Saturday, 13 August 2011

ಕೊಡಗಿನ ಸುತ ಕಾದಂಬರಿಗಾರ ಭಾರತೀಸುತ......!

ಕೆ.ಎಸ್.ಧನಂಜಯ,ಮಡಿಕೇರಿ




ಚಿತ್ರ೧.ಭಾರತೀಸುತ. ಚಿತ್ರ ೨.(ಕಯ್ಯಾರ ಕಿಞ್ಞಣ್ಣ ರೈ ಕುಳಿತವರು, ನಿಂತವರು, ರಾಮಚಂದ್ರ, ಶ್ರೀ ಎನ್ ಮಹಾಭಲೇಶ್ವರ ಭಟ್, ಭಾರತೀಸುತರ ಶಿಷ್ಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ.ಪಿ.ರಮೇಶ್, ಕಾರ್ಯದರ್ಶಿ ಬಿ.ಎ.ಷಂಶುದ್ದೀನ್, ಮತ್ತು ಭಾರತೀಸುತರ ಪತ್ನಿ ಶ್ರೀಮತಿ ನಾಗವೇಣಿ ಭಾರತೀಸುತ.)

ಕೊಡಗು ಪ್ರಕೃತಿಯ ವರಪ್ರಸಾದ ಈ ನೆಲವು ಹಲವು ಸಾಹಿತಿಗಳನ್ನು ಈ ಕನ್ನಡ ನಾಡಿಗೆ ಉಡುಗೊರೆಯಾಗಿ ಕೊಟ್ಟಿದೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಬರಹಗಾರರಾದ ಗುಲ್ವಾಡಿ ವೆಂಕಟರಾಯರು, ಮೊದಲ ಕನ್ನಡದ ನಿಘಂಟು ರಚಿಸಿದ ಜಾನ್ ಎಫ್ ಕಿಟೇಲ್ ರವರು, ಸಣ್ಣ ಕಥೆಗಳ ಜನಕರೆಂದೆ ಪ್ರಸಿದ್ದರಾದ ಮಾಸ್ತಿಯವರು ಕೊಡಗಿನ ಗೌರಮ್ಮ ಈ ನೆಲದಲ್ಲಿ ಬದುಕಿದವರು ಎನ್ನುವುದು ಈ ಮಣ್ಣಿನ ಹೆಮ್ಮೆ. ಹಾಗೇಯ ಹಲವು ಚಿರಸ್ಥಾಯಿ ಸಾಹಿತಿಗಳಿಗೆ ಈ ನೆಲವು ಜನ್ಮ ನೀಡಿದೆ ಇಂತಹ ಮಹಾನ್ ಸಾಹಿತಿಗಳಲ್ಲಿ ಒಬ್ಬರು ನಮ್ಮ ಶಾನಬಾಗ ರಾಮಯ್ಯ ನಾರಯಣ ರಾವ್.

        ಶಾನಬಾಗ ರಾಮಯ್ಯ ನಾರಯಣರಾವ್ ರವರು ಜನಿಸಿದ್ದು ಮೇ 15,1915 ರಂದು ಕೊಡಗಿನ ಮಡಿಕೇರಿಯ ಬಿಳಿಗೇರಿಯಲ್ಲಿ ರಾಮಯ್ಯ ಹಾಗೂ ಸುಬ್ಬಮ್ಮರಿಗೆ ಸುಪುತ್ರರಾಗಿ ಜನಿಸಿದ ಭಾರತಿ ಸುತರವರು ಹುಟ್ಟಿ ಸರಿ ಸುಮಾರು 110 ವರ್ಷಗಳು ಕಳೆದು ಹೋಗಿದೆ, ಎಡಕಲ್ಲು ಗುಡ್ಡದ ಮೇಲೆ, ಬಯಲು ದಾರಿ, ಗಿರಿ ಕನ್ಯೆ, ಹುಲಿ ಹಾಲಿನ ಮೇವು ಸಿನಿಮಾ ಗೊತ್ತಿದೆ ಆದರೆ ಅದರ ಕಾದಂಬರಿಕಾರ ಸಾಹಿತಿ ಕೊಡಗಿನ ನೆಲದಲ್ಲಿ ಇದ್ದರೂ ಎನ್ನುವುದೇ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರು ನಮ್ಮ ಜಿಲ್ಲೆಯವರು ಎನ್ನುವುದೇ ನಮ್ಮ ಹಿರಿಮೆ ಮತ್ತು ಅಸ್ಮಿತೆ. ಭಾರತಿಸುತರ ಕುಟುಂಬದವರು ದಾರೋಟು ಎಂಬ ಗ್ರಾಮ ಬಿಟ್ಟು ಮಡಿಕೇರಿಯ ಬಿಳಿಗಿರಿ ಬಳಿಗೆ ಬಂದು ನೆಲೆಸಿದವರಂತೆ ಕನ್ನಡ ಸಾಹಿತ್ಯ ಪರಿಷತ್ತು ಅವರ ನೆನಪಿಗಾಗಿ ಮೇಕೆರಿಯಿಂದ ಬಿಳಿಗೇರಿ ಹೋಗುವ ರಸ್ತೆಗೆ ಭಾರತಿಸುತ ರಸ್ತೆ ಎಂದು ನಾಮಕರಣ ಮಾಡಿ ಸಾಹಿತಿಗೆ ಗೌರವ ಸಲ್ಲಿಸಿದೆ. ಇವರು ಚಿಕ್ಕವರಿದ್ದಾಗಲೇ ಮಹಾತ್ಮ ಗಾಂಧಿಯವರ ಪ್ರಭಾವಕ್ಕೊಳಗಾಗಿ ಹಲವು ಸ್ವಾತಂತ್ರ ಚಳುವಳಿಗಳಲ್ಲಿ ಭಾಗವಹಿಸಿ ಸೆರೆಮನೆವಾಸವನ್ನೂ ಅನುಭವಿಸಿದರು. ಈ ಸ್ವಾತಂತ್ರ ಹೋರಾಟದ ಚಟುವಟಿಕೆಯ ಕಾರಣದಿಂದಾಗಿ ಕೊಡಗಿನಿಂದ ಗಡಿಪಾರು ಕೂಡ ಆಗಿದ್ದರು. ನಂತರದ ಕಾಲದಲ್ಲಿ ಕುಶಾಲನಗರದ ಬಳಿಯ ಕಣಿವೆ ಗ್ರಾಮದಲ್ಲಿ ನೆಲೆನಿಂತ ಇವರು ನಾಗವೇಣಿ ಎಂಬುವವರನ್ನು ವಿವಾಹವಾದರು, ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಜೀವನವನ್ನು ಪುನಾರಂಭಿಸಿ ನಂತರ ವಿರಾಜಪೇಟೆ ಹಾಗೂ ಆಗಿನ ಕಾಲಕ್ಕೆ ಮಾದರಿ ಶಾಲೆಯಾಗಿದ್ದ ಮಡಿಕೇರಿಯ ಸೆಂಟ್ರಲ್ ಹೈ ಸ್ಕೂಲ್ ನಲ್ಲಿ ಕನ್ನಡ ಮೇಷ್ಟ್ರಾಗಿ ದುಡಿದವರು ಕೊಡಗಿನ ಯಾವುದೇ ಕೃಷಿ ಅಥವಾ ಬುಡುಕಟ್ಟಿನ ಸಮುದಾಯವನ್ನಾಗಲಿ, ಭಾರತೀಯಸುತರು ತೆರೆದ ಮನಸ್ಸಿನಿಂದ ನೋಡಲು ಪ್ರಯತ್ನಿಸಿದ್ದಾರೆ ಕೊಡವರ ಪರಕಳಿ ಬೋಳಕಾಟ ಇತ್ಯಾದಿ ಸಾಂಸ್ಕೃತಿಕ ಜೀವನವನ್ನು ಬೇರೆ ಯಾರು ಅಷ್ಟು ಚೆನ್ನಾಗಿ ಕನ್ನಡಿಗರಿಗೆ ಪರಿಚಯಿಸಿರುವುದಿಲ್ಲ

 ಭಾರತಿ ಸುತ್ತರು 9ನೇ ತರಗತಿಯಲ್ಲಿರುವಾಗಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ವಯನಾಡಿನಲ್ಲಿ ಚಳುವಳಿ ನಡೆಸಿದ ಸಂದರ್ಭದಲ್ಲಿ ದಸ್ತಗಿರಿಯಾಗಿ ಆರು ತಿಂಗಳ ಕಾಲ ಜೈಲು ಅನುಭವಿಸುತ್ತಾರೆ, 1932 ರಲ್ಲಿ ಮತ್ತೆ ಬಂಧನಕ್ಕೆ ಒಳಗಾಗಿ ಕಣ್ಣೂರಿನ ಜೈಲಿನಲ್ಲಿ ಇದ್ದಾಗ ಪ್ರಮುಖ ಕಮಿನಿಸ್ಟ್ ನಾಯಕರುಗಳಾದ ಎ.ಕೆ. ಗೋಪಾಲನ್, ನಂಬೂದರಿ ಪಾಡ್ ಮತ್ತಿತರ ಎಡಪಂಥಿಯ ನಾಯಕರಿಂದ ಪ್ರಭಾವಿತರಾದವರು. ಅವರ ಮಗಳು ಹಾಗೂ ಬರಹಗಾರ್ತಿ ಕುಸುಮಾ ಶಾನಭಾಗ್ ತಮ್ಮ ಪುಟಗಳ ನಡುವಿನ ನವಿಲುಗರಿʼ ಎಂಬ ಪುಸ್ತಕದಲ್ಲಿ ತಂದೆಯ ಬಗ್ಗೆ ಪ್ರೀತಿಯಿಂದ ಹೇಳಿದ್ದಾರೆ. ಬಹಳ ಚಿಕ್ಕ ವಯಸಿನಲ್ಲೆ ಬರವಣಿಗೆಯಲ್ಲಿ ತೊಡಗಿಸಿಕೊಂಡ ಇವರು ದೇಶಾಭಿಮಾನದ ಪ್ರತೀಕವಾಗಿ  "ಭಾರತಿಸುತ" ಎಂಬ ಕಾವ್ಯನಾಮದಲ್ಲಿ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದವರು. ತಮ್ಮ ಜೀವಮಾನದಲ್ಲಿ ಒಟ್ಟು 32 ಕಾದಂಬರಿಗಳನ್ನು ಬರೆದಿದ್ದಾರೆ, ಇವರ ಕಾದಂಬರಿಗಳು ಕನ್ನಡ ಚಲನಚಿತ್ರಲೋಕದಲ್ಲಿ ಒಂದು ಸಂಚಲನವನ್ನೆ ಸೃಷ್ಟಿ ಮಾಡಿವೆ.  ಇವರದೆ ಕಾದಂಬರಿಗಳಾದ ಗಿರಿಕನ್ಯೆ, ಹುಲಿಯ ಹಾಲಿನ ಮೇವು, ಎಡಕಲ್ಲು ಗುಡ್ಡದ ಮೇಲೆ, ಬಯಲುದಾರಿ ಚಲನಚಿತ್ರಗಳಾಗಿ ಅಭೂತಪೂರ್ವ ಯಶಸ್ಸನ್ನು ಪಡೆದಿವೆ. ಮಾತ್ರವಲ್ಲ 08 ಕಥಸಂಕನಗಳು,19 ಮಕ್ಕಳಿಗೆ ಸಂಬಂದಿಸಿದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕದಲ್ಲೆ ಅಗ್ರಗಣ್ಯರೆನಿಸಿದ್ದಾರೆ.ಇವರ ಕಾದಂಬರಿಗಳಾದ "ಹುಲಿ ಬೋನು","ಹುಲಿಯು ಪಂಜರದೊಳಿಲ್ಲ","ಗಿರಿಕನ್ಯೆ" ಹಾಗೂ "ಜಿಂಬ ಹಿಡಿದ ಮೀನು" ಕಥಾಸಂಕಲನ  ಕೃತಿಯು ಕನ್ನಡ ಸಾಹಿತ್ಯ ಪುರಸ್ಕಾರವನ್ನು ಪಡೆದುಕೊಂಡಿವೆ. ಇವರ ಬರಹಗಳಲ್ಲಿ ಸಾಮಾನ್ಯವಾಗಿ ಮಹಿಳಾ ಸಂವೇದನೆಯು ಪ್ರಮುಖವಾಗಿ ಕಾಣುವ ಹೆಗ್ಗುರುತುಗಳು ಇದರಿಂದಲೇ ಇವರ ಬಹಳಷ್ಟು ಕಾದಂಬರಿಗಳು ಸ್ತ್ರೀ ಪ್ರಧಾನ ಭೂಮಿಕೆಯನ್ನುಳ್ಳವಾಗಿವೆ.

       ಹುಟ್ಟು ಸ್ವಾತಂತ್ರ ಹೋರಟಗಾರ, ಸಂವೇಧನಶೀಲ ಬರಹಗಾರ, ಕಾದಂಬರಿಕಾರ, ಕಥೆಗಾರ, ಶಿಶುಸಾಹಿತಿಯಾದ ಇವರು, ತಮ್ಮ 57 ವರ್ಷ ಜೀವನಕ್ಕೆ ವಿದಾಯ ಹೇಳಿದ್ದು   ಏಪ್ರೀಲ್ 04,1973.  ಯಾರಲ್ಲಿಯೂ ಕೈ ಚಾಚದೆ  ಮೇಷ್ಟ್ರು ಗಿರಿ ಮಾಡುತ್ತಲೇ ಸರಳ ಬದುಕು ನಡೆಸಿದ ಭಾರತಿಸುತರು ಯಾವ ಸೌಕರ್ಯು ಇಲ್ಲದ ನಿರ್ಲಕ್ಷಕ್ಕೆ ಒಳಗಾದ ಒಂದು ಜಿಲ್ಲೆಯಾಗಿದ್ದಾಗ ಕಾಫಿ ಬೆಳೆಗಾರರು ಬಡತನದಲ್ಲಿದ್ದಾಗ ಯಾವ ಬ್ಯಾಂಕು ಸಾಲ ಸೌಲಭ್ಯಗಳು ನೀಡದಿದ್ದ ಕಾಲದಲ್ಲಿ ಕೇವಲ ಒಂದು ಜನಾಂಗದ ಜೀವನ ಮಾತ್ರ ಚಿಂತಿಸದೆ ಗಿರಿಜನರ ಜೀವನಕ್ಕೂ ಬೆಲೆ ಇದೆ ಅವರ ಬದುಕಿನಲ್ಲೂ ಸೌಂದರ್ಯವಿದೆ ಎಂದು ತೋರಿಸಿಕೊಟ್ಟವರು.  ಭಾರತಿ ಸುತರು ಕಾಲವಾದ ಮೇಲೆ ಮಾನಸ ಗಂಗೂತ್ರಿಯ ಕನ್ನಡ ಅಧ್ಯಾಯನ ಸಂಸ್ಥೆ ಅವರ ಜ್ಞಾಪಕಾರ್ಥವಾಗಿ ಬ್ರಹ್ಮಗಿರಿ ಎಂಬ ಸ್ಮರಣ ಸಂಚಿಕೆಯನ್ನು ಹೊರ ತಂದಿದ್ದು ಅದರಲ್ಲಿ ಭಾರತಿ ಸುತ ಕಾದಂಬರಿಗಳ ಸಣ್ಣ ಕಥೆಗಳ ವಿಶ್ಲೇಷಣೆ ಸಿಗುತ್ತದೆ. ಮರಣದ ನಂತರ ಕನ್ನಡ ಸಾಹಿತ್ಯ ಅಕಾಡೆಮಿಯಿಂದ 1973 ರಲ್ಲಿ ಮರಣೊತ್ತರವಾಗಿ ಗೌರವ ನೀಡಲಾಗಿದೆ.

ಭಾರತೀಸುತರ ಒಂದು ಕವನದ ಸಾಲುಗಳು ಹೀಗಿವೆ…

ಇರುಳಿನಲ್ಲಿ ದಾರಿಗಾಣದೇ ನೊಂದಿಯೇ ನಾನು

ಕಲ್ಮುಳ್ಳುಗಳನ್ನು ತುಳಿದಿಹೆನು

ಅಂತ್ಯವಿಲ್ಲದ ಕಡಲಿನಂತೆ ಹರಡಿಹುದು

ಭೀಕರ ಯಾಮಿನಿಯು

ಸಂಗಡಿಗರು ಎನಗಿಲ್ಲ ಈ ದಾರಿಯಲ್ಲಿ

ಏಕಾಂಗಿ ನಾನಾಗಿ ಇಡುತಳಿಹೇನು ಹೆಜ್ಜೆಗಳನ್ನು ಮುಂದೆ (ಕವನ ಅಪೂರ್ಣವಾಗಿದೆ)

ಭಾರತೀಸುತರು ಏಕೆ ಪ್ರಚಾರಕ್ಕೆ ಬರಲಿಲ್ಲ ಎನ್ನುವುದಕ್ಕೆ ಮೇಲಿನ ಕವನ       ಉತ್ತರ ನೀಡುತ್ತದೆ('' ಬ್ರಹ್ಮಗಿರಿ’’ಅವರ ಮಿತ್ರರಾದ ಎನ್ ಮಹಾಭಲೇಶ್ವರ   ಭಟ್,ದಿ.ಕೆ ಸಚ್ಚಿದಾನಂದಯ್ಯ ಮತ್ತು ಎಲ್ಆರ್ ಭಟ್ಟ್ಸಸಂಪಾದಕತ್ವದಲ್ಲಿ ಮೂಡಿ ಬಂದ ಅಭಿನಂದನಾ ಗ್ರಂಥ)  ಹಿರಿಯ       ಸಾಹಿತಿ     ಪ್ರೊದೇಜೆಗೌರವರುಅವರುಮಠ ಕಟ್ಟಿದವರಲ್ಲಪಂಥ ನಿರ್ಮಿಸಿದವರಲ್ಲ,ಸವಾಲೆಸದವರಲ್ಲಶಿಷ್ಯರನ್ನುಛೂ ಬಿಟ್ಟವರಲ್ಲರಾಜಕೀಯ ಮಾಡಿದವರಲ್ಲ,ಆದ್ದರಿಂದ ಅವರು ಲೋಕದ ಗಮನಸೆಳೆಯಲಿಲ್ಲಅವರು ಸೃಷ್ಟಿಸಿರುವ  ಸಾಹಿತ್ಯ  ಗುಣಮೌಲ್ಯ  ಪ್ರಮಾಣಗಳಲ್ಲಿ  ದೊಡ್ಡದಾದರೂ,  ಅದಕ್ಕನುಗುಣವಾಗಿ  ಪ್ರಾಶಸ್ತ್ಯ  ಅವರ  ಜೀವಿತ ಸಮಯದಲ್ಲಿ  ದೊರೆಯದಿದ್ದದ್ದು  ಪ್ರಾಜ್ಞರ  ಮನಸ್ಸಿನಲ್ಲಿ  ಕಳವಳ  ಉಂಟುಮಾಡುವಂತ ವಿಚಾರವಾಗಿದೆ.  ಇದು  ಕಾಲದಲ್ಲೆ ಭಾರತೀಸುತರಿಗೆ ದೊರೆತ ದೊಡ್ಡ ಪ್ರಶಸ್ತಿಅದು ಇವರೊಬ್ಬರಿಂದ ಮಾತ್ರವಲ್ಲ     ಹಾ..ನಾಯಕ್,  ಕಾವ್ಯನಂದ,ಕಯ್ಯಾರ ಕಿಞ್ಞಣ್ಣ ರೈ,ಜಿ.ಟಿ ನಾರಯಣರಾವ್,ಡಾ!! ಚಿದಾನಂದ ಮೂರ್ತಿ,ಪ್ರೊ.ಅಮೃತ ಸೋಮೇಶ್ವರಡಾಕಮಲಾ ಹಂಪನಾಮುಂತಾದವರ ಅಭಿಪ್ರಾಯವು ಬಹುತೇಕ ಇದೆ ಆಗಿದೆ.

Sunday, 7 August 2011

ಕಾಣದ ಗೆಳೆತನಕ್ಕೆ ಹಂಬಲಿಸಿದೇ ಮನ.............

ಕೆ.ಎಸ್.ಧನಂಜಯ,ಮಡಿಕೇರಿ


    ಗೆಳೆಯರೆ ಏಕಲವ್ಯ ಮಹಾಭಾರತ  ಕಥೆಯಲ್ಲಿ ಬರುವ ಒಬ್ಬ ಬಿಲ್ಲು ವಿದ್ಯೆ ಪ್ರವೀಣ. ವ್ಯಕ್ತಿ ಕಾಡಿದರು ಬೇಡಿದರು ಅಂಗಲಾಚಿ ಬೇಡಿದರು ದ್ರೋಣಚಾರ್ಯರು ಗುರುವಾಗಿ ಏಕಲವ್ಯನಿಗೆ ಸಿಗಲಿಲ್ಲ. ಆದರೆ ಗುರುವಾಗಿ ಅವರನ್ನೆ ಸ್ವೀಕರಿಸುವ ನಿರ್ಧಾರದಿಂದ ಸ್ವತಃ ಏಕಲವ್ಯ ಹೊರ ಬರಲಿಲ್ಲ.  ಏಕಾಗ್ರತೆಯಲ್ಲಿ ಅವನಿಗೆ ತೆರೆಯಾಗಿ ಕೆಲಸ ಮಾಡಿದು  ಆ ಗುರುವಿನ ಮೂರ್ತಿ.( ಹೇಗೆ ಪ್ರಕೃತಿ ಮತ್ತು ಮನುಷ್ಯನ ಮಧ್ಯೆ ಒಂದು ಸೂಕ್ಷ್ಮವಾದ ತೆರೆ ಎಂಬುವುದು  ದೇವರೆಂದು ಪಂಡಿತರು ಕರೆಯುತ್ತಾರೆಯೋ ಹಾಗೇ) ಮನುಷ್ಯನ ಆಂತರಿಕ ಮತ್ತು ಬಾಹ್ಯ ಸಂಭಂದದ ಕೊಂಡಿಯೆ ಗೆಳೆತನ. ಮನುಷ್ಯನ ಜೀವನದ ಅಮೂಲ್ಯ ವಸ್ತು. ಸ್ನೇಹ ಸ್ನೇಹಿತನಿಲ್ಲದ ವ್ಯಕ್ತಿ ಸಂತೆಯಲ್ಲಿಯೂ ಏಕಾಂಗಿ ಎನ್ನುವುದು ಪಾಟೀಲ್ ಪುಟ್ಟಪ್ಪನವರ ನುಡಿ.
     ಗೆಳೆತನಕ್ಕೆ ನಂಬಿಕೆ ಎನ್ನುವುದು ಬಲು ಮುಖ್ಯ ತನ್ನ ತನವನ್ನು, ತನ್ನ ಬದುಕಿನ ಅಮೂಲ್ಯ ಚಿಂತನೆಗಳನ್ನು , ಆಚಾರ ವಿಚಾರಗಳನ್ನು ಇನ್ನೊಬ್ಬ ವ್ಯಕ್ತಿಯ ಆಚಾರ ವಿಚಾರದೊಂದಿಗೆ ಬೆರೆಸಿ ಪರಸ್ಪರ  ಸರಿ ಮತ್ತು ತಪ್ಪುಗಳನ್ನು ವಿಮರ್ಶಿಸಿ ಸರಿಯಾದದ್ದನ್ನು ಅಳವಡಿಸಿ ಕೋಳ್ಳುವುದು ಗೆಳೆತನ. ಇದು ಪರಸ್ಪರ ವ್ಯಕ್ತಿ ಮತ್ತು ವ್ಯಕ್ತಿತ್ವದ ಮಧ್ಯೆ ಇರುವ ಸಂಭಂದದ ಸೇತುವೆ.  ಈ ಸೇತುವೆ ಮೇಲೆ ಮನುಸ್ಸು ಮತ್ತು ಮನುಷ್ಯರ ಆಭಿಯಾನ. ಈ ಆಭಿಯಾನ ಅಗೋಚರ ವಿಶ್ಮಯ ಮತ್ತು ಆಹ್ಲಾದಕ, ಮನುಷ್ಯ ಸಂಘಜೀವಿಯಾಗಿ ಬೆಳವಣಿಗೆ ಕಾಣಲು ಇರುವ ಏಕಮಾತ್ರ ದಾರಿ.  ಗೆಳೆಯ FRIEND ಈ ಪದದ ಮೊದಲ ಮೂರು ಅಕ್ಷರ ಬಾಹ್ಯ ಸಂಭಂದದೊಂದಿಗೆ ಹೆಚ್ಚು ಪ್ರಚಲಿತವಾದರೆ, ಎಂದರೆ ಗುರು,ಗುರುಗಳು ಸಮಾಜದಲ್ಲಿ ನಾವು ಪ್ರತೀಸುವ ಹಿರಿಯ ವ್ಯಕ್ತಿಗಳು. ಒಟ್ಟಿನಲ್ಲಿ ರಕ್ತ ಸಂಭಂದವನ್ನು ಹೊರತುಪಡಿಸಿ ಎನ್ನಬಹುದು, END ಇದು ಬದುಕಿನಲ್ಲಿ ತಂದೆ ತಾಯಿ ಸಂಭಂದ ಹೆಂಡತಿ ಮಕ್ಕಳ ಸಂಭಂದದೊಂದಿಗೆ END ಆಗುತ್ತದೆ. FAITH(ನಂಬಿಕೆ), REAL ನೈಜತೆ, INTIMATE ಪರಸ್ಪರ ವಿಷಯಗಳನ್ನು ಅರಿತುಕೊಳ್ಳುವುದು ಬದುಕಿನ ದೈನಂದಿನ ಆಗು-ಹೋಗುಗಳ ಬಗ್ಗೆ ಚರ್ಚಿಸುವುದು,ಇದು ಬಾಹ್ಯ ಸಂಭಂದದೊಂದಿಗೆ ಬೆರೆತುಕೊಂಡಿರುವ ಸಂಭಂದ. ಆದರೆ EARNEST ಮಾತು ಕೇಳುವುದು ,NEAREST ಹತ್ತಿರವಾಗುವುದು, DEAREST ಪ್ರೀತೀಯವನಾಗಿರುವುದು. ( ಕೆಲವರು ಹತ್ತಿರವಿದ್ದರು ದೂರವೇ ನಿಲ್ಲುತ್ತಾರೆ ಅದು ತಮ್ಮ ಹಮ್ಮವಿನ ಪ್ರದರ್ಶನವಲ್ಲದೆ ಬೇರೆ ಏನು ಅಲ್ಲ.)
     ತಂದೆ-ತಾಯಿ, ಅಣ್ಣ-ಅಕ್ಕಂದಿರ ಮಧ್ಯೆ ಇರುವ ಗೆಳೆತನ. ಬದುಕಿನಲ್ಲಿ ಕೆಟ್ಟ ಸಹವಾಸಗಳು ಮುತ್ತಿಕೋಳ್ಳುವಂತೆ ಒಳ್ಳೆಯ ಸಹವಾಸ ದೊರೆಯುವುದು ವಿರಳ. ಗೆಳೆತನಕ್ಕೆ ತನ್ನದೆ ಆದ ದೊಡ್ಡತನವಿದೆ ಎಂದರೆ ದೊಡ್ಡ ಮನಸ್ಸಿನ ವ್ಯಕ್ತಿಯೊಂದಿಗೆ ಮಾಡಬೇಕು ಬದುಕಿನ ವಿವಿಧ ಮಜಲುಗಳಲ್ಲಿ ಸಿಗುವ ವ್ಯಕ್ತಿಗಳ ಸಹವಾಸ ಮಾಡಬೇಕು. ಸಮಾಜದ ವಿವಿಧ ಕ್ಷೇತ್ರಗಳಲ್ಲಿರು ವ್ಯಕ್ತಿಗಳನ್ನು ಗೆಳೆಯರಾದರೆ ಪರಸ್ಪರ ವಿಷಯಗಳ ವಿನಿಮಯ ಆಗುತ್ತದೆ. ಜ್ಞಾನ ವಿಸ್ತಾರತೆ ಬೆಳೆಯುತ್ತದೆ. ಹೊಸ ವಿಷಯಗಳತ್ತ ಮನಸ್ಸು ಮುಖ ಮಾಡುತ್ತದೆ. ಅದರಿಂದ ವ್ಯಕ್ಯಿಗತವಾಗಿ ಲಾಭವೇ. ಇದರ ಬಗ್ಗೆ ಅಭಿನವ ಬೀಚಿ ಎಂದೆ ಖ್ಯಾತರಾದ ಗಂಗಾವತಿಯ ಪ್ರಾಣೇಶ್ ಒಂದು ಹಾಸ್ಯ ಪ್ರಸಂಗದಲ್ಲಿ ಹೀಗೆ ಹೇಳುತ್ತಾರೆ ಒಬ್ಬ ಪೊಲೀಸ್,ವಕೀಲ,ಮತ್ತು ಡಾಕ್ಟರ್‍ ಒಂದು ಕಟ್ಟೆಯ ಮೇಲೆ ಕುಳಿತು ವಾದ ಮಂಡಿಸುತ್ತಿರುತ್ತಾರೆ ನಾನು ನಿನಗಿಂತ ಮೇಲು ಎಂದು ಒಬ್ಬ, ಮತ್ತೊಬ್ಬ ನಾನು ನಿನಗಿಂತ ಮೇಲು ಎಂದು , ಹೇಗೆ ಎಂದಾಗ ಪೊಲೀಸ್ ಮೊದಲು ಆಭಿಪ್ರಾಯ ಮಂಡಿಸುತ್ತಾನೆ ನಾನು ಸುಮ್ಮ ಸುಮ್ಮನೆ ಒದ್ದು ಒಳಗೆ ಹಾಕುತ್ತೇನೆ, ಆಗ ವಕೀಲ ನೀನು ಒದ್ದು ಒಳಗೆ ಹಾಕಿದರೆ ನಾನು ಬಿಡಿಸಿಕೊಂಡು ಬರುತ್ತೇನೆ. ಆಗ ಡಾಕ್ಟರ್‍ ಹೌದೋ ಮಗನೇ ನೀನು ಸುಮ್ಮ ಸಮ್ಮನೆ ಒದ್ದು ಒಳಗೆ ಹಾಕುತ್ತೀಯ, ಅವ ಸುಮ್ಮ ಸುಮ್ಮನೆ ಬಿಡಿಸಿಕೊಂಡು ಬರುತ್ತಾನೆ. ನಿಮ್ಮಿಬ್ಬರಿಗೂ ತಲೆ ಕೆಟ್ಟಿದೆ ಎಂದು  ನಾನು ಪ್ರಮಾಣ ಪತ್ರ ಕೊಟ್ಟರೆ ? ಇದು ಪರಸ್ಪರ ಯಾರು ಹೆಚ್ಚು ಯಾರು ಕಡಿಮೆ ಎಂಬ ವಾದ ಮಾತ್ರವಲ್ಲ ಪರಸ್ಪರ ವ್ಯಕ್ತಿಯ ಅನಿವಾರ್ಯತೆ ಕೂಡ ಹೌದು. ತನಗಿಂತ ದೊಡ್ಡವರೊಂದಿಗೆ ದೊಡ್ಡ ಮನಸ್ಸಿನವರೊಂದಿಗೆ ಗೆಳೆತನ ಮಾಡಬೇಕೆನ್ನುವುದೇನೋ ಸರಿ ಆದರೆ ದೊಡ್ಡವರೆಲ್ಲ ಜಾಣರಲ್ಲವಲ್ಲ ? ಸ್ನೇಹ ಮಾಡಿದ ಮೇಲೆ ಅವನ್ನು ಕೆಟ್ಟ ವಿಷಯಗಳಿಗಾಗಿ ದೂರ ಮಾಡುವುದು ಕಷ್ಟವೇನೋ ನಿಜ, ದೊಡ್ಡ ಮನಸಿನವರೊಂದಿಗೆ ಗೆಳೆತನ ಮಾಡುವುದರಿಂದ ಒಳ್ಳೆಯ ವಿಷಯಗಳನ್ನು ಮೈಗೂಡಿಸಿಕೊಳ್ಳ ಬಹುದು ಇಲ್ಲಾ ನಮ್ಮಲ್ಲಿರುವ ಅಷ್ಟು ಕೆಟ್ಟತನವನ್ನು ಕಡಿಮೆ ಮಾಡಿ ಕೊಳ್ಳಲುಬಹುದು ? ಒಳ್ಳೆಯ ವ್ಯಕ್ತಿಗಳು ಗೆಳೆಯರಾಗದಿದ್ದರೆ ಏಕಲವ್ಯ ದೋಣಚಾರ್ಯರನ್ನು ಒಲಿಸಿಕೊಂಡ ರೀತಿಯಲ್ಲಾದರೂ ??? Any way happy friendship day……. 





Tuesday, 2 August 2011

ಪೋಷಕರೆ, ಮಾನಗೇಡಿ ಲಜ್ಜೇಗೇಡಿ ಶಿಕ್ಷಕರು ನಿಮ್ಮೂರಿನ ಶಾಲೆಗಳಲ್ಲೂ ಇರಬಹುದು ಜೋಪಾನ....!

ಕೆ.ಎಸ್.ಧನಂಜಯ,ಮಡಿಕೇರಿ.



     ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ವಾಣಿ ಅರ್ಥ ಕಳೆದುಕೊಳ್ಳುತ್ತಿದೆ ಎಂದು ಈಗ ಅನಿಸಿದರೆ ಅದಕ್ಕೆ ಸಂಶಯ ಬೇಡ. ನೆನ್ನೆ ದಟ್ಸ್ ಕನ್ನಡ ಆನ್ ಲೈನ್ ಪತ್ರಿಕೆಯಲ್ಲಿ ಸಹ ಒಬ್ಬ ಶಿಕ್ಷಕ ವಿಧ್ಯಾರ್ಥಿಯ ಮೇಲೆ ಆತ್ಯಾಚಾರ ಎಸಗಿದನ್ನು ಓದಿದೆ, ಮಾತ್ರವಲ್ಲ ಇತ್ತೀಚೀನ ಕೆಲವು ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಗುರುವೆ ಸಹಕಾರ ನೀಡುವುದು ಈಗೆ ಹಲವಾರು ವಿಷಯಗಳನ್ನು ಗಮನಿಸಿದಾಗ ಎಂತಹ ಸಮಾಜಕ್ಕೆ ನಾವು ಮುನ್ನುಡಿ ಬರೆಯುತ್ತಿದ್ದೇವೆ, ವೈಜ್ಞಾನಿಕವಾಗಿ ಮುಂದುವರಿದಂತೆಲ್ಲ ಇಂತಹ ಪ್ರಕರಣಗಳು ವಿಪರೀತವಾಗುತ್ತಿವೆಯಾ? ಅದನ್ನು ಕೆಲವು ಮಾದ್ಯಮಗಳು ಮೇಲಿಂದ ಮೇಲೆ ಭಿತ್ತರಿಸುವ ಔಚಿತ್ಯವಾದರು ಏನು? ಇಂತಹ ನೀತಿಗೆಟ್ಟ ವೃತ್ತಿಯಲ್ಲಿ ತೊಡಗಿರುವ ಶಿಕ್ಷಕರಿಗೆ ಒಂದು ಅಮಾನತ್ತಿನ ಶಿಕ್ಷೆ ವಿಧಿಸಿ ಅವರು ರಿಪೇರಿಯಾಗಿದ್ದಾರೆ ಎಂದು ತಿಳಿದು ಅವರನ್ನು ಮತ್ತೆ ಅದೇ ಪವಿತ್ರವಾದ ಗುರುವಿನ ಸ್ಥಾನದಲ್ಲಿ  ನಿಲ್ಲಿಸಿದರೆ ಅವರ ಮೇಲೆ ಅಭಿಮಾನವಾಗಲಿ, ಗೌರವವಾಗಲಿ ಮೂಡುವುದಾದರು ಹೇಗೆ? ಅಂತವರು ಗುರು ಎನ್ನಲು ಯೋಗ್ಯವಾಗ್ತರಾ? 
     ರಾಷ್ಟ್ರಕವಿ ಕುವೆಂಪುರವರು ಹೇಳುತ್ತಾರೆ " ಅನ್ನ ಬಟ್ಟೆಯನ್ನು ಸಂಪಾದಿಸುವುದು ಮಾತ್ರ ವಿಧ್ಯೆಯ ಗುರಿಯಲ್ಲ, ಓರ್ವ ವ್ಯಕ್ತಿಯನ್ನು ಎಲ್ಲಾ ವಿಧದಲ್ಲಿಯು ಉಪಯುಕ್ತ ವ್ಯಕ್ತಿಯನ್ನಾಗಿ ಪರಿವರ್ತಿಸುವ ಹೊಣೆ ಕೂಡ ಶಿಕ್ಷಣದಾಗಿದೆ. ಇಂತಹ ಮಾತುಗಳಿಗೆ ಇಂತಹ ಗುರುಗಳು ಅರ್ಹವಾಗುತ್ತಾರ? ಇಂತಹ ಶಿಕ್ಷಕರಿಂದ ರಾಷ್ಟ್ರದ ಅಭ್ಯುದಯ ಸಾಧಿಸಬಲ್ಲ ಚೈತನ್ಯ ಹೊಂದಿರುವ ಪ್ರಜೆಗಳನ್ನು ತಯಾರು ಮಾಡುತ್ತಾರೆಯೆ? ಇಂತಹವರು ನೀಡುತ್ತರುವ ವಿದ್ಯೆಯಿಂದ ಉಡಾಪೆ,ಬೇಜವಾಬ್ದಾರಿ, ಅಹಂಕಾರ,ದುಷ್ಟ, ಸಂಕುಚಿತ ಪವೃತ್ತಿ ತುಂಬಿದ ವಿಧ್ಯಾರ್ಥಿ ಸಮೂಹ ನಿರ್ಮಾಣವಾಗುತ್ತದೆಯೆ ಹೊರತು ಉತ್ತಮ ಸಮಾಜವಲ್ಲ. ಇಂತಹ ಸಮೂಹ ನಿರ್ಮಿಸುವ ಶಿಕ್ಷಕರು ಗುರುವು ಅಲ್ಲ, ಅವರಿಂದ ಕಲಿತ ವಿಧ್ಯಾರ್ಥಿಗಳಿಗೆ ಗುರಿಯು ಇರುವುದಿಲ್ಲ.
     ಗೆಳೆಯರೆ ಎಂತಹ ನೀಚ ಶಿಕ್ಷಕರನ್ನು ಇಂತಹ ಶ್ರೇಷ್ಟ ಜಾಗದಲ್ಲಿ ಕಾಣುತ್ತಿದ್ದೇವೆ ಆಧುನಿಕ ಜಗತ್ತಿನಲ್ಲಿ ಸಮಾಜದ ಸರ್ವತೋಮುಖ ಪ್ರಗತಿಗೆ ಅನಿವಾರ್ಯವಾದ ಹಲವಾರು ಪರಿಕರಗಳಲ್ಲಿ ವಿಧ್ಯೆ ಅತ್ಯಂತ  ಪ್ರಮುಖವಾದದ್ದು. ಸಾರ್ವತ್ರಿಕವಾದ ಮೌಲ್ಯಾದರಿತವಾದ ಶಿಕ್ಷಣ ಅಂದಾಗ ಅಂತಹ ಶಿಕ್ಷಣವನ್ನು ನೀಡುವ ಹೊಣೆ ಹೊತ್ತಿರುವ ವ್ಯಕ್ತಿಗೆ ಮಾತ್ರ ಗುರು ಎನ್ನಲು ಸಾಧ್ಯ ಹೊರತು, ವಿದ್ಯಾರ್ಥಿಗಳ ಮೇಲೆ ಕಾಮ ದೃಷ್ಠಿ ಹಾಯಿಸುವ ಮಾನಗೇಡಿ ಮೇಷ್ಟ್ರುಗಳಿಗಲ್ಲ, ಬೋಧನೆ ಜೊತೆ ಯುವಕ ಯುವತಿಯರಲ್ಲಿ ವಿಚಾರ ಪರತೆ, ವೈಜ್ಞಾನಿಕ ಮನೋಭಾವ, ರಾಷ್ಟ್ರ ನಿಷ್ಟೆ ಮೂಡಿಸುವ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ವಿಧ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕರು ಬೇಕಾಗಿದ್ದಾರೆಯೇ ಹೊರತು ಮಾನಗೆಟ್ಟ ಮಯಾðದೆ ಬಿಟ್ಟ ಶಿಕ್ಷಕರಲ್ಲ. ಇವರುಗಳು ಗುರು ಎಂದು ಸಂಭೋದಿಸಲು ಯಾವ ಕೋನದಲ್ಲೂ ಅರ್ಹರಲ್ಲ.
     ಗುರುವಿನ ಕಾರ್ಯ ಒಂದು ವೃತ್ತಿಯಲ್ಲ ಅದೊಂದು ಧಾರ್ಮಿಕ ಕ್ರೀಯೆ " ಗುರು " ಎಂಬ ಶಬ್ದವು ಆತನಲ್ಲಿನ ಆಶಕ್ತಿ ಮತ್ತು ಆದರ್ಶವಾದಕ್ಕೆ ಹಿಡಿದ ಕನ್ನಡಿ, ಎಂದರೆ ಪ್ರಮಾಣಿಕತೆ, ಉತ್ಸಾಹ, ಸೇವಾ ಮನೋಭಾವದ ಪ್ರತೀಕ. ಖಚಿತವಾದ ಗುರಿಯೆಡೆ ದುಡಿಯಲು ಸ್ಫೂರ್ತಿದಾಯಕ ಕಣಜ. ಗುರುವಿನ ವೃತ್ತಿಗೆ ಬರಲು ನೂರೆಂಟು ಕಾರಣವಿರಲಿ, ತನ್ನ ವೃತ್ತಿಯಲ್ಲಿ ನಿರತವಾಗಿ ವಿಧ್ಯಾರ್ಥಿಗಳ ಪೋಷಕರ ಸಾರ್ವಜನಿಕರ ಪ್ರೀತಿಗೆ ಪಾತ್ರವಾಗುವಂತಹ ವಾತವರಣ ನಿಮಿðಸಿಕೊಂಡರೆ ಮಾತ್ರ ಆತ ಗುರು ಎನ್ನಲು ಸಾಧ್ಯ ದುರಂತ ಎಂದರೆ ಇಂತಹ ನೀಚ ಪ್ರವೃತ್ತಿಗೆ ಸಿಕ್ಕಿ ನಲುಗುತ್ತಿರುವವರು ನಮ್ಮ ಹಳ್ಳಿಯ ಬಡತನದಲ್ಲಿ ಬೆಳೆದು ಬಂದ ಮಕ್ಕಳು ಎಂಬುವುದು ಕೂಡ ನೋವಿನ ವಿಚಾರ. ಕೇವಲ ಸಂಬಳಕ್ಕಾಗಿ  ದುಡಿಯುವ ಶಿಕ್ಷಕರಿಗೇನು ಗೊತ್ತು ಕಸ್ತೂರಿಯ ಪರಿಮಳ. ಇಂತಹ ಮಾನಗೇಡಿ ಶಿಕ್ಷಕರು ಮಚ್ಚು ನೀಡಿ ಮರ ಮತ್ತು ನರ ಎರಡನ್ನು ಕಡಿ ಎಂದು ಬೋದಿಸುವವರೆ ಹೊರತು ಇಂತಹವರಿಂದ ಹೆಚ್ಚಿನದನ್ನು ಏನು ನಿರಿಕ್ಷೀಸ ಬಹುದು?
     ಇಂತಹ ಶಿಕ್ಷಕರ ಕೈಗೆ ಯುವ ಸಮುದಾಯವನ್ನು ಮಳೆ ನೀರೆಂದು ನೀಡಿದರೆ ಅದನ್ನು ಚರಂಡಿಗೆ ಹರಿಯ ಬಿಡುತ್ತಾರೆ, ಪರಿಣಾಮ ಸೊಳ್ಳೆಯ ಕಾರ್ಖಾನೆಯಾಗಿ ಮಲೇರಿಯದಿಂದ ಕೂಡಿದ ಸಮಾಜದ ಜನಕರಾಗುತ್ತಾರೆ ಹೊರತು ಅದನ್ನು ಪರಿಷ್ಕರಿಸಿ ಸಮಾಜಕ್ಕೆ ಕುಡಿಯುವ ನೀರನ್ನಾಗಿ ನಿರ್ಮಿಸಿ ಕೊಡುತ್ತಾರೆ ಎನ್ನುವುದು ಕೇವಲ ಕನಸು ಮಾತ್ರ. ಒಂದೆಡೆ ಒಳ್ಳೆಯ ಶಿಕ್ಷಕರಿಂದ ಉತ್ತಮ ಸಮಾಜದವು ನಿಮಾರ್ಣವಾಗುತ್ತಿದೆ ಮತ್ತೊಂದೆಡೆ ಲಜ್ಜೆಗೇಡಿ ಮಾನಗೇಡಿ ಶಿಕ್ಷಕರಿಂದ ರೋಗಗ್ರಸ್ತ ಸಮಾಜವು ಬೆಳೆಯುತ್ತಿರುವುದು ವಿಪರ್‍ಯಾಸ. ಇಂತಹದಕ್ಕೆ ಕಾನೂನಿನಲ್ಲಿ ಅಮಾನತ್ತು, ವೇತನ ತಡೆ ಹಿಡಿಯುವುದು ಹೆಚ್ಚೆಂದರೆ ಅಂತಹ ಗಂಭೀರ ಸಮಯದಲ್ಲಿ ವಜಾ. ಆದರೆ ಒಂದು ಶಾಲೆ ಎಂದ ಮೇಲೆ ಅದನ್ನು ಕೇಳುವ ಪೋಷಕರ ಪರಿಷತ್ತಿದೆ, ಸಾರ್ವಜನಿಕರಿದ್ದೇವೆ ನಾವೆಲ್ಲ ಒಂದಾಗದೆ ಹೋದರೆ ಪರೋಕ್ಷವಾಗಿ ಇಂತಹ ಕೆಟ್ಟ ಸಮಾಜಕ್ಕೆ ನಾವೇ ಕಾರಣರಾದರು ಆಶ್ಚರ್ಯವಿಲ್ಲ. ಶಾಲಾಭಿವೃದ್ದಿ ಸಮಿತಿಗೆ, ರಕ್ಷಣ ಇಲಾಖೆಯವರು,ನಿವೃತ್ತ ಸರ್ಕಾರಿ ನೌಕರರು, ಸಮಾಜದ ಗಣ್ಯ ವ್ಯಕ್ತಿಗಳು, ಮುಂತಾದ ಸಮಾಜ ಪರ ಕಾಳಜಿಯಿರುವ ಸಂಘಟನೆಗಳ ನೇತೃತ್ವ ಬೇಕಾಗಿದೆ. ಹಾಗಾಗಿ ತೀರ್ಮಾನ ನಮ್ಮ ಕೈಯಲ್ಲಿದೆ ನಮ್ಮ ಶಾಲೆ ನಮ್ಮೂರಿನ ಶಾಲೆಯಾಗ ಬೇಕಾಗಿದೆ ಎನಂತೀರಾ ?

Monday, 25 July 2011

"ಪತ್ರೊಡೆ" ಮಡಿಕೇರಿ ಮಳೆಗೊಂದೊ ಖಾದ್ಯ

ಕೆ.ಎಸ್.ಧನಂಜಯ,ಮಡಿಕೇರಿ.


     ಹೊರಗೆ ಕಣ್ಣಾಡಿಸಿ ನೋಡುತ್ತೇನೆ ಧೋ...ಧೋ ಎಂದು ಸುರಿಯುವ ಮಳೆ ಎಲ್ಲಿಯು ಹೊರಗೆ ತಿರುಗಾಡಲು ಬಿಡುವು ನೀಡುತ್ತಿಲ್ಲ. ಒಂದು ತರಹದ ಉದಾಸಿನ. ಮನೆಯೊಳಗೆ ಕುಳಿತು ಏನಾದರು ಮಾಡಿ ತಿನ್ನಬಾರದೆ ಎಂದಾಗ ನೆನಪಿಗೆ ಬಂದದ್ದು  ಪತ್ರೊಡೆ. ಹೊರಗೆ ಬಂದು ನನ್ನ ಹಳೆಯ ಕಾರು ತೆಗೆದುಕೊಂಡು ನೇರವಾಗಿ ಮಡಿಕೇರಿಯ ಸಂತೆಗೆ ಹೋದೆ ಅಂದು ಶುಕ್ರವಾರ ಆದರಿಂದ ನನಗೆ ಪತ್ರೊಡೆ ಸೊಪ್ಪಿನ ಸಮಸ್ಯೆ ಬರಲಿಲ್ಲಿ ಹಾಗೆ ತೆಗೆದುಕೊಂಡು ಬಂದು ಮಡದಿಯ ಕೈಗೆ ನೀಡಿ ನಾಳಿನ ಬೆಳಿಗಿನ ತಿಂಡಿ ಪತ್ರೊಡೆ ಆಗಬೇಕು ಎಂದು ಆದೇಶಿಸಿದೆ.
      ನಮ್ಮೂರಿನ ಆಲದ ಮರ, ಹತ್ತಿ ಮರದಲ್ಲಿ ಹೇರಳವಾಗಿ ಸಿಗುವ ಪತ್ರೊಡೆ ಎಲೆಗಳಿಗೆ ಮಡಿಕೇರಿಯ ಸಂತೆಯಲ್ಲಿ ಬಾರಿ ಬೇಡಿಕೆ ಎಕೆಂದರೆ  ಈ ಆಟಿ (ಕರ್ಕಾಟಕ ಮಾಸ)ಯಲ್ಲಿ ಮಾತ್ರ ಪತ್ರೊಡೆ ಕನಿಲೆ ಮತ್ತು ಆಟಿ ಸೊಪ್ಪು ( ಇದು ಆಟಿ ತಿಂಗಳ 18 ನೇ ದಿವಸ ಇದರಲ್ಲಿ ಹದಿನೆಂಟು ಬಗೆಯ ಔಷಧ ಲಭ್ಯ ಎಂಬ ನಂಬಿಕೆ)ಇದನ್ನು ನಾವು ಹೇರಳವಾಗಿ ಉಪಯೋಗಿಸುವುದು. ಕಣ್ಣಿಗೆ ಮುದ ನೀಡುವ ಹಸಿರು ಕ್ರಾಂತಿಯಂತೆ ಕಂಗೊಳಿಸುವ ಈ ಎಲೆಗೆ ಮಲೆನಾಡಿನಲ್ಲಿ ಈ ಸಮಯದಲ್ಲಿ ಬೇಡಿಕೆ ಇರುವುದು ಸಹಜ.
     ಕವಿ ಬಿ. ಆರ್.ಲಕ್ಷ್ಮಣರಾಯರು ಮದುವೆಯ ಹೊಸತನದಲ್ಲಿ ಹೆಂಡತಿಯ ತವರು ಮನೆಗೆ ಹೋಗಿ ಪತ್ರೊಡೆ ತಿಂದ ಅನುಭವ ತುಂಬಾ ಸೊಗಸಾಗಿದೆ ಹೆಂಡತಿಯ ಮನೆಗೆ ಹೊರಟು ತಿಪಟೂರಿನಲ್ಲಿ ಬಸ್ಸು ಕಾಫಿಗೆ ನಿಲ್ಲುತ್ತದೆ. ಆ ಹೊಟೇಲ್ ನಲ್ಲಿ ಒಂದು ನವ ಜೋಡಿ ಇವರ ಎದುರಿಗೆ ಕುಳಿತುಕೊಳ್ಳುತ್ತಾರಂತೆ. ಆ ಹೊಸ ವಧು ಇವರನ್ನು ಕಂಡು ನಮಸ್ಕಾರ ಸಾರ್ ನಾನು ನಿಮ್ಮ ವಿಧ್ಯಾರ್ಥಿ ಎಂದು ಗೌರವದಿಂದ ನಮಸ್ಕರಿಸುತ್ತಾರೆ.ನಂತರ ಬಸ್ಸಿಗ್ಗೆ ಬಂದು ಕುಳಿತ್ತಾಗ ರಾಯರ ಹೆಂಡತಿಯ ಮುಖ ಊದಿ ಯಾರ್ರಿ ಆ ಶಕುಂತಲೆ "ಶಕೂ ನನಗೆ ನೀನೆ ಬೇಕು" ಎಂದು ಪದ್ಯ ಬರೆದಿದ್ದೆರಲ್ಲ ಅವಳೆನಾ ಇವಳು ಎನ್ನುತ್ತಾರೆ ಅದಕ್ಕೆ ರಾಯರು ಅದು ಕಲ್ಪನೆ ಮರಾಯ್ತಿ ಎಂದು ಸುಮ್ಮನಾಗುತ್ತಾರೆ ಸುಮ್ಮನಾದರೆ ಪರವಾಗಿಲ್ಲ ಒಂದೊಂದು ಮನೆಯಲ್ಲಿ ಇಲ್ಲದ ವಿಷಯಕ್ಕೆ ರಾಮಾಯಣವೆ ನಡೆದು ಬಿಡುತ್ತೆ. ಅದೇನೆ ಇರಲಿ ಶಿವಮೊಗ್ಗೆ ತಲುಪಿದ ರಾಯರಿಗೆ ಅಲ್ಲಿ ಬೆಳಗಿನ ತಿಂಡಿ ಪತ್ರೊಡೆ. ಹೆಸರು ಕೇಳಿದರೆನೆ ನನಗಂತು ಬಾಯಲ್ಲಿ ಜೊಲ್ಲು  ಸುರಿಯುತ್ತೆ ಅಷ್ಟಲ್ಲದೆ ನಮ್ಮ ಜಯಂತ ಕಾಯ್ಕಿಣಿಯವರು "ಓದಿನ ರುಚಿ ಪತ್ರೊಡೆ ಸವಿದಂತೆ" ಎಂದಿದ್ದಾರೆಯೆ. ಹೀಗೆ ರುಚಿ ರುಚಿಯಾಗಿದೆ ಎಂದು ಸ್ವಲ್ಪ ಜಾಸ್ತಿ ತಿಂದ ಲಕ್ಷ್ಮಣರಾಯರು ನಂತರ ಮಡದಿಗೆ ನಾಲಿಗೆ ಮಂದವಾಗ್ತಿದೆ ತುರಿಕೆ ಆಗುತ್ತಿದೆ. ಎಂದು ಹೇಳಿದಕ್ಕೆ ಸುಮ್ಮನ್ನಿದ್ದ ಅವರ ಶ್ರೀಮತಿ ರಾತ್ರಿ ಮಲಗುವ ಕೋಣೆಯಲ್ಲಿ ಸುಳ್ಳು ಹೇಳುವವರು ಪತ್ರೊಡೆ ತಿಂದರೆ  ನಾಲಿಗೆ ತುರಿಸುತ್ತದೆ ಎಂದು ಹೇಳಿಯೆ ಬಿಟ್ಟರು. ಈಗಲಾದರೂ ಒಪ್ಪಿಕೊಳ್ಳಿ ತಿಪಟೂರಿನ ಹೊಟೇಲ್ ನಲ್ಲಿ ಸಿಕ್ಕಿದ ಶಕುಂತಲ ನಿಮ್ಮ ಕಾವ್ಯದ ಶಕುಂತಲೆನಾ? ಹೀಗೆ ಪತ್ರೊಡೆ ಸವಿಗೆ ಕನ್ನಡದ ಸಾರಸತ್ವ ಲೋಕ ಮಾರುಹೋಗಿದೆ.
     ಪಂಜೆ,ಅಡಿಗರು,ದುಂಡಿರಾಜ್, ವೈದೇಹಿ, ಭುವನೇಶ್ವರಿ ಹೆಗಡೆಯವರೆಗೆ ಎಲ್ಲರು ಪತ್ರೊಡೆ ಸವಿಯನ್ನು ಸವಿದವರೆ. ಮಾತ್ರವೇಕೆ ಪತ್ರೊಡೆ ಸವಿದ ನಾಲ್ಕು ಕನ್ನಡ ಕವಿವರ್ಯರಿಗೆ ಜ್ಙಾನಪೀಠ ಪ್ರಶಸ್ತಿಯು ಬಂದಿದೆ ಎಂದು ಎಲ್ಲೋ ಓದಿದ ನೆನಪು ಅದು ಕುವೆಂಪು, ಕಾರಂತ,ಕಾರ್ನಾಡ್ ಮತ್ತು ಅನಂತಮೂರ್ತಿ ಇರಬಹುದೇನೋ. ಅದೇನೆ ಇರಲಿ  ಕೃಷ್ಣ ಹುಟ್ಟಿದ ಕೂಡಲೆ ವಾಸುದೇವ ಅವನನ್ನು ರಾತ್ರೋ ರಾತ್ರಿ ಸೆರೆಮೆನೆಯಿಂದ  ಹೊತ್ತೊಯ್ದು ಹೋಗುವಾಗ ಆ ನಟ್ಟಿರುಳಿನಲ್ಲಿ ಪ್ರಳಯ ಸದೃಶ್ಯ ಮಳೆ ಸುರಿಯುತ್ತದೆ ಆಗ ವಾಸುದೇವೆ ಮಗುವನ್ನು ಮಳೆಯಿಂದ ರಕ್ಷಿಸಲು , ಒಂದು ಮಗುವಿನ ಮೇಲೆ ಮತ್ತೊಂದು ಕೆಳಗೆ ಇಟ್ಟು ಮಗುವನ್ನು ರಕ್ಷಿಸಿದರು ಎಂಬ ನಂಬಿಕೆ ಆಗಗಿ ಗೋಕುಲಾಷ್ಟಮಿಯ ಮೂರು ದಿವಸ  ಅದಕ್ಕೆ ಜಾತ ಶೌಚ ಹಾಗಾಗಿ ಆ ಸಮಯದಲ್ಲಿ ಅದನ್ನು ಪತ್ರೊಡೆಯೊಂದಿಗೆ ಸವಿಯುವುದಿಲ್ಲ ಆ ಸಮಯದಲ್ಲಿ ತಿಂದರೆ ತುರಿಕೆ ಇರುತ್ತದೆ,ಮತ್ತು ಕೃಷ್ಣನನ್ನು ಸುತ್ತಿದ ಎಲೆಯಾದರಿಂದ  ಮಗುವಿನ ಮೈ ಎಣ್ಣೆ ಅದಕ್ಕೆ ತಾಕಿದರಿಂದ ಅದಕ್ಕೆ ನೀರು ತಾಗುವುದಿಲ್ಲ ಎಂಬ ಗಾಡವಾದ ನಂಬಿಕೆ ಮಲೆನಾಡಿನ ಜನರಲ್ಲಿ ಇದೆ. ಹಾಗಾಗಿ ಪತ್ರೊಡೆ ಮಾಡುವಾಗ ಆ ಎಲೆಯ ಬೆನ್ನಿನ ಭಾಗಕ್ಕೆ ಮಸಾಲೆ ಹಚ್ಚುವುದು ಸಮೇತ ಆ ಭಗವಾನ ಮೇಲಿನ ಗೌರವದಿಂದಲೇ ಇರಬೇಕು.
     ನೀವು ಒಮ್ಮೆ ಈಗೆ ಮಾಡಿ ನೋಡಿ ಒಂದು ಪಾವು ಅಕ್ಕಿಗೆ ಅರ್ಧ ಹಿಡಿಯಷ್ಟು ಉದ್ದಿನ ಬೇಳೆ ಸೇರಿಸಿ ಬಾಣಲೆಯಲ್ಲಿ ಹುರಿದು ಅದನ್ನು ತಣ್ಣಗಾದ ಮೇಲೆ ನೀರಿನಲ್ಲಿ ನನೆಸಿಡಬೇಕು ಮೂರು ನಾಲ್ಕು ಗಂಟೆಯ ನಂತರ ಅದಕ್ಕೆ ಎರಡು ಚಮಚ ಜೀರಿಗೆ,ನಾಲ್ಕು ಚಮಚ ಕೊತ್ತಂಬರಿ ಬೀಜ,ಒಂದು ಚಮಚ ಅರಸಿನ ಪುಡಿ. ಸ್ವಲ್ಪ ಪುದಿನಾ, ಕೆಂಪು ಒಣ ಮೆನಸಿನಕಾಯಿ, ಲಿಂಬೆ ಗಾತ್ರದ ಹುಣುಸೆ ಹಣ್ಣು ಮತ್ತು ರುಚಿಗೆ ತಕ್ಕ ಉಪ್ಪು.  ಇವಿಷ್ಟನ್ನು ನಮ್ಮ ಮನೆಯಲ್ಲಿರುವ ಅಡಿಮನೆ ಯಂತ್ರದಿಂದ ರುಬ್ಬಿ ತೀರಾ ನುಣ್ಣಗೆ ಬೇಡ, ನಂತರ ಪತ್ರೊಡೆ ಎಲೆಯನ್ನು ತೆಗೆದುಕೊಂಡು ಅದರ ಬೆನ್ನಿನ ಭಾಗಕ್ಕೆ ದೋಸೆಯಂತೆ ಹಚ್ಚಿ ನಂತರ ಇನ್ನೊಂದು ಎಲೆಯನ್ನು ಬೆನ್ನಿನ ಭಾಗದಿಂದ ಮುಚ್ಚಿ ಚಾಪೆ ಸುತ್ತಿದ ಹಾಗೆ ಸುತ್ತಿ ಇಂಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿ ಬೇಕು ಸ್ವಲ್ಪ ಹೊತ್ತಿನ ನಂತರ ಪತ್ರೊಡೆ ರೆಡಿ. ಸಿಹಿಯನ್ನು ಬಯಸುವವರು ಮಸಾಲೆ ಬದಲು ಸಿಹಿ ಬೆರೆಸ ಬಹುದು ಒಟ್ಟಿನಲ್ಲಿ ಮಳೆಗೆ ಖಾರವೆ ಚೆನ್ನಾಗಿರುವುದು ನೀವು ಮಾಡಿ ನೋಡಿ.


Sunday, 24 July 2011

ಕಥೆಗಾರ್ತಿ ಕೊಡಗಿನ ಗೌರಮ್ಮ


ಕೆ.ಎಸ್.ಧನಂಜಯ,ಮಡಿಕೇರಿ
     ಕೊಡಗಿನ ಗೌರಮ್ಮ ಹೆಸರೆ ಒಂದು ನವ ಚೇತನ ತುಂಬುವಂತದ್ದು. ಇವರು 1931 ರಿಂದ 1929 ರ ಮದ್ಯೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಣ್ಣ ಕಥೆಗಳ ಛಾಪನ್ನು ಬಹಳ ಅಚ್ಚು ಕಟ್ಟಾಗಿ ಒತ್ತಿ ಹೋದ ಕನ್ನಡದ ಕಥೆಗಾರ್ತಿ ಎಂದು ಹೇಳಿದರೆ ಅದು ಉತ್ಪ್ರೇಕ್ಷೆಯಲ್ಲ.  ದಿನಾಂಕ 5.3.1912 ರಲ್ಲಿ ಮಡಿಕೇರಿಯಲ್ಲಿ ಹುಟ್ಟಿದರು. ತದ ನಂತರ 1925 ರ ಸುಮಾರಿಗೆ ಬಿ.ಟಿ ಗೋಪಾಲ ಕೃಷ್ಣ ರವರನ್ನು ವಿವಾಹವಾದರು ಅವರ ಹಿರಿಯ ಮಗ ಬಿ.ಜಿ.ವಸಂತ್ ಈಗಲೂ ಮಡಿಕೇರಿಯಲ್ಲಿ ಕಾವೇರಿ ಕೃಪ ವಿಶ್ವ ಕಲ್ಯಾಣ ಸೇವಾ ಸಮಿತಿವತಿಯಿಂದ ನಡೆಸಲ್ಪಡುವ ಅಶ್ವಿನಿ ಆಸ್ಪತ್ರೆಯಲ್ಲಿ ಸಾಮಾಜಿಕ ಕಳಕಳಿಯಿಂದ ತಮ್ಮ ಇಳಿ ವಯಸ್ಸಿನಲ್ಲೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ ನಾನು ಕೂಡ ಒಂದು ವರ್ಷ ಅದೇ ಆಸ್ಪತ್ರೆಯಲ್ಲಿ ಅವರೊಂದಿಗೆ ದುಡಿಯುವ ಅವಕಾಶ ದೊರೆಯಿತು ಅದು ನನ್ನ ಭಾಗ್ಯವೆಂದೆ ನನ್ನ ನಂಬಿಕೆ. ಅದೇನೆ ಇರಲಿ ಕೊಡಗಿನ ಗೌರಮ್ಮ ತನ್ನ 21 ವರ್ಷದಲ್ಲಿ 27 ಕಥೆಗಳನ್ನು ತಮ್ಮ ಅಮೂಲ್ಯ ಲೇಖನಿಯಿಂದ ಕನ್ನಡ ಸಾರಸತ್ವಲೋಕಕ್ಕೆ ನೀಡಿದ್ದಾರೆಂಬುದು ಗಮನಾರ್ಹವಾದ ವಿಷಯ.ಅವರ ಲೇಖನಿಯಿಂದ ಹರಿದು ಬಂದ ಅವರ 27 ಕಥೆಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ಕಂಬನಿ ಎಂಬ ಕಥಾ ಸಂಕಲನದಲ್ಲಿ 12 ಕಥೆ ಇದ್ದು, ಚಿಗುರು ಎಂಬ ಕಥಾ ಸಂಕಲನದಲ್ಲಿ 9 ಕಥೆಗಳಿವೆ. ಗೌರಮ್ಮನವರ ಕಥೆಗಳಲ್ಲಿ ಪ್ರತಿಭಟನೆಯ ಸ್ವರೂಪ ಮತ್ತು ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ. 2002 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಗೌರಮ್ಮನವರ ಎಲ್ಲಾ ಕಥೆಗಳನ್ನು ಸೇರಿಸಿ ಜೀವನ ಪ್ರೀತಿ ಎಂಬ ಪುಸ್ತಕವನ್ನು ಪ್ರಕಟಿಸಿ ಗೌರವ ಸೂಚಿಸಿದೆ. 
     ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ.ಪಿ.ರಮೇಶ್ ರವರ ನೇತೃತ್ವದಲ್ಲಿ  ಕೊಡಗಿನ ಗೌರಮ್ಮನವರ ಹೆಸರಿನಲ್ಲಿ ಪ್ರತಿ ವರ್ಷ ಕೊಡಗಿನ ಮಹಿಳಾ ಸಾಹಿತ್ಯ ಲೋಕದಲ್ಲಿ ದುಡಿಯುತ್ತಿರುವ ಮಹಿಳಾ ಲೇಖಕಿಯರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸವನ್ನು ನಿರಂತರವಾಗಿ ನಡೆಸುತ್ತಾ ಬರುತ್ತಿದೆ. ಇಲ್ಲಿಯ ತನಕ ಒಟ್ಟು 6 ಜನ ಕೊಡಗು ಜಿಲ್ಲಾ ಮಹಿಳಾ ಸಾಹಿತಿಗಳನ್ನು ಮತ್ತು ಅವರ ಸಾಹಿತ್ಯ ಕೃತಿಯನ್ನು ವಿಮರ್ಶೆಗೊಳಪಡಿಸಿ ಕೊಡಗಿನ ಗೌರಮ್ಮ ಪ್ರಶಸ್ತಿಯನ್ನು ನೀಡುವುದರೊಂದಿಗೆ ತನ್ನ ದಿಟ್ಟ ಹೆಜ್ಜೆಯನ್ನು ಸಾಹಿತ್ಯ ಲೋಕದಲ್ಲಿ ಮಾಡುತ್ತಿದೆ. ಇಲ್ಲಿಯವರೆಗೆ ಶ್ರೀಮತಿ ನಯನ ಕಸ್ಯಪ್ ರವರ "ಮೆಟ್ಟಿಲ ಹಾದಿ" ಕವನ ಸಂಕಲನಕ್ಕೆ,ಬೈತಡ್ಕ ಜಾನಕಿಯವರು ತಮ್ಮ "ಹಸೆಮನೆ",ಮಂಡೆಪಂಡ ಗೀತ ಮಂದಣ್ಣನವರು ತಮ್ಮ "ಮಯೂರ" ಕಾದಂಬರಿಗೆ,ಶ್ರೀಮತಿ ರೇಖಾ ವಸಂತರವರ ತಮ್ಮ "ಕೊಡವ ರಂಗ ಭೂಮಿ" ಸಂಶೋಧನ ಗ್ರಂಥಕ್ಕೆ, ಕಸ್ತೂರಿ ಗೋವಿಂದಮಯ್ಯನವರ ತಮ್ಮ "ಹೆಜ್ಜೆಗಳು" ಕವನ ಸಂಕಲನಕ್ಕೆ, ಕೋರನ ಸರಸ್ವತಿಯವರು "ಕೊಡಗು ಗೌಡ ಸಮುದಾಯ ಸಂಸ್ಕೃತಿ" ಸಂಶೋಧನ ಗ್ರಂಥಕ್ಕೆ ಮತ್ತು ಶ್ರೀಮತಿ ವಿಜಯ ವಿಷ್ಣು ಭಟ್ ಒಂದು ಕೃತಿಗೂ ಕೂಡ  ಗೌರಮ್ಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
         ಗೌರಮ್ಮನವರ ಸಾಹಿತ್ಯದ ಅಭಿವ್ಯಕ್ತಿ ಸೌದಂರ್‍ಯವನ್ನು ಪರಶೀಲಿಸುವುದಕ್ಕಿಂತಲೂ ಅವರ ಸಾಹಿತ್ಯದಲ್ಲಿ ಪ್ರತಿಭಟನೆಯ ಸ್ವರೂಪವನ್ನು ಗಮನಿಸಬೇಕು, 19 ಶತಮಾನದದ ಮೊದಲರ್ದದಲ್ಲಿ ಬಾಳಿ ಕಣ್ಮ್ರರೆಯಾದ ಗೌರಮ್ಮ ಮಹಿಳೆಯಾಗಿ ತಮ್ಮ ಸಮಾಜವನ್ನು ಗ್ರಹಿಸಿದ ಪರಿ ಆಸಕ್ತಿದಾಯಕ, ಮಧ್ಯಮ ವರ್ಗದ ಬ್ರಾಹ್ಮಣ ಸಮಾಜವನ್ನು ಸ್ತ್ರೀ- ಪರುಷರನ್ನು ಸೇರಿದಂತೆ ಗೌರಮ್ಮ ಪರೀಕ್ಷಿಸಿದ ಪರಿ ಮಾತ್ರ ಅಭಿನಂದನಾರ್ಹ. ಬಹುಶಃ ತನ್ನ ಕಾಲದ ಬಹುತೇಕ ಸ್ತ್ರೀಯರಿಗಿಂತ ಹೆಚ್ಚು ಆಧುನಿಕ ವ್ಯಕ್ತಿತ್ವವನ್ನು ಹೊಂದಿದ್ದ ಗೌರಮ್ಮನದು ತನಗಿದ್ದ ವಿದ್ಯೆ ಸಾಮಾಜಿಕ ಕಳಕಳಿ, ಪ್ರಶ್ನಿಸುವ ಪ್ರವೃತ್ತಿ, ಪುರುಷನೊಂದಿಗಿನ ಸ್ತ್ರೀ ಸಮಾಜದ ಸಂಭಂದಗಳ ಸುಧಾರಣೆಗಾಗಿ ಹಂಬಲಿಸುವ ಅವರ ದಿಟ್ಟತನ, ಜೊತೆಗೆ ಪರಂಪರೆಯ ಸಂಪ್ರದಾಯಗಳಲ್ಲಿ ಪ್ರೀತಿಯಿರುವವರ ಕೋಪಕ್ಕು ಒಳಗಾಗದೆ ಇವುಗಳ ವಿರುದ್ದ ಹೋರಾಟದ ಹೆಜ್ಜೆಯನ್ನಿಟ್ಟಾಗ, ನಿಂದನೆಗೂ ಒಳಗಾಗದೆ ಮುನ್ನಡೆದ ಹಾದಿ ಕೂಡ ಗಮನಾರ್ಹವೆ. ಅವರ ಪುನರ್ವಿವಾಹ ಕಥೆ  ವಿದವಾ ವಿವಾಹದಲ್ಲಿನ ಸ್ತ್ರೀ-ಪುರುಷ ನಿಲುವುಗಳ ಟೊಳ್ಳುತನವನ್ನು ಅನಾವರಣ ಮಾಡುತ್ತದೆ. ಲೇಖಕಿಯ ಇಂತಹ ಮನೋಧರ್ಮ ತನ್ನ ಎಲ್ಲಾ ಕಥೆಗಳಲ್ಲಿ ಎದ್ದು ಕಾಣುತ್ತದೆ. ಕೆಲವು ಕಥೆಗಳು ಗಂಡು ಹೆಣ್ಣಿನ ನಡುವಿನ ಸ್ನೇಹವೆಂದರೆ ಲೈಂಗಿಕ ದೃಷ್ಟಿ ಮಾತ್ರವಲ್ಲ, ಸ್ವ ಪ್ರಯೋಜನವಿಲ್ಲದೆ ಪ್ರೇಮವಾಗಳಲಿ ಪ್ರೀತಿಯಾಗಲಿ ಇರಬೇಕು ಎನ್ನುವ ಪ್ರತಿಪಾದನೆಯಿದೆ.
     ಆಹುತಿ ಕಥೆಯಲ್ಲಿ ವರದಕ್ಷಿಣೆಯ ವಿರುದ್ದ ಪ್ರತಿಭಟನೆ ವ್ಯಕ್ತವಾಗಿದೆ. ಮಾನವೀಯ ಮೌಲ್ಯಗಳು ಎದ್ದು ನಿಲ್ಲಬೇಕು ಸಂಪತ್ತು ,ಹಣ ಇವುಗಳ ಅಹಂಕಾರದ ನರ್ತನ ಇದರ ಮುಂದೆ ಗೌಣ್ಯವಾಗಬೇಕು ಎಂಬ ನಿಲುವಿನ ಗೌರಮ್ಮ ಸ್ವಾತಂತ್ರ ಹೋರಾಟದ ಸಮಯಲ್ಲಿ ಗಾಂಧೀಜಿಯವರು ಮಡಿಕೇರಿಗೆ ಭೇಟಿ ನೀಡಿದಾಗ ತನ್ನ ಮನೆಗೆ ಗಾಂಧೀಜಿಯವರು ಬರಲೇ ಬೇಕು ಎಂದು ಹಟ ಮಾಡಿ ಮತ್ತು ಗಾಂಧೀಜಿಯವರು ಮನೆಗೆ ಬಂದಾಗ ತನ್ನ ಮೈ ಮೇಲಿನ ಎಲ್ಲಾ ಒಡವೆಗಳನ್ನು ಬಿಚ್ಚಿ ಕೊಟ್ಟರು, ಗಾಂಧಿಜಿಯವರ ಹೋರಾಟದ ಖರ್ಚಿಗಾಗಿ. ಗಾಂಧೀಜಿಯವರು ಗೌರಮ್ಮನವರ ಮನೆಯಲ್ಲಿ ಸ್ನಾನಕ್ಕಾಗಿ ಉಪಯೋಗಿಸಿದ ಒಂದು ಸಾಬೂನ್ನು ಸುಮಾರು ಕಾಲ ಜೋಪಾನ ಮಾಡಿದ್ದರು ಅದು ಈಗ ಮೈಸೂರು ವಸ್ತು ಸಂಗ್ರಾಲಯದಲ್ಲಿದೆ ಎಂದು ಸಾಹಿತಿ ಪ್ರೋ ಕಾಳೆಗೌಡ ನಾಗವರರವರು ಹೇಳುತ್ತಾರೆ. ಅಲ್ಲಿಂದ ಮುಂದೆ ಗಾಂಧಿಜಿಯವರು ಪುತ್ತೂರಿಗೆ ಹೋಗುತ್ತಾರೆ ಅಲ್ಲಿ ಸಮೇತ ಬಹಳ ಬ್ರಾಹ್ಮಣ ಸಮುದಾಯದ ಮಂದಿ ತಮ್ಮ ಮನೆಗೆ ಆಹ್ವಾನಿಸುತ್ತಾರೆ ಅಲ್ಲಿ ಗಾಂಧೀಜಿಯವರು ನೀವು ದಲಿತರನ್ನು ಮನೆಗೆ ಸೇರಿಸುವುದಿಲ್ಲವಲ್ಲಾ  ಮೊದಲು ಅವರನ್ನು ಗೌರವಿಸಿ ಎಂದು ಹೇಳುತ್ತಾರೆ.
     ನಾನು ಮೊದಲೆ ಹೇಳಿದಂತೆ ಸಮಾಜವನ್ನು ಎದುರು ಹಾಕಿಕೊಳ್ಳದೆ ಸಮಾಜವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಒಂದು ತರಹದ ಆಪ್ತ ಸಮಾಲೋಚನೆ ಮಾಡುವ ರೀತಿ ಬಹಳ ಸೊಗಸಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಮುಖ್ಯವೇ ಹೊರತು ಮದುವೆಯಲ್ಲ ಎನ್ನುವ ಪ್ರತಿಪಾದನೆ. ಇಲ್ಲಿ ಕೆಲವೊಂದು ಕಥೆಗಳು ನೇರ ನಿರೂಪಣೆ ಇದ್ದರೆ ಕೆಲವೊಂದು ಸಂವಾದಗಳ ರೂಪದಲ್ಲಿವೆ. ಇಂತಹ ದಿಟ್ಟ ಕಥೆಗಾರ್ತಿ ತಮ್ಮ 27 ನೇ ವಯಸ್ಸಿಗೆ 21 ಕಥೆಗಳನ್ನು ರಚಿಸಿ ದಿನಾಂಕ 13/4/1939 ರಂದು ಸುಂಟಿಕೊಪ್ಪ ಸಮೀಪದ ಹರದೂರು ಹೊಳೆಯಲ್ಲಿ ( ಅವರ ಪತಿ ಗುಂಡುಕುಟ್ಟಿ ಮಂಜುನಾಥಯ್ಯನವರ ಎಸ್ಟೇಟ್ ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು) ಸುಳಿಗೆ ಸಿಕ್ಕಿ ತನ್ನ ದುರಂತ ಅಂತ್ಯವನ್ನು ಕಾಣುತ್ತಾರೆ ಎನ್ನಲು ಬೇಸರವಾಗುತ್ತದೆ. ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ಎಂದಿಗು ಅಮರವಾಗಿರುತ್ತಾರೆ ಕೊಡಗನ್ನು ಸಾಹಿತ್ಯ ಲೋಕದಲ್ಲಿ ಗುರುತಿಸುವಂತೆ ಮಾಡಿದ ಅವರ ಸೇವೆ ಸ್ಮರಣೀಯ.

ಚಿಗುರು..
1 ಎರಡನೆ ಮದುವೆ 2 ಕಾಗದ ಮಾಲೆ,3 ಬಲಿ, 4 ಒಂದು ಚಿತ್ರ 5 ಪಾಪನ ಮದುವೆ 6 ಅದೃಷ್ಟದ ಆಟ, 7 ನನ್ನ ಮದುವೆ, 8 ಮರದ ಗೊಂಬೆ, 9 ಒಂದು ದಿನ ಮುಂದೆ,

ಕಂಬನಿ
1 ವಾಣಿಯ ಸಮಸ್ಯೆ, 2 ಸನ್ಯಸಿ ರತ್ನ, 3 ಒಂದು ಸಣ್ಣ ಚಿತ್ರ, 4 ಅವನ ಭಾಗ್ಯ, 5 ಕೌಶಲ್ಯ ನಂದನ, 6 ನಾಲ್ಕು ಘಟನೆ, 7 ಪ್ರಾಯಶ್ಚಿತ, 8 ತಪ್ಪತಸ್ಥ ಯಾರು, 9 ಅವನು ಹೋಗಿದ್ದ, 10 ಸುಳ್ಳು ಸ್ವಪ್ನ, 11 ಯಾರು, 12 ಮನುನ ರಾಣಿ


Saturday, 16 July 2011

ಸ್ತ್ರೀ ಎಂದರಷ್ಟೆ ಸಾಕೇ ?

ಕೆ.ಎಸ್.ಧನಂಜಯ,ಮಡಿಕೇರಿ.

     ಭಾರತೀಯ ಸಂಸ್ಕೃತಿಯಲ್ಲಿ ಕುಡಿಯುವ ನೀರಿನಿಂದ ಹಿಡಿದು ಉಸಿರಾಡುವ ಗಾಳಿ ತನಕ ಸ್ತ್ರೀಯ ಉಲ್ಲೇಖವಿದೆ,ಹಾಗಾದರೆ ಇಷ್ಟೊಂದು ಇತಿಹಾಸವಿರುವ ಭಾರತೀಯ ಸಂಸ್ಕೃತಿಯಲ್ಲಿ ಝಾನ್ಸಿ ರಾಣಿ,ಕಿತ್ತೂರು ಚೆನ್ನಮ್ಮ,ಅನಿಬೆಸೆಂಟ್ ಅಷ್ಟೇ ಎಕೆ ಮೊನ್ನೆಯ ಕಲ್ಪನ ಚಾವ್ಲ ,ನೆನ್ನೆಯ ಅಶ್ವಿನಿ ಅಕ್ಕುಂಜೆ ತನಕ ಯಾಕೆ ಒಬ್ಬೊಬ್ಬರೆ ಯಾಕೆ ಸಿಗುತ್ತಾರೆ ಗಂಡಸರಂತೆ ಅವ್ಯರ್‍ಯಾಕೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ,ಹೆಂಗಸರು ಪುರುಷರಿಗಿಂತ ತೀರಾ ಕಡಿಮೆ ಪ್ರಮಾಣದಲ್ಲಂತು ಇಲ್ಲ? ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆ ಫಲಿತಾಂಶ ಬರುವಾಗ ಪುರುಷರಿಗಿಂತ ಹೆಚ್ಚಿಗೆ ಮೇಲುಗೈ ಸಾಧಿಸುವ ನಮ್ಮ ಹೆಣ್ಣು ಮಕ್ಕಳು ಎಲ್ಲಿ ಹೋದರು ? ಆಗೋಂದು ಪ್ರಶ್ನೆ ನನಗೆ ಕಾಡುತ್ತಿದೆ. ಅದಕ್ಕೆ ಉತ್ತರ ನಾವು ಅವರನ್ನು ಮೇಲೆ ಬರುವುದಕ್ಕೆ ಪ್ರೋತ್ಸಹ, ಸಹಕಾರ ಕೊಡುತ್ತಿಲ್ಲವಾ? ಮಾತ್ರವಲ್ಲ ಪುರುಷ ಪ್ರಧಾನ ಸಮಾಜದ ಶೋಷಣೆಯೆ? ಒಂದು ಕಡೆ ಶೇಕಡ ೩೩ ರ ಬಗ್ಗೆ ಮಾತನಾಡುವ ನಾವು ಸುಮ್ಮನೆ ಆಗಿ ಬಿಡುತ್ತೇವೆ,ದುಡಿಮೆ ಕ್ಷೇತ್ರದಲ್ಲಿರುವ ಹೆಣ್ಣು ಮಕ್ಕಳಿಗೆ ನಾವು ಎಷ್ಟು ಗೌರವ ನೀಡುತ್ತೇವೆ?ಅಷ್ಟೆಲ್ಲ ಏಕೆ ಇತ್ತೀಚಿನ ಮೈಸೂರು ವಿವಿಯ ಪಿ ಹೆಚ್ ಡಿ ವಿಧ್ಯಾರ್ಥಿಯ ಗೋಳನ್ನೆ ಗಮನಿಸಿ, ಆಕೆ ಪ್ರತಿಭಟಿಸಿದೆ ತಪ್ಪಾ?ಅದಕ್ಕೆ ಆಕೆ ಅದೆಷ್ಟು ಆಯೋಗಗಳು,ಸಮಿತಿಯ ಮುಂದೆ ಹೋಗಿ ತನ್ನ ಗೋಳನ್ನು ತೋಡಿಕೊಳ್ಳ ಬೇಕಾಯಿತು, ದುರಂತ ಎಂದರೆ ಅಂತಹ ಸಮಿತಿಗಳಲ್ಲಿ ಗಂಡಸರೆ ಜಾಸ್ತಿ ಇರುತ್ತಾರೆ. ಅದು ಆಕೆಯ ಮಾನಸಿಕ ಸ್ಥಿತಿಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಅದು ಹೆಂಗಸರ ತೊಂದರೆಗಳು ಅದನ್ನು ನಾವು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲಾ? ನಮ್ಮ ಅಮ್ಮನ ವಿಷಯಕ್ಕೆ ಬಂದಾಗ ಮೃದು ಆಗುವ ನಾವು ಬೇರೆ ಹೆಂಗಸರ ವಿಷಯದಲ್ಲಿ ಯಾಕೆ ಇಷ್ಟೊಂದು ನೀಚರಾಗಿ ಬಿಡುತ್ತೇವೆ?
      ಜನನಿ ಜನ್ನ ಭೂಮಿಶ್ಛ ಸ್ವರ್ಗದಾಪಿ ಗರೀಯಸೀ ಅಂತ ಹೇಳ್ತಿವಿ ಜನ್ಮ ಭೂಮಿಯನ್ನು ಗೌರವಿಸಲು ಹಿಂದೆ ಮುಂದೆ ನೋಡ್ತಿವಿ. ಅದು ನೆನ್ನೆಯ ಸ್ತ್ರೀ ಸಮಸ್ಯೆಯಿಂದ ಹಿಡಿದು ಇಂದಿನ ಭಯೊತ್ಪಾದನೆವರೆಗೂ ಹಾಗೇಯೆ ಇದೆ ಅಲ್ವಾ? ನಮ್ಮ ಭಾರತೀಯ ಸೇನೆಯಲ್ಲಿ ಸುಮಾರು ೧೫೦೦ ಅಧಿಕಾರಿಗಳು ಇರಬಹುದು ಎಂದು ಅಂದಾಜಿಸಿದರೆ ಅವರ ಸಮಸ್ಯೆಯೆ ಬೇರೆ, ಕಛೇರಿಯಲ್ಲಿ ಕೆಲಸ ಮಾಡುವ ಮೇಡಂ ಒರಟು ಮಾತನಾಡ್ತಾಲೆ ಅಂದರೆ ಅವಳು ನಾಗರಿಕತೆ ಇಲ್ಲದವಳೆ ? ನಾವೇಕೆ ಲಿಂಗ ಸೂಕ್ಷ್ಮತೆಯನ್ನು ಅರ್ಥೈಸಿ ಅವರನ್ನು ದುಡಿಕೊಳ್ಳುವುದಿಲ್ಲಾ?ಇದು ಕೆಲವು ಪುರುಷ ಅಧಿಕಾರಿಗಳಿಗೆ ಯಾಕೆ ಅರ್ಥವಾಗುವುದಿಲ್ಲಾ? ಗಂಡಸಿನಂತೆ ಒಬ್ಬ ಹೆಂಗಸು ಸಹ ತನ್ನ ಅಹಂಕಾರ, ಗುರುತಿಸಿಕೊಳ್ಳುವಿಕೆ, ತನ್ನ ಜಾಗ ಸ್ಥಾನಗಳಿಗೆ ತೊಂದರೆಯಾದಾಗ ತನ್ನದೆ ರೀತಿಯಲ್ಲಿ ಪ್ರತಿಭಟಿಸುತ್ತಾಳೆ.ಒಬ್ಬ ಪುರುಷ ಅಧಿಕಾರಿ ಮಹಿಳಾ ಸಹೊದ್ಯೋಗಿಯನ್ನು ದುಡಿಸಿಕೊಳ್ಳುವಾಗ ಅವಳಲ್ಲಿಯ ಪ್ರಾಕೃತಿಕ ಬದಲಾವಣೆಯನ್ನು ಗೌರವಿಸಿ ಅವಳೊಂದಿಗೆ ವ್ಯವಹರಿಸ ಬೇಕು.ಎಕೆಂದರೆ ಒಂದು ಹೆಣ್ಣು ಗಂಡಸಿಗಿಂತ ಕೆಲವೊಂದು ವಿಷಯದಲ್ಲಿ ಭಿನ್ನವಾಗಿರುತ್ತಾಳೆ.ಕೆಲವು ಸಲ ನೀವೇ ಗಮನಿಸಿ ಪ್ರತಿನಿತ್ಯ ಸೌಮ್ಯವಾಗಿ ಸಂತೋಷವಾಗಿ ನೆರೆಯವರನ್ನು ಮಾತನಾಡಿಸುವ ಒಬ್ಬ ಮಹಿಳಾ ಉದ್ಯೋಗಿ ಇದ್ದಕ್ಕಿದ್ದ ಹಾಗೇ ಸಿಡುಕುತ್ತಾಳೆ. ಸಣ್ಣ ಮಾತಿಗು ವಾದಿಸುತ್ತಾಳೆ, ಕಿರುಚಾಡುತ್ತಾಳೆ, ಕಲಸದಲ್ಲಿ ತಪ್ಪುಗಳನ್ನು ಮಾಡುತ್ತಾಳೆ ಮತ್ತೆ ಗೊಳೋ ಎಂದು ಅಳುತ್ತಾಳೆ ಇದು ಕೇವಲ ಆಫೀಸಿನ ಕಥೆಯಲ್ಲ, ನಮ್ಮ ನಮ್ಮ ಮನೆಗಳ ಕಥೆಯು ಹೌದು. ಹಾಗಾದಾಗ ಅದು ಆಕೆಯ ಮಾಸಿಕ ಚಕ್ರದ ದಿವಸಗಳು ಎಂದು ಒಬ್ಬ ಬುದ್ದಿವಂತನಾದವನು ಅರ್ಥೈಸಬೇಕು.ವೈಜ್ಞಾನಿಕವಾಗಿ ಆಕೆಯ ದೇಹದಲ್ಲಿ ಈಸ್ಟ್ರೋಜನ್ ಎಂಬ ಹಾರ್ಮೋನು ಖಾಲಿಯಾಗಿದೆ. ಆಕೆ ದೈಹಿಕವಾಗಿ ಬಲಹೀನಳು, ಮಾನಸಿಕವಾಗಿ ಕುಗ್ಗಿರುತ್ತಾಳೆ ಅಂತಹ ಸಮಯದಲ್ಲಿ ಮಡದಿಯನ್ನು ಸಹ ಬಹಳ ಎಚ್ಚರಿಕೆಯಿಂದ ಮಾತನಾಡಿಸಬೇಕು.ಈಸ್ಟ್ರೋಜನ್ ಹಾಮೋನು ಹೆಂಗಳೆಯರ ಪಾಲಿನ ಸಂಜೀವಿನಿ ಅಂತ ಹೇಳಬಹುದು ಅದು ಬಿಡುಗಡೆಯಾದಾಗ ಮಾತ್ರ ಆಕೆ ಲವಲವಿಕೆ ಪಡೆದುಕೊಳ್ಳುತ್ತಾಳೆ. ಅದಕ್ಕೆ ನಮ್ಮ ಹಿರಿಯರು ಬಹಳ ಹಿಂದೆ ಅಂತಹ ಸಮಯದಲ್ಲಿ ಆಕೆಗೆ ಬೇರೆ ಕೋಣೆಯಲ್ಲಿ ಇರಲು ಹೇಳಿ ಆಕೆಯನ್ನು ಮುಟ್ಟಬಾರದು ಎಂದು ಹೇಳುತ್ತಿದ್ದರು ಆದರೆ ಅದು ಬರ್‍ತಾ ಬರ್‍ತಾ ತುಂಬಾ ಮುಜುಗರದ ವಿಷಯವಾಯಿತ್ತೇನೋ ನಿಜ. ಆದರೆ ಆಕೆಗೆ ಒಂದು ವಿಶ್ರಾಂತಿ ಕೊಡದೆ ಹೋದರೆ ಹೇಗೆ ?ಅಂತಹ ಸಮಯದಲ್ಲಿ ಸಮಧಾನದಿಂದ ವರ್ತಿಸದ್ದಿದ್ದರೆ ಹೇಗೆ ?ನೋಡಿ ಎಲ್ಲಿ ಹೆಂಗಸರನ್ನು ದೇವರೆಂದು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರಂತೆ ಅದು ಕೇವಲ ಪುಸ್ತಕದ ಬದನೆಕಾಯಿ ಆಗಬಾರದಲ್ಲಾ ಎನಂತೀರಾ ?

Saturday, 2 July 2011

ಅದೇ ಆ ಟಿ.ವಿ..........!

ಕೆ.ಎಸ್.ಧನಂಜಯ, ಮಡಿಕೇರಿ.



    ಮನುಷ್ಯ ತನ್ನ ಉದ್ದಾರವನ್ನು ತಾನೇ ಮಾಡಿಕೊಳ್ಳ ಬೇಕು ತನ್ನ ಅವನತಿಯನ್ನು ತಾನೇ ಮಾಡಿಕೊಳ್ಳಬಾರದು, ತನಗೆ ತಾನೆ ಮಿತ್ರನು ತಾನೇ ಶತ್ರುವು ಎಂಬ ಒಂದೇ ಒಂದು ತತ್ವದ ಅಡಿಯಲ್ಲಿ ಈ ಜಗತ್ತಿನಲ್ಲಿರುವ ಅದೆಷ್ಟು ಜನರ ಬದುಕು ನಿಂತಿದೆ.ಇದನ್ನು ಅರಿತು ಅದೆಷ್ಟು ಜನರು ಅಂತಹ ಘನ ಘೋರವಾದ ತಪ್ಪನ್ನು ಮಾಡಲು ಸ್ವತಃ ಬಯಸುವುದಿಲ್ಲ. ಇಂತಹ ತತ್ವಗಳಿಂದ ಅದೆಷ್ಟು ಜೀವಗಳು ಈಗಲೂ ದೂರವಿದೆ ಎಂದರೆ ತಿಳಿದಿಲ್ಲವೆಂದು ಹೇಳಬಹುದು. ಇಂದು ಈ ಸುಂದರ ಜಗತ್ತಿಗೆ ಕಾಲಿಡುವ ಅದೆಷ್ಟು ಮುಗ್ದ ಮನಸ್ಸಿಗೆ ಇಂತಹ ಚಿಂತನೆಗಳನ್ನು ತುಂಬುವ ಅಗತ್ಯತೆ ಇದೆ.
     ಚಿಂತೆ ಮಾಡಬಾರದು ಆದರೆ ಚಿಂತನೆಗಳನ್ನು ಮಾಡಲೇ ಬೇಕು, ಬದುಕನ್ನು ರೂಪಿಸುವವು ಈ ಚಿಂತನೆಗಳು ನಮ್ಮನ್ನು ಮನುಷ್ಯನ ಹತ್ತಿರಕ್ಕೆ ಕರೆದುಕೊಂಡು ಹೋಗುವಂತಹವುಗಳು ಇಂತಹ ಚಿಂತನೆಗಳು.ಚಿಂತೆ ಮತ್ತು ಚಿತೆ ಒಂದೇ ನಾಣ್ಯದ ಎರಡು ಬದಿ ಇದ್ದಂತೆ ಚಿಂತೆ ಮನುಷ್ಯನ ಆಂತರಿಕ ಬದುಕನ್ನು ಸುಟ್ಟರೆ ಚಿತೆ ದೇಹವನ್ನ ಸುಡುತ್ತದೆ. ಚಿಂತನೆ ಬದುಕನ್ನು ಗಟ್ಟಿಯಾಗಿಸುತ್ತದೆ. ಇದು ಒಬ್ಬ ವಿಧ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ನಿಂತಿರುವ ಚಿಂತನೆ. ಎಕೆ ಇಂತಹ ಅಮೂಲ್ಯವಾದ ಬದುಕು ಇಂತಹ ದುರಂತಕ್ಕೆ ಶರಣಾಗುತ್ತಿದೆ? ಬದುಕನ್ನು ನಿರೂಪಿಸಿ ಸಾಧಿಸ ಬೇಕಾದ ಏಕಮಾತ್ರ ಹೊಣೆಗಾರಿಕೆಯನ್ನು ಹೊರಲಾಗದ ನಾವು ಇತರರ ಒಳಿತನ್ನು,ಕೆಡುಕನ್ನು ಹೊರಲು ಸಾದ್ಯವೇ ? ನಮ್ಮವರು ಏಕೆ ಆತ್ಮಹತ್ಯೆಯ ಗುಲಾಮರಾಗುತ್ತಿದ್ದಾರೆ? ಇಂತಹ ಪ್ರಶ್ನೆಗಳು ಮೇಲಿಂದ ಮೇಲೆ ಬರುತ್ತದೆ. ಬಂದರೆ ಅದಕ್ಕೆ ಉತ್ತರವನ್ನು ಹುಡುಕುವುದರಲ್ಲಿ ಏಕಾಗ್ರತೆಯನ್ನು ಕೇಂದ್ರಿಕರಿಸಬೇಕು. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇಂತಹ ನೂರೆಂಟು ಕೆಟ್ಟ ಯೋಚನೆಗಳು ನಮ್ಮಗಳ ತಲೆ ತಿನ್ನುತ್ತಿರುತ್ತದೆ ಅದರೆ ನಾವು ಖುಷಿಯಾಗಿದ್ದಾಗ ಅದಕ್ಕೆ ಮಣೆ ಹಾಕುವುದಿಲ್ಲಾ. ಬದುಕಿಗೊಂದು ಆಘಾತ,ಚಿಂತೆ ಪ್ರವೇಶ ಪಡೆದಿದ್ದರೆ ನಾವು ಕ್ಷಣ ಕಾಲದಲ್ಲಿ ಅದಕ್ಕೆ ಬಹಳ ಕೆಟ್ಟದಾದ ಉತ್ತರವನ್ನು ನಮ್ಮ ಬದುಕಿನ ಪುಟಗಳಲ್ಲಿ ದಾಖಲಿಸಿ ಬಿಡುತ್ತೇವೆ. ಆ ಆಘಾತ ಮತ್ತು ಕೆಟ್ಟ ಚಿಂತನೆ ಧೀರ್ಘಕಾಲದಿಂದ ಕಾಡುತ್ತಿದ್ದರೆ ಮಾತ್ರ ಸಮಾಜದಲ್ಲಿ ಉತ್ತಮರು ಎಣಿಕೊಂಡವರೂ ಕೂಡ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದನ್ನು ದೂರದಿಂದ ಚಿಂತಿಸುವವರಿಗೆ ಇವರು ಅಪರಾದಿಗಳು, ಬದುಕನ್ನು ಮನ್ನಡೆಸಲು ಬಾರದವ  ಎಂದು ಹೇಳಿ ಬಿಡುತ್ತೇವೆ. ಸಮಸ್ಯೆ ಬರುವುದೆ ಮನುಷ್ಯನಿಗೆ ಹೊರತು ಮರಕಲ್ಲ, ಮನುಷ್ಯನ ಬದುಕು ಸಮಸ್ಯೆಯಲ್ಲಿ ಸಿಲುಕಿ ಸೊಗಸು ಕಾಣಬೇಕು ಎಂದು ಬಲ್ಲವರು ಹೇಳುತ್ತಾರೆ. ಹಾಗಾದರೆ ಅದರ ಸವಿಹೆ ಬೇರೆ, 
     ಆದರೆ ಮೊನ್ನೆ ಬೆಂಗಳೂರಿನಲ್ಲಿ ತನ್ನ ಬಿಸಿಯೂಟ ಮಾಡಿಕೊಡುವ ಸಹಾಯಕಿ ಸತ್ತಲೆಂದು ಆತ್ಮಹತ್ಯೆ ಮಾಡಿಕೊಂಡ ಎರಡನೆ ತರಗತಿ ಮಗು, ಆ ಮುಗ್ದ ಮನಸ್ಸನ್ನು ಅಪರಾದಿ ಹೆಡಿ ಎಂದು ಹೇಳಲು ಸಾಧ್ಯವೆ? ಇಲ್ಲ, ಆ ಮುಗ್ದ ಮನಸ್ಸು ಬೆಳೆದಿರಲಿಲ್ಲ,ಅದರಲ್ಲಿ ಮುಗ್ದತೆ ಇದೆ , ಚಿಂತನೆಗಳು ಹೇಗೆ ಬರಲು ಸಾಧ್ಯ ? ನಾವು ಮಕ್ಕಳನ್ನು ಅವರು ಕೇಳಿದೆಲ್ಲ ನೀಡಿ ಸಾಕಿ ಸಲಹುತ್ತೇವೆ ವಿಧ್ಯಭ್ಯಾಸ ನೀಡಿ ಮುನ್ನಡೆಸುತ್ತೇವೆ. ನಮ್ಮ ದ್ವೇಶ,ಅಸೂಹೆ, ಮನಸ್ತಾಪವನ್ನು ಆ ಮುಗ್ದ ಮನಸುಗಳ ಮುಂದೆ ತರೆದಿಡುತ್ತೇವೆ. ಆದರೆ ಚಿಂತನೆಗಳ ವಿಷಯಕ್ಕೆ ಬಂದಾಗ ನಾವು ಶೂನ್ಯರಾಗುತ್ತೇವೆ. ಅಂತಹ ಒಂದು ವಿಷಯಗಳನ್ನು ಹೇರುವುದರಲ್ಲಿ ನಾವು ಬಹಳ ಹಿಂದೆ ಬಿದ್ದಿದ್ದೇವೆ. ಆತನ ತಂದೆ-ತಾಯಿಯಂತೆ ಇನ್ನು ಅನೇಕರಿದ್ದಾರೆ ಪರಿಕ್ಷೆಯ ಸಮಯದಲ್ಲಿ ಟಿ.ವಿ.ನೋಡಬಾರದು ಇನೊಂದು ಮತ್ತೊಂದು ಮಗದೊಂದು ಎಂದು. ಅಷ್ಟಕ್ಕೆಲ್ಲಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಸಾಕಷ್ಟು ಇವೆ. ಆತ್ಮಹತ್ಯೆಯೆಂಬ ಕೆಟ್ಟ ಚಿಂತನೆಯನ್ನು ಆ ಮುಗ್ದ ಮನಸಿಗೆ ಹೇಳಿ ಕೊಟ್ಟವರಾರು? ಆತ್ಮಹತ್ಯೆಯನ್ನು ಈ ರೀತಿಯಾಗಿ ಮಾಡಬೇಕು ಅದರ ಮಾರ್ಗವನ್ನು ತಿಳಿಸಿದವರ್‍ಯಾರು? ಅದೇ ಆ ಟಿ,ವಿ ಸುಮಾರು ೧೦೦ ಕ್ಕೆ ೭೦ ಭಾಗದಷ್ಟು ಅಪಾಯಕಾರಿ ವಿಷಯವನ್ನು, ಕೆಟ್ಟ ವಿಷಯವನ್ನು ಧೀರ್ಘವಾಗಿ ಬಿಂಬಿಸುವ ಅದೇ ಟಿ.ವಿ. ದೂರದ ಅನೈತಿಕ ವಿಷವನ್ನು ಧೀರ್ಘವಾಗಿ ಬಿಂಬಿಸಿ ನೈತಿಕ ವಿಷಯವನ್ನು ಕಡಿತಗೊಳಿಸುವ, ಅಪರಾದ,ವಿಚಾರಪರ ಚಿಂತೆ ಇಲ್ಲದ ಧಾರವಾಹಿ, ಸಾಹಿತ್ಯವಿಲ್ಲದ ಹಾಡುಗಳು,ಮುಗ್ದ ಮನಸ್ಸನ್ನು ತಿರುಗಿಸುವ ಅಶ್ಲೀಲ ನೃತ್ಯಗಳು. ಹೌದು ಬದುಕಿನ ಅದೆಷ್ಟು ಸುಂದರ ಚಿಂತನೆಗಳನ್ನು ಮರೆಮಾಡಿ ಆತ್ಮಹತ್ಯೆಯನ್ನಾಗಲಿ, ಕೊಲೆಯನ್ನಾಗಲಿ ಹೀಗೆಯೇ ಮಾಡಬೇಕು ಎಂದು ತಿಳಿ ಹೇಳುವ ಸಿನಿಮಾಗಳು ಅದನ್ನು ಜನರ ಮನೆಗಳಿಗೆ, ಮನಗಳಿಗೆ ಪ್ರತಿನಿತ್ಯ ತಲುಪಿಸುವ ಮೂರ್ಖರ ಪೆಟ್ಟಿಗೆ. ಇದನ್ನು ನೋಡ ಬೇಡ ಎಂದು ಹೇಳಿದರೆ, ಇದಕ್ಕಾಗಿ ನಿನ್ನ ಜೀವನದ ಅಮೂಲ್ಯ ಸಮಯವನ್ನು ಕಳೆದುಕೊಳ್ಳ ಬೇಡ ಎಂದು ಹೇಳಿದರೆ ತಪ್ಪೆ? ಆತ್ಮಹತ್ಯೆ, ಛೇ.. ಇದು  ಏನೆ ಇರಲಿ ನಮ್ಮ ಮಕ್ಕಳಲ್ಲಿ ಮಾನವೀಯ, ವಿಚಾರಪರ, ಚಿಂತನೆಗಳನ್ನು ತುಂಬುವ ಅಗತ್ಯವಿದೆ. ಹೇಗೆಂದರೆ ಹಾಗೆ ಲಂಗು ಲಗಾಮಿಲ್ಲದೆ ಚಲಿಸುವ ಆ ಮನಸ್ಸುಗಳಿಗೆ ಚಿಂತನೆ ತುಂಬುವ ಅಗತ್ಯವಿದೆ ಪಠ್ಯದ ಜೊತೆ ಜೊತೆಯಲ್ಲಿ ವಿಚಾರ ಪರ ಚಿಂತನೆ ಬೆಳೆಸ ಬೇಕಾಗಿದೆ ಏನಂತೀರಾ ? ``  





Wednesday, 29 June 2011

ಅವರೆ ನಿಜವಾದ ರಾಷ್ಟ್ರೀಕರು...!


ಅದು ಕೇವಲ ಒಂದು ವರ್ಗದ ಜನರ ಬದುಕಲ್ಲ, ಅದು ಪ್ರತಿಯೊಬ್ಬರ ಬದುಕು,ಪೂಜೆ,ದಾನ,ತಪಸ್ಸು ಜೊತೆಗೆ ಆತ್ಮವನ್ನು ಸೀಮಿತದಲ್ಲಿಟ್ಟುಕೊಂಡು ನಿತ್ಯದ ಬದುಕು ಸಾಗಿಸಿದರೆ ಅದು ದೇವ ಋಣ ತೀರಿಸಿದಂತೆ. ಹಾಗೇಯೆ ಋಷಿಗಳು ಕೇವಲ ಒಂದು ದೇಶಕ್ಕೆ ಸಂಭದಿಸಿದವರಲ್ಲ, ಹೊಸ ಚಿಂತನೆಯನ್ನು ಲೋಕಕ್ಕೆ ನೀಡಿದವರು ಋಷಿಗಳು ಮತ್ತೊಂದು ಅರ್ಥದಲ್ಲಿ ಅವರು ನಿತ್ಯ ಶೋಧನ ವ್ಯಕ್ತಿಗಳು.ಅವರು ಮೊದಲು ತಿಳಿದು ಇತರರಿಗೆ ಧಾರೆ ಎರೆದರೆ ಅದು ಋಷಿ ಋಣದ ಸಂದಾಯ ಮತ್ತು ವಂಶದ ಬೆಳವಣಿಗೆಯ ಜೊತೆಗೆ ಪ್ರಗತಿಯತ್ತ ಮುಖ ಮಾಡಿದರೆ ಅದು ಪಿತೃ ಋಣ ತೀರಿಸಿದಂತೆ, ಈಗೆ ದೇವ,ಋಷಿ,ಮತ್ತು ಪಿತೃ ಋಣ ನಮ್ಮ ಧರ್ಮದಲ್ಲಿ ಮನುಷ್ಯನಿಗೆ ಪ್ರಮುಖವಾದ ಋಣಗಳು. ಇದರೊಂದಿಗೆ ಮತ್ತೊಂದು ಸೇರುತ್ತದೆ ಅದು ದೇಶ ಋಣ ಕೊಡಗಿನಂತಹ ಮಣ್ಣಿನಲ್ಲಿ ಇದು ಹೆಚ್ಚಾಗಿ ಕಾಣುತ್ತದೆ.ಅದು ಬರಿ ಸೇವೆಯಲ್ಲ ಧರ್ಮದ ಒಂದು ಮುಖ್ಯ ರೂಪವೇ (ದೇಶ ಸೇವೆ).
ಹಾಗಾಗಿ ಗೆಳೆಯರೆ ಸಾಕಷ್ಟು ಬಾರಿ ಇಂತಹ ಸೈನಿಕರ ಮೃತ ದೇಹಗಳು ನಮ್ಮ ಜಿಲ್ಲೆಗಾಗಲಿ ಇತರೆ ಜಿಲ್ಲೆಗಾಗಲಿ ಬರುವಾಗ ಇಂಥಹ ಆರೋಪಗಳು ಬಂದೆ ಬರುತ್ತದೆ ಅದಕ್ಕೆ ಕಾರಣ ನಮ್ಮನ್ನಾಳುವ ವ್ಯವಸ್ಥೆ ನಮ್ಮ ಸೈನಿಕರ ಮೇಲಿರುವ ಒಂದು ತರಹದ ದುರಾಭಿಮಾನ. ಈ ಭೂಮಿ ತಾಯಿ, ನಾನು ಹುಟ್ಟಿದ್ದು ಇಲ್ಲಿ ಈ ಮಣ್ಣಿನ ಸಾರ್ವಜನಿಕ ವ್ಯವ್ಯಸ್ಥೆ ನನ್ನನ್ನು ಕಾಪಾಡಿದೆ. ನನಗೆ ವಿದ್ಯೆನೀಡಿದ ಸಂಸ್ಥೆ ಈ ದೇಶದ್ದು,ನನ್ನನ್ನು ಬೆಳೆಸಿ ಕಾಪಾಡಿ ನನಗೆ ಈ ರಾಜ್ಯದಲ್ಲಿ ಒಂದು ಗೊತ್ತಾದ ಸ್ಥಾನವನ್ನು ಒದಗಿಸಿದ್ದು ಈ ದೇಶದ ಕಾನೂನು ಕಟ್ಟು ಪಾಡುಗಳು, ಈ ಮಣ್ಣಿನ ಪ್ರಯೋಜನ ಪಡೆದು ಅದು ನನಗೆ ಸುಖಕರವಾಗುವವರೆಗೆ ಪ್ರಯೋಜನ ಪಡೆದು ಒಬ್ಬ ಸೈನಿಕನ ಮೃತ ದೇಹ ಬಂದಾಗ ನನಗೆ ಸಮಯವಿಲ್ಲ ಎಂದು ನುಣುಚಿ ಕೊಳ್ಳುವ ಅಧಿಕಾರವಂತರು ಬಹಳ ಮಂದಿ ನಮ್ಮ ಮಧ್ಯೆ ಇದ್ದಾರೆ. ಬದಲಾಗಿ ಅಂತಹ ದೇಹ ಬಂದಾಗ ಎಲ್ಲರು ನಿಂತು ಸ್ವೀಕಾರ ಮಾಡುವ ಗುಣವಿದೆಯಲ್ಲ ಅದು ಈ ದೇಶದ ಋಣ ಅಂಗೀಕಾರ ಮಾಡುವ ರೀತಿ.? ಅವರು ನಿಜಾವಾದ ರಾಷ್ಟ್ರೀಕರು that means citizens.
ಮನುಷ್ಯನ ನಿತ್ಯ ಕರ್ತವ್ಯಗಳಲ್ಲಿ ದೇಶದ ಋಣ ಪರಿಪಾಲನೆ ಕೂಡ ಮುಖ್ಯ, ಅದು ರಾಷ್ಟ್ರ ಧರ್ಮದ ಮೂಲ ಸ್ಥಾನ. ನಾವು ನಮ್ಮ ನೆರೆಹೊರೆಯಿಂದ, ನಮ್ಮ ಸಮಾಜದವರಿಂದ, ನಮ್ಮ ಜನಾಂಗ ಸಂಪ್ರದಾಯಗಳಿಂದ ಎಷ್ಟೇ ಪ್ರಯೋಜನಗಳನ್ನು ತೆಗೆದುಕೊಂಡು ಬೆಳೆದವರು, ನಮ್ಮ ಸಮಾಜದ ವ್ಯವ್ಯಸ್ಥೆ ಇಂತಹ ಅಚ್ಚುಕಟ್ಟುತನದಿಂದ ಕೂಡಿರದೆ ಹೋಗಿದ್ದರೆ ಗೌರವಿಸಲ್ಪಡುವ ಅವರುಗಳು ಇಂದು ಆ ಸ್ಥಾನದಲ್ಲಿ ಇರುತ್ತಿದ್ದರೇ ? ಆದುದ್ದರಿಂದ ಒಬ್ಬ ಯೋಧನಿಗೆ ಅಲ್ಲಿ ನಿಂತು ಗೌರವ ಸೂಚಿಸುದಕ್ಕೆ ನಾವು ದೇಶ ಸೇವೆ ಎನ್ನುತ್ತೇವೆ. ಯಾವುದನ್ನು ನಾವು ದೇಶ ಸೇವೆ ಎನ್ನುತ್ತೇವೆಯೋ ಅದು ವಾಸ್ತವವಾಗಿ ಸೇವೆಯಲ್ಲ, ಬಿಟ್ಟಿಯಾಗಿ ಮಾಡುವ ಕೆಲಸವಲ್ಲ, ಅದು ಕಣಿಕರವಲ್ಲ ಅದು ಈ ದೇಶದ ಋಣವನ್ನು ತೀರಿಸುವ ರೀತಿ. ಈ ದೇಶದಿಂದ ಸಾಕಷ್ಟು ತೆಗೆದುಕೊಮಡಿದ್ದೇವೆ ಸ್ವಲ್ಪವಾದರು ಹಿಂತಿರುಗಿಸೋಣ ಎಂಬ ಕಾಯಕ.
ನಮ್ಮ ದೇಶಕ್ಕೆ ಇಂತಹ ಜನರ ಅವಶ್ಯಕತೆ ಇದೆಯೆ ಹೊರತು, ಉದಾಸೀನ, ನಿರ್ಲಕ್ಷ್ಯ ತೋರುವ ಜನರಲ್ಲ ಸೇವೆಗೆ ನಿಂತಹ ವ್ಯಕ್ತಿಗಳಿಗೆ ನಾವು ಈ ರಾಜ್ಯಕ್ಕೆ ಬೇಕಾದಷ್ಟು ಮಾಡಿದ್ದೇವೆ ಎಂಬ ಆಹಂ ಇರಬಾರದು,ನಾವು ಈ ರಾಜ್ಯದ ಮೇಲೆ ಕೃಪೆ ತೋರುವವರು ಅನುಗ್ರಹಿಸುವವರು ಎಂದು ಭಾವಿಸಿಕೊಳ್ಳ ಬಾರದು. ಪ್ರತಿಯಾಗಿ ನಾವು ಈ ರಾಜ್ಯದಿಂದ ಈ ಮಣ್ಣಿನಿಂದ ಉಪಕಾರವನ್ನು ಪಡೆದುಕೊಂಡವರು ಎಂಬ ಭಾವನೆ ಬರಬೇಕು. ಅದು ನಾವು ಇಂತಹ ಸೈನಿಕರಿಗೆ ನೀಡುವ ಗೌರವ.