದೊಡ್ಡ ಶಕ್ತಿಯಾಗಿತ್ತು. ಸಿರಾಜ್ನ ಯಶಸ್ಸು ನಮಗೆ ಹೇಳುವ ಸಂದೇಶ ಒಂದೇ
"ಪರಿಸ್ಥಿತಿಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ; ನಿಮ್ಮ ಪರಿಶ್ರಮ ಮತ್ತು ನಂಬಿಕೆಯೇ ನಿಮ್ಮ ಗಮ್ಯವನ್ನು ನಿರ್ಮಿಸುತ್ತದೆ." ಇಂದು ಸಿರಾಜ್ ವಿಕೆಟ್ ಪಡೆಯುವಾಗ ಸಂಭ್ರಮಿಸುವುದು ಕೇವಲ ಆತನೋಳಗಿನ ಒಬ್ಬ ಆಟಗಾರನಲ್ಲ ತನ್ನ ಕನಸುಗಳನ್ನು ನಂಬಿದ ಒಂದು ಸಾಮಾನ್ಯ ಹುಡುಗನ ಗೆಲುವು. ಅದಕ್ಕಾಗಿಯೇ ಮೊಹಮ್ಮದ್ ಸಿರಾಜ್ ಲಕ್ಷಾಂತರ ಹೃದಯಗಳಲ್ಲಿ ಕೇವಲ ಕ್ರಿಕೆಟಿಗನಾಗಿ ಅಲ್ಲ, ಹೋರಾಟದ ಜೀವಂತ ಕಥೆಯಾಗಿ ಉಳಿದಿದ್ದಾನೆ. ಈ ಲೇಖನದ ಮೊದಲಿಗೆ ನಾನು ಕುವೆಂಪು
ರವರ ಕಾದಂಬರಿಯ ಸಾಲುಗಳನ್ನು ಉಲ್ಲೇಖಿಸಿದ್ದು ಇದೇ
ಕಾರಣಕ್ಕೆ ಬಡವನಾಗಿ ಹುಟ್ಟುವುದು ತಪ್ಪಲ್ಲ ಆದರೆ ಎನನ್ನೂ ಮಾಡದೆ ಬಡವನಾಗಿ ಸಾಯುವುದು ಅಕ್ಷ್ಯಮ ಅಪರಾದ, ಬದುಕಿನಲ್ಲಿ ನಾವು ಎಲ್ಲಿ , ಯಾವ ಧರ್ಮ, ಜಾತಿಯಲ್ಲಿ, ಕುಟುಂಬದಲ್ಲಿ ಹುಟ್ಟಿದ್ದೇವೆ ಎಂಬುದು ಮುಖ್ಯವಲ್ಲ ನಮ್ಮ ಕನಸುಗಳನ್ನು ಎಷ್ಟು ಪ್ರಾಮಾಣಿಕವಾಗಿ ಬೆನ್ನಟ್ಟುತ್ತೇವೆ ಎಂಬುದೇ ಮುಖ್ಯ. ಬಡತನ, ಟೀಕೆ, ವೈಫಲ್ಯ ಅಥವಾ ಕಷ್ಟಗಳು ಯಾರನ್ನೂ ತಡೆಯಲು ಸಾಧ್ಯವಿಲ್ಲ.
No comments:
Post a Comment