ಕೊಡಗು ಪ್ರಕೃತಿಯ ವರಪ್ರಸಾದ ಈ ನೆಲವು ಹಲವು ಸಾಹಿತಿಗಳನ್ನು ಈ ಕನ್ನಡ ನಾಡಿಗೆ ಉಡುಗೊರೆಯಾಗಿ ಕೊಟ್ಟಿದೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಬರಹಗಾರರಾದ ಗುಲ್ವಾಡಿ ವೆಂಕಟರಾಯರು, ಮೊದಲ ಕನ್ನಡದ ನಿಘಂಟು ರಚಿಸಿದ ಜಾನ್ ಎಫ್ ಕಿಟೇಲ್ ರವರು, ಸಣ್ಣ ಕಥೆಗಳ ಜನಕರೆಂದೆ ಪ್ರಸಿದ್ದರಾದ ಮಾಸ್ತಿಯವರು ಕೊಡಗಿನ ಗೌರಮ್ಮ ಈ ನೆಲದಲ್ಲಿ ಬದುಕಿದವರು ಎನ್ನುವುದು ಈ ಮಣ್ಣಿನ ಹೆಮ್ಮೆ. ಹಾಗೇಯ ಹಲವು ಚಿರಸ್ಥಾಯಿ ಸಾಹಿತಿಗಳಿಗೆ ಈ ನೆಲವು ಜನ್ಮ ನೀಡಿದೆ ಇಂತಹ ಮಹಾನ್ ಸಾಹಿತಿಗಳಲ್ಲಿ ಒಬ್ಬರು ನಮ್ಮ ಶಾನಬಾಗ ರಾಮಯ್ಯ ನಾರಯಣ ರಾವ್.
ಶಾನಬಾಗ ರಾಮಯ್ಯ ನಾರಯಣರಾವ್ ರವರು ಜನಿಸಿದ್ದು ಮೇ 15,1915 ರಂದು ಕೊಡಗಿನ ಮಡಿಕೇರಿಯ ಬಿಳಿಗೇರಿಯಲ್ಲಿ ರಾಮಯ್ಯ ಹಾಗೂ ಸುಬ್ಬಮ್ಮರಿಗೆ ಸುಪುತ್ರರಾಗಿ ಜನಿಸಿದ ಭಾರತಿ ಸುತರವರು ಹುಟ್ಟಿ ಸರಿ ಸುಮಾರು 110 ವರ್ಷಗಳು ಕಳೆದು ಹೋಗಿದೆ, ಎಡಕಲ್ಲು ಗುಡ್ಡದ ಮೇಲೆ, ಬಯಲು ದಾರಿ, ಗಿರಿ ಕನ್ಯೆ, ಹುಲಿ ಹಾಲಿನ ಮೇವು ಸಿನಿಮಾ ಗೊತ್ತಿದೆ ಆದರೆ ಅದರ ಕಾದಂಬರಿಕಾರ ಸಾಹಿತಿ ಕೊಡಗಿನ ನೆಲದಲ್ಲಿ ಇದ್ದರೂ ಎನ್ನುವುದೇ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರು ನಮ್ಮ ಜಿಲ್ಲೆಯವರು ಎನ್ನುವುದೇ ನಮ್ಮ ಹಿರಿಮೆ ಮತ್ತು ಅಸ್ಮಿತೆ. ಭಾರತಿಸುತರ ಕುಟುಂಬದವರು ದಾರೋಟು ಎಂಬ ಗ್ರಾಮ ಬಿಟ್ಟು ಮಡಿಕೇರಿಯ ಬಿಳಿಗಿರಿ ಬಳಿಗೆ ಬಂದು ನೆಲೆಸಿದವರಂತೆ ಕನ್ನಡ ಸಾಹಿತ್ಯ ಪರಿಷತ್ತು ಅವರ ನೆನಪಿಗಾಗಿ ಮೇಕೆರಿಯಿಂದ ಬಿಳಿಗೇರಿ ಹೋಗುವ ರಸ್ತೆಗೆ ಭಾರತಿಸುತ ರಸ್ತೆ ಎಂದು ನಾಮಕರಣ ಮಾಡಿ ಸಾಹಿತಿಗೆ ಗೌರವ ಸಲ್ಲಿಸಿದೆ. ಇವರು ಚಿಕ್ಕವರಿದ್ದಾಗಲೇ ಮಹಾತ್ಮ ಗಾಂಧಿಯವರ ಪ್ರಭಾವಕ್ಕೊಳಗಾಗಿ ಹಲವು ಸ್ವಾತಂತ್ರ ಚಳುವಳಿಗಳಲ್ಲಿ ಭಾಗವಹಿಸಿ ಸೆರೆಮನೆವಾಸವನ್ನೂ ಅನುಭವಿಸಿದರು. ಈ ಸ್ವಾತಂತ್ರ ಹೋರಾಟದ ಚಟುವಟಿಕೆಯ ಕಾರಣದಿಂದಾಗಿ ಕೊಡಗಿನಿಂದ ಗಡಿಪಾರು ಕೂಡ ಆಗಿದ್ದರು. ನಂತರದ ಕಾಲದಲ್ಲಿ ಕುಶಾಲನಗರದ ಬಳಿಯ ಕಣಿವೆ ಗ್ರಾಮದಲ್ಲಿ ನೆಲೆನಿಂತ ಇವರು ನಾಗವೇಣಿ ಎಂಬುವವರನ್ನು ವಿವಾಹವಾದರು, ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಜೀವನವನ್ನು ಪುನಾರಂಭಿಸಿ ನಂತರ ವಿರಾಜಪೇಟೆ ಹಾಗೂ ಆಗಿನ ಕಾಲಕ್ಕೆ ಮಾದರಿ ಶಾಲೆಯಾಗಿದ್ದ ಮಡಿಕೇರಿಯ ಸೆಂಟ್ರಲ್ ಹೈ ಸ್ಕೂಲ್ ನಲ್ಲಿ ಕನ್ನಡ ಮೇಷ್ಟ್ರಾಗಿ ದುಡಿದವರು ಕೊಡಗಿನ ಯಾವುದೇ ಕೃಷಿ ಅಥವಾ ಬುಡುಕಟ್ಟಿನ ಸಮುದಾಯವನ್ನಾಗಲಿ, ಭಾರತೀಯಸುತರು ತೆರೆದ ಮನಸ್ಸಿನಿಂದ ನೋಡಲು ಪ್ರಯತ್ನಿಸಿದ್ದಾರೆ ಕೊಡವರ ಪರಕಳಿ ಬೋಳಕಾಟ ಇತ್ಯಾದಿ ಸಾಂಸ್ಕೃತಿಕ ಜೀವನವನ್ನು ಬೇರೆ ಯಾರು ಅಷ್ಟು ಚೆನ್ನಾಗಿ ಕನ್ನಡಿಗರಿಗೆ ಪರಿಚಯಿಸಿರುವುದಿಲ್ಲ
ಭಾರತಿ ಸುತ್ತರು 9ನೇ ತರಗತಿಯಲ್ಲಿರುವಾಗಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ವಯನಾಡಿನಲ್ಲಿ ಚಳುವಳಿ ನಡೆಸಿದ ಸಂದರ್ಭದಲ್ಲಿ ದಸ್ತಗಿರಿಯಾಗಿ ಆರು ತಿಂಗಳ ಕಾಲ ಜೈಲು ಅನುಭವಿಸುತ್ತಾರೆ, 1932 ರಲ್ಲಿ ಮತ್ತೆ ಬಂಧನಕ್ಕೆ ಒಳಗಾಗಿ ಕಣ್ಣೂರಿನ ಜೈಲಿನಲ್ಲಿ ಇದ್ದಾಗ ಪ್ರಮುಖ ಕಮಿನಿಸ್ಟ್ ನಾಯಕರುಗಳಾದ ಎ.ಕೆ. ಗೋಪಾಲನ್, ನಂಬೂದರಿ ಪಾಡ್ ಮತ್ತಿತರ ಎಡಪಂಥಿಯ ನಾಯಕರಿಂದ ಪ್ರಭಾವಿತರಾದವರು. ಅವರ ಮಗಳು ಹಾಗೂ ಬರಹಗಾರ್ತಿ ಕುಸುಮಾ ಶಾನಭಾಗ್ ತಮ್ಮ ಪುಟಗಳ ನಡುವಿನ ನವಿಲುಗರಿʼ ಎಂಬ ಪುಸ್ತಕದಲ್ಲಿ ತಂದೆಯ ಬಗ್ಗೆ ಪ್ರೀತಿಯಿಂದ ಹೇಳಿದ್ದಾರೆ. ಬಹಳ ಚಿಕ್ಕ ವಯಸಿನಲ್ಲೆ ಬರವಣಿಗೆಯಲ್ಲಿ ತೊಡಗಿಸಿಕೊಂಡ ಇವರು ದೇಶಾಭಿಮಾನದ ಪ್ರತೀಕವಾಗಿ "ಭಾರತಿಸುತ" ಎಂಬ ಕಾವ್ಯನಾಮದಲ್ಲಿ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದವರು. ತಮ್ಮ ಜೀವಮಾನದಲ್ಲಿ ಒಟ್ಟು 32 ಕಾದಂಬರಿಗಳನ್ನು ಬರೆದಿದ್ದಾರೆ, ಇವರ ಕಾದಂಬರಿಗಳು ಕನ್ನಡ ಚಲನಚಿತ್ರಲೋಕದಲ್ಲಿ ಒಂದು ಸಂಚಲನವನ್ನೆ ಸೃಷ್ಟಿ ಮಾಡಿವೆ. ಇವರದೆ ಕಾದಂಬರಿಗಳಾದ ಗಿರಿಕನ್ಯೆ, ಹುಲಿಯ ಹಾಲಿನ ಮೇವು, ಎಡಕಲ್ಲು ಗುಡ್ಡದ ಮೇಲೆ, ಬಯಲುದಾರಿ ಚಲನಚಿತ್ರಗಳಾಗಿ ಅಭೂತಪೂರ್ವ ಯಶಸ್ಸನ್ನು ಪಡೆದಿವೆ. ಮಾತ್ರವಲ್ಲ 08 ಕಥಸಂಕನಗಳು,19 ಮಕ್ಕಳಿಗೆ ಸಂಬಂದಿಸಿದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕದಲ್ಲೆ ಅಗ್ರಗಣ್ಯರೆನಿಸಿದ್ದಾರೆ.ಇವರ ಕಾದಂಬರಿಗಳಾದ "ಹುಲಿ ಬೋನು","ಹುಲಿಯು ಪಂಜರದೊಳಿಲ್ಲ","ಗಿರಿಕನ್ಯೆ" ಹಾಗೂ "ಜಿಂಬ ಹಿಡಿದ ಮೀನು" ಕಥಾಸಂಕಲನ ಕೃತಿಯು ಕನ್ನಡ ಸಾಹಿತ್ಯ ಪುರಸ್ಕಾರವನ್ನು ಪಡೆದುಕೊಂಡಿವೆ. ಇವರ ಬರಹಗಳಲ್ಲಿ ಸಾಮಾನ್ಯವಾಗಿ ಮಹಿಳಾ ಸಂವೇದನೆಯು ಪ್ರಮುಖವಾಗಿ ಕಾಣುವ ಹೆಗ್ಗುರುತುಗಳು ಇದರಿಂದಲೇ ಇವರ ಬಹಳಷ್ಟು ಕಾದಂಬರಿಗಳು ಸ್ತ್ರೀ ಪ್ರಧಾನ ಭೂಮಿಕೆಯನ್ನುಳ್ಳವಾಗಿವೆ.
ಹುಟ್ಟು ಸ್ವಾತಂತ್ರ ಹೋರಟಗಾರ, ಸಂವೇಧನಶೀಲ ಬರಹಗಾರ, ಕಾದಂಬರಿಕಾರ, ಕಥೆಗಾರ, ಶಿಶುಸಾಹಿತಿಯಾದ ಇವರು, ತಮ್ಮ 57 ವರ್ಷ ಜೀವನಕ್ಕೆ ವಿದಾಯ ಹೇಳಿದ್ದು ಏಪ್ರೀಲ್ 04,1973. ಯಾರಲ್ಲಿಯೂ ಕೈ ಚಾಚದೆ ಮೇಷ್ಟ್ರು ಗಿರಿ ಮಾಡುತ್ತಲೇ ಸರಳ ಬದುಕು ನಡೆಸಿದ ಭಾರತಿಸುತರು ಯಾವ ಸೌಕರ್ಯು ಇಲ್ಲದ ನಿರ್ಲಕ್ಷಕ್ಕೆ ಒಳಗಾದ ಒಂದು ಜಿಲ್ಲೆಯಾಗಿದ್ದಾಗ ಕಾಫಿ ಬೆಳೆಗಾರರು ಬಡತನದಲ್ಲಿದ್ದಾಗ ಯಾವ ಬ್ಯಾಂಕು ಸಾಲ ಸೌಲಭ್ಯಗಳು ನೀಡದಿದ್ದ ಕಾಲದಲ್ಲಿ ಕೇವಲ ಒಂದು ಜನಾಂಗದ ಜೀವನ ಮಾತ್ರ ಚಿಂತಿಸದೆ ಗಿರಿಜನರ ಜೀವನಕ್ಕೂ ಬೆಲೆ ಇದೆ ಅವರ ಬದುಕಿನಲ್ಲೂ ಸೌಂದರ್ಯವಿದೆ ಎಂದು ತೋರಿಸಿಕೊಟ್ಟವರು. ಭಾರತಿ ಸುತರು ಕಾಲವಾದ ಮೇಲೆ ಮಾನಸ ಗಂಗೂತ್ರಿಯ ಕನ್ನಡ ಅಧ್ಯಾಯನ ಸಂಸ್ಥೆ ಅವರ ಜ್ಞಾಪಕಾರ್ಥವಾಗಿ ಬ್ರಹ್ಮಗಿರಿ ಎಂಬ ಸ್ಮರಣ ಸಂಚಿಕೆಯನ್ನು ಹೊರ ತಂದಿದ್ದು ಅದರಲ್ಲಿ ಭಾರತಿ ಸುತ ಕಾದಂಬರಿಗಳ ಸಣ್ಣ ಕಥೆಗಳ ವಿಶ್ಲೇಷಣೆ ಸಿಗುತ್ತದೆ. ಮರಣದ ನಂತರ ಕನ್ನಡ ಸಾಹಿತ್ಯ ಅಕಾಡೆಮಿಯಿಂದ 1973 ರಲ್ಲಿ ಮರಣೊತ್ತರವಾಗಿ ಗೌರವ ನೀಡಲಾಗಿದೆ.
ಭಾರತೀಸುತರ ಒಂದು ಕವನದ ಸಾಲುಗಳು ಹೀಗಿವೆ…
ಇರುಳಿನಲ್ಲಿ ದಾರಿಗಾಣದೇ ನೊಂದಿಯೇ ನಾನು
ಕಲ್ಮುಳ್ಳುಗಳನ್ನು ತುಳಿದಿಹೆನು
ಅಂತ್ಯವಿಲ್ಲದ ಕಡಲಿನಂತೆ ಹರಡಿಹುದು
ಭೀಕರ ಯಾಮಿನಿಯು
ಸಂಗಡಿಗರು ಎನಗಿಲ್ಲ ಈ ದಾರಿಯಲ್ಲಿ
ಏಕಾಂಗಿ ನಾನಾಗಿ ಇಡುತಳಿಹೇನು ಹೆಜ್ಜೆಗಳನ್ನು ಮುಂದೆ (ಕವನ ಅಪೂರ್ಣವಾಗಿದೆ)
ಭಾರತೀಸುತರು ಏಕೆ ಪ್ರಚಾರಕ್ಕೆ ಬರಲಿಲ್ಲ ಎನ್ನುವುದಕ್ಕೆ ಮೇಲಿನ ಕವನ ಉತ್ತರ ನೀಡುತ್ತದೆ('' ಬ್ರಹ್ಮಗಿರಿ’’ಅವರ ಮಿತ್ರರಾದ ಎನ್ ಮಹಾಭಲೇಶ್ವರ ಭಟ್,ದಿ.ಕೆ ಸಚ್ಚಿದಾನಂದಯ್ಯ ಮತ್ತು ಎಲ್ಆರ್ ಭಟ್ಟ್ಸಸಂಪಾದಕತ್ವದಲ್ಲಿ ಮೂಡಿ ಬಂದ ಅಭಿನಂದನಾ ಗ್ರಂಥ) ಹಿರಿಯ ಸಾಹಿತಿ ಪ್ರೊ. ದೇಜೆಗೌರವರುಅವರುಮಠ ಕಟ್ಟಿದವರಲ್ಲ, ಪಂಥ ನಿರ್ಮಿಸಿದವರಲ್ಲ,ಸವಾಲೆಸದವರಲ್ಲ, ಶಿಷ್ಯರನ್ನುಛೂ ಬಿಟ್ಟವರಲ್ಲ, ರಾಜಕೀಯ ಮಾಡಿದವರಲ್ಲ,ಆದ್ದರಿಂದ ಅವರು ಲೋಕದ ಗಮನಸೆಳೆಯಲಿಲ್ಲ. ಅವರು ಸೃಷ್ಟಿಸಿರುವ ಸಾಹಿತ್ಯ ಗುಣಮೌಲ್ಯ ಪ್ರಮಾಣಗಳಲ್ಲಿ ದೊಡ್ಡದಾದರೂ, ಅದಕ್ಕನುಗುಣವಾಗಿ ಪ್ರಾಶಸ್ತ್ಯ ಅವರ ಜೀವಿತ ಸಮಯದಲ್ಲಿ ದೊರೆಯದಿದ್ದದ್ದು ಪ್ರಾಜ್ಞರ ಮನಸ್ಸಿನಲ್ಲಿ ಕಳವಳ ಉಂಟುಮಾಡುವಂತ ವಿಚಾರವಾಗಿದೆ. ಇದು ಆ ಕಾಲದಲ್ಲೆ ಭಾರತೀಸುತರಿಗೆ ದೊರೆತ ದೊಡ್ಡ ಪ್ರಶಸ್ತಿ. ಅದು ಇವರೊಬ್ಬರಿಂದ ಮಾತ್ರವಲ್ಲ ಹಾ.ಮ.ನಾಯಕ್, ಕಾವ್ಯನಂದ,ಕಯ್ಯಾರ ಕಿಞ್ಞಣ್ಣ ರೈ,ಜಿ.ಟಿ ನಾರಯಣರಾವ್,ಡಾ!! ಚಿದಾನಂದ ಮೂರ್ತಿ,ಪ್ರೊ.ಅಮೃತ ಸೋಮೇಶ್ವರ, ಡಾ. ಕಮಲಾ ಹಂಪನಾಮುಂತಾದವರ ಅಭಿಪ್ರಾಯವು ಬಹುತೇಕ ಇದೆ ಆಗಿದೆ.





