Thursday, 21 May 2026

ಇದು ಲೈಕ್, ಫಾಲೋವರ್ಸ್, ವೀವ್ಸ್ ನಲ್ಲಿರುವ ಜೆನ್ ಜೀ ಯುಗ ..!!

 ಲೇ. ಕೆ.ಎಸ್.ಧನಂಜಯ



           ಇದು ಲೈಕ್‌, ಫಾಲೋ, ಕಮೆಂಟ್ಯುಗ ಇದರ ಬಗ್ಗೆ ಎಚ್ಚರವಹಿಸುವುದು ಅಗತ್ಯ ಇವರೆ  ಜೆನ್ ಜಿ' (Gen Z - Generation Z) ಅಥವಾ ಜನರೇಷನ್ ಝಡ್ 1997 ರಿಂದ 2012 ನಡುವೆ ಜನಿಸಿದವರ ಪೀಳಿಗೆ  ಸಾಮಾನ್ಯವಾಗಿ  ಇವರನ್ನು 'ಜೂಮರ್ಸ್' (Zoomers) ಎಂದೂ ಕರೆಯುತ್ತಾರೆ. ಇವರು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳೊಂದಿಗೆ ಬೆಳೆದ ಮೊದಲ ತಲೆಮಾರು. ಇಂಟರ್ನೆಟ್, ಸ್ಮಾರ್ಟ್ಫೋನ್ ಮತ್ತು ಸೋಶಿಯಲ್ ಮೀಡಿಯಾ ಇವರ ಜೀವನದ ಅವಿಭಾಜ್ಯ ಅಂಗ. ಹೆಚ್ಚು ಸಾಮಾಜಿಕ ಜಾಗೃತಿ ಹೊಂದಿದ್ದು, ಹವಾಮಾನ ಬದಲಾವಣೆ, ಸಮಾನತೆ ಮತ್ತು ಮಾನವ ಹಕ್ಕುಗಳ ವಿಷಯಗಳಲ್ಲಿ ಸಕ್ರಿಯರಾಗಿದ್ದು, ಜಾಗತಿಕವಾಗಿ ಅತ್ಯಂತ ವೈವಿಧ್ಯಮಯ (multicultural) ಪೀಳಿಗೆ ಎಂದು ಪರಿಗಣಿಸಲ್ಪಟ್ಟಿದೆ.  ಕೆಲಸದ ಸ್ಥಳದಲ್ಲಿ (workplace) ನಾವೀನ್ಯತೆ, ನಮ್ಯತೆ (flexibility) ಮತ್ತು ಉತ್ತಮ ಸಂವಹನವನ್ನು ಬಯಸುತ್ತಾರೆ. ಸರಳವಾದ ಭಾಷೆಯಲ್ಲಿ ಹೇಳುವುದಾದರೆ, ಇವರು ತಂತ್ರಜ್ಞಾನದ ಯುಗದಲ್ಲಿ ಬೆಳೆದ, ಸಾಮಾಜಿಕವಾಗಿ ಜಾಗೃತವಾಗಿರುವ ಯುವ ಪೀಳಿಗೆ.  “ಜನರೇಷನ್ ಝಡ್ಎಂಬ ಪದ ಬಹಳ ಸಾಮಾನ್ಯವಾಗಿ ಕೇಳಿಬರುತ್ತಿದೆ. ಸಾಮಾನ್ಯವಾಗಿ 1997ರಿಂದ 2012 ನಡುವೆ ಜನಿಸಿದವರನ್ನು ಪೀಳಿಗೆಯವರಾಗಿ ಗುರುತಿಸಿದರು,  ಮೊಬೈಲ್‌, ಇಂಟರ್ನೆಟ್‌, ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ತಂತ್ರಜ್ಞಾನಗಳ ನಡುವೆ ಬೆಳೆದ ಮೊದಲ ಸಂಪೂರ್ಣ ಡಿಜಿಟಲ್ಪೀಳಿಗೆಯೇ ಜನರೇಷನ್  ಇದು. ಇವರಲ್ಲಿ ಅಪಾರ ಪ್ರತಿಭೆ, ಆತ್ಮವಿಶ್ವಾಸ ಮತ್ತು ಹೊಸ ಆಲೋಚನೆಗಳ ಸಂಕೇತವಾಗಿದ್ದರೂ, ಇವರು ಕೆಲವು ಗಂಭೀರ ಸಾಮಾಜಿಕ ಮತ್ತು ಮಾನಸಿಕ ಸವಾಲುಗಳನ್ನೂ ಎದುರಿಸುತ್ತಿದ್ದಾರೆ ಎನ್ನುವುದು ಅಷ್ಟೇ ಸತ್ಯ. ಆದ್ದರಿಂದ ಜನರೇಷನ್ ಝಡ್ ಬಗ್ಗೆ ಮಾತನಾಡುವಾಗ ಕೇವಲ ಪ್ರಶಂಸೆ ಅಥವಾ ಟೀಕೆ ಸಾಲದು ಸಮತೋಲನದ ವಿಮರ್ಶೆ ಅಗತ್ಯ.

              ಇವರ ಬದುಕಿನ ಮುಖ್ಯ ಭಾಗವೇ  ಮೊಬೈಲ್ಮತ್ತು ಇಂಟರ್ನೆಟ್‌. ಮಾಹಿತಿ ಪಡೆಯುವುದರಿಂದ ಸ್ನೇಹ ಬೆಳೆಸುವವರೆಗೂ, ಶಿಕ್ಷಣದಿಂದ ಮನರಂಜನೆವರೆಗೂ ಎಲ್ಲವೂ ಡಿಜಿಟಲ್ಜಗತ್ತಿನಲ್ಲೇ ನಡೆಯುತ್ತಿದೆ. ಇದರ ಪರಿಣಾಮವಾಗಿ ಜ್ಞಾನವನ್ನು ವೇಗವಾಗಿ ಪಡೆದುಕೊಳ್ಳುವ  ಸಾಮರ್ಥ್ಯ ಹೆಚ್ಚಿಗೆ ಇದ್ದರೂ , ತಾಳ್ಮೆ ಮತ್ತು ಆಳವಾದ ಚಿಂತನೆ ಕಡಿಮೆಯಾಗುತ್ತಿದೆ. ಒಂದು ನಿಮಿಷದ ವಿಡಿಯೋದಲ್ಲಿ ಬದುಕಿನ ಅರ್ಥ ಹುಡುಕುವ ಇವರುಗಳಲ್ಲಿ  ಪುಸ್ತಕ ಓದುವ ಅಭ್ಯಾಸ, ದೀರ್ಘಕಾಲ ಗಮನ ಕೇಂದ್ರೀಕರಿಸುವ ಶಕ್ತಿ ಮತ್ತು ನೈಜ ಮಾನವೀಯ ಸಂವಹನ ನಿಧಾನವಾಗಿ  ಕುಸುಯುತ್ತಿದೆ ಎಂದರೆ ತಪ್ಪಾಗಲಾರದು

              ಜನರೇಷನ್ ಝಡ್ ಯುವ ಪೀಳಿಗೆಯ ಬದುಕಿನಲ್ಲಿ  ಸಾಮಾಜಿಕ ಜಾಲತಾಣಗಳು ಅತ್ಯಂತ ದೊಡ್ಡ ಮಟ್ಟದ ಪ್ರಭಾವ ಬೀರಿದೆ ಮತ್ತು ಬೀರುತ್ತಿವೆ ಎಂದರೆ ತಪ್ಪಾಗಲಾರದು ಲೈಕ್‌, ಫಾಲೋವರ್ಸ್ವೀವ್ಸ್ ಇವರ ವ್ಯಕ್ತಿತ್ವದ ಮಾನದಂಡಗಳಾಗಿ ಹೊರ ಹೊಮ್ಮುತ್ತಿರುವುದು ದುರಂತವೇ ಸರಿ. ಇದರ ಪರಿಣಾಮವಾಗಿ ಪರಸ್ಪರ ಹೋಲಿಕೆ, ಆತ್ಮವಿಶ್ವಾಸದ ಕೊರತೆ ಮತ್ತು ಮಾನಸಿಕ ಒತ್ತಡ ಹೆಚ್ಚುತ್ತಿರುವುದು ಅಧ್ಯಾಯನಗಳಲ್ಲಿ ಕಂಡುಬರುತ್ತಿದೆ. ಯುವಕರು ತಮ್ಮ ನೈಜ  ಬದುಕಿಗಿಂತಆನ್ಲೈನ್ಇಮೇಜ್‌” ಉಳಿಸಿಕೊಳ್ಳಲು ಹೆಚ್ಚು ಶ್ರಮಿಸುತ್ತಿರುವುದು ನೋಡಿದರೆ, ಸಂತೋಷವನ್ನು ಅನುಭವಿಸುವುದಕ್ಕಿಂತ ಅದನ್ನು ಪೋಸ್ಟ್ಮಾಡುವ ಚಿಂತೆಯೇ ಹೆಚ್ಚಾಗಿದೆ ಎಂಬುದು ಕಳವಳಕಾರಿ ಅಂಶ.

           ಪೀಳಿಗೆಯ ದೊಡ್ಡ ಶಕ್ತಿ ಎಂದರೆ ಸ್ವಾತಂತ್ರ್ಯದ ಅರಿವು ಮತ್ತು ಪ್ರಶ್ನಿಸುವ ಮನೋಭಾವ ,ಜನರೇಷನ್ ಝಡ್ ಅನ್ಯಾಯ, ಅಸಮಾನತೆ ಮತ್ತು ಹಳೆಯ ಮೂಢನಂಬಿಕೆಗಳನ್ನು ಪ್ರಶ್ನಿಸುವ ಧೈರ್ಯ ಹೊಂದಿದೆ. ಲಿಂಗ ಸಮಾನತೆ, ಪರಿಸರ ಸಂರಕ್ಷಣೆ, ಮಾನಸಿಕ ಆರೋಗ್ಯ, ವ್ಯಕ್ತಿ ಸ್ವಾತಂತ್ರ್ಯ ಇಂತಹ ವಿಷಯಗಳಲ್ಲಿ ಪೀಳಿಗೆ ಹೆಚ್ಚು ಜಾಗೃತವಾಗಿದೆ.  ಪ್ರಶ್ನಿಸುವ ಗುಣ ಸಮಾಜದ ಪ್ರಗತಿಗೆ ಅತ್ಯಗತ್ಯವೇನೋ ಸರಿ ಆದರೆ ಹಳೆಯ ತಲೆಮಾರುಗಳು ಒಪ್ಪಿಕೊಂಡಿದ್ದ ಅನೇಕ ಅನ್ಯಾಯಗಳನ್ನು ಪೀಳಿಗೆ ನಿರಾಕರಿಸುತ್ತಿದೆ. ಇದು ಆರೋಗ್ಯಕರ ಬೆಳವಣಿಗೆಯ ಸಂಕೇತವಾದರೂ , ಸಂಪ್ರದಾಯಸ್ಥ ಕುಟುಂಬಗಳಲ್ಲಿ ಶಿಸ್ತು, ಸಂಯಮ ಮತ್ತು ಸ್ನೇಹಪರ ಬದುಕು ಬೆಳೆಸಿಕೊಂಡ ಹಿರಿಯರಿಗೆ ಇದು ಬಹಳಷ್ಟು ತಲೆನೋವಿನ ವಿಷಯವಾಗಿದೆ.  ಎಲ್ಲೋ ಒಂದು ಕಡೆ ಮಕ್ಕಳು ನಮ್ಮ ಕೈ ತಪ್ಪಿ ಹೊಗುತ್ತಿದ್ದಾರೆ ಎನ್ನುವ ಆತಂಕವೂ ಕಾಡುತ್ತಿರವುದು ಸುಳ್ಳಲ್ಲ. ಜನರೇಷನ್ ಝಡ್ಸಂಬಂಧಗಳನ್ನು ಹೊಸ ರೀತಿಯಲ್ಲಿ ನೋಡುತ್ತಿದೆ. ಸ್ನೇಹ, ಪ್ರೀತಿ, ಕುಟುಂಬ ಎಲ್ಲಾ ವಿಷಯಗಳಲ್ಲಿ ಹೆಚ್ಚು ವೈಯಕ್ತಿಕ ಸ್ವಾತಂತ್ರ್ಯವನ್ನು ಬಯಸುತ್ತಿದೆ. ಆದರೆ ವೇಗದ ಬದುಕಿನ ನಡುವೆ ಸಂಬಂಧಗಳ ಆಳ ಮತ್ತು ಬದ್ಧತೆ ಕೆಲವೊಮ್ಮೆ ಕಡಿಮೆಯಾಗುತ್ತಿದೆ. ತಂತ್ರಜ್ಞಾನ ಜನರನ್ನು ಜೋಡಿಸಿದರೂ, ಮನಸ್ಸುಗಳ ನಡುವೆ ಅಂತರ ಹೆಚ್ಚುತ್ತಿರುವು ತುಂಬಾ ಕಳವಳಕಾರಿ ವಿಷಯ. ಒಂದೇ ಮನೆಯೊಳಗೆ ಕುಳಿತವರೂ ಮೊಬೈಲ್ಮೂಲಕವೇ ಹೆಚ್ಚು ಸಂಪರ್ಕದಲ್ಲಿರುವುದು ಇಂದಿನ ವಾಸ್ತವಕ್ಕೆ ಹಿಡಿದ ಕನ್ನಡಿ.

           ಸಂಪ್ರದಾಯಬದ್ಧ ಉದ್ಯೋಗ ಧೋರಣೆಗಳನ್ನು ಬದಲಿಸಿದ ಪೀಳಿಗೆ ಕೇವಲ ಸಂಬಳಕ್ಕಾಗಿ ಕೆಲಸ ಮಾಡುವುದಕ್ಕಿಂತ, ತಮ್ಮ ಆಸಕ್ತಿ ಮತ್ತು ಜೀವನದ ಸಮತೋಲನಕ್ಕೆ  ಹೆಚ್ಚಿನ ಮಹತ್ವ  ನೀಡುವ ಮೂಲಕ .ಸ್ಟಾರ್ಟ್ಅಪ್‌, ಫ್ರೀಲಾನ್ಸ್ಡಿಜಿಟಲ್ಕ್ರಿಯೇಟಿವಿಟಿ ಮುಂತಾದ ಹೊಸ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುತ್ತಿದೆ. ಆದರೆ ತಕ್ಷಣ ಫಲಿತಾಂಶ ಬೇಕೆಂಬ  ಮನೋಭಾವದಿಂದ  ತಾಳ್ಮೆ ಕಡಿಮೆಯಾಗುತ್ತಿರುವುದು  ಹೆಚ್ಚಾಗಿ  ಗೋಚರಿಸುತ್ತಿದೆ. ಗೆದ್ದೆ ಎಂದು ಮೆರೆಯುವವನಿಗೆ ಸೋಲನ್ನು ಸ್ವೀಕರಿಸುವ ಮನೋಸ್ಥೈರ್ಯ ಕೂಡ ಅಷ್ಟೇ ಪ್ರಮಾಣದಲ್ಲಿ ಇರಬೇಕಾಗುತ್ತದೆ ಆದರೆ ಅದು ಪೀಳಿಗೆಯಲ್ಲಿ ಕಡಿಮೆಯಾಗುತ್ತಿದ್ದು ಅದನ್ನು ಜಾಗೃತಗೊಳಿಸುವ ಕೆಲಸ ಹೆಚ್ಚಾಗಿ ಆಗಬೇಕಾಗಿದೆ.

            ಪ್ರತಿ ಪೀಳಿಗೆಯೂ ತನ್ನದೇ ಆದ ವೈಶಿಷ್ಟ್ಯ ಮತ್ತು ಸವಾಲುಗಳನ್ನು ಹೊಂದಿರುತ್ತದೆ. ಜನರೇಷನ್ ಝಡ್ಅನ್ನು ಕೇವಲಮೊಬೈಲ್ಪೀಳಿಗೆಎಂದು ಟೀಕಿಸುವುದು ಕೂಡ ಸರಿಯಲ್ಲ; ಹಾಗೆಯೇ ಅವರನ್ನು ಅತಿಯಾಗಿ ಹೊಗಳುವುದು ಕೂಡ ಸರಿಯಾದ ಕ್ರಮವಲ್ಲ. ಇವರು ವೇಗದ ಯುಗದ ಮಕ್ಕಳು, ಅಪಾರ ಮಾಹಿತಿ, ಅನೇಕ ಆಯ್ಕೆಗಳು ಮತ್ತು ನಿರಂತರ ಸ್ಪರ್ಧೆಯ ನಡುವೆ ತಮ್ಮ ಗುರುತನ್ನು ಹುಡುಕುತ್ತಿರುವ ಪೀಳಿಗೆ. ಯಾವ ಪೀಳಿಗೆಯೆ ಬರಲಿ ನಾವು ಸ್ವಾಗತಿಸೋಣ ಆದರೆ ಬರುವಂತ ಎಲ್ಲಾ ಸಮೂದಾಯಗಳು ಪ್ರಕೃತಿಯ ನಿಯಮಗಳನ್ನು ಗೌರವಿಸಿ ವ್ಯವಸ್ಥೆಯನ್ನು ಪರಸ್ಪರ ಗೌರವಿಸುತ್ತಾ ಸರಿಯಾದ ಮಾರ್ಗದರ್ಶನ, ಮೌಲ್ಯಾಧಾರಿತ ಶಿಕ್ಷಣ ಮತ್ತು ಮಾನವೀಯ ಸಂವೇದನೆಗಳೊಂದಿಗೆ  ಬೆಳೆದರೆ, ಪೀಳಿಗೆಯಿಂದ ಸಮಾಜಕ್ಕೆ ಹೊಸ ದಿಕ್ಕು ಸಿಗಬಲ್ಲದು. ತಂತ್ರಜ್ಞಾನ ಕೈಯಲ್ಲಿ ಇರಬೇಕು; ಮನಸ್ಸಿನ ಮೇಲೆ ಕುಳಿತು ಪೀಳಿಗೆಯನ್ನು ಆಳಬಾರದು. ಅದೇ ಝೇನ್ಜೀ ಗಳು ಎಂದು ಕರೆಸಿಕೊಳ್ಳುತ್ತಿರುವವರು ಎದುರಿಸುತ್ತಿರುವ ದೊಡ್ಡ ಪ್ರಶ್ನೆ ಮತ್ತು  ದೊಡ್ಡ ಸವಾಲು.

No comments:

Post a Comment